Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ :ಉಳ್ಳಾಲ ನಗರಸಭೆಯ ಅನರ್ಹಗೊಂಡ ಎರಡು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ 24ನೇ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಭಾಝಿಲ್ ಡಿ.ಸೋಜ ಮತ್ತು 26ನೇ ಕಲ್ಲಾಪು ವಾರ್ಡ್‍ನಿಂದ ಕಾಂಗ್ರೆಸ್‍ನ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಗೆಲುವು ಸಾಧಿಸಿದ್ದು, ಉಳ್ಳಾಲ ನಗರಸಭೆಯ ಈ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಂತಾಗಿದೆ. ಚೆಂಬುಗುಡ್ಡೆಯ 24ನೇ ವಾರ್ಡ್‍ನಲ್ಲಿ ಬಾಝಿಲ್ ಡಿ.ಸೋಜ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಚೆಂಬುಗುಡ್ಡೆ ಅವರೆದುರು ಮತಗಳ ಅಂತರದಿಂದ ಜಯಶಾಲಿಯಾದರೆ, 26ನೇ ಕಲ್ಲಾಪು ವಾರ್ಡ್‍ನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ತನ್ನ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ ಅವರೆದುರು ಮತಗಳ ಅಂತರದಿಂದ ವಿಜಯಿಯಾದರು. ಉಳ್ಳಾಲ ಪುರಸಭೆಯಾಗಿದ್ದ ಉಳ್ಳಾಲಕ್ಕೆ 2013ರಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಪಡೆಯುವ ಮೂಲಕ ಆಡಳಿತಕ್ಕೇರಿದರೆ ಬಿಜೆಪಿ 7 ಸ್ಥಾನಗಳನ್ನು, ಪಕ್ಷೇತರ 2, ಎಸ್‍ಡಿಪಿಐ ಒಂದು ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್‍ನ 24ನೇ ಚೆಂಬುಗುಡ್ಡೆ ವಾರ್ಡ್‍ನ ಸದಸ್ಯ ಬಾಝಿಲ್ ಡಿ.ಸೋಜ ಮತ್ತು 26ನೇ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಪ್ಪಳದ ಕುಖ್ಯಾತ ರೌಡಿ ಹಲವು ಪ್ರಕರಣಗಳ ಆರೋಪಿ ಖಾಲಿಯಾ ರಫೀಕ್ ನನ್ನು ಕೋಟೆಕಾರು ಪೆಟ್ರೋಲ್ ಪಂಪ್ ಎದುರುಗಡೆ ದುಷ್ಕರ್ಮಿಗಳು ಅಪಘಾತವೆಸಗಿ ಗುಂಡಿಕ್ಕಿ ಬಳಿಕ ತಲವಾರಿನಿಂದ ಕಡಿದು ಹತ್ಯೆ ನಡೆಸಿದ್ದಾರೆ. ಈ ಮೂಲಕ 2013ರಲ್ಲಿ ಖಾಲಿಯಾನಿಂದ ಹತ್ಯೆಗೀಡಾಗಿದ್ದ ಮುತಾಲಿಬ್ ಸಹೋದರರು ಸೇಡು ತೀರಿಸಿಕೊಂಡಿದ್ದಾರೆಂಬ ಮಾಹಿತಿ ಮಂಜೇಶ್ವರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆಗಿದ್ದೇನು : ನಿನ್ನೆ ತಡರಾತ್ರಿ 11.30ರ ವೇಳೆ ಖಾಲಿಯಾ ರಫೀಕ್, ಝಾಹಿರ್ ಮತ್ತು ಇನ್ನಿಬ್ಬರು ಗೆಳೆಯರು ಉಪ್ಪಳದಿಂದ ಮಂಗಳೂರಿಗೆ ರಿಟ್ಝ್ ಕಾರಿನಲ್ಲಿ ತೆರಳುತ್ತಿದ್ದರು. ಇವರನ್ನು ದುಷ್ಕರ್ಮಿಗಳ ಇಬ್ಬರ ತಂಡ ಸ್ವಿಫ್ಟ್ ಕಾರಿನಲ್ಲಿ ಫಾಲೋ ಮಾಡುತಿತ್ತು. ಖಾಲಿಯಾ ರಫೀಕನ ಕಾರು ಕೋಟೆಕಾರು ಪೆಟ್ರೋಲ್ ಪಂಪ್ ತಲುಪುತ್ತಿದ್ದಂತೆ, ದುಷ್ಕರ್ಮಿಗಳು ಹಿಂದೆಯೇ ನಿಗದಿಪಡಿಸಿದ್ದ ಲಾರಿಯೊಂದು ವಿರುದ್ಧ ಧಿಕ್ಕಿನಲ್ಲಿ ಬಂದು ಕಾರಿಗೆ ಢಿಕ್ಕಿ ಹೊಡೆದಿದೆ. ಅಷ್ಟರಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಖಾಲಿಯಾ ರಫೀಕ್ ಮೇಲೆ ಗುಂಡು ಹಾರಿಸಿದ್ದಾರೆ. ಅದನ್ನು ತಡೆಯಲು ಬಂದ ಝಾಹಿರ್ ಎಂಬಾತನಿಗೆ ತಲವಾರಿನಿಂದ ಕಡಿದಿದ್ದಾರೆ. ಗುಂಡೇಟು ತಗಲಿದರೂ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತಲಪಾಡಿ:ತಲಪಾಡಿ ಟೋಲ್‍ಗೇಟ್ ವಿರುದ್ಧ ಕಾಂಗ್ರೆಸ್ ಪ್ರೇರಿತ ಗಡಿನಾಡು ರಕ್ಷಣಾ ವೇದಿಕೆ ಪ್ರತಿಭಟನೆ ಕೈಬಿಡುತ್ತಿದ್ದಂತೆ ಇದೀಗ ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಕೇರಳದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾ¯ ಬ್ಲಾಕ್ ಡಿವೈಎಫ್ ಐ ನೇತೃತ್ವದಲ್ಲಿ ಭಾನುವಾರ ಟೋಲ್ ಗೇಟಿನ ಎರಡು ಭಾಗಗಳಲ್ಲಿ ಪ್ರತಿಭಟನೆ ನಡೆದು, ಕಂಪೆನಿ ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಮುಂದಿಟ್ಟಿದ್ದಾರೆ. ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ, ಖಾಸಗಿ ಬಸ್ಸು ಮಾಲಕರ ಸಂಘ , ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್, ತಲಪಾಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಮಹಿಳಾ ಸಂಘಟನೆಗಳು ಹಾಗೂ ಕೇರಳ ಭಾಗದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾಲ ಬ್ಲಾಕ್ ಡಿವೈ ಎಫ್ ಐ ಎರಡು ಕಡೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಕೆ.ಸಿ.ರೋಡಿನಿಂದ ನಾಗರಿಕ ಹಿತರಕ್ಷಣಾ ಸಮಿತಿ ರ್ಯಾಲಿ ಮೂಲಕ ಟೋಲ್ ತಲುಪಿದರೆ, ಕೇರಳದ ಎಲ್ ಡಿವೈ ಎಫ್ ನೇತೃತ್ವದ ಪ್ರತಿಭಟನಾಕಾರರು ಮೇಲಿನ ತಲಪಾಡಿಯಿಂದ ಟೋಲ್ ವರೆಗೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ದೇಶದ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಮೇಲಿದೆ ಎಂದು ಮಂಡ್ಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಅವರು ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಿಗೆ ನೀಡುವ `ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪಡೆದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಮತ್ತು ವೇಣೂರು ಸರಕಾರಿ ಪ್ರೌಢಶಾಲೆಗೆ 15 ಲಕ್ಷ ರೂ . ಮತ್ತು 10 ಲಕ್ಷ ರೂ. ಗಳ ಚೆಕ್ ವಿತರಿಸಿ ಆಶೀರ್ವಚನ ನೀಡಿದರು. 100 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಸಾಕ್ಷರತಾ ಶೇ. 5 ರಷ್ಟಿತ್ತು. ಖಾಸಗಿ ಶಾಲೆಗಳ ಹಾಗೂ ಸರಕಾರಿ ವ್ಯವಸ್ಥೆಯಿಂದ ಸದ್ಯ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಉಳ್ಳಾಲ ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಶೇ. 58 ಮತದಾನವಾದರೆ, ಕಲ್ಲಾಪು ವಾರ್ಡ್‍ನಲ್ಲಿ ಅತ್ಯಧಿಕ ಶೇ. 72.9 ಮತದಾನವಾಗಿದೆ. ಎರಡು ವಾರ್ಡುಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು ಶೇ. 65.2 ಮತದಾನವಾಗಿದ್ದು, ಎರಡೂ ವಾರ್ಡ್‍ಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದರು. ನಗರಸಭೆಯ 24ನೇ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಬಬ್ಬುಕಟ್ಟೆ ಶಾಲೆಯಲ್ಲಿ ಶೇ. 58 ಮತದಾನ ನಡೆದಿದ್ದು, ಒಟ್ಟು 1520 ಮತದಾರರಿದ್ದು 728 ಪುರುಷ ಮತದಾರರು ಮತ್ತು 792 ಮಹಿಳಾ ಮತದಾರರಿದ್ದಾರೆ. ಚುನಾವಣೆಯಲ್ಲಿ 884 ಮತದಾರರು ಮತದಾನ ನಡೆಸಿದ್ದು, 339 ಪುರುಷರು,ಮತ್ತು 485 ಮಹಿಳೆಯರು ಮತದಾನ ಮಾಡಿದ್ದಾರೆ. ಈ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಹಾಲಿ ಸದಸ್ಯ ಭಾಝಿಲ್ ಡಿ.ಸೋಜ ಅವರು ಕಣದಲ್ಲಿದ್ದರೆ, ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಸತೀಶ್‍ಚೆಂಬುಗುಡ್ಡೆ, ಸಿಪಿಐಎಂನ ಹರೀಶ್ ಶೆಟ್ಟಿ ಮತ್ತು ಪಕ್ಷೇತರರಾಗಿ ಖಲಂದರ್ ಸ್ಪರ್ಧೆಯಲ್ಲಿದ್ದಾರೆ. 26ನೇ ಬಬ್ಬುಕಟ್ಟೆ ವಾರ್ಡ್‍ಗೆ ಕಲ್ಲಾಪು ಪಟ್ಲ ಶಾಲೆಯಲ್ಲಿ ಮತದಾನ ನಡೆದಿದ್ದು ಶೇ. 72.9 ಮತದಾನವಾಗಿದೆ. ಈ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಲಾಭದಾಯಕ ಕೃಷಿಯನ್ನು ಮಾಡುವ ಬಗ್ಗೆ ರೈತರು ಒಲವು ತೋರಿಸಬೇಕಿದ್ದು. ಕೇವಲ ಒಂದೇ ಕೃಷಿಯಲ್ಲದೇ ಸಮಗ್ರ ಕೃಷಿಪದ್ಧತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ಪಾಧನೆಯನ್ನು ದ್ವಿಗುಣಗೊಳಿಸುವ ಬಗ್ಗೆ ಕೃಷಿಕರು ಚಿಂತಿಸಬೇಕಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ವಾಸುದೇವಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ,ಉಳ್ಳಾಲ ಕಾಪಿಕಾಡುವಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಬ್ರಹ್ಮವಾರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರ , ಕೊಚ್ಚಿನ್ ನ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯ ,ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ,ದ.ಕ ಮತ್ತು ಉಡುಪಿ ಜಿಲ್ಲೆಗಳ ತೊಟಗಾರಿಕೆ ಇಲಾಖೆ , ನವದೆಹಲಿಯ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಕೃಷಿ ಇಲಾಖೆ ಮತ್ತು ಆತ್ಮಯೋಜನೆ, ಮಂಗಳೂರು ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಮತ್ತು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿ ಟೋಲ್ ಗೇಟ್ ವಿರೋಧಿಸಿ ಕರ್ನಾಟಕ ಹಾಗೂ ಕೇರಳದ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ತುರ್ತು ಸಭೆಯಿಂದಾಗಿ ರದ್ದುಗೊಂಡಿದ್ದು, ಸಾಂಕೇತಿಕ ಪ್ರತಿಭಟನೆ ಮಾತ್ರ ನಡೆಯುವ ಮೂಲಕ ಜನಜೀವನ, ಬಸ್ಸು ಸಂಚಾರ ಸಹಜ ಸ್ಥಿತಿಯಲ್ಲಿತ್ತು. ಮೂಲಭೂತ ಸೌಕರ್ಯಗಳ ಆಗ್ರಹಿಸಿ, ಸಿಬ್ಬಂದಿ ದೌರ್ಜನ್ಯ ವಿರೋಧಿಸಿ ಹಾಗೂ ಸ್ಥಳೀಯ ವಾಹನಗಳನ್ನು ಸುಂಕ ರಹಿತವಾಗಿ ಟೋಲ್ ಪ್ಲಾಝಾದಲ್ಲಿ ಬಿಡುವಂತೆ ಬೇಡಿಕೆಗಳನ್ನು ಮುಂದಿಟ್ಟು ಗಡಿನಾಡು ರಕ್ಷಣಾ ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ಸ್ಥಳೀಯ ಸಂಘಟನೆಗಳು ಹಾಗೂ ಕಾಂಗ್ರೆಸ್ ಮುಖಂಡರು ತಲಪಾಡಿಯಿಂದ ತೊಕ್ಕೊಟ್ಟುವರೆಗೆ ರಾ.ಹೆ.66 ಬಂದ್ ಗೆ ಕರೆ ನೀಡಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆ ಶುಕ್ರವಾರ ತಡರಾತ್ರಿಯೇ ಹೋರಾಟಗಾರರನ್ನು ಮತ್ತು ನವಯುಗ ಕಂಪೆನಿಯ ಅಧಿಕಾರಿಗಳನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆಸಿ ಸಭೆ ನಡೆಸಿತ್ತು. ಅಲ್ಲದೆ ಬಂದ್ ನಡೆಸದಂತೆ ಪೊಲೀಸರು ಹೋರಾಟಗಾರರಿಗೆ ಸೂಚಿಸಿದ್ದರು. ಆದರೆ ಹೋರಾಟಗಾರರು ಬೇಡಿಕೆ ಈಡೇರದಿದ್ದಲ್ಲಿ ಬಂದ್ ಆಚರಿಸಿಯೇ ಸಿದ್ಧ ಎಂದು ಪಟ್ಟು…

Read More

ತೊಕ್ಕೊಟ್ಟು: ಮೂಲಸೌಕರ್ಯವನ್ನು ಒದಗಿಸದೆ ಟೋಲ್ ಸಂಗ್ರಹಿಸುವ ನವಯುಗ್ ಕಂಪೆನಿ ವಿರುದ್ಧ ಪಕ್ಷಾತೀತವಾಗಿ ಹಲವು ಸಂಘಟನೆಗಳು ಸೇರಿಕೊಂಡು ಫೆ.11 ರಂದು ತೊಕ್ಕೊಟ್ಟುವಿನಿಂದ ತಲಪಾಡಿವರೆಗೆ ರಸ್ತೆ ತಡೆ ಮತ್ತು ಬಸ್ ಬಂದ್ ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅವರು ತೊಕ್ಕೊಟ್ಟುವಿನಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ತಲಪಾಡಿಯಲಿ ಈಗಾಗಲೇ ಟೋಲ್ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರ ಪರವಾಗಿ ಜನರ ಸಮಸ್ಯೆಗೆ ಸ್ಪಂಧಿಸುವ ನಿಟ್ಟಿನಲ್ಲಿ ಬಂದ್ ಕರೆಯಲಾಗಿದೆ. ಜಿಲ್ಲಾಧಿಕಾರಿ, ನವಯುಗ್ , ಹೆದ್ದಾರಿ ಪ್ರಾಧಿಕಾರದ ಸಮ್ಮುಖದಲ್ಲಿ ಸಭೆಯ ನಡೆಸಲಾಗಿದೆ. ಆದರೆ ಯಾವುದೇ ರೀತಿಯ ಸ್ಪಂಧನೆ ದೊರೆತಿಲ್ಲ. ಇದು ಸಂಘಟನೆಗಳಿಗೆ ಸಮಾಧಾನವಾಗಿದೆ. ಪಂಪ್ ವೆಲ್ ಮತ್ತು ತೊಕ್ಕೊಟ್ಟುವಿನ ಫ್ಲೈಒವರ್ ಕಾಮಗಾರಿ, ಸರ್ವಿಸ್ ರಸ್ತೆಯೂ ಆಗಿಲ್ಲ. ಸಾರ್ವಜನಿಕರಿಗೆ ವಂಚಿಸುವ ನಿಟ್ಟಿನಲ್ಲಿ ಟೋಲ್ ಆರಂಭಿಸಲಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವುದರಿಂದ ಸರಕಾರ ಅನುಮತಿ ನೀಡಿರುವುದು ಖಂಡನೀಯ. ಸಂಸದರು ಇದಕ್ಕೆ ಕೂಡಲೇ ಸ್ಪಂಧಿಸಬೇಕಿದೆ. ನಾಳೆ ನಡೆಯುವ ಬಂದ್ ಗೆ ಟೂರಿಸ್ಟ್ ವಾಹನಗಳ, ರಿಕ್ಷಾ, ಖಾಸಗಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಕೇರಳ -ಕರ್ನಾಟಕ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಎರಡನೇ ದಿನಕ್ಕೆ ಪ್ರತಿಭಟನೆ ಮುಂದುವರಿದಿದ್ದು, ಕೇರಳ ಮತ್ತು ಕರ್ನಾಟಕದ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿತ್ತು. ಪೊಲೀಸರು ಲಘು ಲಾಠಿ ಚಾರ್ಜ್ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದರೂ ಜಗ್ಗದ ಉದ್ರಿಕ್ತರು ನವಯುಗ ಕಂಪೆನಿಯ ತಾತ್ಕಾಲಿಕ ಭರವಸೆಯಿಂದ ಪ್ರತಿಭಟನೆಯಿಂದ ಹಿಂದೆ ಸರಿದರು. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ, ಸ್ಥಳೀಯರಿಂದ ಟೋಲ್ ಪಡೆಯದಂತೆ , ರಾ.ಹೆ.66ರ ಕಾಮಗಾರಿ ಪೂರ್ಣಗೊಳಿಸಿಯೇ ಟೋಲ್ ಪಡೆಯುವಂತೆ ಆಗ್ರಹಿಸಿ ಬುಧವಾರ ಗಡಿನಾಡು ರಕ್ಷಣಾ ವೇದಿಕೆ, ಕಾಂಗ್ರೆಸ್‍ನ ಮಂಜೇಶ್ವರ ಮತ್ತು ತಲಪಾಡಿಯ ಮುಖಂಡರು , ರಿಕ್ಷಾ, ಬಸ್ಸು ಚಾಲಕ ಮಾಲಕರು ಪ್ರತಿಭಟನೆ ನಡೆಸಿದ್ದರು. 12 ಮಂದಿಯ ಬಂಧನದಿಂದ ಪ್ರತಿಭಟನೆ ಅಲ್ಲಿಗೆ ನಿಂತಿತ್ತು. ಗುರುವಾರ ಮತ್ತೆ ಗಡಿನಾಡು ರಕ್ಷಣಾ ವೇದಿಕೆ, ಮಂಜೇಶ್ವರದ ಯುಡಿಎಫ್, ಎಸ್ ಡಿಪಿಐನ ಮಂಜೇಶ್ವರ ಮತ್ತು ಉಳ್ಳಾಲ ಬ್ಲಾಕ್ ಸೇರಿದಂತೆ ಗ್ರಾಮಸ್ಥರು ಟೋಲ್ ನ ಎರಡು ಕಡೆಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಿಜೆಪಿ ಸದಸ್ಯರನ್ನೇ ಗುರುತಿಸಿ ಏಕಾಏಕಿ ಅವರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಆರೋಪಿಸಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಉಳ್ಳಾಲ ನಗರಸಭೆಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ. ಉಳ್ಳಾಲ ನಗರಸಭೆಯ ಎರಡು ವಾರ್ಡುಗಳಿಗೆ ಫೆ.11 ರಂದು ಮತದಾನ ಘೋಷಿಸಲಾಗಿದೆ. ಈ ನಡುವೆ 2011ರಲ್ಲಿ ಇದ್ದಂತಹ ಮತದಾರರ ಪಟ್ಟಿಯನ್ನು ಚುನಾವಣೆಗೆ ಎರಡು ದಿನಗಳಿರುವ ಇರುವ ಸಂದರ್ಭದಲ್ಲೇ ಏಕಾಏಕಿ ವಿವಿಧ ಕಾರಣಗಳನ್ನು ಒಡ್ಡಿ ಅಳಿಸಲಾಗಿದೆ. 24 ನೇ ವಾರ್ಡಿನಲ್ಲಿ 176 ಮತ್ತು 26 ನೇ ವಾರ್ಡಿನಲ್ಲಿ 167 ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಇವರಲ್ಲಿ ಬಹುತೇಕರು ಬಿಜೆಪಿ ಪರ ಮತದಾರರು ಅನ್ನುವ ಆರೋಪ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಇದನ್ನು ಪ್ರಶ್ನಿಸಿ ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿ ರಾಮಯ್ಯ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಿರಂತರ ಎರಡು ಗಂಟೆಯ ಕಾಲ ಅವರ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ,…

Read More