ವಜ್ರ ಗುಜರನ್ ಮಾಡೂರು ಕ್ರಿಸ್ಮಸ್ ಬಂದಿದೆ.. ಈ ಮಹತ್ವಪೂರ್ಣ ದಿನಕ್ಕಾಗಿ ಕಾಯುತ್ತಿದ್ದ ಜನರ ಮುಖದಲ್ಲಿ ಸಡಗರ ಮೂಡಿದೆ. ಮನೆ ಮುಂದೆ ನಕ್ಷತ್ರ ಮಿನುಗತ್ತದೆ.. ಮನೆಯೊಳಗೆ ಕೇಕ್ ಘಮ್ಮೆನ್ನುತ್ತದೆ.. ಸಾಂತಕ್ಲಾಸ್ ಮನೆ ಮನೆಗೆ ಸಿಹಿ ನೀಡಿ ಸಂತಸ ಪಸರಿಸುತ್ತಾನೆ.. ನಿಸರ್ಗ ಸೇರಿದಂತೆ ಮನೆಮನಗಳಲ್ಲಿ ಹೊಸತನ ಚಿಗುರೊಡೆಯುತ್ತದೆ. ಚರ್ಚ್ ಸೇರಿದಂತೆ ಎಲ್ಲೆಡೆ ಯೇಸುವಿನ ಸ್ಮರಣೆ ನಡೆಯುತ್ತದೆ. ಡಿಸೆಂಬರ್ 25 ಕ್ರಿಸ್ತ ಯೇಸುವಿನ ಜನನೋತ್ಸವವು ಕ್ರಿಸ್ಮಸ್ ಹಬ್ಬವಾಗಿ ಆಚರಣೆಯಾಗುತ್ತಿದೆ. ಹಾಗೆ ನೋಡಿದರೆ ಕ್ರಿಸ್ಮಸ್ ಹಬ್ಬ ಕ್ರೈಸ್ತರು ಆಚರಣೆ ಮಾಡಿದರೂ ಆ ಸಂಭ್ರಮದಲ್ಲಿ ಇತರ ಎಲ್ಲ ಜನರೂ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯಲ್ಲಿ ದನಗಳ ಕೊಟ್ಟಿಗೆಯಲ್ಲಿ ಸಾಕು ತಂದೆ ಜೋಸೆಫರ ಆಶ್ರಯದಲ್ಲಿ ಮಾತೆ ಮರಿಯಮ್ಮನವರ ಉದರದಲ್ಲಿ ಜನಿಸಿದ ಏಸು 33ವರ್ಷಗಳ ಕಾಲ ಮಾತ್ರ ಭೂಮಿ ಮೇಲೆ ಬಾಳಿದರೂ ಅದ್ಭುತ ಪವಾಡಗಳನ್ನು ಮಾಡಿ ಸಮಸ್ತ ಜನರ ಪಾಪಗಳ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದರು. ಆದರೆ ಈ ಪ್ರಪಂಚದಲ್ಲಿ ಸತ್ತ ಮೇಲೆ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನ ಕ್ರಿಸ್ ಮಸ್ ಆಚರಣೆ ಪ್ರಯುಕ್ತ ಒಂದು ಕಿ.ಮೀ ಉದ್ದದ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಮತ್ತು ನಕ್ಷತ್ರಗಳಿಂದ ಪೆರ್ಮನ್ನೂರು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಅಲಂಕೃತಗೊಳಿಸಲಾಗಿತ್ತು. ಅಲಂಕಾರದಲ್ಲಿ ಸ್ಪೋಟ್ಸ್ ್ ಕ್ಲಬ್ ಅಧ್ಯಕ್ಷ ರಾನ್ಸನ್ ಮೊಂತೇರೊ, ನವೀನ್, ಬಾಝಿಲ್ ಡಿಸೋಜಾ, ಸುನಿಲ್ ಲೋಬೊ, ಕಿರಣ್, ಪುಷ್ಪರಾಜ್, ಮೆಲ್ವಿನ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲುಕಾಸ್ ಡಿಸೋಜಾ ಪಾಲ್ಗೊಂಡಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳುವ ವಾತಾವರಣವನ್ನು ಕ್ರಿಸ್ ಮಸ್ ಹಬ್ಬ ನಿರ್ಮಿಸಲಿ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಕ್ರಿಸ್ ಮಸ್ ಹಬ್ಬ ಎಲ್ಲರೂ ಸೇರಿ ಆಚರಿಸುವಂತಹ ಹಬ್ಬವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವ ಮೂಲಕ ಸಂತೋಷವಾಗಿದೆ. ಹಬ್ಬ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಲಿ ಎಂದರು. ಈ ಸಂದರ್ಭ ಚರ್ಚಿನ ಧರ್ಮಗುರು ಫಾದರ್ ಜೆ.ಬಿ.ಸಲ್ದಾನ್ಹ, ಚಚ್ ್ ಪಾಲನಾ ಸಮಿತಿಯ ಕಾಋಯದರ್ಶಿ ಡೆಮೆಟ್ರಿಯಸ್ ಡಿಸೋಜಾ, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೇವಸ್ ಡಿಸೋಜಾ ಸಚಿವರಿಗೆ ಕೇಕ್ ನೀಡಿ ಹಬ್ಬದ ಶುಭಾಷಯಗಳನ್ನು ಸಲ್ಲಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ , ಸಡಗರದಿಂದ ಉಳ್ಳಾಲದ ಸೈಯ್ಯದ್ ಮದನಿ ದರ್ಗಾದಲ್ಲಿ ಆಚರಿಸಲಾಯಿತು. 10,000 ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾ ಭಕ್ತಿ ಮೆರೆದರು. ಉಳ್ಳಾಲ ದರ್ಗಾ ಸೇರಿದ 33 ಮಸೀದಿಯಿಂದ ಮತ್ತು ನೆರೆಯ ಕೊಣಾಜೆ, ಮುಡಿಪು, ಬೋಳಿಯಾರು, ಕುತ್ತಾರು, ಎಲಿಯಾರುಪದವು, ಮದನಿನಗರ , ಗ್ರಾಮಚಾವಡಿ, ಪಾವೂರು, ಇನೋಳಿ ಭಾಗದದವರು ಮೆರವಣಿಗೆಯಲ್ಲಿ ಪಾಲ್ಗೊಂಡು ದರ್ಗಾ ಸೇರಿದರು. ಕಾರ್ಯಕ್ರಮವನ್ನು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಯುು.ಎಸ್ ಹಂಝರವರು ಉಳ್ಳಾಲ ಜುಮ್ಮಾ ಮಸೀದಿಯ ವಠಾರದಲ್ಲಿ ದ್ವಜಾರೋಹಣಗೈದು ಉದ್ಘಾಟಿಸಿದರು. ಖತೀಬರಾದ ಅಬ್ದುಲ್ ರವೂಫ್ ಮುಸ್ಲಿಯಾರ್ ದರ್ಗಾ ಝಿಯಾರತ್‍ಗೈದು ದುಆಗೈದರು. ಮಿಲಾದ್ ಪ್ರಯುಕ್ತ ಬೃಹತ್ ಸ್ವಲಾತ್ ಮೆರವಣಿಗೆ ಜರುಗಿತು. ಕೋಟೆಪುರ ಜುಮಾ ಮಸೀದಿಯಿಂದ ಹೊರಟು ಕೋಡಿ, ಉಳ್ಳಾಲ ಪೇಟೆಯÁಗಿ ಮುಕ್ಕಚೇರಿ ಆಜಾದ್ ನಗರ, ಮೇಲಂಗಡಿ ಮಾರ್ಗವಾಗಿ ದರ್ಗಾ ವಠಾರದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ರಕ್ತದ ಗುಂಪಿನ ಬಗ್ಗೆ ಮಾಹಿತಿಯಿದ್ದರೆ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಮುರಳೀ ಮೋಹನ್ ಚೂಂತಾರು ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕ ಹಾಗೂ ಮಂಜೇಶ್ವರದ ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ಇನೋಳಿ ದ.ಕ.ಜಿ.ಪಂ. ಪ್ರಾಥಮಿಕ ಶಾಲೆಯಲ್ಲಿ ನಡೆದ ರಕ್ತ ವರ್ಗೀಕರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅದೆಷ್ಟೋ ಮಂದಿ ತುರ್ತು ಸಂದರ್ಭದಲ್ಲಿ ರಕ್ತದ ಅನಿವಾರ್ಯತೆಯಿದ್ದು, ರಕ್ತದಾನಿಗಳಿದ್ದರೂ ಗುಂಪಿನ ಬಗ್ಗೆ ಅರಿವಿಲ್ಲದ ಕಾರಣ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತದ ಗುಂಪಿನ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸರ್ಕಾರವೂ ಪ್ರತೀ ಶಾಲೆಗಳಲ್ಲಿ ಈ ಪ್ರಕ್ರಿಯೆ ನಡೆಸುವಂತೆ ಸುತ್ತೋಲೆ ನೀಡಿದೆ ಎಂದು ತಿಳಿಸಿದರು. ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ಮುಖ್ಯಸ್ಥ ಅಬ್ದುಲ್ ಹಮೀದ್ ಮಾತನಾಡಿ, ಸೊಳ್ಳೆ ಕಚ್ಚುವಾಗ ಆಗುವ ನೋವಿಗಿಂತಲೂ ಕಡಿಮೆ ನೋವು ಪರೀಕ್ಷೆ ನಿಟ್ಟಿನಲ್ಲಿ ರಕ್ತ ತೆಗೆಯುವ ಸಂದರ್ಭ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಕಾರ್ಯ ವೈಖರಿ ಬಗ್ಗೆ ನಿಗಾ ಇಡಲಾಗಿದೆ. ಚುನಾವಣೆ ದಿನ ಎಲ್ಲರೂ ಒಗ್ಗಟ್ಟಿನಿಂದ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಮತ ಹಾಕುವ ಮೂಲಕ ಕುರ್ನಾಡು ಮತ್ತು ಉಳ್ಳಾಲ ಬ್ಲಾಕ್‍ನಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ನೋಡಿಕೊಳ್ಳಬೇಕು. ಚುನಾವಣೆ ಸಂದರ್ಭ ವಿರೋಧ ಪಕ್ಷದಿಂದ ಆರೋಪ ಸ್ವಾಭಾವಿಕವಾಗಿದ್ದು ಬಿಜೆಪಿ ಮಾಡುತ್ತಿರುವ ಆರೋಪಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಕುರ್ನಾಡು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಂಗಳವಾರ ಮುಡಿಪು ಖಾಸಗಿ ಸಭಾಂಗಣದಲ್ಲಿ ನಡೆದ ಸ್ಥಳಿಯಾಡಳಿತ ಜನಪ್ರತಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜನಪ್ರತಿನಿಧಿಗಳು ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡದೆ ಅಡ್ಡ ಮತದಾನ ಮಾಡಿದರೆ ಅವರ ವಿರುದ್ಧ ಯಾವುದೇ ಕರುಣೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನವದೆಹಲಿ: ದೆಹಲಿಯ ನ್ಯಾಯಾಲಯವೊಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಭದ್ರತಾ ಲೋಪಕ್ಕೆ ಸಾಕ್ಷಿ ಎಂಬಂತೆ ಕರ್ಕಾರ್‌ದೂಮಾ ಕೋರ್ಟ್‌ನ ಹಾಲ್ ನಂ. 73ರಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಧೀಶರೆದುರೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿಯಲ್ಲಿ ಪೇದೆಯೊಬ್ಬರಿಗೆ ನಾಲ್ಕು ಗುಂಡುಗಳು ತಗುಲಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇಬ್ಬರು ಪೇದೆ ಹಾಗೂ ನ್ಯಾಯಾಲಯದ ಕ್ಲರ್ಕ್ ಗೆ ಗಾಯವಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ಗುಂಡಿನ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನವ ದೆಹಲಿ :ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ 2016ರಲ್ಲಿ ಜೈಲಿಗೆ ಹೋಗುವುದು ನಿಶ್ಚಿತ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿಕೆ ನೀಡಿದ್ದಾರೆ. ಆಜ್ ತಕ್ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಭಾರತದ ನ್ಯಾಯಾಂಗದಲ್ಲಿ ತನಗೆ ವಿಶ್ವಾಸವಿದೆ ಎಂದರು. “ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಬುದ್ಧು; ಆತನಿಗೆ ಯಾವುದೇ ಭವಿಷ್ಯ ಇಲ್ಲ ‘ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ ರಾಹುಲ್ ಗಾಂಧಿಗೆ ಸುಳ್ಳು ಹೇಳುವುದು ಹುಟ್ಟುಗುಣವಾಗಿದ್ದು ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಕೂಡ ಸುಳ್ಳು ಹೇಳಿಕೊಂಡು ಬಂದಿದ್ದಾರೆ’ ಎಂದು ಹೇಳಿದರು. ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಪಟ್ಟು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನೀಡಿರುವ ಮಾಧ್ಯಮ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸ್ವಾಮಿ,ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿ ನನಗೆ ಬಿಜೆಪಿಯಿಂದ ಯಾವುದೇ ರೀತಿಯ ಬೆಂಬಲ ಬೇಕಾಗಿಲ್ಲ.ಈ ಕೇಸಿನ ಬಗ್ಗೆ ನಾನು ಈ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಕ್ಕಳಿಗೆ ಸಾಹಿತ್ಯದ ಬೆಳವಣಿಗೆ, ಪರಿಚಯ ಮತ್ತು ಸಾಹಿತಿಗಳ ಮೇಲೆ ಗೌರವ ಭಾವನೆ ಯನ್ನು ಮೂಡಿಸುವಲ್ಲಿ ಸಾಹಿತ್ಯ ಉತ್ಸವಗಳಿಂದ ಮಾತ್ರ ಸಾಧ್ಯ ಎಂದು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಅಮೃತಾನಂದಮಯಿ ನುಡಿದರು. ಅವರು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮಂಗಳವಾರ ನಡೆದ ನಾಡು ನುಡಿ ವೈಭವದ “ರತ್ನೋತ್ಸವ 2015” ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು. ಸಹಿಷ್ಣುತೆಯಿಂದ ಕೂಡಿರುವ ಸಾಹಿತ್ಯ ಸಾರ್ವಕಾಲಿಕ. ಅಂತಹ ಸಂಸ್ಕøತಿ ಮತ್ತು ಪರಂಪರೆಯನ್ನು ಸಾಹಿತ್ಯದ ಮೂಲಕ ಅರಿತುಕೊಳ್ಳಬಹುದು. ಬದುಕನ್ನು ಪ್ರೇರೇಪಿಸಲು , ಪುರಾಣ ತಿಳಿಯಲು ಸಾಹಿತ್ಯ ಸಹಕಾರಿ. ಕವಿಗಳಲ್ಲಿ ಒಳ್ಳೆಯ ಹೃದಯಗಳಿದ್ದಲ್ಲಿ ಒಳ್ಳೆಯ ಸಾಹಿತ್ಯ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಕೃತಿ ಸಹಜ ಸಾಹಿತ್ಯ ಸಮಾಜದಲ್ಲಿ ಕ್ಷೇಮದ ವಾತಾವರಣ ಉಂಟು ಮಾಡುವುದು. ವಿಕೃತಿ ಸಾಹಿತಿಗಳಿಂದ ಸಮಾಜದಲ್ಲಿ ಗೊಂದಲದ ವಾತಾವರಣ ಉಂಟಾಗುವುದರಲ್ಲಿ ಸಂಶಯವಿಲ್ಲ ಎಂದರು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಛಾಂದಸ ಡಾ.ಎನ್ ನಾರಾಯಣ ಶೆಟ್ಟಿ ಶಿಮಂತೂರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ದಿಲ್ ವಾಲೆ ಸಿನಿಮಾ ವೀಕ್ಷಣೆಗೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಜರಂಗದಳದ ಮುಖಂಡ ಮತ್ತು ಕಾರ್ಯಕರ್ತರ ಮೇಲೆ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ದೂರು ನೀಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾರೂಕ್ ಖಾನ್ ದೇಶದ್ರೋಹಿ ಎಂದು ಆರೋಪಿಸಿ ಭಾನುವಾರ ನಗರದ ಪಾಂಡೇಶ್ವರದ ಪಿವಿಆರ್ ಚಿತ್ರಮಂದಿರದಲ್ಲಿ ದಿಲ್ ವಾಲೆ ಚಿತ್ರವನ್ನು ನಿಲ್ಲಿಸುವಂತೆ ಬಜರಂಗಿಗಳು ಒತ್ತಾಯಿಸಿದ್ದು ನಂತರ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು.

