ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಸರಕಾರಕ್ಕೆ ವೈದ್ಯಕೀಯ ಕಾಲೇಜುಗಳ ಮತ್ತು ಆಸ್ಪತ್ರೆಗಳ ಸಲಹೆಯ ಅಗತ್ಯವಿದ್ದು, ಈ ಮೂಲಕ ಸರಕಾರಿ ಆಸ್ಪತ್ರೆಗಳ ಸುಧಾರಣೆ ಸಾಧ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ಮತ್ತು ಮಣಿಪಾಲದ ಆಸ್ಪತ್ರೆ ಆಡಳಿತ ಅಕಾಡೆಮಿ ವತಿಯಿಂದ ದೇರಳಕಟ್ಟೆಯ ಯೆನೆಪೋಯ ವಿ.ವಿ.ಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾದ ಸುರಕ್ಷಿತ ಮತ್ತು ಸುಸ್ಥಿರ ಆಸ್ಪತ್ರೆಗಳು `ಸಾಷ್-2015′ ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು.
ಆಸ್ಪತ್ರೆಗಳಲ್ಲಿ ರೋಗಿಗಳನ್ನು ಶುಶ್ರೂಷೆ ಮಾಡುವಾಗ ಅತ್ಯಂತ ಜಾಗರೂಕತೆಯ ಅವಶ್ಯಕತೆ ಇದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಆಸ್ಪತ್ರೆ ಯಿಂದ ಆಗಬೇಕಿದೆ. ತಪ್ಪುಗಳಾದಾಗ ಸರಿಪಡಿಸಿಕೊಂಡು ಮುಂದೆ ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳಬೇಕಿದೆ. ಆಸ್ಪತ್ರೆಯ ಆಡಳಿತವನ್ನು ವ್ಯವಹಾರ ಆಡಳಿತ ವಿಭಾಗದಲ್ಲಿ ಶಿಕ್ಷಣ ಪಡೆದುಕೊಂಡವರ ಕೈಯ್ಯಲ್ಲಿ ನೀಡಿದಲ್ಲಿ ಅವರು ಹಣದ ಕಡೆ ಮಾತ್ರ ಗಮನಹರಿಸುತ್ತಾರೆ. ಬದಲಾಗಿ ವೈದ್ಯರೇ ಆಡಳಿತ ನಡೆಸುವವರಾದರೇ ರೋಗಿಗಳ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಕರ್ನಾಟಕ ಸರಕಾರ ಯಾವುದೇ ಬಡರೋಗಿಯನ್ನು ತನ್ನ ಉಳಿತಾಯದ ಹಣದಿಂದ ಆಸ್ಪತ್ರೆ ಖರ್ಚನ್ನು ಭರಿಸದೆ, ಸರಕಾರದ ಮೂಲಕವೇ ಭರಿಸುವಂತಹ ಯೋಜನೆಯನ್ನು ಹಾಕಿಕೊಂಡಿದೆ. ಈ ಮೂಲಕ ಬಿಪಿಎಲ್, ಎಪಿಎಲ್ ಕಾರ್ಡುದಾರ ಎಲ್ಲಾ ರೋಗಿಗಳಿಗೆ ಸಹಕಾರ ನೀಡುವಂತೆ ಯೋಜನೆ ರೂಪಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾನಿಲಯದ ಕು¯ಪತಿ ವೈ. ಅಬ್ದುಲ್ಲಾ ಕುಂಞÂ ಮಾತನಾಡಿ ವೈದ್ಯರಿಗೆ ಜವಾಬ್ದಾರಿಗಳನ್ನು ಸವಾಲಾಗಿ ಸ್ವೀಕರಿಸಬೇಕಿದೆ. ಸುರಕ್ಷಿತ ಸಂಸ್ಕøತಿಯ ಮನೋಭಾವವನ್ನು ಬೆಳೆಸುವ ಮೂಲಕ ಕ್ಷೇತ್ರದಲ್ಲಿರುವ ಅಡಕಗಳನ್ನು ನಿಯಂತ್ರಣಕ್ಕೆ ತರಬೇಕಿದೆ ಎಂದರು.
ಈ ಸಂದರ್ಭ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಎ.ಜೆ.ಶೆಟ್ಟಿ, ಯೆನೆಪೋಯ ವಿ.ವಿ.ಯ ಉಪಕುಲಪತಿ ಡಾ.ಎಂ.ವಿಜಯ ಕುಮಾರ್, ಮಣಿಪಾಲ ವಿ.ವಿ.ಯ ಉಪಕುಲಪತಿ ಡಾ.ಹೆಚ್.ವಿನೋದ್ ಭಟ್, ಅಕಾಡೆಮಿಯ ಅಧ್ಯಕ್ಷ ಮೇಜರ್ ಜನರಲ್ ಡಾ.ಆರ್.ಕೆ. ಗರ್ಗ್, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪೂನಂ ರಜಪೂತ್ ಉಪಸ್ಥಿತರಿದ್ದರು.
ಸಂಘಟಕ ಡಾ.ಗುಲಾಂ ಜಿಲಾನಿ ಖಾದಿರಿ ಸ್ವಾಗತಿಸಿದರು. ಡಾ.ಅಮಿತಾ.ಪಿ.ಮಾರ್ಲ ವಂದಿಸಿದರು


