ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮಂಗಳಗಂಗೋತ್ರಿ, : ಸಾಹಿತ್ಯ ಮತ್ತು ಚರಿತ್ರೆಯ ಆಶಯ, ಧೋರಣೆ ವಿಭಿನ್ನ ರೂಪದಲ್ಲಿದ್ದರೂ, ಈ ಎರಡೂ ವಿಚಾರಗಳಿಗೂ ಅವಿನಾಭಾವ ಸಂಬಂಧವಿದೆ. ಇವೆರಡನ್ನೂ ಸೇರಿಸಿ ಅಧ್ಯಯನ ನಡೆಸಿದಾಗ ಹಲವಾರು ವಿಷಯಗಳನ್ನು ಅರಿತುಕೊಳ್ಳು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪೆÇ್ರ| | ಬಿ.ಸುರೇಂದ್ರರಾವ್ ಅಭಿಪ್ರಾಯ ಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ವಿ.ವಿ. ಇತಿಹಾಸ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ `ಚರಿತ್ರೆ ಮತ್ತು ಸಾಹಿತ್ಯ’ ಎರಡು ದಿನಗಳ ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯಿಕ ವಿಚಾರದಲ್ಲಿ ನಮ್ಮ ಕಲ್ಪನೆಗಳಿಗೆ ಅವಕಾಶವಿದ್ದರೆ, ಇತಿಹಾಸದ ವಿಚಾರದಲ್ಲಿ ನೃಜ್ಯತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇತಿಹಾಸಕಾರರನ್ನು ನಂಬುವವರು ಕಡಿಮೆಯಾಗುತ್ತಿದ್ದಾರೆ ಎಂದ ಅವರು ಇತಿಹಾಸವೆಂದರೆ ಕೇವಲ ಭೂತಕಾಲದ ವಿಚಾರಗಳು ಮಾತ್ರವೇ ಅಲ್ಲ, ವರ್ತಮಾನ ಮತ್ತು ಭೂತಕಾಲದ ನಡುವಿನ ಒಂದು ಪರಿ„ಯನ್ನು ಇತಿಹಾಸವು ನಿರ್ಮಿಸಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪೆÇ್ರ| ಕೆ.ಎಂ.ಲೋಕೇಶ್ ಅವರು ಚರಿತ್ರೆ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿದ್ದು ಇದರಿಂದ ಹಲವಾರು ಮಹತ್ವಪೂರ್ಣವಾದ ವಿಚಾರಗಳನ್ನು ನಾವು ಅರಿತುಕೊಳ್ಳಲು ಸಾಧ್ಯ. ಇಂತಹ ವಿಷಯಗಳು ಪಠ್ಯಕ್ರಮದಲ್ಲಿ ಬರಬೇಕಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಕೊಳ್ಳಲು ಸಾಧ್ಯ ಎಂದರು.
ಇತಿಹಾಸ ಪ್ರಾಧ್ಯಾಪಕ ಪೆÇ್ರ| ವಿಜಯ ಪೂಣಚ್ಚ ತಂಬಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಚಾರ ಸಂಕಿರಣದ ಸಂಯೋಜಕರಾದ ಪೆÇ್ರ| ಉದಯ ಬಾರ್ಕೂರು ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.



