ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಎಂದೇ ಗುರುತಿಸಿಕೊಂಡಿದ್ದ ಉಳ್ಳಾಲ ಇಂದು ಕ್ಷೇತ್ರ ಬದಲಾವಣೆಯಿಂದಾಗಿ ಮಂಗಳೂರು ಕ್ಷೇತ್ರವಾಗಿ ಮಾರ್ಪಟ್ಟಿದೆ. ಆದರೆ ಯಾವ ಬದಲಾವಣೆಯ ಮಧ್ಯೆಯೋ ಕೇಸರಿ ಪಡೆಗೆ ಉಳ್ಳಾಲದಲ್ಲಿ ಬಿಜೆಪಿ ಧ್ವಜ ಹಾರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯು.ಟಿ.ಖಾದರ್ ಖದರ್‍ಗೆ ಸದ್ದು ಹೊಡೆಯಲು ಕೇಸರಿ ಪಡೆ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದು, ಸಂಘ ಪರಿವಾರದ ಗರಡಿಯಲ್ಲಿ ಪಳಗಿದ ಸತ್ಯಜಿತ್ ಸುರತ್ಕಲ್‍ಗೆ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕ್ಷೇತ್ರ ಈಗಾಗಲೇ ಖಾದರ್ ವೈಯುಕ್ತಿಕ ವರ್ಚಸ್ಸಿನ ಮಧ್ಯೆ ಕಾಂಗ್ಸೆಸ್ ಪಕ್ಷದ ಗಟ್ಟಿತನದಿಂದ ಕೈ ಜಾರುತ್ತಿಲ್ಲ. ಹೀಗಾಗಿ ಜಯರಾಮ್ ಶೆಟ್ಟಿ ಬಿಟ್ಟರೆ ಬಿಜೆಪಿಯ ಯಾವೊಬ್ಬನಿಗೂ ಕಾಂಗ್ರೆಸ್ ಸಾಮಾಜ್ಯವನ್ನು ಧೂಳೀಪಟ ಮಾಡಲು ಸಾಧ್ಯವಾಗಿಲ್ಲ. ಜಾತಿ ಸಮೀಕರಣದ ಲೆಕ್ಕಚಾರಕ್ಕೆ ಬಂದರೂ ಇಲ್ಲಿನ ನಿರ್ಧರಿತ ಮತಗಳು ಅಲ್ಪ ಸಂಖ್ಯಾತ ಸಮುದಾಯದ ತೆಕ್ಕೆಯಲ್ಲಿದೆ. ಈ ಮಧ್ಯೆ ಖಾದರ್ ಎದುರು ಸ್ಪರ್ಧಿಸಿದ್ದ ಸ್ವಕ್ಷೇತ್ರದ ಒಂದಷ್ಟು ಬಿಜೆಪಿ ಕಲಿಗಳು ಹಿಂದಿನ ಚುನಾವಣೆಗಳಲ್ಲಿ ನೆಲಕಚ್ಚಿದ್ದರು. ಅಲ್ಲದೇ ಬಿಜೆಪಿ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬಾಯಾರ್ : ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯದಲ್ಲಿ ಸ್ವಲಾತ್ ಮಜ್ಲಿಸ್ ಹಾಗು ಮುಹಿಮ್ಮಾತ್ತ್ ಸಮ್ಮೇಳನ ಪ್ರಚಾರಣೆ ನಾಳೆ ಮಗ್‍ರಿಬ್ ನಮಾಝಿನ ನಂತರ ನಡೆಯಲಿದೆ ಎಂದು ಮೆನೇಜರ್ ಸಿದ್ಧೀಖ್ ಸಖಾಫಿ ಬಾಯಾರ್ ತಿಳಿಸಿದ್ದಾರೆ. ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಪ್ರಾಥ9ನೆಗೆ ನೇತೃತ್ವ ವಹಿಸುವರು. ಪ್ರಮುಖ ಪಂಡಿತರೂ ವಾಗ್ಮಿಯೂ ಆದ ಮುಳ್ಳೂರ್‍ಕ್ಕರೆ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣೆ ಮಾಡಲಿದ್ದಾರೆ. ಸಿ ಅಬ್ದುಲ್ಲ ಮುಸ್ಲಿಯಾರ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಬಾಯಾರ್ ಅಬ್ದುಲ್ಲ ಮುಸ್ಲಿಯಾರ್, ಜಬ್ಬಾರ್ ಸಖಾಫಿ ಪಾತೂರ್, ಸಯ್ಯಿದ್ ಮುನೀರುಲ್ ಅಹ್ದಲ್ , ಸ್ವಲಾಹುದ್ದೀನ್ ಅಯ್ಯೂಬಿ, ಸಿ ಎನ್ ಜಹ್ಫರ್ ಸ್ವಾದಿಖ್, ಸ್ವಾದಿಖ್ ಆವಳ, ಹಾರಿಸ್ ಹಿಮಮಿ ಪರಪ್ಪ , ಅಝೀಝ್ ಸಖಾಫಿ ಮಚ್ಚಂಪಾಡಿ , ಇಬ್ರಾಹಿಂ ಪೈಸಿ ಕನ್ಯಾನ, ಜಲೀಲ್ ಕರೋಪಾಡಿ, ಸಿದ್ದೀಖ್ ಸಖಾಫಿ ಬಾಯಾರ್ ,ಸಿದ್ದೀಖ್ ಹಾಜಿ ಮಂಗಳೂರು , ಸಿದ್ದೀಖ್ ಲತ್ವೀಫಿ ಮುಂತಾದವರು ಭಾಗವಹಿಸುವರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸಂತ ಜೋಸೆಫ್ ಜೋಯ್‍ಲ್ಯಾಂಡ್ ಶಾಲೆ, ಸೋಮೇಶ್ವರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಸ್ಥಳೀಯ ಸಂಸ್ಥೆ ಹಾಗೂ ಜೆಸಿಐ ಮಂಗಳಗಂಗೋತ್ರಿ ಜಂಟಿಯಾಗಿ ಮಂಗಳೂರು ತಾಲೂಕು ಮಟ್ಟದ ಎರಡು ದಿನಗಳ ರಾಜ್ಯ ಹಾಗೂ ರಾಷ್ಟ್ರಪತಿ ಪುರಸ್ಕಾರದಲ್ಲಿ ಭಾಗವಹಿಸಲು ಸಿದ್ಧತೆಗಾಗಿ ತರಬೇತಿ (ದಳ ರಾತ್ರಿ ತಂಗುವ ಶಿಬಿರ ಮತ್ತು ದಳ ರಾತ್ರಿ ಹೊರ ಸಂಚಾರ ಕಾರ್ಯಕ್ರಮ) ಶಿಬಿರ ಮಂಗಳವಾರ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪ್ರಶಾಂತ ನಾಯ್ಕ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಭಾರತದಲ್ಲಿ 1909 ರಲ್ಲಿ ಪ್ರಾರಂಭವಾದ ಸ್ಕೌಟ್ ಚಳುವಳಿಗೆ ಶತಮಾನದ ಇತಿಹಾಸವಿದೆ. ಯುವ ಜನತೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧಿ ಹೊಂದಲು ಸ್ಕೌಟ್ ಒಂದು ಉತ್ತಮ ವೇದಿಕೆಯಾಗಿದ್ದು, ದೇಶ ಸೇವೆಯಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಮಾತ್ರವಲ್ಲ ಜೀವನದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಧೈರ್ಯ ಮತ್ತು ಜಾಣ್ಮೆಯಿಂದ ಎದುರಿಸುವ ಕೌಶಲ್ಯವನ್ನೂ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ` ನನ ಅರೆ ಮರ್ಲೆ ಪಂಡ್‍ದ್ ಲೆಪ್ಪೊಡ್ಚಿ ಮಾರ್ರೆ’ ತಾತ್ಪರ್ಯವೆಂದರೆ ಅರೆಹುಚ್ಚನೆಂದು ಕರೆಯಬೇಡಿ ಎಂದು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡವರು ತುಳು ಚಿತ್ರರಂಗದ ಅಭಿನಯ ಚಕ್ರವರ್ತಿ ಅರ್ಜುನ್ ಕಾಪಿಕಾಡ್ . ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಇದರ ಆಶ್ರಯದಲ್ಲಿ ವಿವಿ ಕ್ಯಾಂಪಸ್ಸಿನ ಮಂಗಳ ಸಭಾಂಗಣದಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳ ` ಸಂಭ್ರಮ -2017 ‘ ಕ್ಕೆ ಮಂಗಳವಾರ ಚಾಲನೆಯನ್ನು ನೀಡಿದರು. ರಂಗ್ ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಹುಲಿ ಎಂದು ಕರೆಯುತ್ತಿದ್ದವರು ನಂತರ ಚಂಡಿಕೋರಿ ಚಿತ್ರದ ಸಂದರ್ಭದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಸಹ `ಕೋರಿ’ ಎಂದೇ ಕರೆಯುತ್ತಿದ್ದರು. ಅಷ್ಟಾಗಿ ಸದ್ಯದಲ್ಲೇ ಹೊಸ ಚಿತ್ರ ಅರೆ ಮರ್ಲೆ ಬಿಡುಗಡೆಯಾಗುತ್ತಿದ್ದು, ಮುಂದೆ ನನ್ನನ್ನು ` ಅರೆ ಮರ್ಲೆ’ ಎಂದು ಕರೆಯದಿರಿ ಎಂದು ಹಾಸ್ಯದ ಮಾತುಗಳಿಂದಲೇ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು. ಅಪ್ಪ ದೇವದಾಸ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪೆರ್ಮನ್ನೂರು: ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಈಸ್ಟರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಫಾ| ಎಡ್ವಿನ್ ಮಸ್ಕರೇನ್ಹಸ್ ಬಲಿಪೂಜೆ ನೆರವೇರಿಸಿದರು. ಫಾ| ನಿಲೇಶ್ ಕ್ರಾಸ್ತಾರವರು ಹಬ್ಬದ ಸಂದೇಶ ನೀಡಿದರು. ಫಾ| ಜೆ.ಬಿ ಸಲ್ಡಾನರವರು ಸ್ಥಾನ ದೀಕ್ಷೆಯ ಸಂಸ್ಕಾರವನ್ನು ನೆರವೇರಿಸಿದರು. ಫಾ| ಪ್ರವೀಣ್ ಜೋಯ್ ಸಲ್ಡಾನ, ಫಾ .ಜೆರಾಯ್ಡ್ ಡಿ’ಸೋಜ, ಉಪಯೋಜಕ ರವಿ ರಿಚ್ಚರ್ಡ್ ಫರ್ನಾಂಡಿಸ್ ಹಬ್ಬದ ಅಚರಣೆಯಲ್ಲಿ ಪಾಲ್ಗೊಂಡಿದ್ದರು. ಫೋಟೋ ಸ್ಟಾರ್ ಸ್ಟುಡಿಯೋ
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಎದೆಗೆ ಗುಂಡು ಬಿದ್ದರೂ ಹೆದರದೇ ಮುಂದಿರುವ ಶತ್ರುವನ್ನು ಮುಗಿಸುವ ಧೈರ್ಯವನ್ನು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ತೆರಳುವ ಯುವ ಜನಾಂಗಕ್ಕೆ ಸ್ಪೂರ್ತಿ ನೀಡಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನ ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ದೇಶಕ್ಕಾಗಿ ಜಮ್ಮು ಕಾಶ್ಮೀರದ ಪಾಂಪೋರ್ ಬಳಿ ಭಯೋತ್ಪಾದಕರೊಂದಿಗೆ ಪರಸ್ಪರ ಹೋರಾಟ ನಡೆಸುತ್ತಿದ್ದ ಸಂದರ್ಭ ಐದು ಗುಂಡು ತಗುಲಿ ಸುಮಾರು ಐದೂವರೆ ತಿಂಗಳ ಕೋಮದಲ್ಲಿ ಇದ್ದು ಬಳಿಕ ಚೇತರಿಸಿಕೊಂಡು ತನ್ನ ತವರೂರಾದ ಮುಡಿಪಿಗೆ ಆಗಮಿಸಿರುವ ವೀರಯೋಧ ಸಂತೋಷ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದರು. ದೇಶ ಕಟ್ಟುವ ಕಾರ್ಯದೊಂದಿಗೆ ದೇಶ ಸಂರಕ್ಷಣೆಯ ಕಾರ್ಯ ಮಹತ್ವದ್ದಾಗಿದ್ದು, ದೇಶಕ್ಕಾಗಿ ಸೈನಿಕರು ಗಡಿ ಭಾಗದಲ್ಲಿ ಸಂಪೂರ್ಣ ಅರ್ಪಣಾ ಭಾವದಿಂದ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು ದೇಶ ಸೇವೆಗೆ ತೊಡಗಿಸಿಕೊಳ್ಳಲು ಸಂತೋಷ್ ಅವರ ತಾಯಿ ಮತ್ತು ಪತ್ನಿಯ ತ್ಯಾಗ ಮನೋಭಾವನೆಯಿಂದ ಸಾಧ್ಯವಾಗಿದೆ ಎಂದರು. ಇದೇ ಸಂದರ್ಭ ಯೋಧನನ್ನು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಜಗತ್ತಿನಲ್ಲಿ ಸೌಂದರ್ಯ ಆರಾಧಕರ ಸಂಖ್ಯೆಯೇ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಬಡ ಕುಟುಂಬದಲ್ಲಿರುವ ಸೀಳುತುಟಿ ಹೊಂದಿರುವ ಮಕ್ಕಳ ಚಿಕಿತ್ಸೆಯಲ್ಲಿ ಅಂತಾರಾಷ್ಟ್ರೀಯ ಫೌಂಡೇಶನ್ ಹಾಗೂ ನಿಟ್ಟೆ ಆಸ್ಪತ್ರೆ ಜಂಟಿಯಾಗಿ ಕಾರ್ಯಾಚರಿಸಿ ಸೌಂದರ್ಯದ ಜತೆಗೆ ಅವರನ್ನು ಸಮಾಜವನ್ನು ಧೈರ್ಯವಾಗಿ ಎದುರಿಸುವಂತೆ ರೂಪಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಕ್ಕಳ ಸೀಳುತುಟಿ ಫೌಂಡೇಷನ್ನಿನ ಸ್ಥಾಪಕ ಡಾ. ಹರ್ಮನ್ ಸೇಲರ್ ಅಭಿಪ್ರಾಯಪಟ್ಟರು. ಅವರು ಸೆಂಟರ್ ಫಾರ್ ಅಡ್ವಾನ್ಸ್ಡ್ ಡೆಂಟೊಫೇಷಿಯಲ್ ಆಂಡ್ ಸ್ಟೊಮಾಟೋಗ್ನಾಥಿಕ್ ಸೈನ್ಸಸ್ ಹಾಗೂ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯ ವಿಜ್ಞಾನ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ` ಸರ್ಜಿಕಲ್ ಮೆನೇಜ್ ಮೆಂಟ್ ಕಾಂಪ್ಲೆಕ್ಸ್ ಕ್ರೇನಿಯೋಫೇಷಿಯಲ್ ಅನಾಮಲೀಸ್ ಮತ್ತು ಪ್ರೀಸರ್ಜಿಕಲ್ ನಾಸಲ್ವೀಯೊಲಾರ್ ಮೋಲ್ಡಿಂಗ್ ಕುರಿತ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ಸೋಮವಾರ ದೇರಳಕಟ್ಟೆ ಎ.ಬಿ.ಶೆಟ್ಟಿ ಕಾಲೇಜಿನ ವಿಂಶತಿ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಸೀಳುತುಟಿ ಹೊಂದಿರುವ ಮಕ್ಕಳು ತಮ್ಮನ್ನು ಪ್ರೀತಿಸುವವರೇ ಇಲ್ಲವೆಂದು ಖಿನ್ನತೆಗೆ ಜಾರಿದ ಹಲವು ಉದಾಹರಣೆಗಳಿವೆ. ಇದರಿಂದ ಸಮಾಜದಲ್ಲಿ ಎಲ್ಲರಂತೆ ಬಾಳಲು ಹಿಂದೇಟು ಹಾಕುವ ಪರಿಸ್ಥಿತಿಯಿತ್ತು. ಇದನ್ನೆಲ್ಲಾ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ರಾಜ್ಯದ ಕಲೆಯಾಗಿರುವ ಯಕ್ಷಗಾನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾನಮಾನ ನೀಡುತ್ತಿದ್ದು, ಇದರ ಜತೆಗೆ ಯಕ್ಷಗಾನದ ಕುರಿತ ನೂತನ ಪದವಿ ಕೋರ್ಸನ್ನು ಸ್ಥಾಪಿಸಿ ಹೆಚ್ಚಿನ ಕಲಾವಿದರನ್ನು ಸೃಷ್ಟಿಸಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಸೋಮವಾರ ಯಕ್ಷಗಾನ ಕ್ಷೇತ್ರದ ದಿಗ್ಗಜರೆನಿಸಿಕೊಂಡ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥದಾರಿ, ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಹಾಗೂ ಯಕ್ಷಗಾನ ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಅವರಿಗೆ ಯಕ್ಷಮಂಗಳ ಪ್ರಶಸ್ತಿ ಮತ್ತು ಡಾ.ವಸಂತ ಭಾರದ್ವಾಜ ಅವರ `ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದರು. ಸರಕಾರಗಳಿಂದ ನಿರೀಕ್ಷಿತ ಅಭಿವೃದ್ಧಿ ಕಲಾ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಕ್ರೀಡಾ ಕ್ಷೇತ್ರವೂ ಅದೇ ರೀತಿಯಲ್ಲಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ಅತ್ಯಾಧುನಿಕ ತಂತ್ರಜ್ಞಾನವಿರುವ ಇಂದಿನ ಕಾಲಘಟ್ಟದಲ್ಲಿ ಮನುಷ್ಯರ ನಡುವೆ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಿರುವುದು ದುರಂತ. ಸಾಮಾಜಿಕ ಜಾಲತಾಣಗಳಲ್ಲಿಬರುವ ವಿಚಾರಗಳು ಕ್ಷಣ ಮಾತ್ರದಲ್ಲೇ ವೈರಲ್‍ಗಳಾಗುವ ಮೂಲಕ ಅನೇಕ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪರಸ್ಪರರಲ್ಲಿ ವಿಶ್ವಾಸ ಮೂಡಿಸಬೇಕಾದ ಕೆಲಸ ನಡೆಯಬೇಕಾಗಿರುವುದು ಅಗತ್ಯವಾಗಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವರಾದ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ಇಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ಮೂರು ದಿನಗಳ ಕಾಲ ಆಯೋಜಿಸಿರುವ ಸಾರ್ವಜನಿಕ ಕುರಾನ್ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಸಾರ್ವಜನಿಕವಾಗಿ ಧರ್ಮಗ್ರಂಥಗಳ ನೈಜ ವಿಚಾರಗಳನ್ನು ತಿಳಿಸಲು ಪ್ರಯತ್ನಿಸಿರುವುದು ನಿಜಕ್ಕೂ ಉತ್ತಮ ಕಾರ್ಯ ಜಮಾಅತೆ ಇಸ್ಲಾಮಿ ಹಿಂದ್ ಈ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮವು ಶ್ಲಾಘನೀಯ ಎಂದರು. “ಮಾನವ ಜೀವನದ ವಾಸ್ತವಿಕತೆ”ಎಂಬ ವಿಷಯದಲ್ಲಿ ಕುರಾನ್ ಪ್ರವಚನ ನೀಡಿದ ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬರಾದ ಮಹಮ್ಮದ್ ಕುಂಞ ಮಾನವರ ಬದುಕಿಗೆ ಕೊನೆ ಇದೆ…

