ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಉಚ್ಚಿಲ ಪ್ರದೇಶಕ್ಕೆ ಶಾಶ್ವತ ಬ್ರೇಕ್‍ವಾಟರ್ ಕಾಮಗಾರಿ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ವರ್ಷದಲ್ಲಿ ಅಲ್ಲಿಯೂ ಕಾಮಗಾರಿಯನ್ನು ಆರಂಭಿಸಲಾಗುವುದು. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ನಾಗರಿಕ ಮತ್ತು ಆಹಾರ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಉಚ್ಚಿಲದ ನ್ಯೂಉಚ್ಚಿಲ ಹಾಗೂ ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ. ಕೈಕೋ, ಹಿಲೇರಿಯಾನಗರ ಕಡಲ್ಕೊರೆತ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. 1983 ರಿಂದ ಉಳ್ಳಾಲದ ಕೋಟೆಪುರ, ಕೈಕೋ, ಮೊಗವೀರಪಟ್ನದಲ್ಲಿ ಕಡಲ್ಕೊರೆತ ಸಂಭವಿಸುತ್ತಲೇ ಬಂದಿದೆ. ಅದಕ್ಕಾಗಿ ಗಾರ್ಬನ್ ಬಾಕ್ಸ್, ಬ್ಲಾಕ್ ಹಾಕುವುದು, ಮಣ್ಣು ಹಾಕುವುದು, ಗನೀ ಬ್ಯಾಗ್‍ನಂತಹ ತಾತ್ಕಾಲಿಕ ಪರಿಹಾರವನ್ನು ಸರಕಾರ ನಡೆಸುತ್ತಲೇ ಬಂದಿತ್ತು. ಆದರೆ ಇಲ್ಲಿನ ಸಮುದ್ರದ ಹೊಡೆತಕ್ಕೆ ಯಾವುದೇ ಪರಿಹಾರ ಫಲಕಾರಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಎಡಿಬಿ ಯೋಜನೆಯಡಿ ಶಾಶ್ವತ ತಡೆಗೋಡೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಉಳ್ಳಾಲದಲ್ಲಿ ಮಾತ್ರ ಇದ್ದ ಕೊರೆತ ಸದ್ಯ ಸೋಮೇಶ್ವರದ ಉಚ್ಚಿಲದಲ್ಲಿಯೂ ಆರಂಭವಾಗಿದೆ. ಇಲ್ಲಿ ಬಿದ್ದಿರುವ, ಬೀಳುವ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕುಡಿತ ಜೀವಕ್ಕೇ ಹಾಳು, ಕುಡಿತ ಹೆಚ್ಚಾದಲ್ಲಿ ಮಣ್ಣು ಪಾಲಾಗುವುದು ಅಂತೂ ಗ್ಯಾರಂಟಿ . ತೊಕ್ಕೊಟ್ಟು ಮಾಯಾ ಬಾರಿನ ಎದುರುಗಡೆ ಶುಕ್ರವಾರ ತಡರಾತ್ರಿ ನಡೆದ ಘಟನೆ ಇಂತಹದ್ದೊಂದು ಮಾತನ್ನು ನಿಜವಾಗಿಸಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ಮಣ್ಣಿನಲ್ಲಿ ಮುಳುಗಿದ್ದು ಮದ್ಯವ್ಯಸನಿಗಳಲ್ಲ, ಬದಲಾಗಿ ಅದನ್ನು ಸೇವಿಸಲು ಬಂದಿದ್ದ ಮೂರು ಗ್ರಾಹಕರ ದ್ವಿಚಕ್ರ ವಾಹನಗಳು. \ ಬಾಂಬ್ ಸ್ಫೋಟದ ಸದ್ದಿನಂತೆ ಇಡೀ ಬಾರಿನೊಳಗಿದ್ದ ಗ್ರಾಹಕರು, ಮಾಲೀಕರು, ಸಿಬ್ಬಂದಿ ಹಾಗೂ ಸ್ಥಳೀಯರನ್ನು ಕ್ಷಣಾರ್ಧದಲ್ಲಿ ದಂಗಾಗಿಸಿತ್ತು. ಇನ್ನೇನು ಹೊರಬಂದು ನೋಡುವಷ್ಟರಲ್ಲಿ ನೋಡನೋಡುತ್ತಿದ್ದಂತೆ ಬಾರಿನ ಹೊರ ಆವರಣದಲ್ಲಿ ನೂತನವಾಗಿ ಅಳವಡಿಸಿದ್ದ ಇಂಟರ್‍ಲಾಕ್‍ಗಳು ಭೂಮಿಯೊಳಗೆ ಮರೆಯಾಗುತ್ತಾ ಹೋದಂತೆ ಅಲ್ಲಿದ್ದ ದ್ವಿಚಕ್ರ ವಾಹನಗಳು ಮಣ್ಣಿನೊಳಗೆ ಹೂತು ಹೋಗುತ್ತಲೇ ಇತ್ತು. ಏನೋ ಕುಡಿತ ಜಾಸ್ತಿಯಾದರೆ ಹೀಗೆಲ್ಲಾ ಆಗ್ತದೆ. ಅನ್ನುತ್ತಾ ಬಾರಿನಲ್ಲಿದ್ದ ಗ್ರಾಹಕರು ಕಣ್ಣಿನ ರೆಪ್ಪೆಗಳನ್ನು ಮತ್ತೆ ಮತ್ತೆ ಸವರಿ ನೋಡಿದರೆ ಘಟನೆ ನಡೆಯುತ್ತಿರುವುದು ಅಕ್ಷರಶ: ನಿಜವಾಯಿತು. ಅಷ್ಟರಲ್ಲಿ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಹೊಸತಾಗಿ ಖರೀದಿಸಿದ ಎಂಟೈಸರ್ ಬೈಕ್,…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ವಿಕೇಂದ್ರೀಕರಣ ನೀತಿಯಿಂದ ಉದ್ದಿಮೆಗಳು ಕ್ಷೀನಗೊಳ್ಳುತ್ತಿದ್ದು, ರಾಜ್ಯದಲ್ಲಿ ಇದ್ದಂತಹ 32 ಜವಳಿ ಕಾರ್ಖಾನೆಗಳಲ್ಲಿ ಕೇವಲ ದಾವಣಗೆರೆಯ ಗೋಕಾಕ ಜವಳಿ ಕಾರ್ಖಾನೆ ಮಾತ್ರ ಉಳಿದಿದೆ. ಇದರಿಂದ ಸಾವಿರಾರು ಮಂದಿ ಕಾರ್ಮಿಕರು ಬೀದಿಪಾಲಾದರೂ, ಅವರಿಗೆ ಆಶ್ರಯವಾಗಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜಕೀಯದ ಆಟದಲ್ಲಿ ನಿರತವಾಗಿದೆ ಎಂದು ಸಿಐಟಿಯುನ ರಾಜ್ಯ ಅಧ್ಯಕ್ಷ ವಿ.ಜೆ.ಕೆ.ನಾಯರ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಕಾಂ. ಪೂವಪ್ಪ ಸಾಲ್ಯಾನ್ ವೇದಿಕೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಇದರ ಆಶ್ರಯದಲ್ಲಿ ಮಂಗಳವಾರ ಜರಗಿದ 15 ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ದೇಶಾದ್ಯಂತ ಪ್ರಖ್ಯಾತ ಕಂಪೆನಿಯವರು ಬೇವಂಡಿ ಪ್ರದೇಶದಲ್ಲಿ ಮನೆಗಳಲ್ಲಿಯೇ ಜವಳಿ ಕಾರ್ಖಾನೆಗಳನ್ನು ತೆರೆದು ವ್ಯವಹಾರ ಆರಂಭಿಸಿದ್ದಾರೆ. ಕೈಗಾರಿಕೆಗಳು ಅಭಿವೃದ್ಧಿಯಾಗುವ ಕುರಿತು ಸರಕಾರಗಳು ಕಾಳಜಿ ವಹಿಸದೇ ಇದ್ದಲ್ಲಿ ಕಾರ್ಮಿಕರು ಬದುಕಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸೆ.2 ರಂದು ನಡೆಯಲಿರುವ ಹೋರಾಟ ರಾಜ್ಯಕ್ಕೇ ಮಾದರಿಯಾಗಬೇಕು. 10,500 ರೂ…
ಉಳ್ಳಾಲ: ರೈಲ್ವೇ ಹಳಿಯಲ್ಲಿ ಯುವಕನೋರ್ವ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದ್ದು, ಸ್ಥಳೀಯರು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದೊಂದು ಕೊಲೆ ಎಂದು ಮೃತನ ಸಹೋದರಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲ್ಯ ಕನೀರುತೋಟ ನಿವಾಸಿ ನಿತೇಶ್ ಶೆಟ್ಟಿ (27) ನಿಗೂಢವಾಗಿ ಸಾವನ್ನಿಪ್ಪಿದವರು. ಭಾನುವಾರ ಮಧ್ಯಾಹ್ನ ವೇಳೆ ನಿತೇಶ್ ತೊಕ್ಕೊಟ್ಟು ಬಾರೊಂದರ ಹಿಂದುಗಡೆಯ ರೈಲ್ವೇ ಹಳಿಯಲ್ಲಿ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಕಂಡು 108 ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ನಿತೇಶ್ ಸಂಜೆ ವೇಳೆ ಕೊನೆಯುಸಿರೆಳೆದಿದ್ದರು. ಅಲ್ಲಲ್ಲಿ ಗಾಯದ ಗುರುತುಗಳು: ಆಸ್ಪತ್ರೆಯಲ್ಲಿ ನಿತೇಶ್ ಮಾತನಾಡದೇ ಕೈಕಾಲು ಅಲ್ಲಾಡಿಸುತ್ತಿದ್ದರು. ಬಲಗೈ ಮುರಿತಕ್ಕೊಳಗಾದ ಸ್ಥಿತಿಯಲ್ಲಿದ್ದರೆ ಕೆಳ ತುಟಿ, ಬಲ ಪಕ್ಕೆಯ ಬದಿಯಲ್ಲಿ, ಕಾಲುಗಳಲ್ಲಿ ಗಂಭೀರ ಗಾಯಗಳು ಹಾಗೂ ದೇಹದ ಅಲ್ಲಲ್ಲಿ ತರಚಿದ ಗಾಯಗಳಿತ್ತು. ಮೂವರ ಹೆಸರು ಹೇಳಿದ್ದ: ಅರೆ ಪ್ರಜ್ಞೆ ಸ್ಥಿತಿಯಲ್ಲಿದ್ದ ನಿತೇಶನನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಅಲ್ಲಿ…
ತೊಕ್ಕೊಟ್ಟು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧಿ ಖರೀದಿಯಲ್ಲಿ 1,463 ಕೋಟಿ ರೂ ಔಷಧ ಹಗರಣದಲ್ಲಿ ಭಾಗಿಯಾಗಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಹಗರಣಗಳಲ್ಲಿ ನಂ.1 ಅನಿಸಿಕೊಂಡಿದ್ದು, ಶೀಘ್ರವೇ ರಾಜೀನಾಮೆಗೆ ಒತ್ತಾಯಿಸಿ ಮೇ.23 ರಂದು ಬಿಜೆಪಿ ಮಂಗಳೂರು ವಿಧಾನಸಭೆಯ ವತಿಯಿಂದ ತೊಕ್ಕೊಟ್ಟು ಬಸ್ ಇಲ್ದಾಣದಲ್ಲಿ ಸಂಜೆ 4.00 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಹೇಳಿದ್ದಾರೆ. ತೊಕ್ಕೊಟ್ಟುವಿನಲ್ಲಿ ಭಾನುವಾರ ನಡೆಸಿದ ಸುದ್ಧಿಗೋಷ್ಟಿಂiÀiಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನಂ.1 ಎಂದು ಹೇಳಿಕೊಳ್ಳುತ್ತಿರುವ ಸಚಿವ ಖಾದರ್ ಇದೀಗ ಹಗರಣಗಳಲ್ಲಿಯೂ ನಂ.1 ಆಗಿದ್ದಾರೆ. ಸಾವಿರಾರು ಕೋಟಿ ರೂ ಹಗರಣ ಮಾಡುವ ಮೂಲಕ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ. 2015-16ರ ಸಾಲಿನಲ್ಲಿ ಕೇಂದ್ರ ಸರಕಾರ ಎನ್.ಹೆಚ್.ಎಂ ಅಭಿಯಾನದಡಿ ರಾಜ್ಯಕ್ಕೆ ನೀಡಿದ 1,463 ಕೋಟಿ ರೂ.ಗಳನ್ನು ಸದ್ಬಳಕೆ ಮಾಡದೆ ದುರ್¨ಳಕೆ ಮಾಡುವ ಮೂಲಕ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಔಷಧಿಯ ಗುಣಮಟ್ಟದಲ್ಲೂ ರಾಜಿ ಮಾಡಿಕೊಂಡು ನಕಲಿ ಕಂಪೆನಿಗಳಿಂದ ಹೆಚ್ಚು ಕ್ರಯಕ್ಕೆ ಕಳಪೆ ಔಷಧಿ…
ಕೊಲ್ಯ: ಕೊಲ್ಯ ಸೈಂಟ್ ಜೋಸೆಫ್ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದರ 2015-16 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡಾ 90% ಫಲಿತಾಂಶ ಪಡೆದುಕೊಂಡಿದ್ದಾರೆ. ಇವರಲ್ಲಿ ಅನೀಶ್ ಭಟ್ (600), ನಿಶಾ ಪಿ.ನಾಯಕ್(597), ಅಭಿಷೇಕ್ ಶರ್ಮಾ(588), ಮಾಳವಿಕ ಪಿ.(583)ಎಸ್.ಡಿ.ಪ್ರಜ್ವಲ್(579),ರಕ್ಷಿತಾ(579), ತನ್ವಿ.ಜೆ.ಕೋಟೆಕಾರು(576),ಪ್ರಿಯಾ ಬಿ.ಕೆ(558) ಅಂಕ ಪಡೆದುಕೊಂಡಿದ್ದಾರೆ.
ಮೊಂಟೆಪದವು: ಉಮ್ರಾ ಯಾತ್ರೆಗೆ ತೆರಳಿ ವಾಪಸ್ಸಾಗುತ್ತಿದ್ದ ಮೊಂಟೆಪದವು ಮೂಲದ ತಾಯಿ ಹಾಗೂ ಮಗ ಝುಬೈಲ್ ನ ಖಸೀಂ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಅದೇ ಕಾರಿನಲ್ಲಿದ್ದ ಮೃತ ಯುವಕನ ತಂದೆ ಹಾಗೂ ಪತ್ನಿ ಗಾಯಗೊಂಡು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಂಟೆಪದವು ನಿವಾಸಿ ಅಬ್ಬಾಸ್ (29) ಹಾಗೂ ಅವರ ತಾಯಿ ಖತೀಜಮ್ಮ (50) ಮೃತಪಟ್ಟವರು. ಅದೇ ಕಾರಿನಲ್ಲಿದ್ದ ತಂದೆ ಮಹಮ್ಮದ್(60) ಹಾಗೂ ಪತ್ನಿ ಮೈನಾಝ್ (20) ಗಾಯಗೊಂಡು ಖಸೀಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌದಿ ಅರೆಬಿಯಾದ ಝುಬೈಲ್ ನಲ್ಲಿ ಕನ್ ಸ್ಟ್ರಕ್ಷನ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ಬಾಸ್ ಅವರು ಕಳೆದ 15 ದಿನಗಳ ಹಿಂದೆ ಪತ್ನಿ ಹಾಗೂ ಹೆತ್ತವರನ್ನು ಉಮ್ರಾ ಯಾತ್ರೆಗೆ ತೆರಳಲು ಅಲ್ಲಿಗೆ ಕರೆಯಿಸಿದ್ದರು. ಅಲ್ಲಿಂದ ಉಮ್ರಾ ಯಾತ್ರೆಗೆ ಕೇರಳ ಮೂಲದ ಸ್ನೇಹಿತನ ಕುಟುಂಬದ ನಾಲ್ಕು ಮಂದಿ ಹಾಗೂ ಅಬ್ಬಾಸ್ ಕುಟುಂಬದ ನಾಲ್ಕು ಮಂದಿ ಕಾರಿನಲ್ಲಿ ತೆರಳಿದ್ದರು. ಭಾನುವಾರ ರಾತ್ರಿ ಉಮ್ರಾದಿಂದ ಮತ್ತೆ ವಾಸಸ್ಥಳ ಝುಬೈಲ್‍ಗೆ ಮರಳುತ್ತಿದ್ದಾಗ ತಡರಾತ್ರಿ…
ಬಬ್ಬುಕಟ್ಟೆ: ಪೆರ್ಮನ್ನೂರು ಬಬ್ಬುಕಟ್ಟೆಯ ಹಿರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದರ 2015-16 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡಾ 98.6 ಫಲಿತಾಂಶ ಪಡೆದುಕೊಂಡಿದ್ದಾರೆ. 72 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು,11 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ,50 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಫೈಝಾ ಸುಲ್ತಾನ (610), ಫಾತಿಮಾ ರುಖ್ಯಾನಾ (595), ಫಾತಿಮಾ ಸಫಾ ಅಬ್ಬಾ (595), ಫರೀದಾ ಜಾಸ್ಮಿನ್ (592), ಸಾರಾ ನಿಮ್ರಾ (585), ಆಯಿಷಾ ಅಫ್ರಾ ( 571)
ತೊಕ್ಕೊಟ್ಟು: ಎತ್ತಿನಹೊಳೆ ಯೋಜನೆ ಮೂಲಕ ಜಿಲ್ಲೆಯನ್ನು ಬರಡುಗೊಳಿಸುವ ರಾಜಕಾರಣಿಗಳಿಗೆ ಸದ್ಬುದ್ಧಿಯನ್ನು ನೀಡಲಿ ಎಂದು ಮೇ.19 ರಂದು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು ಎಂದು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಹೇಳಿದ್ದಾರೆ. ಅವರು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೇ.17,18,19 ರಂದು ನಡೆಯಲಿರುವ ಪ್ರಥಮ ವರ್ಷಾಚರಣೆ ಹಾಗೂ ಮಹಾಗಣಪತಿಯಾಗ, ಮಹಾರುದ್ರಯಾಗ, ಭಾಗ್ಯಸೂತ್ರಯಾಗ ಹಾಗೂ ಚಂಡಿಕಾಯಾಗದ ಕುರಿತು ತೊಕ್ಕೊಟ್ಟುವಿನಲ್ಲಿ ಸೋಮವಾರ ಕರೆದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು. ಶತಮಾನಗಳ ಇತಿಹಾಸ ಹೊಂದಿದ್ದ ಕ್ಷೇತ್ರ ದುರುಳರ ಆಕ್ರಮಣಕ್ಕೆ ಒಳಗಾಗಿ ನಾಶದ ಅಂಚಿನಲ್ಲಿತ್ತು. ಇದನ್ನು ಊರ ಪರವೂರ ಭಕ್ತಾಧಿಗಳ ಶ್ರಮದಾನದಿಂದ ಪುನರ್ ನಿರ್ಮಿಸಿ , ಕಳೆದ ವರ್ಷ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರಗಿತ್ತು. ಇದೀಗ ಪ್ರಥಮ ವರ್ಷಾಚರಣೆ ಪ್ರಯುಕ್ತ ಶ್ರೀದಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಮಹಾಗಣಪತಿಯಾಗ, ಮಹಾರುದ್ರಯಾಗ, ಭಾಗ್ಯಸೂತ್ರಯಾಗ , ಚಂಡಿಕಾಯಾಗ ಇನೋಳಿ ಶ್ರೀ ಸುಬ್ರಹ್ಮಣ್ಯ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ. ಜಿಲ್ಲೆಗೆ…
ಉಳ್ಳಾಲ: ಅಕ್ಷರವಂಚಿತ, ಅನ್ನವಂಚಿತ, ಆರೋಗ್ಯ ವಂಚಿತ ಮಹಿಳಾ ಸಮಾಜ ಇಂದು ನಿರ್ಮಾಣಗೊಂಡಿದ್ದು, ಈ ಬಗ್ಗೆ ಅಬ್ಬಕ್ಕ ಉತ್ಸವದ ವೇದಿಕೆಗಳಲ್ಲಿ ಚರ್ಚೆಗಳು ನಡೆದು ಅದರ ಕುರಿತ ವರದಿಯನ್ನು ಸರಕಾರದ ಮುಂದಿಡಬೇಕಿದೆ ಎಂದು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ವಿ. ಮಂಜುಳಾ ಮಾನಸ ಹೇಳಿದ್ದಾರೆ. ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯಲ್ಲಿ ನಡೆಯುತ್ತಿರುವ ರಾಣಿ ಅಬ್ಬಕ್ಕ ಉತ್ಸವ -2016ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರ ಹೆಸರಿನಲ್ಲಿ ಉತ್ಸವಗಳು ಮಾತ್ರ ಸೀಮಿತವಾಗಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡುವಂತಹ ಕೆಲಸ ಸರಕಾರದಿಂದ ಆಗಬೇಕಿದೆ. ಇದರಿಂದ ವೀರ ಮಹಿಳೆಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಸಮಾಜದ ಮುಖ್ಯ ವಾಹಿನಿಗಳಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಇದರಿಂದ ಹಿಂದಿನ ವೀರ ವನಿತೆಯರ ಇತಿಹಾಸ ಮರುಕಳಿಸುತ್ತಿಲ್ಲ. ಸಾಂಸ್ಕøತಿಕ ಹಿನ್ನೆಲೆಯ ದೇಶದಲ್ಲಿ ಗರ್ಭದಲ್ಲಿ ಹೆಣ್ಣು ಭ್ರೂಣವನ್ನು ಕೊಲ್ಲುವ ಸಂಸ್ಕಾರ ಬೆಳೆಯುತ್ತಿದ್ದರೆ, ಬೆಳೆದು ನಿಂತ ಮಹಿಳೆಯರ…

