ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದಲ್ಲಿ ಮಾ. 11 ಶನಿವಾರದಿಂದ 17 ಶುಕ್ರವಾರದ ವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ ಮಾ. 11 ಶನಿವಾರದಂದು ರಾತ್ರಿ 10.30ಕ್ಕೆ ಪಟ್ಟ ಸಿಂಹಾಸನದಿಂದ ಮೂಡಮಾಡಕ್ಕೆ `ಕಿರೋಳ್ ಉತ್ಸವ ನಡೆಯಲಿದ್ದು 12ರಂದು ರವಿವಾರ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಉತ್ಸವ, 13ರಂದು ಸೋಮವಾರ ಶ್ರೀ ಧರ್ಮಅರಸರ ವಲಸರಿ ಉತ್ಸವ, 15ರಂದು ಬುಧವಾರ ಶ್ರೀ ಧರ್ಮ ಅರಸರ ದೊಡ್ಡ ವಲಸರಿ ಉತ್ಸವ ನಡೆಯಲಿದ್ದು 16ರಂದು ಗುರುವಾರ ರಾತ್ರಿ10.30ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಮತ್ತು ಕೆರೆ ದೀಪೋತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸಹೋದರರಿಬ್ಬರಿಗೆ ಚೂರಿತ ಇರಿತ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಸ್ತಿಕಟ್ಟೆ ಸಂಚರಿಸುತ್ತಿದ್ದ ಉಳ್ಳಾಲ ನಿವಾಸಿ ಪ್ರಸ್ತುತ ಕಲ್ಲಾಪು ಪಟ್ಲದಲ್ಲಿ ವಾಸವಾಗಿರುವ ಸಮೀರ್ ಮತ್ತು ಆತನ ಸಹೋದರ ಸಿರಾಜ್‍ಗೆ ಇಲ್ಯಾಸ್ ಯಾನೆ ಟಾರ್ಗೆಟ್ ಇಲಿಯಾಸ್‍ನ ತಂಡಕ್ಕೆ ಸೇರಿದ ಸುರ್ಮಾ ಇಮ್ರಾನ್ ಚೂರಿಯಿಂದ ಇರಿದಿದ್ದು, ಅಲ್ತಾಫ್ ಕಾಟಿಪಳ್ಳ, ಹಂಝ ಸಹಾಯ ಮಾಡಿದ್ದರೆಂದು ಗಾಯಗೊಂಡಿದ್ದ ಸಹೋದರರು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿದ ಪ್ರಮುಖ ಆರೋಪಿ ಸುರ್ಮಾ ಇಮ್ರಾನ್ ಮತ್ತು ಹಂಝನನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿಸಿದ್ದಾರೆ. ಕೊಲೆ ಯತ್ನ ನಡೆಸಿದ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಗಾಯಾಳು ಪರ ತಂಡ ಪೋಲಿಸ್ ಠಾಣೆಯ ಎದುರು ಜಮಾಯಿಸಿದ್ದರು. ಆರೋಪಿಗಳಿಗೆ ರಾಜಕೀಯ ರಕ್ಷಣೆ ನೀಡಲಾಗುತ್ತಿದೆ ಎಂದು ಸಮೀರ್ ಸಂಬಂಧಿಕರು ಆರೋಪಿಸಿದ್ದಾರೆ. ಉಳ್ಳಾಲ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ. ಮುಂಬೈಯಲ್ಲಿ ಇತ್ತೀಚೆಗೆ ನಡೆದ 10ರಿಂದ11 ವರ್ಷದ ಬಾಲಕರ ವಿಭಾಗದ 22ನೇ ಡಬ್ಲ್ಯೂ ಎಫ್‍ಎಸ್‍ಕೆಒ ಏಷ್ಯನ್ ಓಪನ್ ಆಹ್ವಾನಿತ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ಅಶ್ಫಾಕ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ನದೀಮ್, ಶಫ್ರಾಝ್ ಮತ್ತು ಯಾಸ್ಮೀನ್ ಇವರಿಂದ ತರಭೇತಿಯನ್ನು ಪಡೆದಿರುತ್ತಾರೆ. ಅಬ್ದುಲ್ ಮಜೀದ್ ಮತ್ತು ಫಾತಿಮಾ ಝೊಹರ ದಂಪತಿಯ ಪುತ್ರ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: 30 ಲಕ್ಷ ಅನುದಾನದಲ್ಲಿ ಒಂಬತ್ತುಕೆರೆ ಐಟಿಐಯಿಂದ ತೊಕ್ಕೊಟ್ಟು ಓವರ್‍ಬ್ರಡ್ಜ್‍ವರೆಗಿನ ಒಳರಸ್ತೆ ಅಗಲೀಕರಣ ಕಾಮಗಾರಿಗೆ ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಮಂಗಳವಾರ ಶಿಲಾನ್ಯಾಸಗೈದರು. ಬಳಿಕ ಮಾತನಾಡಿದ ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಅಭಿವೃದ್ಧಿಯಾಗಿದ್ದು, ಮಂಗಳೂರಿನ ನಂತರ ಅತ್ಯುತ್ತಮ ಅಭಿವೃದ್ಧಿಹೊಂದಿದ 2ನೇ ನಗರವನ್ನಾಗಿ ಉಳ್ಳಾಲವನ್ನು ರೂಪಿಸಿ ರಾಜ್ಯದಲ್ಲೇ ಮಾದರಿಯನ್ನಾಗಿಸುವ ಗುರಿ ಹೊಂದಲಾಗಿದ್ದು ಮುಕಚ್ಚೇರಿಯಿಂದ ಅಬ್ಬಕ್ಕ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ನಗರೋತ್ಥಾನ ಅನುದಾನದಲ್ಲಿ 1.85 ಕಿ.ಮೀ. ರಸ್ತೆ ಅಭಿವೃದ್ಧಿಗೆ, ಇಕ್ಕೆಲೆಗಳಲ್ಲಿ ಅಗಲೀಕರಣ, 250 ಮೀಟರ್‍ಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, 1.34 ಕೋಟಿ ಅನುದಾನ ಮೀಸಲಿಡಲಾಗಿದೆ. ಉಳ್ಳಾಲ ಮಾದರಿ ನಗರ ನಿರ್ಮಾಣದ ಕನಸು ಹೊಂದಲಾಗಿದ್ದು ಸರ್ವರೂ ಸಹಕಾರ ನೀಡಬೇಕು ಎಂದು ತಿಳಿಸಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕಾಮಗಾರಿಗೆ ಶಿಲಾನ್ಯಾಸಗೈದರು. ನಗರಸಭಾಧ್ಯಕ್ಷ ಹುಸೈನ್ ಕುಂಞÂಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯರಾದ ದಿನೇಶ್ ರೈ, ಮಹಮ್ಮದ್ ಮುಕಚ್ಚೇರಿ, ಪೌರಾಯುಕ್ತೆ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: 100 ರೂ ಜೌಷಧಿಯನ್ನು 20 ರೂ. ಗೆ ನೀಡುವ ಯೋಜನೆಯಾಗಿರುವ ಜನೌಷಧಿ ಕೇಂದ್ರದ ಸ್ಥಾಪನೆಗೆ ಸರಕಾರ ಮುಂದಾಗುವ ಮೂಲಕ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಆರೋಗ್ಯ ಕಾಶಿ ಅನಿಸಿಕೊಂಡಿರುವ ದೇರಳಕಟ್ಟೆಯಲ್ಲಿ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಿರುವ ಕಾರ್ಯ ಶ್ಲಾಘನೀಯವಾದುದು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು ಅವರು ದೇರಳಕಟ್ಟೆ ವೆಸ್ಟ್ ಅವೆನ್ಯೂ ಬಿಲ್ಡಿಂಗ್‍ನಲ್ಲಿ ಬುಧವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಜನೌಷಧಿ ಯೋಜನೆಯ ಪ್ರಧಾನಮಂತ್ರಿ ಭಾರತೀ ಜನೌಷಧಿ ಕೇಂದ್ರದ ಉದ್ಘಾಟನೆ ಹಾಗೂ ಶಿಕ್ಷಾಸಹಯೋಗ ಯೋಜನೆಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದೈನಂದಿನ ಆಹಾರ ಪದ್ದತಿ ಹಾಗೂ ಮಾಲಿನ್ಯದಿಂದಾಗಿ ಜನ ಅನಾರೋಗ್ಯದಿಂದ ಬಳಲುತ್ತಿದ್ದು ರೋಗದ ಸಂಖ್ಯೆಯೆ ಜೊತೆಗೆ ಆಸ್ಪತ್ರೆಗಳು ಹೆಚ್ಚಾಗುತ್ತಿದೆ. ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡಿದರೂ ಜೌಷಧಿಕೆಂದ್ರಗಳಲ್ಲಿ ಉಚಿತವಾಗಿ ಜೌಷಧಿಗಳು ಸಿಗುತ್ತಿಲ್ಲ. ಇದರಿಂದ ಬಡವರಿಗೆ ಜೌಷಧಿಯನ್ನು ಬರಿಸಲು ಸಾಧ್ಯವಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ದೀನ್‍ದಯಾಳ್ ಉಪಾಧ್ಯಾಯರ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ತೊಕ್ಕೊಟ್ಟು ವ್ಯಾಪ್ತಿಯಲ್ಲಿ ನಿರಂತರವಾಗಿ ಅಗ್ನಿ ಅವಘಢಗಳು ಸಂಭವಿಸುತ್ತಿದ್ದು, ಘಟನೆಗಳಿಗೆ ಸಂಬಂಧಿಸಿ ಸೂಕ್ಷ್ಮ ತನಿಖೆ ಹಾಗೂ ಕೋಮುಭಾವನೆ ಕೆರಳಿಸಲು ಯತ್ನಿಸುವವರನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಆಗ್ರಹಿಸಿದೆ. ಕಳೆದ ಎರಡು ವಾರಗಳ ಅಂತರದಲ್ಲಿ ತೊಕ್ಕೊಟ್ಟಿನಲ್ಲಿ ರಾತ್ರಿ ಹೊತ್ತು ಅಂಗಡಿ, ಬ್ಯಾಂಕ್ ಕಟ್ಟಡಗಳಿಗೆ ಬೆಂಕಿ ಹಾಕುವ ಕೃತ್ಯಗಳು ನಡೆಯುತ್ತಿವೆ. ಫೆ.22ರ ರಾತ್ರಿ ಸಿಪಿಐಎಂ ಕಚೇರಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಮೂರೇ ದಿನಗಳಲ್ಲಿ ಮತ್ತೆ ಅಗ್ನಿ ಅವಘಢಗಳು ಸಂಭವಿಸುತ್ತಲೇ ಬಂದಿದೆ. ಮಂಗಳವಾರ ತಡರಾತ್ರಿ ಬಾಂಬೆ ಬಝಾರಿಗೆ ಬೆಂಕಿ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಸಿಪಿಎಂ ಉಳ್ಳಾಲ ವಲಯ ಸದಸ್ಯರು, ಹಿಂದೆ ನಡೆದ ಘಟನೆಗಳಿಗೆ ಮತ್ತು ಸದ್ಯ ನಡೆದಿರುವ ಘಟನೆಗಳಿಗೆ ಸಾಮ್ಯತೆ ಇರುವುದಾಗಿ ತಿಳಿಸಿದ್ದಾರೆ. ಅಂಗಡಿಯೊಳಗಿದ್ದ ಲಕ್ಷಾಂತರ ಬೆಲೆಬಾಳುವ ಸೊತ್ತುಗಳೆಲ್ಲವೂ ಹೊತ್ತಿ ಉರಿದಿವೆ. ಅಂಗಡಿ ಹಿಂಭಾಗದಲ್ಲಿ ಮುಳಿ ಹುಲ್ಲಿನ ಗುಡ್ಡೆಯಲ್ಲಿ ವಿದ್ಯುತ್ ಕಂಬಗಳಿದ್ದು, ಅಲ್ಲಿ ಶಾಟ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮಹಿಳೆಯರು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ನಮ್ಮ ಭ್ರಮೆಯ ಬದುಕನ್ನು ದೂರಗೊಳಿಸಿ ವಾಸ್ತವದ ಬದುಕನ್ನು ನಮ್ಮದಾಗಿಸಿಕೊಂಡು ನಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸೋಣ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕಿ ಭುವನೇಶ್ವರಿ ಹೆಗ್ಡೆ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಮಂಗಳಾ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ನಮ್ಮ ಮೇಲೆ ಆಗುವ ಬಾಹ್ಯ ಆಕ್ರಮಣಗಳನ್ನು ಎದುರಿಸಲು ಸನ್ನದ್ದರಾಗುವಂತೆ ನಾವು ಸಾಹಿತ್ಯ, ಸಂಸ್ಕøತಿಯ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಮಾನಸಿಕವಾಗಿಯೂ ನಮ್ಮ ಆತ್ಮಸೈರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಗಟ್ಟಿ ಸ್ವಭಾವದವಾಗಿರುವುದು ವಿಶೇಷವಾಗಿದ್ದು ಇದು ಇಲ್ಲಿಯ ಮಣ್ಣಿನ, ಸಂಸ್ಕøತಿಯ ಲಕ್ಷಣವಾಗಿರಬಹುದು ಎಂದರು. ಇಂದು ವಾಟ್ಸಪ್ ಎಂಬುದು ನಮ್ಮ ದಿನಚರಿಯಾಗಿದ್ದು ವಿದ್ಯಾರ್ಥಿ ಸಮುದಾಯ ಪರೀಕ್ಷೆಗೆ ತಯಾರಾಗಲೂ ಇದು ಅಡ್ಡಿಯಾಗುತ್ತಿದೆ. ಆದ್ದರಿಂದ ಯುವ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಾಸ್ತಿಕಟ್ಟೆ: ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರನ್ನು ಅಡ್ಡಗಟ್ಟಿದ ತಂಡವೊಂದು ಓರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ. ಗಾಯಳುಗಳನ್ನು ಮುಕ್ಕಚ್ಚೆರಿ, ಕಿಲೇರಿಯಾ ನಗರ ನಿವಾಸಿಗಳಾದ ಸಮೀರ್ (25), ಸಿರಾಜ್(26) ಎಂಬವರು ಚೂರಿ ಇರಿತಕ್ಕೆ ಒಳಗಾದವರಾಗಿದ್ದಾರೆ. ಇವರಿಗೆ ಸುರ್ಮಾ ಇಮ್ರಾನ್, ಹಂಝು, ಅಲ್ತಾಫ್ ಕಾಟೀಪಳ್ಳ ಸೇರಿದ ತಂಡ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಪೂರ್ವದ್ವೇಷದ ಹಿನ್ನಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ಗಾಯಾಳುಗಳು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಇರಾ: ಗ್ರಾಮ ಪಂಚಾಯತ್‍ನಲ್ಲಿ 2016- 17ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ 19ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಕಾರ್ಯಕ್ರಮ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಸ್ತಾಂತರಿಸಿದರು. ಇರಾ ಗ್ರಾಮ ಪಂಚಾಯತ್ ಸದಸ್ಯ ಎಂ.ಬಿ. ಉಮ್ಮರ್ ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಂಗಳಗಂಗೋತ್ರಿ, : ಸಾಹಿತ್ಯ ಮತ್ತು ಚರಿತ್ರೆಯ ಆಶಯ, ಧೋರಣೆ ವಿಭಿನ್ನ ರೂಪದಲ್ಲಿದ್ದರೂ, ಈ ಎರಡೂ ವಿಚಾರಗಳಿಗೂ ಅವಿನಾಭಾವ ಸಂಬಂಧವಿದೆ. ಇವೆರಡನ್ನೂ ಸೇರಿಸಿ ಅಧ್ಯಯನ ನಡೆಸಿದಾಗ ಹಲವಾರು ವಿಷಯಗಳನ್ನು ಅರಿತುಕೊಳ್ಳು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪೆÇ್ರ| | ಬಿ.ಸುರೇಂದ್ರರಾವ್ ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ವಿ.ವಿ. ಇತಿಹಾಸ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ `ಚರಿತ್ರೆ ಮತ್ತು ಸಾಹಿತ್ಯ’ ಎರಡು ದಿನಗಳ ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಹಿತ್ಯಿಕ ವಿಚಾರದಲ್ಲಿ ನಮ್ಮ ಕಲ್ಪನೆಗಳಿಗೆ ಅವಕಾಶವಿದ್ದರೆ, ಇತಿಹಾಸದ ವಿಚಾರದಲ್ಲಿ ನೃಜ್ಯತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇತಿಹಾಸಕಾರರನ್ನು ನಂಬುವವರು ಕಡಿಮೆಯಾಗುತ್ತಿದ್ದಾರೆ ಎಂದ ಅವರು ಇತಿಹಾಸವೆಂದರೆ ಕೇವಲ ಭೂತಕಾಲದ ವಿಚಾರಗಳು ಮಾತ್ರವೇ ಅಲ್ಲ, ವರ್ತಮಾನ ಮತ್ತು ಭೂತಕಾಲದ ನಡುವಿನ ಒಂದು ಪರಿ„ಯನ್ನು ಇತಿಹಾಸವು ನಿರ್ಮಿಸಿಕೊಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ…

