ಕಿನ್ಯಾ:ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮಗೊಂಡಿರುವ ಘಟನೆ ಕಿನ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂತ್ಯಗುತ್ತು ಎಂಬಲ್ಲಿ ನಡೆದಿದ್ದು, ಘಟನೆಯಿಂದ ರೂ.20 ಲಕ್ಷ ನಷ್ಟ ಸಂಭವಿಸಿದೆ. ಸಾಂತ್ಯಗುತ್ತು ನಿವಾಸಿ ಕೃಷಿಕ ಕುಟುಂಬದ ಗಣೇಶ್ ಶೆಟ್ಟಿ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ತಡರಾತ್ರಿ ಗಣೇಶ್, ಅವರ ಪತ್ನಿ ಹಾಗೂ ಮಗು, ಮನೆಗೆ ನೆಂಟರಾಗಿ ಬಂದಿದ್ದ ಅವರ ಸಹೋದರಿ ಹಾಗೂ ಅವರ ಪತಿ ಸೇರಿದಂತೆ ತಾಯಿ ಕಿನ್ಯಾ ಬೆಳರಿಂಗೆಯಲ್ಲಿ ನಡೆಯುತ್ತಿದ್ದ ಕುಟುಂಬದ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ತಡರಾತ್ರಿ ವೇಳೆ ಸ್ಫೋಟದ ಸದ್ದು ಸ್ಥಳೀಯ ಮನೆಯವರಿಗೆ ಕೇಳಿಬಂದಿತ್ತು. ಅವರು ಗಣೇಶ್ ಅವರಿಗೆ ಕರೆ ಮಾಡಿ ಸದ್ದು ಮತ್ತು ಅಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಚಾರವನ್ನು ತಿಳಿಸಿದ್ದರು. ಕೂಡಲೇ ಗಣೇಶ್ ರಿಕ್ಷಾ ಮೂಲಕ ಮನೆಗೆ ಆಗಮಿಸಿದಾಗ ಮನೆ ಸಂಪೂರ್ಣ ಬೆಂಕಿಯಿಂದ ಆವರಿಸಿತ್ತು. ಸ್ಥಳೀಯರೆಲ್ಲರೂ ಸೇರಿ ನೀರು ಹಾಯಿಸುವಷ್ಟರಲ್ಲಿ ಮನೆ ಸಂಪೂರ್ಣ ಭಸ್ಮವಾಗಿತ್ತು. ಈ ವೇಳೆ ಮನೆಯೊಳಗೆ ಇರಿಸಲಾಗಿದ್ದ ಚಿನ್ನಾಭರಣ, ನಗದು, ದಾಸ್ತಾನಿರಿಸಿದ್ದ ಅಡಿಕೆ,…
Author: UllalaVani
ಉಳ್ಳಾಲ: ಉಳ್ಳಾಲದಲ್ಲಿ ಸೋಮವಾರ ಬೆಳಗ್ಗೆ ಚೂರಿ ಇರಿತದ ಹಿನ್ನಲೆಯಲ್ಲಿ ಉಳ್ಳಾಲ ಅಬ್ಬಕ್ಕ ಸರ್ಕಲ್‍ನಿಂದ ಮೊಗವೀರಪಟ್ಣ ಮಾರ್ಗವಾಗಿ ಪೆÇಲೀಸ್ ಪಥಸಂಚಲನ ನಡೆಯಿತು. ಕೆ.ಎಸ್.ಆರ್.ಪಿ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೆÇಲೀಸರು ಪಥಸಂಚಲನದಲ್ಲಿ ಭಾಗವಹಿಸಿದರು.
ಜಾನಪದ ವಿದ್ವಾಂಸ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಬೆಂಗಳೂರಿನ ಆರ್ಯಭಟ ಸಾಂಸ್ಕøತಿಕ ಸಂಘ(ರಿ) ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಆರ್ಯಭಟ ಸಂಸ್ಥೆಯು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಭಾರತದ ಪ್ರಥಮ ಕೃತಕ ಉಪಗ್ರಹ ಆರ್ಯಭಟ ಇದರ ಯಶಸ್ವೀ ಉಡಾವಣೆಯ ನೆನಪಿಗಾಗಿ ಸ್ಥಾಪಿತವಾದ 1975ರಲ್ಲಿ ಬೆಂಗಳೂರಿನ ಆರ್ಯಭಟ ಸಾಂಸ್ಕøತಿಕ ಸಂಘವು, ಆರ್ಯಭಟ ಹೆಸರಿನಲ್ಲಿ ಶಿಕ್ಷಣ,ವೈದ್ಯಕೀಯ, ಸಮಾಜಸೇವೆ, ಸಂಗೀತ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆಗೈದ ಸಾಧಕರಿಗೆ ಪ್ರತೀ ವರ್ಷ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ದೇಶದ ಸಾಧಕರು ಮಾತ್ರವಲ್ಲದೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷ ಸುಮಾರು 60 ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹೀಗೆ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದವರಲ್ಲಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರನ್ನು ಈ ಪಶಸ್ತಿಗೆ ಆಯ್ಕೆ…
ಕೊಣಾಜೆ: ರಿಕ್ಷಾ ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ. ತೌಡುಗೋಳಿ ನಿವಾಸಿ ರಾಜೇಶ್ (39) ಮೃತರು. ಪತ್ನಿ ಹಾಗೂ ಮಗುವಿನ ಜತೆಗೆ ರಿಕ್ಷಾ ಚಲಾಯಿಸಿಕೊಂಡು ತೆರಳುತ್ತಿದ್ದ ರಾಜೇಶ್ ಅವರ ನಿಯಂತ್ರಣ ತಪ್ಪಿ ತೌಡುಗೋಳಿ ಕ್ರಾಸ್ ಸಮೀಪ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮ ಚಾಲಕ ರಾಜೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಪತ್ನಿ ಹಾಗೂ ಮಗುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಲಾರು: ಜೀವನದಲ್ಲಿ ಬದಲಾವಣೆ ಅಗತ್ಯ, ಅದನ್ನು ಅನುಸರಿಸುವ ಮೂಲಕ ಮಾನವ ಜೀವನದಲ್ಲಿ ಯಶಸ್ವಿಗೊಳಿಸಲು ಸಾಧ್ಯ ಎಂದು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೊಟ್ಟು ಇದರ ಧರ್ಮದರ್ಶಿ ರವಿ.ಎನ್ ಅಭಿಪ್ರಾಯಪಟ್ಟರು. ಅವರು ಭಾನುವಾರ ನಡೆದ ಶ್ರೀ ನಾಗಬ್ರಹ್ಮ ಕ್ಷೇತ್ರ ಪಿಲಾರು ಲಕ್ಷ್ಮೀಗುಡ್ಡೆ ಇದರ 7ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮಾತಿನಿಂದ ಪ್ರೀತಿ, ಪ್ರೀತಿಯಿಂದ ಸಂಬಂಧಗಳನ್ನು ಉಳಿಸುವ ಕಾರ್ಯ ಆಗಬೇಕು. ನಾಲಗೆಯಿಂದ ಬರುವ ಮಾತುಗಳು ಮಾಣಿಕ್ಯದಿಂದ ಇದ್ದಲ್ಲಿ ಸಂಬಂಧಗಳು ಗಟ್ಟಿಯಾಗಲು ಸಾಧ್ಯ ಎಂದರು. ಸೈಂಟ್ ಸೆಬೆಸ್ಟಿಯನ್ ಕಾಲೇಜಿನ ಪ್ರಾಂಶುಪಾಲ ಎಡ್ವಿನ್ ಮಸ್ಕರೇನಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಗೌರವಾಧ್ಯಕ್ಷ ಕೆ.ನಾರಾಯಣ ಭಟ್, ಅಧ್ಯಕ್ಷ ಸಂಜೀವ ಗಟ್ಟಿ ಮೇಸ್ತ್ರಿ, ಅಧ್ಯಕ್ಷೆ ಪುಷ್ಪ, ಕಾರ್ಯದರ್ಶಿ ಸುರೇಖಾಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸಂಜೀವ ಪಿಲಾರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಚಂದ್ರಹಾಸ ಪಿಲಾರು ಸ್ವಾಗತಿಸಿದರು. ಕೋಶಾಧಿಕಾರಿ ನಾಗೇಶ್ ದಾಸ್ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಾಗಬ್ರಹ್ಮ ಸೇವಾ ಸಮಿತಿ ಇದರ ನೇತೃತ್ವದಲ್ಲಿ ಸ್ಥಳೀಯ ಪ್ರತಿಭೆಗಳಿಂದ…
ಉಳ್ಳಾಲ: ಆಧುನಿಕ ಭಾರತ ನಿರ್ಮಾಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಅವರು ಕೇವಲ ದಲಿತ ಸಮುದಾಯದ ನಾಯಕರು ಮಾತ್ರ ಅಲ್ಲ ಅವರು ಇಡೀ ದೇಶದ ಜನರ ನಾಯಕರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಭಾರತ ಸರಕಾರದ ಯೋಜನಾ ಆಯೋಗದ ಮಾಜಿ ಸದಸ್ಯ ಪ್ರೊ.ಬಿ.ಎಲ್.ಮುಂಗೇಕರ್ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಎಸ್‍ಸಿ, ಎಸ್‍ಟಿ ಸೆಲ್ ಇದರ ಆಶ್ರಯದಲ್ಲಿ ಸೋಮವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ `ಆಧುನಿಕ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಅಸ್ಪ್ರಶ್ಯತೆಯ ನಿವಾರಣೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವಾರು ರೀತಿಯಲ್ಲಿ ಹೋರಾಟ ನಡೆಸಿ ಸಮಾನತೆ ಮತ್ತು ಅಭಿವೃದ್ದಿಗಾಗಿ ಪಣತೊಟ್ಟಿದ್ದರು. ಆದರೂ ದೆಹಲಿ, ಮುಂಬಾಯಿ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ಅಸ್ಪ್ರಶ್ಯತೆಯ ಸಮಸ್ಯೆ ಕಡಿಮೆ ಇದ್ದರೂ ಕೆಲವು ಗ್ರಾಮೀಣ ಭಾಗಗಳಲ್ಲಿ ಇನ್ನೂ ನೆಲೆನಿಂತಿರುವುದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಧೀನದ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾವಿದ್ಯಾಲಯದ ಓರ್ಥೊಡೋಂಟಿಕ್ಸ್ ಹಾಗೂ ಪೆÇ್ರೀಸ್ತೋಡೋಂಟಿಕ್ಸ್ ವಿಭಾಗ ಹಾಗೂ ಮಂಗಳೂರಿನ ಓರ್ಥೊಡೋಂಟಿಕ್ಸ್ ಅಧ್ಯಯನ ಸಮೂಹದ ಆಶ್ರಯದಲ್ಲಿ ಎಬಿಸಿ ಆಫ್ ಟಿಎಂಡಿ ಅನ್‍ರವೆಲ್ ದಿ ಮಿಸ್ಟರಿ ಕಾರ್ಯಗಾರ ಮುಂಬಯಿಯ ಖ್ಯಾತ ದಂತ ತಜ್ಞ ಡಾ| ಮೊಯೇಝ್ ಐ ಖಾಕಿಯನಿ ಉದ್ಘಾಟಿಸಿದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾವಿದ್ಯಾಲಯದ ಸ್ಥಾಪಕ ಡೀನ್ ಡಾ| ಎನ್. ಶ್ರೀಧರ್ ಶೆಟ್ಟಿ , ಸಂಸ್ಥೆಯ ಉಪ ಪ್ರಾಂಶುಪಾಲೆ ಡಾ| ಮಿತ್ರಾ ಎನ್ ಹೆಗ್ಡೆ ಹಾಗೂ ಮಂಗಳೂರಿನ ಓರ್ಥೊಡೋಂಟಿಕ್ಸ್ ಅಧ್ಯಯನ ಸಮೂಹದ ಸಂಘಟಕ ಪೆÇ್ರ| ಡಾ| ವಿವೇಕ್ ಅಮೀನ್ ಉಪಸ್ಥಿತರಿದ್ದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಡೀನ್ ಪೆÇ್ರ| ಡಾ| ಯು.ಎಸ್. ಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪೆÇ್ರೀಸ್ತೋಡೋಂಟಿಕ್ಸ್ ವಿಭಾಗ ಮುಖ್ಯಸ್ಥ ಪೆÇ್ರ| ಡಾ| ಚೇತನ್ ಹೆಗ್ಡೆ ಸ್ವಾಗತಿಸಿದರು. ಮಂಗಳೂರಿನ ಓರ್ಥೊಡೋಂಟಿಕ್ಸ್ ಅಧ್ಯಯನ ಸಮೂಹದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಕುಂಪಲ ಕೇಸರಿ ಮಿತೃ ವೃಂದ ಇದರ ಅಧ್ಯಕ್ಷರಾಗಿ ನವೀನ್ ಕುಜುಮಗದ್ದೆ ಆಯ್ಕೆಯಾದರು. 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಗಣೇಶ್ ಕೆ.ಎನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷರುಗಳಾಗಿ ಹರಿಶ್ಚಂದ್ರ ಸೈಟ್, ಹರಿಶ್ಚಂದ್ರ ಕುಜುಮಗದ್ದೆ, ಕಾರ್ಯದರ್ಶಿಯಾಗಿ ಸಂದೀಪ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಸೈಟ್, ಶಶಿಧರ್, ಕೋಶಾಧಿಕಾರಿಯಾಗಿ ವಿನ್ಯಾಸ್ ಪಿ ಬೋಳಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್, ಗೌತಮ್, ಕ್ರೀಡಾ ನಾಯಕನಾಗಿ ಜ್ಞಾನೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತಿನ್ ಜಿ, ನಿತಿನ್.ಎನ್, ಸಂಘಟನಾ ಕಾರ್ಯದರ್ಶಿಯಾಗಿ ಸುಮೇಶ್ ಕುಂಪಲ ಇವರನ್ನು ಆಯ್ಕೆಮಾಡಲಾಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕಳೆದ 19 ವರ್ಷಗಳಿಂದ ಆಚರಿಸುತ್ತಾ ಬರುತ್ತಿರುವ `ಅಬ್ಬಕ್ಕ ಉತ್ಸವ -2016′ ಈ ಸಲವೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಮೇ 7 ಮತ್ತು 8ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಉತ್ಸವದ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭಾರತ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕನ ಶೌರ್ಯ, ದೇಶಾಭಿಮಾನ, ಸಹಬಾಳ್ವೆ, ಕೋಮು ಸೌರ್ದತೆಯನ್ನು ಎತ್ತಿ ತೋರಿಸುವ ಈ ಉತ್ಸವದ ಆಚರಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಮೇ 1ರಂದು ಮಹಿಳೆಯರಿಗಾಗಿ ರಾಜ್ಯಮಟ್ಟದ ಮಹಿಳೆಯರ ಭಾರ ಎತ್ತುವ ಸ್ಪರ್ಧೆ “ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ-2016” ಮತ್ತು ಮಹಿಳಾ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯಗಳ ಸ್ಪರ್ಧಾಗುಚ್ಚವಾಗಿ “ರಾಣಿ ಅಬ್ಬಕ್ಕ ಕಲಾವೈಭವ-2016ನ್ನು ಮಂಗಳೂರು ತಾಲೂಕಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ನರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ. ಮಾಜಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಕ್ರೀಡೆಯಿಂದ ಆತ್ಮವಿಶ್ವಾಸದ ಜೊತೆ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತದೆ. ದೇಶದ ಶಕ್ತಿಯಾಗಿರುವ ಯುವಜನತೆ ಜಾತಿ, ಧರ್ಮ, ಬೇಧ ಮರೆತು ಸಾಮರಸ್ಯದ ಜೊತೆ ಸಮಾಜ ಸೇವೆಯೊಂದಿಗೆ ಮುನ್ನಡೆದರೆ ಸೌಹಾರ್ದಯುತ ಸಮಾಜ ಕಟ್ಟಲು ಸಾಧ್ಯ. ಎಂದು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹಾಗೂ ಡಿಎಫ್‍ಸಿ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಮಾಜಿ ಶಾಸಕ ಯು.ಟಿ.ಫರೀದ್ ಅವರ ಸ್ಮರಣಾರ್ಥ ದೇರಳಕಟ್ಟೆಯಲ್ಲಿ ಆಯೋಜಿಸಿದ್ದ ಮೈಸೂರು ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಸಹಾಯ ಧನ ಹಾಗೂ ಸ್ವ ಉದ್ಯೋಗಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಟೈಲರಿಂಗ್ ಯಂತ್ರ ಮತ್ತು ಅಂಗವೈಕಲ್ಯ ಹೊಂದಿದ ವ್ಯಕ್ತಿಗೆ ಗಾಲಿಕುರ್ಚಿ ವಿತರಿಸಿ ಮಾತನಾಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ಅಝೀಝ್ ಮೈಸೂರು…

