Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಇನ್ನೂ ರೂ. 2,000 ದ ನೋಟನ್ನು ಕಂಡವರಿಲ್ಲ, ಆದರೆ ಅಷ್ಟರಲ್ಲೇ ತೊಕ್ಕೊಟ್ಟು ಕಲ್ಲಾಪು ಸಮೀಪ ಮೀನು ವ್ಯಾಪಾರಿಗೆ ರೂ. 2,000 ನಕಲಿ ನೋಟು ನೀಡಿ ವಂಚಿಸಿರುವ ಘಟನೆ ಸೋಮವಾರ ನಡೆದಿದೆ. ಕಲ್ಲಾಪು ಬಳಿ ಟೆಂಪೋದಲ್ಲಿ ಮೀನು ಮಾರಾಟ ನಡೆಸುವ ಉಳ್ಳಾಲದ ಮುಸ್ತಾಫ ಎಂಬವರಿಗೆ ವಂಚಿಸಲಾಗಿದೆ. ಮಧ್ಯಾಹ್ನ ವೇಳೆ ಮೀನು ಖರೀದಿಸಲು ಹಲವು ಗ್ರಾಹಕರಿದ್ದು, ಅವರಲ್ಲಿ ಹಲವರು ಹೊಸ 2000 ನೋಟು ನೀಡಿ 500 ರೂ.ಗಳ ಮೀನು ಖರೀದಿಸಿ, ಉಳಿದ ಚಿಲ್ಲರೆ ಹಣವನ್ನು ಪಡೆಯುತ್ತಿದ್ದರು. ಈ ನಡುವೆ ಗೊತ್ತಿಲ್ಲದೆ ಹಣ ಪಡೆದುಕೊಂಡ ಮುಸ್ತಾಫ ಅವರು ಸಂಜೆ ವೇಳೆ ಹಣ ಎಣಿಸುವ ಸಂದರ್ಭ ನೋಡು ನಕಲಿಯಾಗಿರುವುದು ಬೆಳಕಿಗೆ ಬಂದಿದೆ. ಕಲರ್ ಪ್ರಿಂಟರ್ ಮೂಲಕ ನೋಟನ್ನು ಮುದ್ರಿಸಲಾಗಿದ್ದು, ಅದಕ್ಕೆ ನೀರು ತಾಗಿ ಬಣ್ಣವೂ ಅಳಿಸಿ ಹೋಗಿದೆ. ನೂತನ ನೋಟಿನ ಭಾವಚಿತ್ರವನ್ನು ವಾಟ್ಸ್ಯಾಪ್ , ಅಂತರ್ಜಾಲದ ಮುಖೇನ ಪಡೆದು , ಕಲರ್ ಪ್ರಿಂಟರ್ ಮೂಲಕ ಅದನ್ನು ಮುದ್ರಿಸುವ ಜಾಲ ಸಕ್ರಿಯವಾಗಿದೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವೈದ್ಯಕೀಯ ಸೇವೆಯಲ್ಲಿರುವ ಯುವಸಮುದಾಯ ವೇಗವಾಗಿ ಹಣಗಳಿಸುವಲ್ಲಿ ನಿರತವಾಗಿದ್ದು, ತಾಳ್ಮೆ, ಅನುಭವ, ಪರಿಣತಿಯೊಂದಿಗೆ ಹೆಚ್ಚಿನ ಸಮಯ ಪಡೆದು ವೃತ್ತಿಯಲ್ಲಿ ತೊಡಗಿಕೊಂಡಲ್ಲಿ ಯಶಸ್ವಿ ವೈದ್ಯರಾಗಲು ಸಾಧ್ಯ ಎಂದು ಬೆಂಗಳೂರಿನ ಖ್ಯಾತ ಕರ್ಣತಜ್ಞ ಡಾ.ಹೆಚ್.ವಿಜಯೇಂದ್ರ ಅಭಿಪ್ರಾಯಪಟ್ಟರು ಅವರು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಕಿವಿ, ಮೂಗು, ಕುತ್ತಿಗೆ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಆಸ್ಪತ್ರೆ ಆಡಿಟೋರಿಯಂನಲ್ಲಿ ಶುಕ್ರವಾರ ಆಯೋಜಿಸಿದ್ದ `ಯೆನ್ ಓಟೊ-ಫೆಸ್ 2016′ ಶಸ್ತ್ರಚಿಕಿತ್ಸೆಯ ನೇರಪ್ರಸಾರದ ಕಾರ್ಯಗಾರ ಹಾಗೂ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿದರು. ಹಿಂದೆ ಸ್ನಾತಕೋತ್ತರ ವಿಭಾಗದ ವೈದ್ಯರಿಗೆ ಮೈಕ್ರೋಸ್ಕೋಪ್ ಮುಟ್ಟಲು ಬಿಡುತ್ತಿರಲಿಲ್ಲ. ಆದರೆ 1987ರಲ್ಲಿ ಪ್ರಥಮ ಬಾರಿ ಶಸ್ತ್ರಚಿಕಿತ್ಸೆ ನೇರಪ್ರಸಾರ ಕಾರ್ಯಗಾರ ಆರಂಭದಿಂದಾಗಿ ಕ್ಷೇತ್ರದಲ್ಲಿ ಬಹಳ ಅನುಭವ ಪಡೆಯುವಂತಾಯಿತು. ಸದ್ಯ ಪ್ರತೀ ವಾರದಲ್ಲಿ ಇಂತಹ ಶಸ್ತ್ರಚಿಕಿತ್ಸಾ ಕಾರ್ಯಗಾರಗಳು ನಿರಂತರವಾಗಿ ನಡೆಯುತ್ತಿದೆ. ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಯುವವೈದ್ಯರು ಹಣದ ಹಿಂದೆ ಹೋಗದೇ, ಪರಿಣತಿ, ಉತ್ಸಾಹ, ಆನಂದ ಭಾವದೊಂದಿಗೆ ವೃತ್ತಿಯನ್ನು ನಿರ್ವಹಿಸುವ ಮೂಲಕ ಯಶಸ್ವಿ ವೈದ್ಯರಾಗಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಹಿತಕರ ಕೃತ್ಯ ಎಸಗುತ್ತಿರುವವರಿಗೆ ಭಯೋತ್ಪಾಧಕರ ನಂಟು ಇದೆ. ಕೂಡಲೇ ಅಂತಹ ಚಟುವಟಿಕೆಗಳ ಮಟ್ಟ ಹಾಕುವ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಬೇಕಿದೆ. ಇಲ್ಲವಾದಲ್ಲಿ ನ.15 ರ ಒಳಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಆಗ್ರಹಿಸಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತರ ರಾಮಮೋಹನ್ ಕೊಲೆಯತ್ನ ದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಗೆ ಬಿಜೆಪಿ ಮುಖಂಡರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ ಸಂದರ್ಭ ಆಗ್ರಹ ವ್ಯಕ್ತವಾಯಿತು. ಉಳ್ಳಾಲ, ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ, ಕೊಲೆಯತ್ನ ಹಾಗೂ ಚೂರಿ ಇರಿತ ಪ್ರಕರಣಗಳ ಆರೋಪಿಗಳ ಪತ್ತೆ ಈವರೆಗೂ ಆಗಿಲ್ಲ. ಹಿಂದು ಸಮುದಾಯದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ , ಪೊಲೀಸರು ಮಾತ್ರ ಆರೋಪಿಗಳ ಬಂಧನ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಇಲ್ಲಿ ನಡೆಯುವ ಕೃತ್ಯಗಳು ಭಯೋತ್ಪಾದಕರ ಚಟುವಟಿಕೆಗಳಂತೆ ಕಾಣುತ್ತಿವೆ. ಇಲ್ಲವಾದಲ್ಲಿ ದುಷ್ಕರ್ಮಿಗಳಿಗೆ ಭಯೋತ್ಪಾಧಕ ನಂಟು ಇರುವುದು…

Read More

ಸೋಮೇಶ್ವರ: ಸಾವಿರಾರು ಜನರ ಭವಿಷ್ಯ ಮತ್ತು ಸಾವಿನ ಭವಿಷ್ಯ ಹೇಳಿ ರಾಜ್ಯಾದ್ಯಂತ ಖ್ಯಾತಿ ಗಳಿಸಿದ್ದ ಮೂಲತ: ಮಂಗಳೂರಿನ ಬಜಾಲ್ ನಿವಾಸಿ ಉಳ್ಳಾಲ ಸೋಮೇಶ್ವರದಲ್ಲಿ ನೆಲೆಸಿದ್ದ ಜೀವನ್ ವಿಜಯಾನಂದ ಗುರೂಜಿ (ವಿಜಯ)(47) ಮಂಗಳವಾರ ಬೆಳಿಗ್ಗೆ 11.00 ತೊಕ್ಕೊಟ್ಟು ಖಾಸಗಿ ಆಸ್ಪತ್ರೆ ನಿಧನ ಹೊಂದಿದ್ದಾರೆ. ದೀರ್ಘ ಕಾಲದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ್ದಾರೆ. ಗುರೂಜಿ ಪವಾಡಗಳ ಬಗ್ಗೆ ತಿಳಿದಿದ್ದ ರಾಜ್ಯದ ಜನ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಗುರೂಜಿಯವರ ಸೋಮೇಶ್ವರದ ನಿವಾಸಕ್ಕೆ ಬರುತ್ತಿದ್ದರು. ಯಾವುದೇ ಫಲಾಪೇಕ್ಷೆಯೇ ಇಲ್ಲದೇ ಜನರ ಭವಿಷ್ಯ ನುಡಿಯುತ್ತಿದ್ದರು. ಪತ್ನಿ ಮತ್ತು ಮಕ್ಕಳಿದ್ದರೂ ಹತ್ತು ವರ್ಷಗಳ ಹಿಂದೆಯೇ ತನ್ನ ಕುಟುಂಬ ತ್ಯಜಿಸಿ ಸೋಮೇಶ್ವರಕ್ಕೆ ಬಂದಿದ್ದರು. ಈ ವೇಳೆ ಸ್ಮಶಾನದಲ್ಲಿ ಗುರೂಜಿಗೆ ವಿಶೇಷ ಶಕ್ತಿಯೊಂದು ಅವಾಹನೆಯಾದ ಪರಿಣಾಮ ಅವರು ಹೇಳುತ್ತಿದ್ದ ವಿಚಾರಗಳೆಲ್ಲಾ ನಿಜವಾಗುತಿತ್ತು. ಹೀಗಾಗಿ ಸುತ್ತಮುತ್ತಲಿನ ಜನ ಗುರೂಜಿ ಬಳಿ ಭವಿಷ್ಯ ಕೇಳಲು ಆರಂಭಿಸಿದ್ದರು. ಸುಮಾರು 78 ಮಂದಿಯ ಸಾವಿನ ದಿನಾಂಕವನ್ನು ನಿಖರವಾಗಿ ತಿಳಿಸಿದ್ದರು. ಕಳೆದ ಒಂದು ವಾರದಿಂದ ಆರೋಗ್ಯದಲ್ಲಿ…

Read More

ಉಳ್ಳಾಲ: ಸಮಸ್ತ ನಾಗರಿಕರ ಒಳಿತಿಗೆ ಈದ್ ಹಬ್ಬ ಪೂರಕವಾಗಿರಲಿ, ತ್ಯಾಗ ಬಲಿದಾನದ ಹಬ್ಬದ ಸಂದೇಶವನ್ನು ಎಲ್ಲೆಡೆ ಸಾರಿ ಐಕ್ಯತೆ ಜೀವಿಸುವ ವ್ಯವಸ್ಥೆ ನಮ್ಮದಾಗಲಿ ಎಂದು ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ರವರು ನಾಡಿನ ಸರ್ವ ಜನತೆಗೆ ಈದ್ ಶುಭಹಾರೈಸಿದರು. ಸಚಿವರಾದ ಯು.ಟಿ ಖಾದರ್, ಖತೀಬರಾದ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್, ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು, ಬಾವ ಮುಹಮ್ಮದ್, ಪ್ರದಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ಅಡಿಟರ್ ಯು.ಟಿ ಇಲ್ಯಾಸ್ ತೋಟ, ಕೋಶಾಧಿಕಾರಿ ಯು.ಕೆ ಇಲ್ಯಾಸ್ ಬಸ್ತಿಪಡ್ಪು, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸದಸ್ಯರಾದ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲ, ಮುಹಮ್ಮದ್ ಹಾಜಿ, ಮುಸ್ತಫ ಮಂಚಿಲ, ಯು.ಕೆ ಮುಹಮ್ಮದ್ ಮುಸ್ತಫ, ಅಲಿ ಮೋನು, ಅಬೂಬಕ್ಕರ್ ಅಲಿನಗರ, ಮಯ್ಯದ್ದಿ ಕೋಡಿ, ಮೊಯ್ದಿನಬ್ಬ ಉಳ್ಳಾಲಬೈಲು ಬೊಟ್ಟು, ಇಬ್ರಾಹೀಮ್ ಹಾಜಿ ಉಳ್ಳಾಲ ಬೈಲು, ಹಮಿದ್ ಕೋಡಿ ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞÂಮೋನು, ಮಾಜಿ ಪುರಸಭಾಧ್ಯಕ್ಷ ಬಾಝಿಲ್ ಡಿಸೋಜ ನಗರ ಸಭೆ ಸದಸ್ಯರಾದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೂರಲ್ಪಾಡಿಯಲ್ಲಿ ಪತ್ರಕರ್ತರ ಮೇಲೆ ನಡೆದ ಅಮಾನವೀಯ ದಾಳಿಯ ಬಗ್ಗೆ ಪ್ರತ್ಯಕ್ಷ ದರ್ಶಿ ಬರಹ ಭರತ್ ರಾಜ್ ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು ಕೊಟ್ಟವನಲ್ಲ. ಸುದ್ದಿ ಮಾಡಲು ಹೋದಾಗ ಮತ್ತು ಸುದ್ದಿ ಮಾಡಿದ ನಂತರ ಅಷ್ಟೂ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದೆ. ಆದರೆ ಇವತ್ತು ಮಾತ್ರ ಅಂತಿಮವಾಗಿ `ಅವರ’ ವಿರುದ್ದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಕೊನೆಗೂ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ. ಮುಂದಿನದ್ದು ಕಾನೂನು ಹೋರಾಟವಷ್ಟೇ. ಹೌದು, ನಿನ್ನೆ ಸೂರಲ್ಪಾಡಿ ಮಸೀದಿಯಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನನಗೆ ಮತ್ತು ನನ್ನ ಮಿತ್ರರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು. ಈ ಹಿಂದೆ ಎಲ್ಲಾ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದ ನನ್ನನ್ನು ಸೂರಲ್ಪಾಡಿ ಘಟನೆ ಮಾತ್ರ ಕೊನೆಗೂ ಪೊಲೀಸ್ ದೂರು ನೀಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ. ಅಷ್ಟರ ಮಟ್ಟಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದೇಶವ್ಯಾಪಿ ಬಂದ್‍ಗೆ ಉಳ್ಳಾಲ ನಗರ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಗ್ರಾಮೀಣ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ತೊಕ್ಕೊಟ್ಟು ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದರೆ, ತಲಪಾಡಿ, ದೇರಳಕಟ್ಟೆ ಕೋಟೆಕಾರು, ದೇರಳಕಟ್ಟೆ, ಕುತ್ತಾರು, ಅಸೈಗೋಳಿ, ಮುಡಿಪು, ಕೊಣಾಜೆ, ಗ್ರಾಮಚಾವಡಿ, ಪಾವೂರು, ಕೈರಂಗಳ, ಹರೇಕಳ, ನರಿಂಗಾನ ಸೇರಿದಂತೆ ಹೆಚ್ಚಿನ ಪ್ರದೇಶದಲ್ಲಿ ಕೆಲವೊಂದು ಅಂಗಡಿಗಳು ತೆರೆಯುವ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಸಂಪೂರ್ಣ ಬಂದ್ : ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪಾವೂರು ಹರೇಕಳ, ಇನೋಳಿ, ಕೊಣಾಜೆ ಮಾರ್ಗವಾಗಿ ಸಂಚರಿಸುವ ಖಾಸಗಿ ಸಿಟಿ ಬಸ್ಸುಗಳು. ಬಿ.ಸಿ.ರೋಡ್, ವಿಟ್ಲ, ಪುತ್ತೂರು ಸೇರಿದಂತೆ ತೌಡುಗೋಳಿ, ಮುಡಿಪು ಮಾರ್ಗವಾಗಿ ಸಂಚರಿಸುವ ಸರ್ವಿಸ್ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ತೊಕ್ಕೊಟ್ಟು -ಕೊಣಾಜೆ ಮಂಗಳೂರು ವಿ.ವಿ. ಸಂಪರ್ಕಿಸುವ ರಸ್ತೆಯಲ್ಲಿ ಯಾವುದೇ ಬಸ್ಸುಗಳು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಅದು ಈ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಜ್ಞಾನ ದೇಗುಲ. ಆದ್ರೆ ಇದೀಗ ಇಂಥದ್ದೊಂದು ಪ್ರತಿಷ್ಠಿತ ವಿವಿಯಲ್ಲಿ ಆತಂಕಕಾರಿ ವಿದ್ಯಮಾನವೊಂದು ನಡೆದು ಹೋಗಿದೆ. ವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ಮೊಬೈಲ್ ಕ್ಯಾಮಾರ ಇಟ್ಟು ರಹಸ್ಯ ಚಿತ್ರೀಕರಣಕ್ಕೆ ಮುಂದಾಗಿರೋದು ಬೆಳಕಿಗೆ ಬಂದಿದೆ. ಈ ಮೂಲಕ ವಿವಿ ಆವರಣದಲ್ಲೇ ಹೆಣ್ಮಕ್ಕಳ ಮರ್ಯಾದೆ ಹರಾಜು ಹಾಕೋ ಗಂಭೀರ ಪ್ರಕರಣಕ್ಕೆ ಮಂಗಳೂರು ವಿವಿ ಸಾಕ್ಷಿಯಾಗಿದೆ…… ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಸಾಲಿಗೆ ಸೇರೋ ವಿವಿಗಳಲ್ಲಿ ಮಂಗಳೂರು ವಿವಿ ಕೂಡ ಒಂದು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಗ್ಗಳಿಗೆ ಹೊಂದಿರೋ ಮಂಗಳೂರು ವಿವಿ ಇದೀಗ ಆತಂಕಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿವಿ ಅಂಗಳದಲ್ಲೇ ಹೆಣ್ಮಕ್ಕಳ ಮರ್ಯಾದೆಯನ್ನ ಹರಾಜು ಹಾಕೋ ಕೀಳು ಮಟ್ಟದ ಘಟನೆಯೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿವಿಯ ಬಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮಾರ ಇಟ್ಟು ರಹಸ್ಯವಾಗಿ ಚಿತ್ರೀಕರಿಸ್ತಾ ಇರೋದು ಬಹಿರಂಗವಾಗಿದೆ. ಅಸಲಿಗೆ ಘಟನೆ ನಡೆದು ವಾರಗಳೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಅದು ಭಾರತದ ದ್ವಾದಶ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪವಿತ್ರ ಧಾರ್ಮಿಕ ಕ್ಷೇತ್ರ. ಸಾಕ್ಷಾತ್ ಶಿವನೇ ಲಿಂಗರೂಪದಲ್ಲಿ ನೆಲೆಸಿರೋ ಪುರಾಣ ಪ್ರಸಿದ್ದ ತಾಣ. ಇವತ್ತು ಈ ಇತಿಹಾಸ ಪ್ರಸಿದ್ದ ಕ್ಷೇತ್ರದಲ್ಲಿ ಪವಿತ್ರ ಸಮುದ್ರ ಸ್ನಾನದ ಸಂಭ್ರಮ ಮನೆಮಾಡಿತ್ತು. ಸಾವಿರಾರು ಭಕ್ತರು ಶ್ರಾವಣ ಮಾಸದ ಪ್ರಯುಕ್ತ ಸೋಮನಾಥನ ಕ್ಷೇತ್ರದಲ್ಲಿ ತೀರ್ಥಸ್ನಾನಗೈದು ಪುನೀತರಾದ್ರು…. ಸೋಮೇಶ್ವರ….ಭಾರತ ದೇಶದ ಇತಿಹಾಸ ಪ್ರಸಿದ್ದ ಪವಿತ್ರ ಪುಣ್ಯ ಕ್ಷೇತ್ರ. ಅಬ್ಬರಿಸೋ ಕಡಲಿನ ಮಧ್ಯೆಯೇ ಬಂಡೆಗಲ್ಲಿನ ಮೇಲೆ ಸಾಕ್ಷಾತ್ ಶಿವನೇ ನೆಲೆನಿಂತಿರೋ ನಂಬಿಕೆಯ ತಾಣ. ಶ್ರಾದ್ದ ಪ್ರಯೋಗಕ್ಕೆ ದೇಶದಲ್ಲಿರೋ ದ್ವಾದಶ ಪುಣ್ಯ ಕ್ಷೇತ್ರಗಳಲ್ಲಿ ಕಡಲತಡಿಯ ಸೋಮನಾಥೇಶ್ವರನ ಸನ್ನಿಧಾನವೂ ಒಂದು. ಹೀಗಾಗಿ ಸೋಮೇಶ್ವನ ಸನ್ನಿಧಾನದಲ್ಲಿ ನಡೆಯೋ ಶ್ರಾವಣ ಮಾಸದ ಅಮಾವಾಸ್ಯೆ ತೀರ್ಥ ಸ್ನಾನಕ್ಕೆ ಆದರದ್ದೇ ಆದ ಪ್ರಾಮುಖ್ಯತೆಯಿದೆ. ಹೀಗಾಗಿಯೇ ಶ್ರಾವಣ ಮಾಸದ ಇಂದು ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸಮುದ್ರ ಸ್ನಾನ ಗೈದು ಪುನೀತರಾದ್ರು. ಅಮಾವಾಸ್ಯೆಯ ದಿನವಾದ ಇಂದು ಸಮುದ್ರಕ್ಕೆ ವೀಳ್ಯದೆಳೆ ಮತ್ತು ಅಡಿಕೆಯನ್ನ ಅರ್ಪಿಸಿ ಸಮುದ್ರಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಭಕ್ತರು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕಟೀಲು ದೇವರ ಮೇಲೆ ಅವಹೇಳನ ಮಾಡಿರುವ ಬಗ್ಗೆ ಧಾರ್ಮಿಕ ಜಾಗೃತಿ ಮತ್ತು ಖಂಡನಾ ಸಭೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಬಾವುಕರಾಗಿ ಕಣ್ಣೀರಿಟ್ಟ ಘmನೆ ನಡೆಯಿತು. ದೇಶದ ಸಂಸ್ಕøತಿಯಲ್ಲಿ ಅನಾದಿ ಕಾಲದಿಂದಲೂ ತಾಯಿಗೆ ಅತ್ಯಂತ ಮಹತ್ತರತೆಯನ್ನು ಕೊಡಲಾಗಿದೆ. ಜಿಲ್ಲೆಯಲ್ಲಿ ಕಟೀಲಿನ ದೇವಿಗೆ ಸ್ವಂತ ಅಮ್ಮನಷ್ಟು ಪ್ರಾತಿನಿಧ್ಯ ಕೊಡಲಾಗುತ್ತಿದೆ. ಅಂತಹ ನಾಡಿನಲ್ಲೇ ಇದ್ದುಕೊಂಡು ಕ್ಷೇತ್ರದ ತಾಯಿಗೆ ಅವಹೇಳನಕಾರಿಯಾಗಿ ಬರೆಯುವ ಮೂಲಕ ಧರ್ಮವನ್ನು ಉರಿಸುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಹೋರಾಡದೇ ಇದ್ದಲ್ಲಿ ಹುಟ್ಟಿರುವುದು ವ್ಯರ್ಥ. ತಪ್ಪು ಎಂದು ತಿಳಿದರೂ ಪ್ರತಿಭಟಿಸದೇ ಇದ್ದಲ್ಲಿ ಧರ್ಮ ಉಳಿಯಲು ಸಾಧ್ಯವಿಲ್ಲ. ತಪ್ಪಿನ ಅರಿವು ಲೋಕಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಶ್ರೀ ಕ್ಷೇತ್ರ ಕಟೀಲಿಗೆ ಮುಸ್ಲಿಂ, ಕ್ರಿಶ್ಚಿಯನ್ನರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಸಮಾರಸ್ಯದ ಕ್ಷೇತ್ರವೆನಿಸಿರುವ ಕಟೀಲಿನ ಹೆಸರಿಗೆ…

Read More