ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕುಡಿದ ಮತ್ತಿನಲ್ಲಿ ರೈಲ್ವೇ ಹಳಿಯ ಮೇಲೆ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬನಿಗೆ ರೈಲು ಬಡಿದು ಮೃತಪಟ್ಟ ಘಟನೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈತ ಕುಡಿದ ಮತ್ತಿನಲ್ಲಿ ತೂರಾಡುತ್ತಾ ರೈಲ್ವೇ ಹಳಿಯ ಮೇಲೆ ಕುಳಿತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ಮಂಗಳೂರಿನಿಂದ ತಿರುವನಂತಪುರಂ ಕಡೆಗೆ ಸಾಗುತ್ತಿದ್ದ ರೈಲು ಅಪರಿಚಿತ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ನಡುವೆ ಹಳಿಯ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಗಮನಿಸಿದ ಚಾಲಕ ರೈಲಿನ ವೇಗ ಕಡಿತಗೊಳಿಸಿದ್ದು, ಆದರೆ ಅದಾಗಲೇ ರೈಲು ವ್ಯಕ್ತಿಗೆ ಢಿಕ್ಕಿಯಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಮಧ್ಯೆ ರೈಲು ಕೂಡ ಅನತಿ ದೂರ ಸಾಗಿ ನಿಂತಿದ್ದು, ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮೃತವ್ಯಕ್ತಿ ಯಾರೆಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ರೈಲು ನಿಲ್ಲಿಸಿ ಕುಡುಕನ ಪ್ರಾಣ ಉಳಿಸಲು ಯತ್ನಿಸಿದ ಚಾಲಕನ ಸಮಯಪ್ರಜ್ಞೆ ವಿಶೇಷವಾಗಿತ್ತು. ಉಳ್ಳಾಲ…
Author: UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೆ.ಸಿ.ರೋಡು: ಮಂಗಳೂರಿನ ಕುರಿತು ಹೊರಗಿನ ಜನತೆಗೆ ವಾತಾವರಣ ಸ್ಪಷ್ಟವಾಗಿಲ್ಲ, ಈ ನಿಟ್ಟಿನಲ್ಲಿ ಇಲ್ಲಿನ ಜನರಲ್ಲಿ ಮಾನಸಿಕ ಹಾಗೂ ಭೌತಿಕ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಚರ್ಚ್, ಮಸೀದಿ, ದೇವಸ್ಥಾನಗಳ ಸ್ಥಾಪನೆಯ ಬದಲು ಗ್ರಂಥಾಲಯಗಳ ಸ್ಥಾಪನೆಯಾಗಬೇಕಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಹೇಳಿದ್ದಾರೆ. ಅವರು ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆಗ9ನೈಝೇಶನ್ ಇದರ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಕೆ.ಸಿ.ರೋಡು ಜಂಕ್ಷನ್ನಿನಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪುಸ್ತಕದಿಂದ ಮಾತ್ರ ಜ್ಞಾನ ವೃದ್ಧಿಸಲು ಸಾಧ್ಯ. ಧವರ್i ದೇವಾಲಯಗಳ ಬದಲು ಅಲ್ಲಲ್ಲಿ ಗ್ರಂಥಾಲಯಗಳ ಸ್ಥಾಪನೆಯಿಂದ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸುವುದರ ಜತೆಗೆ ಸಮಾಜಕ್ಕೆ ಪೂರಕವಾಗಿರುವ ವಾತಾವರಣದಲ್ಲಿ ಬೆಳೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದ ಅವರು ಜನರಲ್ಲಿ ರಾಜಕೀಯ ಆಸಕ್ತಿಗಳು ಇರಬೇಕು. ಆದರೆ ರಾಜಕೀಯಪ್ರೇರಿತ ಚಟುಟವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ತಮ್ಮ ಹಕ್ಕುಗಳನ್ನು ಪಡೆಯುವ ಜ್ಞಾನ ನಾಗರೀಕರಲ್ಲಿ ಇಲ್ಲವಾಗಿದೆ. ಸರಕಾರಿ ಪಾರದರ್ಶಕತೆಯನ್ನು ಚರ್ಚಿಸುವ ಮೂಲಕ ವೈಚಾರಿಕತೆಯ…
ತೊಕ್ಕೊಟ್ಟು :ಸೌಹಾರ್ದತೆ ಉಳಿಸುವಲ್ಲಿ ಕ್ರೀಡೆ ಒಂದು ಭಾಗವಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಬೇಕಿದೆ. ಇದರಿಂದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ವೈಟ್ ಲಿಫ್ಟರ್ ಗೀತಾ ಬೈ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಮಂಗಳೂರು ವನ್ ಶಾಲೆ ಕ್ರೀಡಾಂಗಣದಲ್ಲಿ ಜರಗಿದ ಡಿ ವೈ ಎಫ್ ಐ ನ ಉಳ್ಳಾಲ ವಲಯ ಮಟ್ಟದ ಸಾಂಗತ್ಯ-2017 ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಹದಾಢ್ರ್ಯ ಪಟು ಭಾಸ್ಕರ ತೊಕ್ಕೊಟ್ಟು, ಕುಸ್ತಿಪಟು ಪ್ರಜ್ಞಾ ಕಬೆಕೋಡಿ ಮುಖ್ಯ ಅತಿಥಿಗಳಾಗಿದ್ದರು. ಡಿವೈಎಫ್‍ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಉದ್ಯಮಿ ರಮೇಶ್ ಮೆಂಡನ್, ಡಿವೈಎಫ್‍ಐ ಉಳ್ಳಾಲ ವಲಯ ಅಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಕಾರ್ಯದರ್ಶಿ ಜೀವನರಾಜ್ ಕುತ್ತಾರ್ ಉಪಸ್ಥಿತರಿದ್ದರು. ಹಂಝ ಕಿನ್ಯಾ ನಿರೂಪಿಸಿದರು. ಸುನಿಲ್ ತೇವುಲ ವಂದಿಸಿದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಉತ್ತರ ಪ್ರದೇಶದಲ್ಲಿ ಸರಕಾರ ರಚಿಸುವ ನರೇಂದ್ರ ಮೋದಿಯವರ ಕನಸು ನನಸಾಗಿದ್ದು, ಮುಂದಿನ ಕರ್ನಾಟಕದ ಚುನಾವಣೆಯಲ್ಲಿ ಇದೇ ಮಾದರಿಯ ಪಲಿತಾಂಶ ಬರಲಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು. ಉತ್ತರ ಪ್ರದೇಶ ಮತ್ತು ಉತ್ತರಕಾಂಡದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲವಿಗೆ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಕಾಂಗ್ರೆಸ್‍ನ ಅಪವಿತ್ರ ಮೈತ್ರಿಯನ್ನು ಜನರು ಒಪ್ಪಿಕೊಂಡಿಲ್ಲ. ಉತ್ತರ ಪ್ರದೇಶದ ಮಾದರಿಯಲ್ಲಿ ಮುಂದಿನ ವರ್ಷದ ಕರ್ನಾಟಕದ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದು, ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು. ಹಿರಿಯ ಮುಖಂಡರಾದ ಸೀತರಾಮ ಬಂಗೇರ, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ, ಬಿಜೆಪಿ ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಮುಖಂಡರಾದ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುಡಿಪು: ಮುಡಿಪು ಜಂಕ್ಷನ್ ಪ್ರದೇಶದಲ್ಲಿ ಮದ್ಯರಾತ್ರಿಯ ವೇಳೆ ವಾಹನ ವ್ಯವಸ್ಥೆ ಇಲ್ಲದೆ ಬಸ್ ನಿಲ್ಧಾಣದ ಸಮೀಪವೇ ಭಯದಿಂದ ನಿಂತಿದ್ದ ಮಹಿಳೆಯನ್ನು ಕಂಡ ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ದೇವರಾಜ್ ಮಹಿಳೆಗೆ ಆಸರೆಯಾಗಿ ನಿಂತು ಸುರಕ್ಷಿತವಾಗಿ ಪೊಲೀಸ್ ವಾಹನದಲ್ಲಿ ಅವರ ಮನೆಗೆ ತಲುಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಸಿಬ್ಬಂದಿಯ ಪ್ರಾಮಾಣಿಕತೆಯೊಂದಿಗೆ ಮನೆಗೆ ಸುರಕ್ಷಿತವಾಗಿ ತಲುಪಿದ ಬಳಿಕ ಪೊಲೀಸರ ಸೇವೆಯ ಕುರಿತು ಪೊಲೀಸ್ ಇಲಾಖೆಗೆ ಪತ್ರ ಬರೆದು ದನ್ಯವಾದವನ್ನು ಸಲ್ಲಿಸಿದ್ದರು. ಪೊಲೀಸ್ ಸಿಬ್ಬಂದಿ ದೇವರಾಜ್ ಅವರ ಕಾರ್ಯವು ಪೊಲೀಸ್ ಆಯುಕ್ತರ ಮೆಚ್ಚುಗೆಗೂ ಪಾತ್ರವಾಗಿದ್ದು ಅವರು ದೇವರಾಜ್ ಅವರಿಗೆ ಹತ್ತು ಸಾವಿರ ರೂ ನಗದು ಬಹುಮಾನದೊಂದಿಗೆ ಪ್ರಶಂಶನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಎಸಿಪಿ ಶೃತಿ, ಕೊಣಾಜೆ ಠಾಣಾ ಇನ್‍ಸ್ಪೆಕ್ಟರ್ ಅಶೋಕ್ ಜೊತೆಗಿದ್ದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಗು ಎದೆಹಾಲನ್ನು ಕುಡಿಯುವ ಸಂದರ್ಭದಲ್ಲಿ ಕೆಲವೊಂದು ಮಾರ್ಗದರ್ಶಿ ಸೂತ್ರಗಳು ಅಗತ್ಯವಿದ್ದು, ಇಂತಹ ಮಾಹಿತಿಯನ್ನು ವೈದ್ಯರು ಮತ್ತು ದಾದಿಯರು ತಾಯಂದಿರಗೆ ನೀಡುವ ಕಾರ್ಯ ಮಾಡಬೇಕು ಎಂದು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ ಮುಖ್ಯಸ್ಥೆ ಡಾ| ವಿಜಯಾ ಶೆಣೈ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಆಶ್ರಯಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಸ್ತನ್ಯಪಾನ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಅವಧಿಗಿಂತ ಮೊದಲೇ ಹುಟ್ಟಿದ ಮಗುವಿಗೆ, ಸೀಳ್ದುಟಿ ಇರುವ ಮಕ್ಕಳಿಗೆ ಹಾಲುಣಿಸುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಇನ್ನೊಂದೆಡೆ ವೃತ್ತಿನಿರತ ತಾಯಂದಿರು ಕೆಲಸದ ಒತ್ತಡದಿಂದಾಗಿ ಎದೆಹಾಲನ್ನು ನೀಡೆ ಕೃತಕ ಹಾಲನ್ನು ನೀಡುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ನಿಟ್ಟಿನಲ್ಲಿ ಮಗುವಿಗೆ ನೈಸರ್ಗಿಕ ಹಾಲನ್ನು ಕೃತಕ ಉಪಕರಣ ಬಳಸಿ ನೀಡುವ ಮಾಹಿತಿ ಈ ಕಾರ್ಯಾಗಾರದಿಮದ ನಡೆಯಲಿದ್ದು, ಪ್ರಮುಖವಾಗಿವೈದ್ಯರಿಗೆ ಮತ್ತು ದಾದಿಯರಿಗೆ ಚೆನ್ನೈಯ ನುರಿತ ತಂತ್ರಜ್ಞರು ಕಾರ್ಯಾಗಾರದಲ್ಲಿ ಮಾಹಿತಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಿನ್ಯ: ರೋಗ ಬಂದ ಮೇಲೆ ಮದ್ದು ತೆಗೆದು ಕೊಳ್ಳುವುದಕ್ಕಿಂತ ರೋಗ ಬರದ ಹಾಗೆ ಯಾವ ರೀತಿ ಮಾಡಬಹುದು ಎನ್ನುವ ಚಿಂತನೆ ಆಗತ್ಯವಿದೆ ಎಂದು ದೇವಿನಗರ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ರವಿ ಗಣೇಶ್ ಮೊಗ್ರಾ ಆಭಿಪ್ರಾಯಪಟ್ಟರು. ಅವರು ಕೇಶವ ಶಿಶು ಮಂದಿರ ಕಿನ್ಯದಲ್ಲಿ ನಡೆದ ಆಯುರ್ವೇದದಲ್ಲಿ ಆಹಾರದ ಪದ್ಧತಿ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಆಯುರ್ವೇದದಲ್ಲಿ ಆಹಾರದ ಒಂದು ವಿಧಿ ವಿಧಾನವಿದ್ದು, ಹೇಗೆ ಮನುಷ್ಯ ಬ್ರಾಹ್ಮಿ ಮೂಹೂರ್ತದಲ್ಲಿ ಎದ್ದು ಮಾಡಬಹುದಾದಂತಹ ಕೆಲಸ ಕಾರ್ಯಗಳು, ಅದರಂತೆ ಋತುಗಳಿಗನುಸಾರವಾಗಿ ಬಳಸಬಹುದಾದಂತಹ ಆಹಾರಗಳು, ಸಂಪ್ರದಾಯವಾಗಿ ಇರುವಂತಹ ಕ್ರಮಗಳನ್ನು ಅನುಸರಿಸಿದರೆ ರೋಗ ಬರದಂತೆ ತಡೆಯಲು ಅನುಕೂಲವಾಗುತ್ತದೆ. ಉಷ್ಣ-ಶೀತ ಆಹಾರಗಳು, ಹಾನಿಕಾರಕ ಅದೇ ರೀತಿ ಮೀನು ಮತ್ತು ಹಾಲು ಒಟ್ಟಿಗೆ ಸೇವಿಸಿದರೆ ಅದರಿಂದಾಗುವ ಕೆಡುಕುಗಳಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಬೇಕರಿ ಉತ್ಪನ್ನಗಳಲ್ಲಿ ಮೈದಾವನ್ನು ಬಳಸುತ್ತಾರೆ. ಈ ಮೈದಾವನ್ನು ಬೆನ್ ಜೋಯಸ್ ಪೆರಾಕ್ಸಡ್ ಎಂಬ ರಾಸಾಯನಿಕದಲ್ಲಿ ತೊಳೆದು ಬಿಳಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬಿಕಾರೋಡ್: ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾದ ಗಟ್ಟಿ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಗಟ್ಟಿ ವಗ್ಗ ಅವರನ್ನು ಗಟ್ಟಿ ಸಮಾಜದ ವತಿಯಿಂದ ಅಂಬಿಕಾರೋಡ್‍ನ ಗಟ್ಟಿ ಸಮಾಜ ಭವನದಲ್ಲಿ ಅಭಿನಂದಿಸಲಾಯಿತು. ಗಟ್ಟಿ ಸಮಾಜದ ಹಿರಿಯರಾದ ಹರಿಶ್ಚಂದ್ರ ಗಟ್ಟಿ ನಾಯ್ಗರು, ನಾರಾಯಣ ಗಟ್ಟಿ ಮೇಲ್ಡರು, ನಾಯ್ಗರ ಪ್ರತಿನಿಧಿ ಪದ್ಮನಾಭ ಗಟ್ಟಿ ಕಟ್ಟಪುಣಿ, ಸೋಮನಾಥ ಸೇವಾ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಟ್ಟಿ ಕೊರಂತೋಡಿ, ಯುವಜನ ವಿಭಾಗದ ಅಧ್ಯಕ್ಷರಾದ ಪದ್ಮನಾಭ ಗಟ್ಟಿ ಬಜಿಲಕೇರಿ, ಸೇಸಪ್ಪ ಗಟ್ಟಿ ಕೊಲ್ಯ, ಗುರಿಕಾರರಾದ ನೇಮು ಗಟ್ಟಿ ಕೊರಂತೋಡಿ, ಕೆ.ಕೆ. ಗಟ್ಟಿ, ನಾರಾಯಣ ಗಟ್ಟಿ ಪಾಂಡೇಶ್ವರ, ಸೀತಾರಾಮ ಗಟ್ಟಿ ಕಣಂತೂರು, ಕೊಂಡಾಣ ದೈವಸ್ಥಾನದ ಮೊಕ್ತೇಸರರಾದ ಕೃಷ್ಣಪ್ಪ ಗಟ್ಟಿ ಕೋಟೆಕಾರು, ಒಂಭತ್ತು ಮಾಗಣೆ ಸೀಮೆ ಗುರಿಕಾರರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ ಇಲ್ಲಿನ ವಿದ್ಯಾರ್ಥಿನಿಯರು ಸರಕಾರಿ ಪ್ರೌಢಶಾಲೆ ಅಳಿಯೂರು, ಮೂಡಬಿದಿರೆ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಪ್ರಥಮಸ್ಥಾನ ಪಡೆದು ಮಂಡ್ಯ ಜಿಲ್ಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. ತಂಡದ ಸದಸ್ಯರೊಂದಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ಇಂದಿನ ಯುವಜನತೆ ಧೂಮಪಾನದಂತಹ ಪಿಡುಗುಗಳಿಗೆ ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಕಾರ್ಯದಲ್ಲಿ ಕ್ಷೇಮ ಮಾನಸಿಕ ಚಿಕಿತ್ಸಾ ವಿಭಾಗ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್,ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮಾನಸಿಕ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಕ್ಷೇಮದ ಮಿಷನ್ ಹೋಪ್ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ `ಧೂಮಪಾನ ರಹಿತ ಸಪ್ತಾಹ’ದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇಮ ವೈಸ್ ಡೀನ್ ಮತ್ತು ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ| ಪಿ.ಎಸ್. ಪ್ರಕಾಶ್ ಮಾತನಾಡಿ ಧೂಮಪಾನ ಮತ್ತು ಕುಡಿತದಂತಹ ಪಿಡುಗುಗಳಿಂದ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನರು ಜಾಗೃತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವೈಸ್ ಡೀನ್ ಡಾ| ಅಮೃತ್ ಮಿರಾಜ್‍ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಎರಡನೇ ಹಂತದಲ್ಲಿ ಕ್ಷೇಮ…

