ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಭವ್ಯ ಭಾರತ ದೇಶಕ್ಕೆ ಸಂವಿಧಾನ ಬರೆದ ಡಾ.ಬಿ. ಆರ್ ಅಂಬೇಡ್ಕರ್ ರವರು ಮರಣ ಹೊಂದಿದ ದಿನದಂದೇ ಪ್ಯಾಸಿಸ್ಟ್ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಬಾಬರಿ ಮಸೀದಿ ಕೇವಲ ಮುಸ್ಲಿಮರ ಪ್ರಾರ್ಥನ ಮಂದಿರವಾಗಿರಲಿಲ್ಲ , ಅದು ದೇಶದ ಸಂವಿಧಾನ ಹಾಗೂ ಜಾತ್ಯತೀತ ಮೌಲ್ಯಗಳ ಸಂಕೇತವಾಗಿತ್ತು .
ಬಾಬರಿ ಮಸೀದಿ ದ್ವಂಸಗೊಂಡು ಇಂದಿಗೆ ಸುಮಾರು 23 ವರ್ಷ ಸಂದರೂ ಇದುವರೆಗೂ ಆರೋಪಿಗಳನ್ನು ಬಂಧಿಸದೇ ಇರುವುದು ನಿಜಕ್ಕೂ ಖೇದಕರ ಎಂದು ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕರ್ನಾಟಕ ಉಪಾಧ್ಯಕ್ಷ ಸಯ್ಯದ್ ಇಬ್ರಾಹೀಂ ಅಲ್ ಖಾಸಿಮಿ ತಂಙಲ್ ಅಭಿಪ್ರಾಯಪಟ್ಟರು.
ಅವರು ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ದೇರಳಕಟ್ಟೆ ಬಿ.ಸಿ.ಸಿ ಹಾಲ್ ನಲ್ಲಿ ನಡೆದ ಬಾಬರೀ ಮಸ್ಜಿದ್ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬಾಬರಿ ಮಸ್ಜಿದ್ ವಿಚಾರದಲ್ಲಿ ಪಕ್ಷ ಭೇದ ಬಾವ ,ಅಭಿಪ್ರಾಯ ವ್ಯತಾಸವಿಲ್ಲದೇ ಇಮಾಮ್ ಕೌನ್ಸಿಲ್ ನಂತೆ ಸರ್ವ ಉಲಮಾ ಸಂಘಟನೆಗಳು ಹಾಗೂ ಮುಸ್ಲಿಂ ಸಮುದಾಯಗಳು ದ್ವನಿ ಎತ್ತ ಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆಕೊಟ್ಟರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಕಾಟಿಪಳ್ಳ , ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೇರಳ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಪಿ, ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ದ.ಕ ಜಿಲ್ಲಾಧ್ಯಕ್ಷ ನಝೀರ್ ಮುಸ್ಲಿಯಾರ್, ಉಪಾಧ್ಯಕ್ಷ ಅಬ್ದುಲ್ ಮಜೀದ್ ನಿಝಾಮಿ ,, ಪಯಾಝ್ ಮಂಜನಾಡಿ, ಕಿನ್ಯ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಅಬು ಸ್ವಾಲಿಹ್ ಹಾಜಿ, ಪನೀರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ ಮಾನ್ ಉಪಸ್ಥಿತರಿದ್ದರು.
ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ದ.ಕ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಹನೀಪಿ ಮುಲ್ಕಿ ಸ್ವಾಗತಿಸಿದರು. ರಫೀಕ್ ದಾರಿಮಿ ವಂದಿಸಿದರೆ ಝಾಹಿದ್ ವiಲಾರ್ ಕಾರ್ಯಕ್ರಮ ನಿರೂಪಿಸಿದರು .


