Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕರಾವಳಿಯ ಜನ ತುಳು ಎನ್ನುವ ಪುಟ್ಟ ಭಾಷೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಬಳಸಿ ವಿಶ್ವದ ಭೂಪಟದಲ್ಲಿ ಇಲ್ಲಿನ ಸಂಸ್ಕøತಿಯನ್ನು ಸೇರಿಸಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದು ಮಂಗಳೂರು ವಿವಿಯ ಹಳೆ ವಿದ್ಯಾರ್ಥಿ, ಮೈಸೂರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣೇ ಗೌಡ ಆಭಿಪ್ರಾಯಪಟ್ಟರು. ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗುರುವಾರ ನಡೆದ ಕ್ರೀಡೆ ಮತ್ತು ಸಾಂಸ್ಕ ೃತಿಕ ಕ್ಷೇತ್ರದಲ್ಲಿ ಅಂತರ್ ವಿವಿ ಮಟ್ಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ `ದರ್ಪಣ’-2016′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಹೇಳಲು ಪದಗಳು ಸಾಲದು. ಪ್ರತಿಯೊಂದು ರಂಗದಲ್ಲಿ ಅದ್ಭುತವನ್ನೇ ಸಾಧಿಸಿರುವ ಉಪನ್ಯಾಸಕರಿಗಿಂತಲೂ ನಿರೂಪಕರೇ ಮಿಗಿಲಾಗಿ ಕಾಣುವ ಮಂಗಳೂರು, ಮಂಗಳಗಂಗೋತ್ರಿ ವಿವಿ ದೇಶಕ್ಕೆ ಆತ್ಯಮೂಲ್ಯ ಕಾಣಿಕೆ ನೀಡಿದೆ ಎಂದು ನುಡಿದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ ಐದು ಕೋಟಿ ವಿದ್ಯಾರ್ಥಿಗಳ ನಡುವೆ ರಾಷ್ಟ್ರೀಯ ದಾಖಲೆ ಬರೆಯುವ ಸ್ಪರ್ದಿಯ ಸಾಧನೆ ನಿಜಕ್ಕೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮರಳು ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಸಹಿತ ಮೂರು ಟಿಪ್ಪರ್ ಲಾರಿಗಳನ್ನು ಕೊಣಾಜೆ ಪೊಲೀಸರು ಗಡಿಪ್ರದೇಶ ನಂದಪಡ್ಪುವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ದೀಪೇಶ್ ಮತ್ತು ಲಕ್ಷ್ಮಣ ನಾಯ್ಕ್ ಬಂಧಿತರು. ಆರೋಪಿಗಳು ಅಕ್ರಮವಾಗಿ ಮೂರು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಕೊಣಾಜೆ ಪೊಲೀಸರು ನಂದರಪಡ್ಪುವಿನಲ್ಲಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿಗಳಲ್ಲಿದ್ದ ಹಲವು ಟನ್ ಗಳಷ್ಟು ಮರಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಕೊಣಾಜೆ ಠಾಣಾಧಿಕಾರಿ ಅಶೋಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಕಾರ್ಮಿಕರನ್ನು ಗುಲಾಮರನ್ನಾಗಿ ನೋಡುತ್ತಿರುವ ಕೇಂದ್ರ ಸರಕಾರ ಬಂಡವಾಳಶಾಹಿಗಳ ಪೂರಕವಾಗಿ ಸರಕಾರ ನಡೆಯುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಬೀಡಿ ಫೆಡರೇಶನ್ನಿನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಶುಕ್ರವಾರ ಕೋಟ್ಪಾ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಕೋಟೆಕಾರು ಪಂಚಾಯಿತಿ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಮಿಕರಿಗಾಗಿ ಇರುವಂತಹ 40 ಕಾನೂನುಗಳನ್ನು ರದ್ದುಗೊಳಿಸಿ ಕೇವಲ ನಾಲ್ಕು ಕಾನೂನನ್ನು ಮಾತ್ರ ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದೆ. ಬಂಡವಾಳಶಾಹಿಗಳ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕರ ಪಿಂಚಣಿಯನ್ನು ಕಡಿಮೆಗೊಳಿಸಿದೆ. 50 ವರ್ಷಕ್ಕೆ ಕೊಡಬೇಕಾದ ಪಿಂಚಣಿ ಯನ್ನು ರದ್ದುಗೊಳಿಸಿ 58 ಕ್ಕೆ ಹಣ ತೆಗೆಯುವಂತೆ ಮಾಡಿದೆ. ನಾಲ್ಕು ಅಥವಾ 10 ವರ್ಷಗಳ ಕಾಲ ಕೆಲಸ ಮಾಡಿ ಪಿಂಚಣಿ ಹಣ ತೆಗೆಯಲು ಹೋದಲ್ಲಿ, 58 ವರ್ಷಕ್ಕೆ ಮಾತ್ರ ಕೊಡುವುದಾಗಿ ಕಾನೂನು ಮಾತನಾಡುತ್ತಿದ್ದಾರೆ. ಇದರಿಂದ ಬೀಡಿ ಕಾರ್ಮಿಕರಲ್ಲದೆ ಎಲ್ಲಾ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೂಲಿ ಕೆಲಸ ಮಾಡಿ ಕುಟುಂಬ ಸಲಹುತ್ತಿರುವ ತಾಯಿಗೆ ಉಪನ್ಯಾಸಿ ಆಗುವ ಬಯಕೆ ಇದೆ. ಅದನ್ನು ಈಡೇರಿಸುವ ಭರವಸೆ ಇದೆ . ಇದು ಮಂಗಳೂರು ವಿ.ವಿ ಪದವಿ ಪ್ರಧಾನ ಸಮಾರಂಭದಲ್ಲಿ ಎರಡು ಚಿನ್ನ ಮತ್ತು 5 ನಗದು ಪ್ರಶಸ್ತಿ ಗಳಿಸಿದ ಮಲ್ಪೆ ನಿವಾಸಿ ಚೈತ್ರಾ ಅವರ ಮನದಾಳದ ಮಾತು. ಕಿರಿಯರಿರುವಾಗಲೇ ತಂದೆ ತೀರಿಕೊಂಡರೆ, ಸಹೋದರಿ ಮತ್ತು ತನ್ನ ಹಾಗೂ ಜೀವನದ ಜವಾಬ್ದಾರಿಯನ್ನು ತಾಯಿ ಕೂಲಿ ಕೆಲಸ ಮಾಡಿಕೊಂಡು ನೋಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಸಹೋದರಿಯೂ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಉದ್ಯೋಗಕ್ಕೆ ತೆರಳುವುದರಿಂದ ತಾಯಿಗೆ ಹೆಗಲು ಕೊಟ್ಟಿದ್ದಾರೆ. ತಾಯಿಗೆ ತಾನು ಉಪನ್ಯಾಸಕಿ ಆಗಬೇಕು ಅನ್ನುವ ಬಯಕೆ ಇದೆ. ಸಣ್ಣದರಲ್ಲಿ ತಕ್ಕ ಮಟ್ಟಿಗೆ ಕಲಿಯುತ್ತಿದ್ದೆ. ಸದ್ಯ ಉಪನ್ಯಾಸಕಿ ಆಗಬೇಕೆನ್ನುವ ಹಠದಿಂದ ಬೆಳಿಗ್ಗೆ ಬೇಗನೆ ಎದ್ದು ಕಲಿಯುವ ರೂಢಿಯನ್ನು ಮಾಡಿದ್ದರಿಂದ ರ್ಯಾಂಕ್ ಗಳಿಸಲು ಸಾಧ್ಯವಾಯಿತು. ಆದಿದ್ರಾವಿಡ ಸಮಾಜಕ್ಕೆ ಸೇರಿದ ಚೈತ್ರಾ ದಿ| ತಮ್ಮು ಹಾಗೂ ಮುತ್ತು ದಂಪತಿ ಪುತ್ರಿ. ಉಡುಪಿ ಅಜ್ಜರಕಾಡು ಜಿ.ಶಂಕರ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕೇಂದ್ರ ಸರಕಾರದ ಸುತ್ತೋಲೆಯಂತೆ ಸರಕಾರಿ ಇಲಾಖೆಗಳ ಜಂಟಿ ಆಶ್ರಯದೊಂದಿಗೆ ಉಳ್ಳಾಲದಾದ್ಯಂತ ಸರಕಾರಿ ಕಚೇರಿ, ಆಸ್ಪತ್ರೆಗಳನ್ನು ಸ್ವಚ್ಛಗೊಳಿಸಿ, ಅದರ ಮೌಲ್ಯಮಾಪನ ನಡೆಸಲಾಗಿದೆ ಎಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ ಹೇಳಿದ್ದಾರೆ. ಅವರು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಉಳ್ಳಾಲ ನಗರಸಭೆ ಮತ್ತು ಉಳ್ಳಾಲ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲದಾದ್ಯಂತ ಸರಕಾರಿ ಕಟ್ಟಡಗಳ ಶೌಚಾಲಯ ಸಹಿತ ಕಟ್ಟಡದ ಸುತ್ತಲಿನ ವಾತಾವರಣವನ್ನು ಶುಚಿಗೊಳಿಸಲಾಗಿದೆ. ಸರಕಾರಿ ಕಚೇರಿ ಅಧಿಕಾರಿಗಳ ಸಮೇತ ಸಿಬ್ಬಂದಿ ಶುಚಿಗೊಳಿಸಿ ಸ್ವಯಂ ಮೌಲ್ಯಮಾಪನ ನಡೆಸಲಾಗಿದೆ ಎಂದರು. ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಎಸ್.ಐ ಭಾರತಿ, ನಗರಸಭೆ ಸದಸ್ಯೆ ಮುಸ್ತಾಫ, ಹಿರಿಯ ಆರೋಗ್ಯ ನಿರೀಕ್ಷಕ ಜಯಶಂಕರ್, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್, ಆರೋಗ್ಯ ನಿರೀಕ್ಷಕ ಸಾಜಿತ್, ಪೌರ ಕಾರ್ಮಿಕ ಅಂಗಾರ ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಬೇಸಿಗೆಯ ಸುಡು ಬಿಸಿಲು, ಎತ್ತರ ಪ್ರದೇಶದ ಜನರು ನೀರಿಲ್ಲದೆ ಬಹುದೂರ ನಡೆದುಕೊಂಡು ಸಾಗಿ ಬೋರ್‍ವೆಲ್ ಬಡಿದು ನೀರು ತರುವ ಸಾಹಸ, 5 ಕ್ಕೂ ಅಧಿಕ ಬೋರ್ ವೆಲ್ ಕೊರೆದರೂ ನೀರು ಸಿಗದೆ ನಿರಾಸೆ, ಆದರೆ ಸದ್ಯ ಹರೇಕಳ ಗ್ರಾಮದ ಕುತ್ತಿಮೊಗೆರು ಸಮೀಪ ಸಚಿವರು , ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯತ್ ಸಹಯೋಗದಿಂದ ಖಾಸಗಿ ವ್ಯಕ್ತಿಯೊಬ್ಬರ ದಾನದ ಜಾಗದಲ್ಲಿ ನಿರ್ಮಾಣವಾದ ಬೃಹತ್ ಬಾವಿಯಿಂದ ಗ್ರಾಮದ ಜನರ ಬಾಯಾರಿಕೆ ಈಡೇರಿದೆ. ಭಾನುವಾರ ಹರೇಕಳ ಗ್ರಾಮದ ಕುತ್ತಿಮೊಗರು ಸಮೀಪ ರೂ.15 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಬಾವಿಯನ್ನು ಉದ್ಘಾಟಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು ಬಹುಕಾಲದ ಕುಡಿಯುವ ನೀರಿನ ಸಮಸ್ಯೆ ಹರೇಕಳದ ಜನರನ್ನು ತೊಂದರೆಗೀಡು ಮಾಡಿತ್ತು. ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಅಲ್ಲಲ್ಲಿ ಬೋರ್‍ವೆಲ್ ನಿರ್ಮಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಬಾವಿ ನಿರ್ಮಾಣದಿಂದ ಗ್ರಾಮದ ಜನರ ಚಿಂತೆ ದೂರವಾಗಿದ್ದು, ಕೃಷಿ ಚಟುವಟಿಕೆಗಳಿಗೂ ಪೂರಕವಾಗಿದೆ. ಕುತ್ತಿಮೊಗರು, ಅಂಬ್ಲಮೊಗರು, ತಲಪಾಡಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇನ್ನೊಬ್ಬರ ಕಷ್ಟದಲ್ಲಿ ನೆರವಾಗುವ ಎಸ್ ವೈಎಸ್ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುನ್ನೀ ಯುವಜನ ಸಂಘ ಕೆ.ಸಿ.ರೋಡು ಘಟಕದ ಆಶ್ರಯದಲ್ಲಿ ಭಾನುವಾರ ಕೋಟೆಕಾರು ಖಾಸಗಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೂರದರ್ಶಿತ್ವದ ಕಾರ್ಯಕ್ರಮ ಇದಾಗಿದ್ದು, ಇಲ್ಲಿ ಮದುವೆಯಾದವರು ಮುಂದೆ ಕುಟುಂಬ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಿ ಮತ್ತೆ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗುವ ರೀತಿಯಲ್ಲಿ ಬಾಳುವಂತಾಗಬೇಕು ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮಾತನಾಡಿ ಸಾಂತ್ವನ ಯೋಜನೆಯಡಿ ಬಡ ಹೆಣ್ಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟುವ ಸಾಮಾಜಿಕ ಕೆಲಸ ಎಸ್‍ವೈಎಸ್ ಮಾಡುತ್ತಿದೆ .ಯುವಕರಲ್ಲಿ ಧಾರ್ಮಿಕ ಜ್ಞಾನ ಮೂಡಿಸಿ ಬಲಿಷ್ಟಗೊಳಿಸುವ ಉದ್ದೇಶ ಸಂಘಟನೆ ಹೊಂದಿದ್ದು ಇತರ ಸಾಮಾಜಿಕ ಸೇವೆಗಳನ್ನು ಸಾಂತ್ವನ ಯೋಜನೆಯಡಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮಾನಸಿಕ ರೋಗಿಗಳಿಗೆ ಸ್ಪಂಧಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸರಕಾರದಿಂದ ಮಾನಸಿ ಆಧಾರ ಯೋಜನೆ ಮೂಲಕ ಸಹಕಾರ ನೀಡುವ ಕಾರ್ಯ ಆಗುತ್ತಿದ್ದು, ಇದನ್ನು ಉಪಯೋಗಿಸುವ ಮೂಲಕ ಮಾನಸಿಕವಾಗಿ ಬಳಲುತ್ತಿರುವವರ ಬಾಳಿಗೆ ಬೆಳಕಾಗುವ ಕೆಲಸವನ್ನು ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೊಕ್ಕೊಟ್ಟುವಿನಲ್ಲಿ ಭಾನುವಾರ ನಡೆದ ಹೆಲ್ಪ್ ಇಂಡಿಯಾ ಫೌಂಡೇಶನ್ ನ ಕಚೇರಿ ಉದ್ಘಾಟನೆ ಹಾಗೂ ಬಡ ಅಂಗವಿಕಲರಿಗೆ ವ್ಹೀಲ್ ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾರ್ಥವಿಲ್ಲದೆ , ಜಾತಿ, ಮತ ಬೇಧಭಾವವಿಲ್ಲದೆ ಎಲ್ಲರಿಗೂ ಮನುಷ್ಯತ್ವದ ರೂಪ ಕೊಟ್ಟು ಬಾಳು ಕೊಡುತ್ತಿರುವ ಫೌಂಡೇಶನ್ನಿನ ರಾಝಿಕ್ ಉಳ್ಳಾಲ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಮಾನವೀಯತೆಯ ಬಾಳು ಇರದ ಜೀವನ ವ್ಯರ್ಥವಾಗಿರುತ್ತದೆ. ಮಾನಸಿಕ ರೋಗಿಗಳ ಆರೈಕೆಯ ಮೈಲಕ ಫೌಂಡೇಶನ್ ಯುವಕರಿಗೆ ಮಾದರಿಯಾಗಿದೆ. ಮಾನಸಿಕ ರೋಗಿಗಳಿಗೆಬೇಕಾದ ಪುನರ್ವಸತಿ ಕೇಂದ್ರಗಳ ಸ್ಥಾಪನಗೆ ಸರಕಾರದಿಂದ ಹೆಚ್ಚು ಒತ್ತು ನೀಡಲಾಗುವುದು. ದೊಡ್ಡ ಯೋಜನೆಯಾಗಿರುವುದರಿಂದ ಸರಕಾರದಿಂದ ಅದನ್ನು ನಿಭಾಯಿಸಲು ಸಾಧ್ಯವಿಲ್ಲದಿರುವುದರಿಂದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಕೇಂದ್ರ ಸರಕಾರ ಚಿನ್ನಾಭರಣ ಉದ್ಯಮದ ಮೇಲೆ ವಿಧಿಸಿರುವ ಅಬಕಾರಿ ಸುಂಕದಿಂದ ಸ್ವರ್ಣವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗಿದ್ದು ಈ ಬಗ್ಗೆ ಈಗಾಗಲೇ ದೇಶದಾದ್ಯಂತ 26 ದಿನಗಳ ಮುಷ್ಕರ ನಡೆದಿದ್ದು , ಇನ್ನೂ ಎ.10ರವರೆಗೆ ಮುಷ್ಕರವನ್ನು ಮುಂದುವರೆಸಲಿದ್ದೇವೆ ಎಂದು ಉಡುಪಿ ಸ್ವರ್ಣ ವ್ಯಾಪಾರಿ ಸಂಘದ ಅಧ್ಯಕ್ಷ ಜಯ ಆಚಾರ್ಯ ತಿಳಿಸಿದ್ದಾರೆ. ಅವರು ಭಾನುವಾರ ತೊಕ್ಕೊಟ್ಟು ರತ್ನಂ ಹೊಟೇಲಿನಲ್ಲಿ ಜರಗಿದ ತೊಕ್ಕೊಟ್ಟು ವಲಯದ ಸ್ವರ್ಣ ವ್ಯಾಪಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜ್ಯುವೆಲ್ಲರಿ ಮಾಲೀಕರಿಗೆ ಭೂಗತ ದೊರೆಗಳಿಂದ ಬರುತ್ತಿದ್ದ ಹಫ್ತಾ ಬೆದರಿಕೆಯನ್ನು ಪೊಲೀಸ್ ಇಲಾಖೆ ಮತ್ತು ಸಂಘಟನೆ ಸಹಯೋಗದಿಂದ ನಿಲ್ಲಿಸಲು ಸಾಧ್ಯವಾಗಿದೆ. ಅವಳಿ ಜಿಲ್ಲೆಗಳ 27 ಸ್ವರ್ಣೋದ್ಯಮಿಗಳ ಬಳಿ ಲೈಸೆನ್ಸ್‍ವುಳ್ಳ ರೈಫಲ್ ಗಳಿವೆ. ಇದು ಸಂಘಟನೆ ಮುಖೇನ ಪೊಲೀಸ್ ಅಧಿಕಾರಿಗಳ ಮನವರಿಕೆಯಿಂದ ಸಾಧ್ಯವಾಗಿದೆ. 30 ಜಿಲ್ಲೆಗಳಲ್ಲಿ ಸಂಘಟನೆಯಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಅಬಕಾರಿ ಸುಂಕದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ. 21 ದಿನಗಳ ಕಾಲ ದೇಶಾದ್ಯಂತ ಬಂದ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ತೊಕ್ಕೊಟ್ಟು ಸಮೀಪದ ಕುತ್ತಾರುಗುತ್ತುವಿನ ಮಾಜಿ ಶಾಸಕ ಕೆ. ಜಯರಾಮಶೆಟ್ಟಿ ಅವರ ಮನೆ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ಕುತ್ತಾರುಗುತ್ತುವಿನ ಗದ್ದೆಯೊಂದರಲ್ಲಿ ಸ್ಥಳೀಯ ಆನಂದ ಬೆಳ್ಚಾಡ ಎಂಬವರು ಕೆಲಸ ಮಾಡುತ್ತಿದ್ದ ಸಂದರ್ಭ ಮಧ್ಯಮ ಗಾತ್ರದ ಚಿರತೆಯೊಂದು ಗುಡ್ಡೆ ಪ್ರದೇಶದಿಂದ ಶರವೇಗದಲ್ಲಿ ಓಡಿ ಹತ್ತಿರದಲ್ಲೇ ಇರುವ ದೈವಸ್ಥಾನದ ಹಾದಿಯಲ್ಲಿ ಮರೆಯಾಗಿದೆ. ಈ ಬಗ್ಗೆ ಅವರು ಸ್ಥಳೀಯರಲ್ಲಿ ತಿಳಿಸಿದಾಗ ಅದಾಗಲೇ ಕೆಲವರು ಚಿರತೆಯನ್ನು ಕಂಡ ಬಗ್ಗೆ ತಮ್ಮ ಅನುಭವ ತಿಳಿಸಿದ್ದಾರೆ. ಮಾಜಿ ಶಾಸಕ ಜಯರಾಮಶೆಟ್ಟಿ ಅವರ ಮಗನಿಗೂ ಚಿರತೆ ಕಾಣಸಿಕ್ಕಿತ್ತೆನ್ನಲಾಗಿದ್ದು ಅವರು ಈ ವಿಷಯವನ್ನು ಲಘುವಾಗಿ ಪರಿಗಣಿಸಿದ್ದರು. ಪರಿಸರದ ಅನೇಕ ಮಂದಿ ಇದೀಗ ಚಿರತೆಯನ್ನು ಕಂಡಿದ್ದು ಆತಂಕದಲ್ಲಿ ದಿನಕಳೆಯುವಂತಾಗಿದೆ. -ಕುತ್ತಾರುಗುತ್ತು ಪರಿಸರದಲ್ಲಿ ಹಚ್ಚಹಸಿರು, ದಟ್ಟ ಪೆÇದೆಗಳು ವಿಶಾಲವಾದ ಕೃಷಿಭೂಮಿ ಹೊಂದಿದ್ದು ಜಾನುವಾರುಗಳನ್ನು ಸಾಕಲಾಗುತ್ತಿದ್ದು, ಚಿರತೆಯು ಅವುಗಳ ಮೇಲೆಯೂ ದಾಳಿಯೂ ನಡೆಸುವ ಸಂಭವ ಹೆಚ್ಚಿದೆ. ಕೃಷ್ಣ ಶೆಟ್ಟಿ ಕುತ್ತಾರುಗುತ್ತು ನಿವಾಸಿ -ಚಿರತೆ ಪ್ರತ್ಯಕ್ಷವಾದ ಬಗ್ಗೆ ಜಿಲ್ಲಾಧಿಕಾರಿಯವರಿಗೆ…

Read More