ಉಳ್ಳಾಲ ನ್ಯೂಸ್ ನೆಟ್ ವರ್ಕ್
ತಲಪಾಡಿ: ಕೇರಳ ಸಾರಿಗೆಯ ಎರಡು ಬಸ್ಸುಗಳಿಗೆ ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಕಲ್ಲೆಸೆದು ಹಾನಿ ಮಾಡಿರುವ ಘಟನೆ ಕೇರಳ -ಕರ್ನಾಟಕ ಗಡಿ ಪ್ರದೇಶ ತೂಮಿನಾಡು ಮತ್ತು ಕೋಟೆಕಾರು ಬೀರಿ ಸಮೀಪ ನಡೆದಿದೆ.
ಇಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಶುಕ್ರವಾರದಂದು ಭೇಟಿ ವಿರೋಧಿಸಿ ಹರತಾಳವನ್ನು ಆಯೋಜಿಸಿತ್ತು. ಇದೇ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲೆಸೆದಿರುವ ಶಂಕೆ ಇದೆ.
ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ವೇಳೆ ತೂಮಿನಾಡು ಸಮೀಪ 9.00 ಗಂಟೆಯ ವೇಳೆ ಕಲ್ಲೆಸೆದರೆ ಇನ್ನೊಂದೆಡೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಬೀರಿ ಎಂಬಲ್ಲಿ ಕಲ್ಲೆಸೆಯಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಬಂದೋಬಸ್ತಿನ ನಡುವೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಸೆಕ್ಷನ್ ಜಾರಿಯಲ್ಲಿದ್ದರೂ ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಉಳ್ಳಾಲ ಹಾಘೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.25ರಂದು ಮಂಗಳೂರಿನಲ್ಲಿ ಸಿಪಿಐಎಂ ವತಿಯಿಂದ ಕರಾವಳಿ ಸೌಹರ್ದ ರ್ಯಾಲಿ ಪ್ರಚಾರಾರ್ಥವಾಗಿ ಕುತ್ತಾರಿನಲ್ಲಿ ಹಾಕಲಾದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿರುವುದನ್ನು ಖಂಡಿಸಿ, ಇದಕ್ಕೆ ಪ್ರತಿಯಾಗಿ ಸಂಘಟಕರು ಬ್ಯಾನರ್ ಹರಿದವರಿಗೆ ಅದೇ ಸ್ಥಳದಲ್ಲಿ ಶ್ರದ್ಧಾಂಜಲಿ ಕೋರಿ ಇನ್ನೊಂದು ಬ್ಯಾನರ್ ಅಳವಡಿಸಿದ್ದಾರೆ.


