ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೋಟೆಕಾರು : ಎಲ್ಲಾ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವನ್ನು ಶ್ರೀ ಶಂಕರ ಜಯಂತಿ ಉತ್ಸವದ ಮೂಲಕ ಕೈಗೆತ್ತಿಕೊಂಡಿರುವ ಕಾರ್ಯ ಮಹತ್ಕಾರ್ಯವಾಗಿದ್ದು, ಇದು ಶೃಂಗೇರಿ ಮಠದ ಸಂಪರ್ಕವನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸುವ ಮೂಲಕ ಯಶಸ್ವಿಯಾಗಲಿದೆ ಎಂದು ಉಡುಪಿ ಜಿಲ್ಲಾ ಮರಾಠ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯಕ್ ಅಭಿಪ್ರಾಯಪಟ್ಟರು. ಅವರು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನಂ ಶ್ರೀ ಶೃಂಗೇರಿ ಶಂಕರ ಮಠ ಕೋಟೆಕಾರು ವತಿಯಿಂದ ಕೋಟೆಕಾರು ಮಠದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರ ಜಯಂತಿ ಉತ್ಸವ-2017 ರನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮದ ಸಂರಕ್ಷಣೆಗೆ ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಕಾರ್ಯ ಅಜರಾಮರ. ನಾಶದ ಅಂಚಿನಲ್ಲಿದ್ದ ಸನಾತನ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಅವರದ್ದಾಗಿದೆ. ಭರತಖಂಡದಲ್ಲಿ ಏಕತೆಯನ್ನು ಸ್ಥಾಪಿಸುವಲ್ಲಿಯೂ ಸಫಲರಾದವರು. ಇದೀಗ ಅವರ ಜಯಂತಿ ಉತ್ಸವದ ಸಂದರ್ಭ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ಮಹತ್ತರವಾದದ್ದು ಎಂದರು. ವಿಶೇಷ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬಾಹುಬಾಲಿ 2 ಸಿನಿಮಾ ನೋಡಲು ಹೋಗಬೇಕು ಆದರೆ ಈ ದುಬಾರಿ ಸಿನಿಮಾ ಟಿಕೆಟ್ ದರವನ್ನು ಯಾರಪ್ಪಾ ಕೊಡುವುದು ಎಂದು ತಲೆಕೆಡಿಸಿಕೊಳ್ಳುತ್ತಿರುವ ಸಿನಿಪ್ರಿಯರಿಗೆ ಇಲ್ಲಿದೆ ಶುಭಸುದ್ದಿ. ಕರ್ನಾಟಕ ಸರಕಾರ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ರೂ 200 ಎಂದು ನಿಗದಿಪಡಿಸಿದ್ದು ಈ ಬಗ್ಗೆ ಈಗಾಗಲೇ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದ್ದು ಬಾಹುಬಲಿ 2 ಸಿನಿಮಾ ಈ ಆದೇಶಕ್ಕೆ ಒಳಪಡುವ ಮೊದಲ ಸಿನಿಮಾವಾಗಲಿದೆ. ಹಾಗಾಗಿ ರಾಜಮೌಳಿಯ ಬೆಳ್ಳಿತೆರೆಯ ಮೇಲಿನ ಕೌತುಕವನ್ನು ಕೇವಲ ರೂ. 200ರಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಸರಕಾರದ ಆದೇಶದ ಪ್ರತಿ ಕೈಗೆ ಸೇರಿದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ಪ್ರೈಮ್‍ಟೈಮ್‍ಗಳಲ್ಲಿ ಅಂದರೆ ಅಪರಾಹ್ನ 1.30, 4.30 ಮತ್ತು 7.30ರ ಸಮಯಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಅವರು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುನ್ನೂರು: ಸರಕಾರದಿಂದ ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ಅನುದಾನ ಬಿಡುಗಡೆಯಾಗಿದ್ದರೂ, ಸಮರ್ಪಕ ತ್ಯಾಜ್ಯ ವಿಲೇವಾರಿ ನಡೆಯದೆ ಅಧಿಕಾರಿಗಳು ಬೇಜವಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಿರಾಜ್ ಅಡ್ಕರೆ ಹೇಳಿದ್ದಾರೆ. ಅವರು ತುಳುನಾಡು ರಕ್ಷಣಾ ವೇದಿಕೆ ಮುನ್ನೂರು ಗ್ರಾಮ ಪಂಚಾಯಿತಿ ಎದುರುಗಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಚ್ಛ ಮಂಗಳೂರು ವಿಧಾನಸಭಾ ಕ್ಷೇತ್ರ ಆಂದೋಲನದಡಿ ಪ್ರಥಮ ಹೋರಾಟವನ್ನು ಮುನ್ನೂರಿನಿಂದ ಆರಂಭಿಸಲಾಗಿದೆ. ಪಂಚಾಯಿತಿಗೆ ತ್ಯಾಜ್ಯಕ್ಕೆ ಸಂಬಂಧಿಸಿ ರೂ.28 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ ಅದರ ಉಪಯೋಗವಾಗಿಲ್ಲ. ಬಿಪಿಎಲ್ ಕಾರ್ಡುಗಳು ಶ್ರೀಮಂತರ ಕಪಾಟಿನಲ್ಲಿದ್ದು, ಬಡವರು ¸ ಕಾರ್ಡಿಗಾಗಿ ದಿನಗಟ್ಟಲೆ ಅಲೆದಾಡುವ ಸ್ಥಿತಿಯಿದೆ. ಶ್ರೀಮಂತ ಜನ ಮಾನವೀಯತೆಗೆ ಸ್ಪಂಧಿಸಿ ಬಡವರಿಗೆ ಬಿಪಿಎಲ್ ಕಾರ್ಡು ದೊರೆಯುವಂತೆ ವರ್ತಿಸಬೇಕಿದೆ. ಈ ಹಿಂದೆ ಪಂಚಾಯಿತಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಲಾಗಿತ್ತು. ಆದರೆ ಸ್ಪಂಧಿಸದ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ . ಇದಕ್ಕೂ ಸ್ಪಂಧಿಸದೇ ಇದ್ದಲ್ಲಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಣಚೂರು: ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಬಲುಅಪರೂಪದ ಹಾಗೂ ಅತಿಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವ ಮೂಲಕ ಯುವತಿಯೋರ್ವಳ ಬಾಳು ಹಸನಾಗಿಸಿದ್ದಾರೆ. 33 ರ ಹರೆಯದ ಮೂಡಬಿದ್ರೆ ಮೂಲದ ರುಬೀನಾ ಎಂಬವರ ಕಣ್ಣುಗಳ ಅಂತರ 60 ಮಿಲಿ ಮೀಟರ್ ದೂರವಾಗಿತ್ತು. ಹುಟ್ಟಿದ ದಿನದಿಂದಲೇ ಇಂತಹ ನ್ಯೂನ್ಯತೆಯಲ್ಲಿದ್ದ ಯುವತಿಯ ಬಾಳು ಎಲ್ಲರಂತಿರಲಿಲ್ಲ. ಇದರಿಂದ ವಿವಾಹ ಭಾಗ್ಯವೂ ಆಕೆಗೆ ಬಂದಿರಲಿಲ್ಲ. ಇದೊಂದು ರೋಗವಲ್ಲದಿದ್ದರೂ ಸಮಾಜ ಆಕೆಯನ್ನು ಎದುರಿಸುವ ರೀತಿ ವಿಭಿನ್ನವಾಗಿತ್ತು. ಇದರಿಂದ ಆಕೆ ಹಾಗೂ ಮನೆಮಂದಿ ಮಾನಸಿಕವಾಗಿ ನೊಂದು, ಮಗಳ ಭವಿಷ್ಯದ ಭೀತಿಯನ್ನು ಹೆತ್ತವರು ಎದುರಿಸುತ್ತಿದ್ದರು. ಆಧುನಿಕ ವೈದ್ಯಕೀಯ ತಂತ್ರಜ್ಞರಿಂದ ಸರಿಪಡಿಸಲು ಸಾಧ್ಯವೇ, ಅಲ್ಲದೆ ಅದರ ಖರ್ಚು ಲಕ್ಷಾಂತರ ವ್ಯಯ ಆಗುವ ಹೆದರಿಕೆಯಿಂದ ಮನೆಯಲ್ಲಿಯೇ ಉಳಿಸಿಕೊಂಡಿದ್ದರು. ಇತ್ತೀಚೆಗೆ ಮನಸ್ಸು ಮಾಡಿದ ಹೆತ್ತವರು ನಾಟೆಕಲ್ ಕಣಚೂರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ತಂಡದ ಜತೆಗೆ ಮಾತುಕತೆ ನಡೆಸಿದಾಗ, ಉಳಿದ ಆಸ್ಪತ್ರೆಗಳಲ್ಲಿ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಛದಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರ ಭರವಸೆಯಿಂದ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುನ್ನೂರು : ಶಿಕ್ಷಣ ಕಾಶಿ ಎಂದೇ ಬಿರುದು ಪಡೆದುಕೊಂಡಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಹಳಷ್ಟು ತಲೆದೋರಿದ್ದು, ಸಮಸ್ಯೆಗೆ ಪಂಚಾಯಿತಿ ಯಾವುದೇ ಸ್ಪಂಧನೆ ನೀಡದೇ ಇರುವುದರ ವಿರುದ್ದ ತುಳುನಾಡು ರಕ್ಷಣಾ ವೇದಿಕೆಯಿಂದ ಎ.೨೭ ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿರಾಜ್ ಅಡ್ಕರೆ ಹೇಳಿದ್ದಾರೆ. ಕುತ್ತಾರು ಮುನ್ನೂರು ಘಟಕದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುನ್ನೂರು ಗ್ರಾಮದ ಪ್ರತಿ ರಸ್ತೆಯಲ್ಲಿ ಘನ ತ್ಯಾಜ್ಯಗಳು ಎಲ್ಲೆಂದರೆಲ್ಲಿ ಬಿದ್ದಿವೆ. ಇದರಿಂದ ಶಾಲಾ ಮಕ್ಕಳು, ಮಹಿಳೆಯರು, ವಿದ್ಯಾರ್ಥಿ ಗಳು , ಹಿರಿಯ ನಾಗರಿಕರು ಓಡಾಡಲು ಸಾಧ್ಯವಾಗದ ಸ್ಥಿತಿ ನಿಮಾ೯ಣವಾಗಿದೆ. ಇದು ಜನರ ಆರೋಗ್ಯದ ಮೇಲೂ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತಿದೆ. ಘನ ತ್ಯಾಜ್ಯ ವಿಲೇವಾರಿಗೆ ತ್ಯಾಜ್ಯ ನಿವ೯ಹಣಾ ಘಟಕ ಮತ್ತು ವಾಹನ ಸೇರಿ ಸೂಕ್ತ ವ್ಯವಸ್ಥೆ ಸರಕಾರದಿಂದ ಮಂಜೂರಾಗಿ ವಷ೯ ಗಳೇ ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ.…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಮಸ್ತ ಜಾಗತಿಕ ನಾಯಕರೂ, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ ಆಗಿರುವ ಸಯ್ಯಿದ್ ಜೆಫ್ರಿ ಮುತ್ತುಕೋಯ ತಂಙಳ್ ಅವರು ಬುಧವಾರ ಉಳ್ಳಾಲಕ್ಕೆ ಆಗಮಿಸಲಿದ್ದು ಮೇಲಂಗಡಿ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇತಿಹಾಸ ಪ್ರಸಿದ್ಧ ಹೊಸಪಳ್ಳಿ ಎಂದೇ ಖ್ಯಾತಿ ಹೊಂದಿರುವ ಮುಹಿಯ್ಯುದ್ದೀನ್ ಜುಮಾ ಮಸೀದಿ 2012ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು 650 ಕುಟುಂಬಗಳನ್ನು ಒಳಗೊಂಡಿದ್ದು, 2013ರಲ್ಲಿ ಜುಮಾ ಆರಂಭಿಸಲಾಗಿದೆ. ಪ್ರಸ್ತುತ ಮಸೀದಿಯ ಅಧೀನದಲ್ಲಿ 400 ವಿದ್ಯಾರ್ಥಿಗಳನ್ನು ಹೊಂದಿರುವ ಖಂಝುಲ್ ಉಲೂಂ ಮದರಸ, ಮಹಿಳಯೆರಿಗೆ ಹೊಲಿಗೆ ತರಬೇತಿ ಕೇಂದ್ರ ಹಾಗೂ ಹಿರಿಯ ಮಹಿಳೆಯರಿಗೆ ಧಾರ್ಮಿಕ ಬೋಧನಾ ಕೇಂದ್ರ ನಡೆಸಲಾಗುತ್ತಿದ್ದು ಎಂದು ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಸೋಮವಾರ ಮಸೀದಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಣ್ಮಕ್ಕಳಿಗೆ ಮಹಿಳಾ ಶಿಕ್ಷಕರಿಂದ ಧಾರ್ಮಿಕ ಶಿಕ್ಷಣ, ಮಹಿಳಾ ಆಲಿಂ ಕೋರ್ಸ್, ಬಡ ಹೆಣ್ಮಕ್ಕಳ ವಿವಾಹಕ್ಕೆ ನೆರವು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡರೋಗಿಗಳಿಗೆ ವೈದ್ಯಕೀಯ ನೆರವು ನೀಡುವ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ರಾಮಕೃಷ್ಣ ಮಿಷನ್ ಹಾಗೂ ಮಂಗಳೂರು ವಿವಿಯ ವಿದ್ಯಾರ್ಥಿಗಳ ವತಿಯಿಂದ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಸ್ವಚ್ಚತೆಗಾಗಿ ಮ್ಯಾರಥಾನ್ ಓಟವು ಸೋಮವಾರ ನಡೆಯಿತು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ಯ ಹಾಗೂ ಪ್ರಾಧ್ಯಾಪಕ ಡಾ.ಮೋಹನ್ ಸಿಂಘೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಾಸ್ತಿಕಟ್ಟೆ: ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಮಾಸ್ತಿಕಟ್ಟೆ ಎಂಬಲ್ಲಿ ಸಂಭವಿಸಿದೆ. ಸಂತೋಷ್ ನಗರದ ಬಾಡಿಗೆ ಮನೆಯ ನಿವಾಸಿ ನಾಗರಾಜ್ ಎಂಬವರ ಪುತ್ರ ಸುನಿಲ್ (25) ಮೃತ ಯುವಕ. ಸೋಮವಾರ ಸಂಜೆ ವೇಳೆ ಉಳ್ಳಾಲದ ಸುಂದರಿಭಾಗ್ ನಿಂದ ಕೆಲಸ ಮುಗಿಸಿ ಮನೆ ಕಡೆಗೆ ವಾಪಾಸಾಗುತ್ತಿದ್ದ ಸಂದರ್ಭ ಮಂಗಳೂರಿನಿಂದ ಉಳ್ಳಾಲಕಡೆಗೆ ತೆರಳುತ್ತಿದ್ದ ಸಿಟಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಮೀಪದ ಹೊಂಡಕ್ಕೆ ಬೈಕ್ ಉರುಳಿಬಿದ್ದಿದ್ದು ಸುನಿಲ್ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವೃತ್ತಿಯನ್ನು ನಡೆಸುತ್ತಿದ್ದರು. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜ್ಯಾದ್ಯಂತ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಸರಕಾರ ದೌರ್ಜನ್ಯ ಎಸಗುತ್ತಲೇ ಬಂದಿದ್ದು, ಇದು ಉಳ್ಳಾಲ ನಗರಸಭೆಯಲ್ಲಿಯೂ ನಡೆದಿರುವುದು ಖಂಡನೀಯ, ಕೂಡಲೇ ಆಪಾದಿತ ನಗರಸಭೆ ಸದಸ್ಯರನ್ನು ವಜಾಗೊಳಿಸಬೇಕು ಎಂದು ಬಿಜೆಪಿಯ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಹೇಳಿದ್ದಾರೆ. ಅವರು ಬಿಜೆಪಿ ಉಳ್ಳಾಲ ಶಕ್ತಿಕೇಂದ್ರದ ವತಿಯಿಂದ ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಗೂಂಡಾ ಪ್ರವೃತ್ತಿಯ ವಿರುದ್ಧ ಉಳ್ಳಾಲ ನಗರಸಭೆಯ ಬಸ್ ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರಿನ ಶಿಖಾ ಪ್ರಕರಣದಲ್ಲಿ ಮುಖ್ಯಮಂತ್ರಿಯ ಆಪ್ತ ಸಚಿವನೇ ತೊಂದರೆ ನೀಡಿರುವ ಜ್ವಲಂತ ಸಾಕ್ಷಿ ಎಲ್ಲರ ಕಣ್ಣೆದುರಿಗೆ ಇದೆ. ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ನಗರಸಭೆಯಿಂದ ರಾಜ್ಯದ ಆಡಳಿತವರೆಗೆ ಆಡಳಿತ ನಡೆಯುತ್ತಿದೆ. ಇದರಿಂದ ಜನಸಾಮಾನ್ಯರು ಯಾವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೌರಾಯುಕ್ತೆ ಮಹಿಳೆ ವಿರುದ್ಧ ಅವಾಚ್ಯಶಬ್ದಗಳಿಂದ ನಿಂದಿಸಿರುವ ನಗರಸಭೆ ಸದಸ್ಯನ ವಿರುದ್ಧ ಕ್ರಮ ಜರಗಿಸಬೇಕಿದೆ ಎಂದರು. ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ; ದೇಶದಲ್ಲಿ ಕರಾಳ ಕಾನೂನು ಮುಸ್ಲಿಮರು, ದಲಿತರು ಹಾಗೂ ಆದಿವಾಸಿಗಳನ್ನು ಭಯಗ್ರಸ್ಥ ವಾತಾವರಣದಲ್ಲಿ ಬದುಕುವಂತೆ ಮಾಡಿದ್ದು ಇದರಿಂದ ಸಮಾಜದಲ್ಲಿ ಭೀತಿ ರಾಜಕೀಯ ತಾಂಡವವಾಡುತ್ತಿದೆ. ಅಂತಹ ವಾತಾವರಣ ಮಟ್ಟಹಾಕಲು ಶಾಂತಿಪ್ರಿಯ ಪ್ರಜೆಗಳು ಒಂದಾಗಬೇಕಿದೆ. ಆ ನಿಟ್ಟಿನಲ್ಲಿ ಎಸ್ಡಿಪಿಐ ನಡೆಸುತ್ತಿರುವ ಭೀತಿ ರಾಜಕೀಯದ ವಿರುದ್ಧ ಐಕ್ಯಗೊಳ್ಳೋಣ ರಾಷ್ಟ್ರವ್ಯಾಪಿ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದ್ದು ಎ. 29ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಪನಗೊಳ್ಳಲಿದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್ ಹೇಳಿದರು. ಎಸ್ಡಿಪಿಐ ವತಿಯಿಂದ ಉಳ್ಳಾಲ ಹಝ್ರತ್ ಶಾಲಾ ಮೈದಾನದ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ವಿಶೇಷವಾಗಿ ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ ಮನದಲ್ಲಿ ಭೀತಿ ಹಾಗೂ ಅಭದ್ರತೆ ಹೆಚ್ಚಿದೆ. ಹತ್ಯೆ, ಪ್ರತೀಕಾರ, ಕೊಲೆ, ಧ್ವಂಸ, ಸಾಮರಸ್ಯ ಕದಡುವಂತಹ ಕಾರ್ಯಗಳು ಕಾನೂನಿನ ಯಾವುದೇ ಭಯವಿಲ್ಲದೆ ಎಗ್ಗಿಲ್ಲದೆ ಸಾಗುತ್ತಿದೆ. ಅಷ್ಟಕ್ಕೂ ದುಷ್ಕರ್ಮಿಗಳ ಅಟ್ಟಹಾಸ ತಾರಕಕ್ಕೆ ಏರಿದ್ದರೂ ಕೇಂದ್ರ…

