ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕುಂಪಲ: ಕುಂಪಲ ಕೇಸರಿ ಮಿತ್ರವೃಂದ ಮತ್ತು ಕೇಸರಿ ಮಾತೃ ಮಂಡಳಿಯ ವತಿಯಿಂದ ಆಟಿ ಸಮ್ಮನ ಮತ್ತು ಆಟಿದ ವನಸ್ ತೆನಸ್ ಕಾರ್ಯಕ್ರಮ ಜು. 24ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕೇಸರಿ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಮೇಶ್ ಗಾಂಬೀರ್ ಬಲ್ಯ ಬಾಳಿಕೆ ಕೃಷಿಕೆರೆ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬು ಶ್ರೀ ಶಾಸ್ತ ಕಿನ್ಯಾ ವಹಿಸಲಿದ್ದು , ಹೊಸದಿಗಂತ ಪತ್ರಿಕೆಯ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ತುಳು ಮದಿಪು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಮಹಾ ಮಂಡಲದ ಉಪಾಧ್ಯಕ್ಷ ಮಯೂರ್ ಉಳ್ಳಾಲ್, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ್ ಪೈ, ಕೇಸರಿ ಮಾತೃಮಂಡಳಿ ಗೌರವ ಸಲಹೆಗಾರರಾದ ಜಯಲಕ್ಷ್ಮೀ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೋಳಿಯಾರ್: ಬಲಿಷ್ಠ ರಾಷ್ಟ್ರವನ್ನು ಕಟ್ಟುವ ಜನರ ಕನಸ್ಸನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ನನಸು ಮಾಡುತ್ತಿದ್ದು, ದೇಶದ ಅಭಿವೃದ್ಧಿಯ ಜೊತೆಗೆ ಅಂತರಾಷ್ಟ್ರೀಯ ಸಂಬಂಧಗಳನ್ನು ಬೆಳೆಸುವ ಮೂಲಕ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸುತ್ತಿದ್ದಾರೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದರು. ಅವರು ಬೋಳಿಯಾರ್‍ನಲ್ಲಿ ಭಾನುವಾರ ನಡೆದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಿಕಾಸ ಪರ್ವ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆಯವರು ಸಭೆಯೊಂದರಲ್ಲಿ ಮೂಢನಂಬಿಕೆಯ ಹೆಸರಿನಲ್ಲಿ ನರಬಲಿ ನಡೆಯುತ್ತಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಸರಕಾರ ನರಬಲಿಯ ಮೂಲಕ ರಾಜ್ಯವನ್ನು ಹದಗೆಡಿಸುತ್ತಿದೆ. ಜಪಾನ್‍ಗೆ ಭಗವದ್ಗೀತೆಯ ಚಿಂತನೆ ಹಾಗೂ ಅರಬ್ ರಾಷ್ಟ್ರದಲ್ಲಿ ದೇವಸ್ಥಾನ ಕಟ್ಟುವ ಮೂಲಕ ವಿದೇಶಗಳಲ್ಲಿ ದೇಶದ ಸಂಸ್ಕøತಿ ಹಾಗೂ ಸಂಬಂಧವನ್ನು ಬೆಸೆಯುವಂತೆ ಮಾಡಿದ್ದಾರೆ. ಆದ್ದರಿಂದ ಪಕ್ಷದ ಸಾಧನೆಯಿಂದ ದೇಶ ಬೆಳೆಯಬೇಕು ಎನ್ನುವುದೇ ಬಿಜೆಪಿಯ ಗುರಿ ಎಂದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ ಮಂಗಳೂರು ವಿಧಾನಸಭಾ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಜಿಲ್ಲೆಯ ಸಂಸ್ಕøತಿಯನ್ನು ಉಳಿಸಲು ಹಾಗೂ ಬೆಳೆಸಲು ಆಟಿದ ಗಮ್ಮತ್ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ವಿದೇಶಿಯರು ತುಳುನಾಡಿನ ಕಲೆಯನ್ನು ಮೆಚ್ಚಿ ಅದರ ಕುರಿತು ಅಧ್ಯಯನ ನಡೆಸುವುದರಿಂದ ಕಲೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯ ಇದೆ ಎಂದು ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಎನ. ಆರ್. ಉಮೇಶ್ ಅಭಿಪ್ರಾಯಪಟ್ಟರು. ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವ ಮತ್ತು `ಆಟಿದ ಗಮ್ಮತ್ ‘ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ ಸಂಸ್ಕøತಿ ಬೇರೆಲ್ಲೂ ಇಲ್ಲ. ಆದರೆ ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಂಸ್ಕøತಿ ಉಳಿದಿದೆ. ಇದನ್ನು ಎಲ್ಲಾ ಭಾಗದ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡುವುದರಿಂದ ಕಲೆಗಳನ್ನು ನಡೆಸಿಕೊಂಡು ಹೋಗುವ ಚಿಂತನೆ ಎಲ್ಲರೂ ಮಾಡಬೇಕಿದೆ. ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಗಳು ಶಾಂತಿಯನ್ನು ಕಾಪಾಡುವುದರಿಂದ ಎಲ್ಲೆಡೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು. ಕಿಂಡಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಬಹು ನಿರೀಕ್ಷೆಯ ‘ದಬಕ್ ದಬಾ ಐಸಾ’ ಸಿನಿಮಾವು ಆಗಸ್ಟ್ 5ರಂದು ತೆರೆ ಕಾಣಲಿದ್ದು, ಕೆಲವು ಸಮಯದಿಂದ ಮಂಕು ಬಡಿದಂತಿರುವ ಕೋಸ್ಟಲ್‍ವುಡ್‍ನಲ್ಲಿ ಮತ್ತೆ ಹೊಸ ಸಂಚಲನ ಮೂಡಿಸಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾವು ಮತ್ತೊಂದು ಹೊಸ ದಾಖಲೆಯತ್ತ ತುಳು ಚಿತ್ರರಂಗವನ್ನು ಕೊಂಡೊಯ್ಯಲು ಸಮರ್ಥವಿರುವ ಚಿತ್ರವಾಗಿದೆ. ಜಯಕಿರಣ ಫಿಲಂಸ್‍ನಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವು ತನ್ನ ಹಿರಿಯ ಸೋದರ ಚಾಲಿಪೆÇೀಲಿಲು ಅನ್ನು ಹಿಂದಿಕ್ಕುವ ರೀತಿಯಲ್ಲಿ ಮೂಡಿ ಬಂದಿದೆ. ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ದೇಶನವಿರುವ ‘ದಬಕ್ ದಬ ಐಸಾ’ವು ಸಂಪೂರ್ಣ ಹಾಸ್ಯಮಯ ಹಾಗೂ ಉತ್ತಮ ಸಾಮಾಜಿಕ ಸಂದೇಶವಿರುವ ಚಿತ್ರವಾಗಿದ್ದು, ಕುಟುಂಬ ಸಮೇತ ವೀಕ್ಷಿಸುವಂಥ ಸಿನಿಮಾ ಆಗಿದೆ. ತುಳು ಚಿತ್ರರಂಗದಲ್ಲೇ 511 ದಿನಗಳ ಪ್ರದರ್ಶನ ಕಾಣುವ ಮೂಲಕ ಒಂದು ಅದ್ಭುತ ದಾಖಲೆ ಬರೆದಿರುವ ‘ಚಾಲಿಪೆÇೀಲಿಲು’ ತಂಡದ ಹೆಚ್ಚಿನೆಲ್ಲ ಕಲಾವಿದರು ಈ ಚಿತ್ರದಲ್ಲೂ ಇದ್ದಾರೆ. ಉತ್ಪಲ್ ನಾಯನಾರ್ ಅವರ ಕೆಮರಾ ಕೈಚಳಕ ‘ದಬಕ್ ದಬಾ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಯುವಕನೋರ್ವನ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಹಾಡಹಗಲೇ ನಡೆದಿದ್ದು, ಮೂವರ ತಂಡದಿಂದ ಕೃತ್ಯ ನಡೆದು ಆರೋಪಿಯೋರ್ವನ ತಂದೆಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಳೇಕಲ ನಿವಾಸಿ ನಾಸೀರ್ ಎಂಬವರ ಪುತ್ರ ಮಹಮ್ಮದ್ ಖಮಾಲುದ್ದೀನ್ (25) ಕೊಲೆ ಯತ್ನಕ್ಕೆ ಒಳಗಾದವರು. ಮಾಸ್ತಿಕಟ್ಟೆಯ ಬೀಫ್ ಸ್ಟಾಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಉಳ್ಳಾಲ ನಿವಾಸಿಗಳಾದ ಅರ್ಫಾನ್, ಮಿತ್ತ ನಿಸಾರ್ ಹಾಗೂ ಜಾಫರ್ ಎಂಬವರ ತಂಡ ಏಕಾಏಕಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿತ್ತು. ಬಳಿಕ ಖಮಾಲುದ್ದೀನ್ ಅವರಿಗೆ ಚೂರಿ, ಸೋಡಾ ಬಾಟಲಿ ಹಾಗೂ ರಾಡಿನಿಂದ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಖಮಾಲುದ್ದೀನ್ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳ ಹಿಂದೆ ದರೋಡೆ ನಡೆಸಿದ್ದ ತಂಡ : ರಂಝಾನ್ ಉಪವಾಸದ ಸಂದರ್ಭ ಅರ್ಫಾನ್, ನಿಸಾರ್, ಜಾಫರ್ ಸೇರಿದಂತೆ ಮುಖ್ತಾರ್ ಎಂಬವರ ತಂಡ ಇದೇ ಮಾಸ್ತಿಕಟ್ಟೆಯ ಬೀಫ್ ಸ್ಟಾಲಿಗೆ ನುಗ್ಗಿ ಖಮಾಲುದ್ದೀನ್ ಅವರಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಚಿಕ್ಕಮಗಳೂರು ಡಿವೈಎಸ್‍ಪಿ ಕಲ್ಲಪ್ಪ ಆತ್ಮಹತ್ಯೆ, ಬಂಟ್ವಾಳದ ಹರೀಶ್ ಪೂಜಾರಿ ಕೊಲೆ , ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದವರು ನೇರ ಭಾಗಿಯಾಗಿದ್ದು, ಇದರ ವಿರುದ್ಧ ಪ್ರತಿಭಟಿಸದ ಬಿಜೆಪಿ ಪಕ್ಷದವರಿಗೆ ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಭಟಿಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಹೇಳಿದ್ದಾರೆ. ತೊಕ್ಕೊಟ್ಟು ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಅವರು ಹೇಳಿದ್ದಾರೆ. ಎಂ.ಕೆ.ಗಣಪತಿ ಉಳ್ಳಾಲದಲ್ಲಿ ಎಸ್.ಐ ಆಗಿ ಜಿಲ್ಲೆಯಾದ್ಯಂತ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಿದವರು. ಮುಖ್ಯಮಂತ್ರಿಗಳು ಪ್ರಕರಣವನ್ನು ಶೀಘ್ರವೇ ಸಿಓಡಿಗೆ ವಹಿಸಬೇಕು. ಆದರೆ ಅವರ ಅಂತಿಮ ಸಂಸ್ಕಾರದ ವೇಳೆ ಮೃತದೇಹವನ್ನು ಪತ್ನಿ ಹಾಗೂ ಕುಟುಂಬಸ್ಥರ ಮುಂದೆಯೇ ಎರಡು ಗಂಟೆಗಳ ಕಾಲ ರಸ್ತೆ ಬದಿಯಲ್ಲಿಟ್ಟು ಜವಾಬ್ದಾರಿಯುತ ಶಾಸಕರ ಸಮ್ಮುಖದಲ್ಲಿ ಇರಿಸಿ ಪ್ರತಿಭಟಿಸಿರುವುದು ಸಮಂಜಸವಲ್ಲ. ಸಿಬಿಐ ಗೆ ಕೊಟ್ಟಂತಹ ಪ್ರಕರಣಗಳು ಎಲ್ಲವೂ ಹಳ್ಳ ಹಿಡಿದಿರುವುದರಿಂದ ಗಣಪತಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ಕ್ಷೇತ್ರದ 25 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಇನೋಳಿ ದೇವಂದಬೆಟ್ಟುವಿನ ಶ್ರೀ ಸೋಮನಾಥ ದೇವಸ್ಥಾನಕ್ಕೆ ಹೋಗುವ ಕಾಂಕ್ರೀಟಿಕರಣ ರಸ್ತೆ ಹಾಗೂ ಇನೋಳಿ ಸಂಪರ್ಕಿಸುವ ರಸ್ತೆಯ ಡಾಮರೀಕರಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಜನರ ಆರೋಗ್ಯ ಉತ್ತಮವಾಗಿ ಇಡುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಸರಕಾರ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ 25 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗುವುದು. ಅತೀ ಶೀಘ್ರದಲ್ಲೇ ಪಾವೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಘಟಕವನ್ನು ಸ್ಥಾಪಿಸಿ 20 ಲೀ. ನೀರಿಗೆ 10 ರೂ. ನಂತೆ ಪಡೆದುಕೊಳ್ಳಲಾಗುವುದು. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬಹುದು ಎಂದ ಅವರು ಮಂಗಳೂರು ಕ್ಷೇತ್ರಾದ್ಯಂತ ಬಹುತೇಕ ರಸ್ತೆಗಳನ್ನು ವಿವಿಧ ಯೋಜನೆಗಳಡಿ ಬರುವ ಅನುದಾನಗಳ ಮೂಲಕ ಕಾಂಕ್ರೀಟಿಕರಣ ಹಾಗೂ ಡಾಮರೀಕರಣವನ್ನು ಮಾಡಲಾಗಿದೆ. ಬಹಳ ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಇನೋಳಿ ದೇವಸ್ಥಾನದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾವೂರು: ಪರಿಸರ ಸ್ವಚ್ಛತೆ, ಶಿಕ್ಷಣ ಜತೆಗೆ ಸಮಾಜಮುಖಿ ಕೆಲಸಗಳಲ್ಲಿ ಹಾಗೂ ವ್ಯಕ್ತಿತ್ವಗಳನ್ನು ರೂಪಿಸುವ ಮೂಲಕ ಪಾವೂರು ಗ್ರಾಮ ಇತರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಪಾವೂರು ಗ್ರಾಮ ಪಂಚಾಯತ್ ನೂತನ ಆಡಳಿತ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಿಂದ ವರ್ಷ ತುಂಬಿದ ಹರ್ಷ, ಕೋಟಿ ವೃಕ್ಷ (ಮಗುವಿಗೊಂದು ಗಿಡ) ಹಾಗೂ ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪಾವೂರು ಗ್ರಾಮದಲ್ಲಿ ಸಮಾಜಮುಖಿ ವ್ಯಕ್ತಿತ್ವಗಳನ್ನು ಒಟ್ಟುಗೂಡಿಸುವ ಬೆಳವಣಿಗೆ ಶ್ಲಾಘನೀಯ. ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ರೇಷನ್ನಿನಲ್ಲಿ ರಾಜ್ಯದಲ್ಲಿ 17 ಲಕ್ಷ ಬಾಕಿ ಉಳಿದಿದ್ದರೆ, ಜಿಲ್ಲೆಯಲ್ಲಿ 11,000 ಬಾಕಿ ಇದೆ. ಇದನ್ನು ಸರಿಪಡಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಪಂಚಾಯತ್ ಗಳಿಗೆ ರೇಷನ್ ಮಾಡುವ ಅಧಿಕಾರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಈ ಸಂದರ್ಭ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಪ್ರತಿಯೊಂದು ಧರ್ಮವೂ ಸಮಾಜದಲ್ಲಿ ಶಾಂತಿ ಸಾಮರಸ್ಯ ಬಯಸುತ್ತದೆ. ಸ್ವಧರ್ಮವನ್ನು ಪ್ರೀತಿಸುತ್ತಾ ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಸನ್ನಡತೆಯ ಬಾಳು ಬಾಳುತ್ತಾ ಇತರರಿಗೆ ಮಾದರಿಯಾಗಬೇಕು ಎಂದು ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಈದುಲ್ ಫಿತರ್ ಪ್ರಯುಕ್ತ ಬುಧವಾರ ಉಳ್ಳಾಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡಾಗ ಮಾತ್ರ ಇತರರ ಸಂಸ್ಕ ೃತಿ ಅರಿಯಲು ಸಾಧ್ಯವಾಗುತ್ತದೆ. ಆಚರಣೆಗಳು ನಂಬಿಕೆಗಳು ಇತರರಿಗೆ ಅರ್ಥೈಸಿಕೊಳ್ಳಲು ಸಾಧ್ಯ. ಇದರಿಂದ ಪರಸ್ಪರ ವೈಮನಸ್ಸು ಭಿನ್ನ ಅಭಿಪ್ರಾಯಗಳು ಮೂಡದು ಎಂದರು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಇಸ್ಲಾಂ ಒಂದು ಶ್ರೇಷ್ಠ ಧರ್ಮವಾಗಿದ್ದು ಅದರದ್ದೇ ಆದ ಧಾರ್ಮಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಧರ್ಮೀಯರನ್ನು ಮತಾಂತರ ಮಾಡುವ ಅಗತ್ಯ ಇಸ್ಲಾಂಗೆ ಇಲ್ಲ. ಹಾಗೆಯೇ ಧರ್ಮವಿರೋಧಿ ಕೃತ್ಯವಾದ ಭಯೋತ್ಪಾದನೆಗೆ ಇಸ್ಲಾಂ ಎಂದೂ ಪೆÇ್ರೀತ್ಸಾಹಿಸದು . ಯಾವುದೇ ಸಂಘಟನೆಗಳು ಅಲ್ಲಾಹುವಿನ ಭವನದಲ್ಲಿ ಬೇಡ. ಧಾರ್ಮಿಕ ಕಾರ್ಯಗಳು ಬಹಳ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಲ್ಲರಕೋಡಿ ಎಂಬಲ್ಲಿ ಸೋಮವಾರ ನಸುಕಿನ ಜಾವ ಭೂಕುಸಿತ ಉಂಟಾಗಿ, 15 ಅಡಿ ಆಳದ ಸುರಂಗ ಪತ್ತೆಯಾಗಿ ಮನೆಯೊಂದು ಅಪಾಯದಂಚಿನಲ್ಲಿ ಸಿಲುಕಿದೆ. ಕೊಣಾಜೆ ಕಲ್ಲರಕೋಡಿ ನಿವಾಸಿ ಸದಾಶಿವ ದೇವಾಡಿಗ ಎಂಬವರ ಮನೆಯ ಹಿಂಭಾಗದಲ್ಲಿ ಭೂಕುಸಿತ ಉಂಟಾಗಿ 15 ಅಡಿ ಆಳದ ಸುರಂಗ ಪತ್ತೆಯಾಗಿದೆ. ಸೋಮವಾರ ನಸುಕಿನ ಜಾವ ಮನೆ ಸಮೀಪದ ಆಗ್ನೇಸ್ ಲೋಬೊ ಎಂಬವರಿಗೆ ದೊಡ್ಡ ಸದ್ದು ಕೇಳಿಬಂದಿತ್ತು. ಮನೆಯ ಸುತ್ತ ಹುಡುಕಿ ಪತ್ತೆಯಾಗದೇ , ಮನೆ ತಾರಸಿಗೆ ಹೋಗಿ ನೋಡಿದಾಗ ಸಮೀಪದ ಸದಾಶಿವ ಅವರ ಮನೆ ಹಿಂಭಾಗದ ಅಡಿಭಾಗದಲ್ಲಿ 15 ಅಡಿ ಆಳದ ಸುರಂಗ ಪತ್ತೆಯಾಗಿತ್ತು. ಕೂಡಲೇ ಅವರು ಸದಾಶಿವ ಅವರ ಪತ್ನಿ ಪದ್ಮಾವತಿ ಅವರಿಗೆ ಮಾಹಿತಿ ನೀಡಿದ್ದರು. ಜೀವಾಪಾಯದಿಂದ ಪಾರು: ಮನೆಯ ಹಿಂಭಾಗದಲ್ಲಿ ಬಟ್ಟೆ ಒಗೆಯುವ ಕಲ್ಲು ಹಾಗೂ ಪಾತ್ರೆ ತೊಳೆಯುವ ಜಾಗವಿತ್ತು. ಇದರಲ್ಲಿ ಎಂದಿನಂತೆ ಬೆಳಗ್ಗಿನ ಜಾವ ಪದ್ಮಾವತಿ ಅವರು ಕೆಲಸ ಮಾಡುತ್ತಿರುತ್ತಾರೆ, ಆದರೆ ಸೋಮವಾರ…

