ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಹಿತಕರ ಕೃತ್ಯ ಎಸಗುತ್ತಿರುವವರಿಗೆ ಭಯೋತ್ಪಾಧಕರ ನಂಟು ಇದೆ. ಕೂಡಲೇ ಅಂತಹ ಚಟುವಟಿಕೆಗಳ ಮಟ್ಟ ಹಾಕುವ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಬೇಕಿದೆ. ಇಲ್ಲವಾದಲ್ಲಿ ನ.15 ರ ಒಳಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಆಗ್ರಹಿಸಿದ್ದಾರೆ.
ಆರ್ ಎಸ್ ಎಸ್ ಕಾರ್ಯಕರ್ತರ ರಾಮಮೋಹನ್ ಕೊಲೆಯತ್ನ ದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಗೆ ಬಿಜೆಪಿ ಮುಖಂಡರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ ಸಂದರ್ಭ ಆಗ್ರಹ ವ್ಯಕ್ತವಾಯಿತು.
ಉಳ್ಳಾಲ, ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ, ಕೊಲೆಯತ್ನ ಹಾಗೂ ಚೂರಿ ಇರಿತ ಪ್ರಕರಣಗಳ ಆರೋಪಿಗಳ ಪತ್ತೆ ಈವರೆಗೂ ಆಗಿಲ್ಲ. ಹಿಂದು ಸಮುದಾಯದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ , ಪೊಲೀಸರು ಮಾತ್ರ ಆರೋಪಿಗಳ ಬಂಧನ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಇಲ್ಲಿ ನಡೆಯುವ ಕೃತ್ಯಗಳು ಭಯೋತ್ಪಾದಕರ ಚಟುವಟಿಕೆಗಳಂತೆ ಕಾಣುತ್ತಿವೆ. ಇಲ್ಲವಾದಲ್ಲಿ ದುಷ್ಕರ್ಮಿಗಳಿಗೆ ಭಯೋತ್ಪಾಧಕ ನಂಟು ಇರುವುದು ಖಂಡಿತ. ಮುಂದಿನ ದಿನಗಳಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದಲ್ಲಿ ಸುಮ್ಮನೆ ನಿಲ್ಲುವುದಿಲ್ಲ. ಅಶ್ರುವಾಯು, ಲಾಠಿಚಾರ್ಜ್ ಉಪಯೋಗಿಸುವ ಸಮಯ ಬರಹುದು. ಅದರ ಮೊದಲು ತಪ್ಪಿತಸ್ಥರ ಬಂಧನ ನಡೆಸಿದಲ್ಲಿ ಒಳಿತು ಎಂದು ಎಚ್ಚರಿಸಿದರು.
ಆರೋಪಿಗಳ ಪತ್ತೆಗೆ ಎಲ್ಲಾ ರೀತಿಯ ಸಹಕಾರ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ನೀಡಲು ಸಿದ್ಧರಿದ್ದೇವೆ. ರಾಜಕೀಯ ಒತ್ತಡಗಳಿದ್ದರೂ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿ ನ್ಯಾಯ ಒದಗಿಸಿ. ಮುಖಂಡರಾದ ನಮ್ಮನ್ನು ಕೇಳುವವರಿದ್ದಾರೆ. ತುರ್ತಾಗಿ ಕ್ರಮಕೈಗೊಳ್ಳಿ ಎಂದು ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ಚಂದ್ರಹಾಸ್ ಉಳ್ಳಾಲ್, ಜಿತೇಂದ್ರ ಕೊಟ್ಟಾರಿ, ಎಸಿಪಿ ಶೃತಿ, ಉಳ್ಳಾಲ ಹಾಗೂ ಕೊಣಾಜೆ ಠಾಣಾಧಿಕಾರಿಗಳಾದ ಗೋಪಿಕೃಷ್ಣ, ಅಶೋಕ್ ಉಪಸ್ಥಿತರಿದ್ದರು.





