ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಸಮಸ್ತ ಹಿಂದು ಬಾಂಧವರು ನಂಬಿಕೊಂಡು ಬಂದಿರುವ ಶ್ರೀ ಕ್ಷೇತ್ರ ಕಟೀಲಿನ ದೇವಿ ಹಾಗೂ ಹಿಂದೂ ದೇವರಿಗೆ ಅವಹೇಳನಕಾರಿಯಾಗಿ ಬರೆದಿರುವುದು ಆಘಾತವನ್ನು ಉಂಟುಮಾಡಿದೆ. ಇದು ಧರ್ಮಗಳ ನಡುವೆ ಕಲಹಕ್ಕೆ ನಡೆಸಿರುವ ಷಡ್ಯಂತ್ರವಾಗಿದೆ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಹೇಳಿದ್ದಾರೆ. ಅವರು ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಜಬ್ಬಾರ್ ಬಿ.ಸಿ.ರೋಡು ಎಂಬಾತ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲವಾಗಿ ಬರೆದಿರುವುದನ್ನು ಖಂಡಿಸಿ ಉಳ್ಳಾಲ ಭಾಗದ ಹಿಂದೂ ಬಾಂಧವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ ಸಾಮೂಹಿಕ ಪ್ರಾರ್ಥನೆ ನಡೆಸಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಪೂಜೆ ಸಲ್ಲಿಸಿ ತಪ್ಪಿತಸ್ಥನಿಗೆ ತಪ್ಪಿನ ಅರಿವಾಗುವಂತೆ ಪ್ರಾರ್ಥಿಸಿದರು. ತಾಯಿಗೆ ಅಶ್ಲೀಲ ಶಬ್ದಗಳಿಂದ ಬೈಯ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿರುವುದು ತೀರಾ ಖಂಡನಾರ್ಹ. ಇಂತಹ ಮತಾಂಧ ಯುವಕರಿಗೆ ತಪ್ಪಿನ ಅರಿವಾಗುವಂತೆ ಅವರ ಧರ್ಮದ ಬಾಂಧವರೇ ಒಳ್ಳೆಯ ನುಡಿಗಳನ್ನು ಹೇಳಬೇಕು. ಅಂತಹ ಯುವಕರ ಮನಸ್ಸಿನಲ್ಲಿರುವ ದುಗುಡನ್ನು ದೂರವಾಗಿಸಿ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಯುವಕನೋರ್ವ ಬೆಂಗಳೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ವೇಳೆ ನಡೆದಿದ್ದು, ಮಂಗಳವಾರ ಮುಂಜಾನೆ ಮನೆಮಂದಿಗೆ ಮಾಹಿತಿ ಲಭಿಸಿದೆ. ಅಕ್ಕರಕೆರೆ ಮಸೀದಿ ಬಳಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ನಶಾಲ್ ಇಸ್ಮಾಯಿಲ್(20)ನಿಗೂಢ ಸಾವನ್ನಪ್ಪಿದ್ದಾನೆ. ಮಂಗಳೂರಿನ ಪಿವಿಎಸ್‍ನಲ್ಲಿರುವ ಸಬ್‍ಡೀನ್ ಸಂಸ್ಥೆಯಲ್ಲಿ ಬಿಟೆಕ್ ಪದವಿ ಮುಗಿಸಿದ್ದ ಈತ ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಕಂಪೆನಿ ಒಂದಕ್ಕೆ ಸಂದರ್ಶನಕ್ಕಾಗಿ ತೆರಳಿದ್ದ. ಅಲ್ಲಿ ಇದೀಗ ನಿಗೂಢವಾಗಿ ಸಾನನ್ನಪ್ಪಿರುವ ಕುರಿತು ಬೆಂಗಳೂರಿನ ಪೊಲೀಸರಿಂದ ಸಂಬಂಧಿಕರಿಗೆ ತಿಳಿದುಬಂದಿದೆ. ಕೊಲೆ ಶಂಕೆ: ನಶಾಲ್ ಬೆಂಗಳೂರಿನ ಎಚ್‍ಏಎಲ್ ನ ಹಳೇ ವಿಮಾಣ ನಿಲ್ದಾಣದ ಸಮೀಪದ ಕಟ್ಟಡವೊಂದರಲ್ಲಿ ಗೆಳೆಯರೊಂದಿಗೆ ನೆಲೆಸಿದ್ದ. ಈತನ ಜೊತೆಗಿದ್ದ ಇಬ್ಬರು ಗೆಳೆಯರಿಗೆ ಅಲ್ಲಿಯದ್ದೇ ಆದ ಯುವಕರ ತಂಡದ ಜೊತೆಗೆ ವೈಷಮ್ಯವಿತ್ತು. ಸೋಮವಾರ ಸಂಜೆ ಇವರು ನೆಲೆಸಿದ್ದ ಕಟ್ಟಡದ ಸಮೀಪ ನಿರ್ಮಾಣ ಹಂತದ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ನಶಾಲ್ ಸಹಿತ ಇಬ್ಬರು ಗೆಳೆಯರು ಕುಳಿತಿದ್ದರು. ಇದೇ ವೇಳೆ ಅಲ್ಲಿಗೆ ವೈಷಮ್ಯ ಹೊಂದಿದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ವತಿಯಿಂದ ಶ್ರೀ ಕೃಷ್ಣ ಜನಮಾಷ್ಠಮಿ ಪ್ರಯುಕ್ತ ನಡೆಯುವ ಮೊಸರುಕುಡಿಕೆ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಆಕರ್ಷಕ ಟ್ಯಾಬ್ಲೋಗಳು , ಹುಲಿ ವೇಷ ಧಾರಿಗಳು ಗಮನ ಸೆಳೆಯಿತು. ಎಬಿಸಿ ಕ್ಲಬ್ ( ಅಗ್ನಿ ಭಾಯ್ಸ್ ಸರ್ಕಲ್), ತೊಕ್ಕೊಟ್ಟು ಇವರಲ್ಲಿ ಸದಸ್ಯರೋರ್ವರ ಕಾರೊಂದಕ್ಕೆ ಹುಲಿಯ ಬಣ್ಣ ಅಂಟಿಸಿರುವುದು ಆಕರ್ಷಣೆಯ ಬಿಂದು ಆಗಿತ್ತು. ತುಂತುರು ಮಳೆಯ ನಡುವೆ ಆರಂಭಗೊಂಡ ಉತ್ಸವದಲ್ಲಿ ನಿರೀಕ್ಷೆಯಷ್ಟು ಜನ ಭಾಗವಹಿಸಿರಲಿಲ್ಲ. ಆದರೂ ಕಳೆದ ವರ್ಷಗಿಂತ ಅಧಿಕ ಜನ ಭಾಗವಹಿಸಿ ಉತ್ಸವವನ್ನು ಯಶಸ್ವಿಯನ್ನಾಗಿಸಿದ್ದಾರೆ ಅನ್ನುತ್ತಾರೆ ಸಂಘಟಕರು. ಟ್ಯಾಬ್ಲೋಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಎರಡು ವಾರಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಮಂಜನಾಡಿ ಕಲ್ಕಟ್ಟ ನಿವಾಸಿ ಆರೀಫ್(೨೪) ಪತ್ತೆಯಾಗಿದ್ದು, ಅಪಹರಣಕಾರರೇ ಬಸ್ಸಿಗೆ ಹಣ ಕೊಟ್ಟು ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆಂದು ಕೊಣಾಜೆ ಪೊಲೀಸ್ ಠಾಣೆಗೆ ಗುರುವಾರ ಬಂದಿರುವ ಆರೀಫ್ ತಿಳಿಸಿದ್ದಾರೆ. ವಿದೇಶದಲ್ಲಿದ್ದ ಆರೀಫ್ ಕೆಲ ತಿಂಗಳುಗಳ ಹಿಂದೆ ಊರಿಗೆ ಮರಳಿದ್ದರು. ಬಳಿಕ ಮೀನಿನ ವ್ಯಾಪಾರ ಆರಂಭಿಸಿದ್ದ ಅವರು ಚೆಂಬುಗುಡ್ಡೆ ಸಮೀಪ ಮೀನು ವ್ಯಾಪಾರ ನಡೆಸುತ್ತಿದ್ದರು.ವಾರದ ಹಿಂದೆ ಮೀನು ತರಲೆಂದು ಮಂಗಳೂರಿನ ಧಕ್ಕೆಗೆ ತೆರಳುವ ಸಂದಭ೯ ಸ್ಕಾಪಿ೯ಯೋ ವಾಹನದಲ್ಲಿ ಬಂದಿದ್ದ ತಂಡ ನಸುಕಿನ ಜಾವ ಕಲ್ಕಟ್ಟ ದಿಂದ ಅಪಹರಣ ನಡೆಸಿತ್ತು. ಬಳಿಕ ಮನೆ ಮಂದಿ ಗೆ ವಿದೇಶದ ದೂರವಾಣಿ ಸಂಖ್ಯೆ ಮೂಲಕ ಬಂದ ಕರೆಯಲ್ಲಿ ರೂ.೧.೫ ಕೋಟಿ ಹಣದ ಬೇಡಿಕೆ ಮುಂದಿಟ್ಟಿತ್ತು. ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಹಾಕಿತ್ತು. ಅದರಂತೆ ಮನೆಮಂದಿ ಬೆದರಿ ರೂ.೨೫ ಲಕ್ಷ ರೂ ಹಣ ಕೊಡುವ ವಿಶ್ವಾಸ ನೀಡಿದರೂ ಅಪಹರಣಕಾರರು ಒಪ್ಪಿರಲಿಲ್ಲ. ಇದರಿಂದ ದ ಕುಟುಂಬ ತಡವಾಗಿ ಕೊಣಾಜೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರ: ತನುಂಜಯರಾವ್ ಕೊಲ್ಯ ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಶೋಭಯಾತ್ರೆಯೊಂದಿಗೆ ವಿಜೃಂಭಣೆಯಿಂದ ಜರಗಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರ: ಯಶು ಪಕ್ಕಳ ತೊಕ್ಕೊಟ್ಟು: ತುಳುನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯ ಯುವಸಮುದಾಯದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನು ಆಯೋಜಿಸುವುದರಿಂದ ತುಳು ಜನರ ಆಚಾರ ವಿಚಾರಗಳನ್ನು ದೇಶದಾದ್ಯಂತ ಪರಿಚಯಿಸಲು ಸಹಕಾರಿ ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಬಸ್ ನಿಲ್ದಾಣದ ಭವ್ಯ ವೇದಿಕೆಯಲ್ಲಿ ಬುಧವಾರ ಟೀಮ್ ಜಿಮ್ ಆಯೋಜಿಸಿದ ಪಿಲಿಗೊಬ್ಬು 2016 ಹುಲಿವೇಷಧಾರಿಗಳ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಸಂಸ್ಕøತಿಯನ್ನು ವೈಶಿಷ್ಟ್ಯತೆಯನ್ನು ಹೊಂದಿದೆ. ಆದರೆ ಆಧುನಿಕ ಯುಗದಲ್ಲಿ ಅದನ್ನು ಆಚರಿಸುವ , ಆರಾಧಿಸುವ ಕಾರ್ಯ ಯುವಸಮುದಾಯದಿಂದ ಸರಿಯಾಗಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ ಎಂದರು. ಮಾಜಿ ಸಚಿವ ಕೃಷ್ಣ.ಜೆ.ಪಾಲೇಮಾರ್ ಮಾತನಾಡಿ ತುಳುನಾಡಿನ ಸಂಸ್ಕøತಿಯನ್ನು ಪರಿಚಯಿಸಿ, ಅದರಲ್ಲಿ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಸಂಸ್ಕøತಿಯನ್ನು ಉಳಿಸಲು ವಿಶಿಷ್ಟ ರೀತಿಯ ಪ್ರಯತ್ನ ನಡೆಸುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು. ಶ್ರೀ ದೇವಿ ಎಜ್ಯುಕೇಷನ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಬಲಿದಾನ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರಪ್ರೇಮದ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ರಾಜಕೀಯದ ಬಣ್ಣ ಬಳಿಯುತ್ತಿದೆ. ಅಲ್ಲದೇ ತಿರಂಗ ಯಾತ್ರೆಗೆ ಸಭಾಂಗಣ ಒದಗಿಸಿದ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದೆ. ತಾಕತ್ತಿದರೆ ವಿವಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸವಾಲು ಹಾಕಿದ್ದಾರೆ. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ದೇಶದ್ರೋಹಿ ಧೋರಣೆ ಮತ್ತು ಅದನ್ನು ಸಮರ್ಥಿಸಿದ ರಾಜ್ಯ ಸರಕಾರದ ವಿರುದ್ಧ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವಕ್ಕಾಗಿ ಹೋರಾಡಿದವರನ್ನು ಸ್ಮರಿಸುವ ಸಲುವಾಗಿ ರಾಷ್ಟ್ರಪ್ರೇಮದ ಕಾರ್ಯಕ್ರಮವಾಗಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅದನ್ನೇ ರಾಜಕೀಯ ಕಾರ್ಯಕ್ರಮ ಎಂದು ಬಣ್ಣಿಸಿ, ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳನ್ನು ಬೆಂಬಲಿಸುವ ಕಾಂಗ್ರೆಸ್‍ನ ಮನಸ್ಥಿತಿ ಯಾವ ರೀತಿಯಲ್ಲಿದೆ ಅನ್ನುವುದು ಗೊತ್ತಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಮಿತ್ ಷಾ ನೇತೃತ್ವದಲ್ಲಿ ತಿರಂಗಾ ಯಾತ್ರೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅಬ್ಬಕ್ಕನ ನಾಡು ಇಂದು ಅಕ್ಷರಶಃ ಕೇಸರಿ ಪಡೆಯ ತಿರಂಗ ಯಾತ್ರೆಯಲ್ಲಿ ಮುಳುಗಿ ಹೋಗಿತ್ತು. ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಶಾ ಆಗಮನದ ಮೂಲಕ ಕಡಲತಡಿ ದೇಶಭಕ್ತರ ಬಲಿದಾನ ಸ್ಮರಣೆಗೆ ಸಾಕ್ಷಿಯಾಗಿತ್ತು. ಒಂದಷ್ಟು ವಿರೋಧದ ಮಧ್ಯೆಯೂ ಅದ್ದೂರಿಯಾಗಿ ನಡೆದ ತಿರಂಗ ಯಾತ್ರೆಯಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕಳಿಗೆ ಸಂಭ್ರಮದ ಗೌರವ ಸಲ್ಲಿಕೆಯಾಗಿದೆ. ಕೇಸರಿ ಪಡೆ ಬಿಜೆಪಿ ಧ್ವಜ ತ್ಯಜಿಸಿ ಮೋದಿ ಆಶಯದಂತೆ ತ್ರಿವರ್ಣ ಧ್ವಜದಡಿ ದೇಶಭಕ್ತಿ ಮೆರೆದಿದೆ….. ದೇಶದ ಪ್ರಧಾನಿ ನರೇಂದ್ರ ಮೋದಿಯ ಆಶಯಕ್ಕೆ ತಕ್ಕಂತೆ ಕಡಲತಡಿಯ ಅಬ್ಬಕ್ಕನ ನಾಡಲ್ಲಿ ಇಂದು ಅದ್ದೂರಿ ತಿರಂಗ ಯಾತ್ರೆ ಸಮಾವೇಶ ನಡೆದಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವ್ರೇ ಸ್ವತಃ ಅಬ್ಬಕ್ಕನ ನಾಡಾದ ಉಳ್ಳಾಲಕ್ಕೆ ಆಗಮಿಸೋ ಮೂಲಕ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದ್ದಾರೆ. ಗೋವಾದಿಂದ ಮಂಗಳೂರಿಗೆ ಆಗಮಿಸಿದ ಶಾ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟು ಸಾಂಕೇತಿಕವಾಗಿ ಗಿಡ ನೆಟ್ರು. ನಂತ್ರ ಅಲ್ಲಿಂದ ನೇರವಾಗಿ ಪಂಪ್ ವೆಲ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸ್ವಾತಂತ್ರ್ಯೋತ್ಸವದ ದಿನದಂದು ಅಬ್ಬಕ್ಕಳನ್ನು ಸ್ಮರಿಸುವ ಕಾರ್ಯ ಶ್ಲಾಘನೀಯ. ಅಬ್ಬಕ್ಕಳ ನಾಡಿನಲ್ಲಿ ಸರ್ವಧರ್ಮೀಯರು ಶಾಂತಿ ನೆಮ್ಮದಿಯಿಂದ ಬದುಕಿ ಜೀವಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಉಳ್ಳಾಲ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಹೇಳಿದರು. ಅವರು ಉಳ್ಳಾಲದ ಕರಾವಳಿ ಸಾಂಸ್ಕøತಿಕ ಪರಿಷತ್ ವತಿಯಿಂದ 70 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಳ್ಳಾಲದಲ್ಲಿರುವ ವೀರರಾಣಿ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಅಬ್ಬಕ್ಕಳ ಹೆಸರಿನಲ್ಲಿ ರಾಷ್ಟ್ರಮಟ್ಟದ ಗುರುತಿಸುವ ಕೆಲಸವನ್ನು ಸರಕಾರ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಬಹುಮುಖ್ಯ ಎಂದು ಹೇಳಿದರು. ಬಿಜೆಪಿ ಹಿರಿಯ ಮುಖಂಡ ಸೀತಾರಾಮ ಬಂಗೇರ, ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಮೊಗವೀರಸಮಾಜ ಉಳ್ಳಾಲದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಉಳ್ಳಾಲ ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಚೂಡಪ್ಪ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, …
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು :ಕಲ್ಲಾಪು ನಾಗರಿಕರು ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ೭೦ ನೇ ಸ್ವಾತಂತ್ರೋತ್ಸವ ಆಚರಿಸಿದರು.

