ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕೊಣಾಜೆ ಗಾಮದ ಪಟ್ಟೋರಿಯ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನೂತನ ಗರ್ಭಗುಡಿ ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳವಾರ ಕೋಡಿ ಪಟ್ಟಿಸ್ಥಾನ ಪಟ್ಟೋರಿಯಲ್ಲಿ ನಡೆಯಿತು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ರಘುರಾಮ ಕಾಜವ ಪಟ್ಟೋರಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪಟ್ಟೋರಿಯ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ದಾರದ ಕೆಲಸ ಭರದಿಂದ ನಡೆಯುತ್ತಿದ್ದು ಇದರ ನೂತನ ಗರ್ಭಗುಡಿ, ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಹಾಗೂ ವರ್ಷಾವಧಿ ಸಾನದಾಯನ ಜಾತ್ರಾ ಮಹೋತ್ಸವು ಎ.20ರಿಂದ ಎ.23ರವರೆಗೆ ಕ್ಷೇತ್ರದಲ್ಲಿ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಶ್ರೀನಿವಾಸ ಕಾಜವ ಪಟ್ಟೋರಿ, ಕೋಶಾಧಿಕಾರಿ ದಿವಾಕರ ಭಂಡಾರಿ, ಸಂಚಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಕರುಣಾಕರ ಕಾನ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಗಳೂರು ವಿಭಾಗದ ನಿರ್ದೇಶಕರಾದ ಸುದೀರ್ ಕುಮಾರ್, ಯೋಜನಾಧಿಕಾರಿ ರಾಘವ ಎಂ, ಮೇಲ್ವಿಚಾರಕರಾದ ಪ್ರದೀಪ್, ದೇವಕಿ, ಶಿಕ್ಷಕ ಮೋಹನ್ ಶಿರ್ಲಾಲ್, ವಿಶ್ವನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


