ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಬಲಿದಾನ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರಪ್ರೇಮದ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ರಾಜಕೀಯದ ಬಣ್ಣ ಬಳಿಯುತ್ತಿದೆ. ಅಲ್ಲದೇ ತಿರಂಗ ಯಾತ್ರೆಗೆ ಸಭಾಂಗಣ ಒದಗಿಸಿದ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದೆ. ತಾಕತ್ತಿದರೆ ವಿವಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸವಾಲು ಹಾಕಿದ್ದಾರೆ. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ದೇಶದ್ರೋಹಿ ಧೋರಣೆ ಮತ್ತು ಅದನ್ನು ಸಮರ್ಥಿಸಿದ ರಾಜ್ಯ ಸರಕಾರದ ವಿರುದ್ಧ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವಕ್ಕಾಗಿ ಹೋರಾಡಿದವರನ್ನು ಸ್ಮರಿಸುವ ಸಲುವಾಗಿ ರಾಷ್ಟ್ರಪ್ರೇಮದ ಕಾರ್ಯಕ್ರಮವಾಗಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅದನ್ನೇ ರಾಜಕೀಯ ಕಾರ್ಯಕ್ರಮ ಎಂದು ಬಣ್ಣಿಸಿ, ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳನ್ನು ಬೆಂಬಲಿಸುವ ಕಾಂಗ್ರೆಸ್‍ನ ಮನಸ್ಥಿತಿ ಯಾವ ರೀತಿಯಲ್ಲಿದೆ ಅನ್ನುವುದು ಗೊತ್ತಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಮಿತ್ ಷಾ ನೇತೃತ್ವದಲ್ಲಿ ತಿರಂಗಾ ಯಾತ್ರೆ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅಬ್ಬಕ್ಕನ ನಾಡು ಇಂದು ಅಕ್ಷರಶಃ ಕೇಸರಿ ಪಡೆಯ ತಿರಂಗ ಯಾತ್ರೆಯಲ್ಲಿ ಮುಳುಗಿ ಹೋಗಿತ್ತು. ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಶಾ ಆಗಮನದ ಮೂಲಕ ಕಡಲತಡಿ ದೇಶಭಕ್ತರ ಬಲಿದಾನ ಸ್ಮರಣೆಗೆ ಸಾಕ್ಷಿಯಾಗಿತ್ತು. ಒಂದಷ್ಟು ವಿರೋಧದ ಮಧ್ಯೆಯೂ ಅದ್ದೂರಿಯಾಗಿ ನಡೆದ ತಿರಂಗ ಯಾತ್ರೆಯಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕಳಿಗೆ ಸಂಭ್ರಮದ ಗೌರವ ಸಲ್ಲಿಕೆಯಾಗಿದೆ. ಕೇಸರಿ ಪಡೆ ಬಿಜೆಪಿ ಧ್ವಜ ತ್ಯಜಿಸಿ ಮೋದಿ ಆಶಯದಂತೆ ತ್ರಿವರ್ಣ ಧ್ವಜದಡಿ ದೇಶಭಕ್ತಿ ಮೆರೆದಿದೆ….. ದೇಶದ ಪ್ರಧಾನಿ ನರೇಂದ್ರ ಮೋದಿಯ ಆಶಯಕ್ಕೆ ತಕ್ಕಂತೆ ಕಡಲತಡಿಯ ಅಬ್ಬಕ್ಕನ ನಾಡಲ್ಲಿ ಇಂದು ಅದ್ದೂರಿ ತಿರಂಗ ಯಾತ್ರೆ ಸಮಾವೇಶ ನಡೆದಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವ್ರೇ ಸ್ವತಃ ಅಬ್ಬಕ್ಕನ ನಾಡಾದ ಉಳ್ಳಾಲಕ್ಕೆ ಆಗಮಿಸೋ ಮೂಲಕ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದ್ದಾರೆ. ಗೋವಾದಿಂದ ಮಂಗಳೂರಿಗೆ ಆಗಮಿಸಿದ ಶಾ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟು ಸಾಂಕೇತಿಕವಾಗಿ ಗಿಡ ನೆಟ್ರು. ನಂತ್ರ ಅಲ್ಲಿಂದ ನೇರವಾಗಿ ಪಂಪ್ ವೆಲ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸ್ವಾತಂತ್ರ್ಯೋತ್ಸವದ ದಿನದಂದು ಅಬ್ಬಕ್ಕಳನ್ನು ಸ್ಮರಿಸುವ ಕಾರ್ಯ ಶ್ಲಾಘನೀಯ. ಅಬ್ಬಕ್ಕಳ ನಾಡಿನಲ್ಲಿ ಸರ್ವಧರ್ಮೀಯರು ಶಾಂತಿ ನೆಮ್ಮದಿಯಿಂದ ಬದುಕಿ ಜೀವಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಉಳ್ಳಾಲ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಹೇಳಿದರು. ಅವರು ಉಳ್ಳಾಲದ ಕರಾವಳಿ ಸಾಂಸ್ಕøತಿಕ ಪರಿಷತ್ ವತಿಯಿಂದ 70 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಳ್ಳಾಲದಲ್ಲಿರುವ ವೀರರಾಣಿ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಅಬ್ಬಕ್ಕಳ ಹೆಸರಿನಲ್ಲಿ ರಾಷ್ಟ್ರಮಟ್ಟದ ಗುರುತಿಸುವ ಕೆಲಸವನ್ನು ಸರಕಾರ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಬಹುಮುಖ್ಯ ಎಂದು ಹೇಳಿದರು. ಬಿಜೆಪಿ ಹಿರಿಯ ಮುಖಂಡ ಸೀತಾರಾಮ ಬಂಗೇರ, ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಮೊಗವೀರಸಮಾಜ ಉಳ್ಳಾಲದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಉಳ್ಳಾಲ ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಚೂಡಪ್ಪ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, …
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು :ಕಲ್ಲಾಪು ನಾಗರಿಕರು ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ೭೦ ನೇ ಸ್ವಾತಂತ್ರೋತ್ಸವ ಆಚರಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಕ್ಷೇತ್ರ ಬಿಜೆಪಿ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಿರಂಗಾ ರ್ಯಾಲಿ ನಡೆಯಿತು
ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವರಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ದಿಟ್ಟ ನಿಲುವು ತೆಗೆದುಕೊಂಡ ಹಿನ್ನಲೆಯಲ್ಲಿ ನಮ್ಮ ದೇಶ ಇಷ್ಟು ಉಳಿದಿದ್ದು, ನೆಹರೂ ಮಾತು ಕೇಳುತ್ತಿದ್ದರೆ ಭಾರತ ಇನ್ನಷ್ಟು ಛಿದ್ರವಾಗಿ ಹೋಗುತ್ತಿತ್ತು ಎಂದು ವಿಶ್ವಹಿಂದೂ ಪರಿಷತ್‍ನ ವಿಭಾಗ ಸಹ ಕಾರ್ಯದರ್ಶಿ ಪ್ರಕಾಶ್ ಮಲ್ಪೆ ಅಭಿಪ್ರಾಯಪಟ್ಟರು. ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡದ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆಯ ಸಮಾರೋಪ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಬಾರತದ ಪ್ರಥಮ ಪ್ರಧಾನ ಮಂತ್ರಿಯಾಗುವ ನಿಟ್ಟಿನಲ್ಲಿ ನೆಹರೂರವರು ದೇಶದ ವಿಭಜನೆಗೆ ಮೂಲ ಕಾರಣರಾದರು. ಸ್ವತಂತ್ರ ಭಾರತದ ಪೂರ್ವದಲ್ಲಿ ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿತ್ತು. ಆದರೆ ಮುಸ್ಲಿಂರ ಓಲೈಕೆಗಾಗಿ ಧರ್ಮಕ್ಕೊಂದು ಬಣ್ಣ ನೀಡಿ ರಾಷ್ಟ್ರ ಧ್ವಜವನ್ನು ತುಂಡು ಮಾಡಲಾಯಿತು. ರಘುಪತಿ ರಾಘವ ಹಾಡಿನಲ್ಲಿ ಅಲ್ಲಾನನ್ನು ಸೇರಿಸಲಾಯಿತು. ಯಾವ ಹಾಡು ಸ್ವತಂತ್ರಯದ ರಣಕಹಳೆಗೆ ಸ್ಪೂರ್ತಿಯಾಗಿತ್ತೋ ಅಂತಹ ವಂದೇ ಮಾತರಂ ಹಾಡನ್ನು ಹಾಡಬಾರದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹಾಜಬ್ಬರ ಶಾಲೆ ಮುಚ್ಚಿಸುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಹೆಸರಿನಲ್ಲಿ ಹರೇಕಳದ ಸರ್ಕಾರಿ ಶಾಲೆ ಮುಚ್ಚಿಸಲು ಸರ್ಕಾರ ಹೊರಟಿದೆ ಎಂದು ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಆರೋಪಿಸಿದ್ದಾರೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದೇಶ ವಿರೋಧಿಸಿ ಹರೇಕಳದ ಹಿರಿಯ ಪ್ರಾಥಮಿಕ ಶಾಲೆಯಲ್ಕಿ ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಶಾಲೆಗೆ ಐತಿಹಾಸಿಕ ಹಿನ್ನಲೆಯಿದ್ದು, ಕಿತ್ತಳೆ ಹಣ್ಣಿನ ವ್ಯಾಪಾರಿಯಾಗಿದ್ದ ಹರೇಕಳ ಹಾಜಬ್ಬರು ನ್ಯೂ ಪಡ್ಪು ಸರ್ಕಾರಿ ಶಾಲೆಯನ್ನು ಸ್ಥಾಪಿಸಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸದೇ ಎಲ್ಲರಿಗೂ ಉಚಿತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಶಾಲೆ ಆರಂಭಿಸಿದ್ದರು. ಆದರೆ ಸರ್ಕಾರ ಶಿಕ್ಷಕಿಯನ್ನು ವರ್ಗಾಯಿಸುವ ಮೂಲಕ ಶಾಲೆಯನ್ನು ಮುಚ್ಚಲು ಹೊರಟಿದೆ. ಆದ್ದರಿಂದ ಹಾಜಬ್ಬರಿಗಿರುವ ಕಾಳಜಿ…
ಉಳ್ಳಾಲ್ ನ್ಯೂಸ್ನೆಟ್ ವರ್ಕ್ ಅಡ್ಕ: ಕಾರು, ಬಸ್ಸು ಮತ್ತು ಬೈಕ್ ಮಧ್ಯೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮಾಡೂರು ಕೊಂಡಾಣದ ಸಾಯಿಧಾಮ ಬಡಾವಣೆಯ ನಿವಾಸಿ ನವೀನ್(51) ಮೃತ ದುರ್ದೈವಿ. ಮಂಗಳೂರು ಕಡೆಯಿಂದ ಕೇರಳದ ಕಡೆಗೆ ಅತೀ ವೇಗವಾಗಿ ತೆರಳುತ್ತಿದ್ದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಾಜಕಕ್ಕೆ ಹೊಡೆದು ಪಲ್ಟಿಯಾಗಿ ರಸ್ತೆಯ ಇನ್ನೊಂದು ಬದಿಯಲ್ಲಿಚಲಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಈ ವೇಳೆ ತಲಪಾಡಿಯಿಂದ ಸ್ಟೇಟ್‍ಬ್ಯಾಂಕಿಗೆ ತೆರಳುತ್ತಿದ್ದ ಬಸ್ಸಿನ ಚಕ್ರದಡಿಗೆ ಬೈಕ್ ಬಿದ್ದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನವೀನ್ ಮಂಗಳೂರಿನಲ್ಲಿ ಈಜು ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕ ಸಹಿತÀ ಮೂರು ಮಂದಿ ಇದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ನಿವೇಶನ ರಹಿತರ ಸಮಸ್ಯೆ, ಕೊಳವೆ ಬಾವಿ ಸಮಸ್ಯೆ, ಕಳವು ಪ್ರಕರಣಗಳ ತಡೆಗಟ್ಟುವಿಕೆಗೆ ಕುರಿತ ಚರ್ಚೆ ಹಾಗೂ ಕ್ರಮ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ಜರಗಿದ ಸೋಮೇಶ್ವರ ಪಂಚಾಯಿತಿನ 2015-16 ನೇ ಸಾಲಿನ ಗ್ರಾಮಸಭೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹÀ ಸಹಾಯಕ ನಿರ್ದೇಶಕ ಜೆ. ಯಶೋಧರ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ನಿವೇಶನ ರಹಿತರ 3,500 ಅರ್ಜಿಗಳು ಪಂಚಾಯಿತಿನಲ್ಲಿದೆ. ಆದರೆ ಈವರೆಗೆ ಯಾವುದೇ ನಿವೇಶನ ದೊರೆತಿಲ್ಲ. ಸರಕಾರಿ ಜಾಗ ಗುರುತಿಸುವಿಕೆ ಆಗಿ ಸರ್ವೇ ಕಾರ್ಯ ನಡೆದರೂ ಫಲಾನುಭವಿಗಳಿಗೆ ದೊರೆತಿಲ್ಲ. ಹಲವು ಮನೆಗಳಿಗೆ ವಿತರಿಸುವ ನೀರಿನ ಕೊಳವೆಬಾವಿ ಸಮೀಪವೇ ಮತ್ತೊಂದು ಕೊಳವೆ ಬಾವಿಯನ್ನು ಕೊರೆಯಲಾಗಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುಮತಿ ನೀಡಿರುವುದು ತಪ್ಪು. ಅಲ್ಲದೆ ಕೊಳವೆ ಬಾವಿ ಕುರಿತ ಮಾಹಿತಿ ದೊರೆತಿಲ್ಲ ಅನ್ನುವ ಆರೋಪ ಗ್ರಾಮಸ್ಥರೋರ್ವರಿಂದ ಕೇಳಿಬಂತು. ಕಳವು ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಹಳೆ ಸೇತುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ಐದು ದಿನಗಳ ಕಾಲ ನೇತ್ರಾವತಿಯ ನೂತನ ಸೇತುವೆಯನ್ನು ಲೋಡ್ ಟೆಸ್ಟಿಂಗ್‍ಗಾಗಿ ವಾಹನ ಸಂಚಾರಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಹೆದ್ದಾರಿ ಕಾಮಗಾರಿ ವಹಿಸಿರುವ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಹೆದ್ದಾರಿಯ ಹಳೆ ಸೇತುವೆಯಲ್ಲಿ ಮುಂದಿನ ಐದು ದಿನಗಳ ಕಾಲ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಐದು ದಿನಗಳೊಳಗಾಗಿ ನೂತನ ಸೇತುವೆಯ ಲೋಡ್ ಟೆಸ್ಟಿಂಗ್ ಕಾರ್ಯವನ್ನು ಮುಗಿಸಲಾಗುವುದು ಬಳಿಕ ವಾಹನ ಸಂಚಾರಕ್ಕೆ ತೆರವುಗೊಳಿಸಲಾಗುವುದು. ಈ ಸಂದರ್ಭದಲ್ಲಿ ವಾಹನಗಳು ಅಡ್ಡಾದಿಡ್ಡಿ ಚಲಿಸದೆ 30 ಕಿ.ಮೀ. ವೇಗ ಮಿತಿಯಲ್ಲಿ ಚಲಿಸಿದರೆ ಹೆದ್ದಾರಿಯಲ್ಲಿ ಸುಗಮ ಸಂಚಾರ ನಡೆಸಬಹುದು ಎಂದು ಹೆದ್ದಾರಿ ನಿರ್ಮಾಣದ ಕಾರ್ಯ ನಡೆಸುತ್ತಿರುವ ಸಂಸ್ಥೆಯ ಮುಖ್ಯಸ್ಥರಾದ ದಿನಕರ್ ತಿಳಿಸಿದ್ದಾರೆ.

