ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ : ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಸಿಂಗಾಪುರ ಮೂಲದ ಕೆಇಎಫ್ ಹೋಲ್ಡಿಂಗ್ಸ್ ನ ಅಂಗ ಸಂಸ್ಥೆಯ ಕೆಇಎಫ್ ಇನ್ಫ್ರಾ ಸಂಸ್ಥೆ ಭಾರತದಲ್ಲಿ ಪ್ರಥಮವಾಗಿ ಫ್ಯಾಕ್ಟರಿಯಲ್ಲಿ ತಯಾರಿಸಿದ ಮೆರಿಡಿಯನ್ ವಸತಿ ಸಮುಚ್ಛಯವನ್ನು ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಬುಧವಾರ ಉದ್ಘಾಟಿಸಿದರು.
ಕೆಇಎಫ್ ಕ್ರೋನಿಕಲ್ಸ್ ವಿಶೇಷ ಸುದ್ಧಿ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಕಡಿಮೆ ಅವಧಿ ಹಾಗೂ ಖರ್ಚಿನಲ್ಲಿ ನೂತನ ತಂತ್ರಜ್ಞಾನಗಳೊಂದಿಗೆ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಸರಕಾರ ಹೆಚ್ಚಿನ ಚಿಂತನೆ ನಡೆಸಲಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸರಕಾರಿ ಸಂಬಂಧಿ ಕಟ್ಟಡಗಳನ್ನು ಇದೇ ತಂತ್ರಜ್ಞಾನದೊಂದಿಗೆ ನಿರ್ಮಿಸುವುದರ ಮೂಲಕ ಕಡಿಮೆ ಅನುದಾನಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಎಂದರು.
ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವಂತದ್ದಾದ ಮನೆ ಹೊಂದುವ ಕನಸಿದ್ದು ಅದು ಈಡೇರುವಲ್ಲಿ ಕೆಇಎಫ್ ಇನ್‍ಫ್ರಾ ತಂತ್ರe್ಞÁನದಲ್ಲಿ ನಿರ್ಮಿಸಲಾಗುವ ಮನೆ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿದ್ದು ಅದನ್ನು ಸದುಪಯೋಗಡಿಸಿಕೊಳ್ಳಿ ಎಂದು ಕೆಇಎಫ್ ಇನ್‍ಫ್ರಾ ಜನರಲ್ ಮೆನೇಜರ್ ಆ್ಯಂಡ್ರೆ ದೇನ್‍ಸ್ಟ್ ಸಲಹೆ ನೀಡಿದರು.
ಯೆನೆಪೋಯ ಪರಿಸರ ಅಧ್ಯಯನ ಸಂಸ್ಥೆಯ ವಾರ್ಷಿಕ ವರದಿಯ ಸಂಚಿಕೆಯನ್ನು ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ನೂತನ ತಂತ್ರಜ್ಞಾನ ಕಟ್ಟಡ ನಿರ್ಮಾಣದ ಬಗ್ಗೆ ಸರಕಾರದ ಹಿರಿಯ ಧುರೀಣರಲ್ಲಿ ಈಗಾಗಲೇ ಚರ್ಚಿಸಲಿದ್ದೇನೆ. ಒಂದು ಬಜೆಟಿನಿಂದ ಐದು ಬಜೆಟ್ ಗಳು ನಡೆಯುವವರೆಗೆ ಸರಕಾರಿ ಕಟ್ಟಡಗಳ ಕಾಮಗಾರಿ ಪೂರ್ಣವಾಗುವುದಿಲ್ಲ. ಇದರಿಂದ 5 ಕೋಟಿ ರೂ ಕಾಮಗಾರಿ 25 ಕೋಟಿಯನ್ನು ದಾಟುವ ಮೂಲಕ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಸರಿಪಡಿಸಲು ನೂತನ ತಂತ್ರಜ್ಞಾನದ ಕಟ್ಟಡಗಳಿಂದ ಮಾತ್ರ ಸಾಧ್ಯ ಎಂದ ಅವರು ಸ್ಮಾರ್ಟ್ ಸಿಟಿಯಾಗಿ ಬದಲಾಗಲಿರುವ ಮಂಗಳೂರು ನಗರದಲ್ಲಿ ಇದೇ ತರಹದ ತಂತ್ರಜ್ಞಾನವನ್ನು ಉಪಯೋಗಿಸುವುದು ಸೂಕ್ತ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲ ಕುಂಞÂ, ಬಿ.ಎ. ಗ್ರೂಪ್ ಚೇರ್‍ಮೆನ್ ಬಿ.ಎ. ಅಹಮ್ಮದ್ ಹಾಜಿ ಮೊಹಿಯುದ್ದಿನ್, ಯೆನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಮಹಮ್ಮದ್ ಕುಂಞÂ, ಇಸ್ಲಾಮಿಕ್ ಅಕಾಡೆಮಿಕ್‍ಆಫ್ ಎಜ್ಯುಕೇಶನ್‍ನ ನಿರ್ದೇಶಕ ಪ್ರೊ.ಪಿ.ಸಿ.ಎಂ.ಕುಂಞÂ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಉಪಸ್ಥಿತರಿದ್ದರು.
ಪ್ರೊ. ಡಾ. ಅಖ್ತರ್ ಹುಸೈನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಮುಚ್ಛಯದ ವಿಶೇಷತೆಗಳು:
ಕೆಇಎಫ್ ಇನ್‍ಫ್ರಾದಿಂದ ಒಂದು ಲಕ್ಷ ಚದರ ಅಡಿಯ ವಸತಿ ಸಮುಚ್ಛಯ ದಾಖಲೆಯ ಒಂಬತ್ತು ತಿಂಗಳಲ್ಲಿ ನಿರ್ಮಾಣವಾಗಿದೆ. ಕಟ್ಟಡದ ಪ್ರತಿಯೊಂದು ಭಾಗಗಳನ್ನು ಕೃಷ್ಣಗಿರಿಯಲ್ಲಿರುವ ಕೆಇಎಫ್ ಇನ್‍ಫ್ರಾಒನ್ ತಯಾರಿಕಾ ಘಟಕದಲ್ಲಿ ತಯಾರಿಸಲಾಗಿದೆ. ಕೆಇಎಫ್ ಇನ್‍ಫ್ರಾ ಘಟಕ ಡಿಸೆಂಬರ್‍ನಲ್ಲಿ ಪೂರ್ಣಗೊಂಡ ಬಳಿಕ ವಿಶ್ವದಲ್ಲಿಯೇ ಅತಿ ದೊಡ್ಡ ಆಫ್‍ಸೈಟ್ ಕನ್‍ಸ್ಟ್ರಕ್ಷನ್ ಘಟಕವಾಗಲಿದೆ.ವಸತಿ ಸಮುಚ್ಛಯದಲ್ಲಿರುವ 208 ಬಾತ್‍ರೂಂಗಳು ಮೆಕ್ಯಾನಿಕಲ್, ಎಲೆಕ್ಟಿ ್ರಕಲ್ ಮತ್ತು ಪ್ಲಂಬಿಂಗ್, ಸ್ಯಾನಿಟರಿ ವೇರ್, ಟೈಲಿಂಗ್ ಮತ್ತು ಫಿಟ್ಟಿಂಗ್‍ಗಳನ್ನು ಪೂರ್ಣವಾಗಿ ಕೃಷ್ಣಗಿರಿಯಲ್ಲಿನ ಕೆಇಎಫ್ ಇನ್‍ಫ್ರಾದಲ್ಲಿ ತಯಾರಿಸಿ ಸುಮಾರು 850ಕಿ.ಮೀ. ದೂರದಲ್ಲಿರುವ ಮಂಗಳೂರಿಗೆ ಸಾಗಿಸಿ ಜೋಡಿಸಲಾಗಿದೆ.
ವಸತಿ ಸಮುಚ್ಛಯದಲ್ಲಿ 12 ಬೆಡ್‍ರೂಂನ 12 ಮನೆಗಳಂತೆ 99 ಅಪಾರ್ಟ್‍ಮೆಂಟ್ ಕಟ್ಟಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಪ್ರಿ ಎಂಜಿನಿಯರ್ಡ್ ಮತ್ತು ಪ್ರಿ ಡಿಜಾಯಿನ್ಡ್ ಮಾದರಿಯಲ್ಲಿ ಕೆಇಎಫ್ ಇನ್‍ಫ್ರಾದಲ್ಲಿ ತಯಾರಿಸಲಾಗಿದೆ. ಗೋಡೆ, ಹಾಲೋ ಕೋರ್ ಸ್ಲಾ ್ಯಬ್, ಕಿಟಕಿ, ಬಾಗಿಲುಗಳನ್ನು ಘಟಕದಲ್ಲಿಯೇ ತಯಾರಿಸಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಫಿನ್‍ಲ್ಯಾಂಡಿನ ಗ್ರಾಫಿಕ್ ಕಾಂಕ್ರಿಟ್ ತಂತ್ರe್ಞÁನವನ್ನು ಫ್ರಂಟ್ ಎಲಿವೇಶನ್‍ಗೆ ಬಳಸಲಾಗಿದೆ. ಯೋಜನೆಯ ನಿರ್ಮಾಣಕ್ಕಾಗಿ ಬಳಸಲಾಗಿರುವ ತಯಾರಿತ ಬಾತ್‍ರೂಂಗಳು ಸ್ಟೋನ್ ಪ್ರೊಸೆಸಿಂಗ್ ಸಂಸ್ಥೆಯಲ್ಲಿ ಅಳವಡಿಸಿರುವ ತಾಂತ್ರಿಕ ನೈಪುಣ್ಯತೆ ಸಾಕ್ಷಿ.
















