Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪ್ರಧಾನಿ ಮೋದಿ ವಿಮಾನದಲ್ಲಿ ಹಾರಾಡಿ ಉತ್ಕøಷ್ಟ ಆಹಾರ ತಿನ್ನುವುದರಲ್ಲೇ ನಿರತರಾಗಿದ್ದಾರೆ. ಇಲ್ಲಿ ಬಡ ಜನತೆ ಊಟವಿಲ್ಲದೆ ಉಪವಾಸ ಸತ್ತರೂ, ಅವರು ಕಾರ್ಪೊರೇಟ್ ಸಂಸ್ಥೆಗಳ ಏಳಿಗೆಗಾಗಿ ಮಾತ್ರ ದುಡಿಯುತ್ತಿದ್ದಾರೆ ಎಂದು ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹೇಳಿದ್ದಾರೆ. ಅವರು ಕೇಂದ್ರ ಸರಕಾರದ ಜನವಿರೋಧಿ ಮತ್ತು ಬೆಲೆ ಏರಿಕೆಯ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಮೋದಿ ಸರಕಾರ ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಬಡಜನರಿಗೆ ಜೀವನ ನಡೆಸುವಂತಹ ವಾತಾವರಣ ನಿರ್ಮಿಸುತ್ತಿಲ್ಲ. ಕಾರ್ಪೊರೇಟ್ ಕುಳಗಳ ಪರವಾಗಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿಬೇಕಾದ ಪ್ರತಿಪಕ್ಷಗಳು ಮೌನಸಮ್ಮತಿಯನ್ನು ವಹಿಸಿರುವುದು ದುರಾದೃಷ್ಟ. ಬೀದಿಗಳಲ್ಲಿ ಪ್ರತಿಭಟಿಸಿ ಜನರನ್ನು ಮೋಸಗೊಳಿಸುವ ಬದಲು ಪಾರ್ಲಿಮೆಂಟಿನ ಒಳಗಡೆ ದನಿ ಎತ್ತಿ ಪ್ರತಿಭಟಿಸಲು ಮುಂದಾಗದೇ ಮೋದಿ ಪರವಾಗಿಯೇ ಪ್ರತಿಪಕ್ಷಗಳು ನಿಂತಿದೆ ಅನ್ನುವುದನ್ನು ಸಾಬೀತುಪಡಿಸುತ್ತದೆ. ದಿನಬಳಕೆ ವಸ್ತುಗಳ ಬೆಲೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಂಗಳೂರು: ರಾಜ್ಯದ ವಿಚಾರವಾದಿ ಕಲಬುರ್ಗಿ ಹತ್ಯೆ ಬಳಿಕ ಇದೀಗ ಮತ್ತೆ ಮಂಗಳೂರಲ್ಲಿ ಮತ್ತೊಬ್ಬ ವಿಚಾರವಾದಿಯ ಹತ್ಯೆ ಯತ್ನ ನಡೆದಿದೆ. ಅಪರಿಚಿತರ ತಂಡವೊಂದು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಹತ್ಯೆಗೆ ವಿಫಲ ಯತ್ನ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ವಿಚಾರವಾದಿಗಳಿಗೆ ಭದ್ರತೆ ಇಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಕಲಬುರ್ಗಿ ಹತ್ಯೆಯ ಆರೋಪಿಗಳು ವರ್ಷ ಕಳೆದರೂ ಪತ್ತೆಯಾಗದೇ ಇರುವುದು ಪೊಲೀಸ್ ಇಲಾಖೆಗೂ ಸವಾಲಾಗಿದ್ದು ಇದೀಗ ನರೇಂದ್ರ ನಾಯಕ್ ಹತ್ಯೆಗೆ ಸಂಚು ನಡೆದಿದೆ. ನಗರದ ಲೇಡಿಹಿಲ್ ಬಳಿ ವಾಸವಾಗಿರುವ ವಿಚಾರವಾದಿ ನರೇಂದ್ರ ನಾಯಕ್ ಅವರನ್ನು ಬುಧವಾರ ಬೆಳಿಗ್ಗಿನ ಜಾವ ಆರು ಘಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಬೈಕಿನನಲ್ಲಿ ಬಂದ ಇಬ್ಬರು ಅಪರಿಚಿತರು ಕಾರಿನ ಟೈರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾರೆ. ಆದರೆ ನಾಯಕ್ ಅನುಮಾನಗೊಂಡು ಕಾರನ್ನು ನಿಲ್ಲಿಸದೇ ತೆರಳಿದ್ದಾರೆ ನಂತರ ಹತ್ತಿರದಲ್ಲಿದ್ದ ಪೆಟ್ರೋಲ್ ಪಂಪ್ ಗೆ ತೆರಳಿ ಕಾರಿನ ಗಾಳಿ ಪರೀಕ್ಷಿಸಿದಾಗ ಕೊಂಚವೂ…

Read More

Ullal news network Deralakatte: There is a lack of multiplexes in rural areas. If multiplexes are opened in these regions it will help Kannada film industry to grow further said Sandalwood actor-director Rakshit Shetty. He was speaking in a national level seminar and Beacon-2K17 media festival held at Nitte college of communication at Paneer campus at Deralakatte here on Tuesday. People of Puttur could not watch Kirik Party as it was screened there. Kannada films don’t get screened other states, he said. Rakshit Shetty spoke about his experiences after donning director’s cap. He put forth several questions before students like,…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಅಸ್ಪತ್ರೆಗೆ ಗುರುವಾರ ದಾಖಲಿಸಿರುವ ಬಗ್ಗೆ ವರದಿಯಾಗಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರೈ ಅವರು ರಕ್ತದೊತ್ತಡ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷೆಗಳನ್ನು ನಡೆಸುವ ಸಲುವಾಗಿ ದಾಖಲು ಮಾಡಲಾಗಿದೆ ಹೊರತು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಹೆಚ್ಚಿನ ಸಮಸ್ಯೆಯಿಲ್ಲ. ಬೇಗನೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಸಹೋದರ ದಶರಥ ರೈ ಹೇಳಿಕೆ ನೀಡಿದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುಂಬಯಿ: ಟಿಬಿ, ಪೋಲಿಯೋ ರೋಗಗಳ ವಿರುದ್ದ ದ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಬಿಗ್ ಬಿ ಇದೀಗ ಮಹಿಳೆಯರನ್ನು ಕಾಡುವ ಸ್ತನದ ಕ್ಯಾನ್ಸರ್ ಬಗ್ಗೆಯೂ ಜಾಗೃತಿಯನ್ನು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೌದು ಸ್ತನ ಕ್ಯಾನ್ಸರ್ ಬಗ್ಗೆ “ಎಬಿಸಿ ಆಫ್ ಬ್ರೆಸ್ಟ್ ಕ್ಯಾನ್ಸರ್’ ಎಂಬ ಮೊಬೈಲ್ ಆಪ್ಲಿಕೇಶನ್ ಬಿಡುಗಡೆಯನ್ನು ಮಾಡಿದ ನಂತರ ಮಾತನಾಡಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸ್ತನ ಕ್ಯಾನ್ಸರ್‍ನಂತಹ ವ್ಯಾದಿಯ ಬಗ್ಗೆ ಮಹಿಳೆಯರು ಮುಜುಗರ ಹಾಗೂ ಕೀಳರಿಮೆಯನ್ನು ಇಟ್ಟುಕೊಳ್ಳದೇ ಸ್ವಸ್ಥ ಮನೋಭಾವದಿಂದ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮಹಿಳೆಯರಲ್ಲಿ ಧೈರ್ಯ ತುಂಬಿದ್ದಾರೆ. ವ್ಯಾದಿಗೆ ತುತ್ತಾದ ಮಹಿಳೆಯರು ಇತರ ಯಾವುದೇ ಬಗೆಯ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಹಾಗೆ ಸ್ತನ ಕ್ಯಾನ್ಸರ್‍ಗೂ ಯಾವುದೇ ರೀತಿಯ ಮುಜುಗರವನ್ನು ಪಡದೇ ಧೈರ್ಯದಿಂದ ಚಿಕಿತ್ಸೆಯನ್ನು ಪಡೆಯಬೇಕು. “ಎಬಿಸಿ ಆಫ್ ಬ್ರೆಸ್ಟ್ ಕ್ಯಾನ್ಸರ್’ ಮೊಬೈಲ್ ಆಪ್ಲಿಕೇಶನ್ ಈ ರೋಗದ ಬಗೆಗಿನ ಮಾಹಿತಿಗಳನ್ನು ಆಮೂಲಾಗ್ರವಾಗಿ ಒದಗಿಸುತ್ತದೆ ಎಂದರು. ಕ್ಯಾನ್ಸರ್ ನಂತಹ ರೋಗಗಳ ಬಗ್ಗೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತುಳುನಾಡ ರಕ್ಷಣಾ ವೇದಿಕೆ ಇದರ ಮಂಗಳೂರು ವಿಧಾನಸಭಾ ಕ್ಷೇತ್ರದ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಸಂಘಟಿತ ಕಾರ್ಮಿಕರಿಗೆ ವಿಮಾ ಕಾರ್ಡು ವಿತರಣಾ ಕಾರ್ಯಕ್ರಮ ಹಾಗೂ ಅಪಘಾತ ಜೀವರಕ್ಷಕ ಯೋಜನೆಯ ಮಾಹಿತಿ ಶಿಬಿರ ಮಾ.17ರ ಸಂಜೆ 4.00ಕ್ಕೆ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ತು.ರ.ವೇ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ. ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಸಾರ್ವಜನಿಕ ಜೀವನದಲ್ಲಿ ಬೇಧ ಭಾವ ರಹಿತರಾಗಿ ಸಮಾಜದಲ್ಲಿ ಸಾಮರಸ್ಯ ತರಲು ತು.ರ.ವೇ ಶ್ರಮಿಸುತ್ತಾ ಬಂದಿದೆ. ಪತ್ರಕರ್ತರ ಹಲ್ಲೆ ಖಂಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹೋರಾಟ, ಮೆಡಿಕ್ಲೈಮ್ ಕಂಪೆನಿಗೆ ಮುತ್ತಿಗೆ, ಮುಡಿಪು ಇನ್ಫೋಸಿಸ್ ವಠಾರದಲ್ಲಿ ಕೊಳವೆ ಬಾವಿ ವಿರೋಧಿಸಿ ಹೋರಾಟ, ಕಲ್ಲಾಪುವಿನಿಂದ ತಲಪಾಡಿವರೆಗೆ ಹೆದ್ದಾರಿ ಪ್ರಾಧಿಕಾರ 60 ಮೀ. ಹೆಚ್ಚುವರಿ ಅಗಲೀಕರಣದ ವಿರುದ್ಧ ಹೋರಾಟ, ಹೆದ್ದಾರಿ ವಶಪಡಿಸಿಕೊಂಡ ಜಾಗದ ಮಾರುಕಟ್ಟೆ ದರ ಹೆಚ್ಚಳ, ಜೆಪ್ಪು…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಬೆಂಗಳೂರು: ರಾಜ್ಯ ವಿಧಾನಮಂಡಲ ಸಭೆಯಲ್ಲಿ ಬುಧವಾರ ನಡೆದ 2017-18ರ ಬಜೆಟಿನಲ್ಲಿ 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನಾಗಿ ಮಾಡುವ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯದ ಹೊಸ ತಾಲೂಕುಗಳ ವಿವರವನ್ನು ಇಲ್ಲಿ ನೀಡಲಾಗಿದೆ. ದಕ್ಷಿಣ ಕನ್ನಡ- ಮೂಡಬಿದರೆ, ಕಡಬ ಉಡುಪಿ-ಬ್ರಹ್ಮಾವರ, ಕಾಪು, ಬೈಂದೂರು ಕೊಪ್ಪಳ-ಕುಕನೂರು, ಕನಕಗಿರಿ, ಕಾರಟಗಿ ಬಾಗಲಕೋಟೆ-ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಬೆಳಗಾವಿ-ನಿಪ್ಪಾಣಿ, ಮೂಡಲಗಿ, ಕಾಗವಾಡ ಚಾಮರಾಜನಗರ-ಹನೂರು ದಾವಣಗೆರೆ-ನ್ಯಾಮತಿ ಬೀದರ್-ಚಿಟಗುಪ್ಪ, ಹುಲಸೂರು, ಕಮಲಾನಗರ ಬಳ್ಳಾರಿ-ಕುರುಗೋಡು, ಕೊಟ್ಟೂರು, ಕಂಪ್ಲಿ ಧಾರವಾಡ-ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ ಗದಗ-ಗಜೇಂದ್ರಗಡ, ಲಕ್ಷ್ಮೇಶ್ವರ ಕಲಬುರಗಿ-ಕಾಳಗಿ, ಕಮಲಾಪುರ, ಯಡ್ರಾಮಿ, ಶಹಾಭಾದ್ ಯಾದಗಿರಿ-ಹುಣಸಗಿ, ವಡಗೆರ, ಗುರುಮಿಟ್ಕಲ್ ರಾಯಚೂರು – ಮಸ್ಕಿ, ಸಿರಾವರ ಬೆಂಗಳೂರು ನಗರ -ಯಲಹಂಕ ವಿಜಯಪುರ-ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ ಹಾವೇರಿ-ರಟ್ಟಿಹಳ್ಳಿ ಮೈಸೂರು-ಸರಗೂರು ಚಿಕ್ಕಮಗಳೂರು-ಅಜ್ಜಂಪುರ ಉತ್ತರ ಕನ್ನಡ-ದಾಂಡೇಲಿ ಕೋಲಾರ – ಕೆಜಿಎಫ್ ತಾಲೂಕು ಕೇಂದ್ರಗಳನ್ನಾಗಿ ರಾಜ್ಯ ಸರ್ಕಾರ ಘೋಷಿಸಿದೆ.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಲ್ಪೆ ಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 75 ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆ ಇದು ಈ ಸಾಲಿನ ಬಜೆಟಿನ ಮುಖ್ಯಾಂಶಗಳು ಮೀನುಗಾರರ ಸಹಕಾರ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಕನಿಷ್ಠ 500 ಚದರಡಿಯ ಮೀನು ಸಂಗ್ರಹಣೆ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಶೇ. 75 ರಷ್ಟು ಸಹಾಯಧನ ಹಾಗೂ ಘಟಕ ವೆಚ್ಚ 10 ಲಕ್ಷ ರೂ.; ಪ್ರಸಕ್ತ ಸಾಲಿನಲ್ಲಿ 20 ಕಟ್ಟಡಗಳ ನಿರ್ಮಾಣ, “ಮತ್ಸ್ಯ ಕೃಷಿ ಆಶಾ ಕಿರಣ” ಯೋಜನೆಯಡಿ ಪ್ರಮುಖ ಕೆರೆಗಳ 2,500 ಹೆಕ್ಟೆರ್ ಪ್ರದೇಶದಲ್ಲಿ ಹೆಕ್ಟೆರ್‍ಗೆ 4,000 ಬಲಿತ ಮೀನುಮರಿ ಹಾಗೂ 2 ಟನ್ ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ ಶೇ.50ರಷ್ಟು ಹಾಗೂ ಗರಿಷ್ಟ 27,000 ರೂ. ನೀಡಲು ಕ್ರಮ – 6.75 ಕೋಟಿ ರೂ. ಇನ್ನು ಕೃಷಿಕರಿಗೆ ಅವರ ಜಮೀನುಗಳಲ್ಲಿ ಕೊಳ ನಿರ್ಮಿಸಿ ಸಾಂದ್ರೀಕೃತ ಮೀನು ಕೃಷಿ ಕೈಗೊಳ್ಳಲು…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನಿಟ್ಟೆ ವಿಶ್ವವಿದ್ಯಾನಿಯದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಉತ್ತಮ ಮೂಲಭೂತ ಸೌಕರ್ಯವನ್ನು ಒದಗಿಸಲಾಗುತ್ತಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ವೈದ್ಯಕೀಯ ಮತ್ತು ದಂತ ಕಾಲೇಜುಗಳ ದಕ್ಷಿಣ ಭಾರತ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟ `7ನೇ ನಿಟ್ಟೆ ಎಕೊಲೇಡ್ಸ್ 2017’ಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಉತ್ತಮ ಮೈದಾನ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ಕೆಲಸ ಸಂಸ್ಥೆಯ ವತಿಯಿಂದ ನಡೆದಿದೆ. ನಿಟ್ಟೆ ಎಕೋಲೆಡ್ಸ್‍ಂತಹ ಕ್ರೀಡಾಕೂಟದಲ್ಲಿ ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳವುದರ ಮೂಲಕ ಶಿಕ್ಷಣದೊಂದಿಗೆ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇಮದ ಡೀನ್ ಡಾ| ಸತೀಶ್ ಕುಮಾರ್ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: `ಹೇ ಬೋಳಿಮಕ್ಳಾ ನಗ್ತಾ ಇದ್ದೀರಾ?’ ಹೀಗೆಂದು ಕಿರಿಕ್ ಪಾರ್ಟಿ ಚಿತ್ರದ ನಟ ರಕ್ಷಿತ್ ಶೆಟ್ಟಿ ಕೇಳ್ತಾ ಇದ್ದಾಗ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳೆಲ್ಲ ಎದ್ದೂಬಿದ್ದು ನಗಲಾರಂಭಿಸಿದರು. ಅಷ್ಟಕ್ಕೂ ಅವರು ಈ ರೀತಿ ಕಿರಿಕ್ ಮಾಡಲು ಕಾರಣವೂ ಇದೆ. ಹಾಗಾದರೆ ಈ ಸ್ಟೋರಿ ಓದಿ. ನಿಟ್ಟೆ ಸಂವಹನ ಕಾಲೇಜು ದೇರಳಕಟ್ಟೆಯ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರಸಂಕಿರಣ ಮತ್ತು ಬೀಕಾನ್ಸ್ -2ಕೆ17 ಮೀಡಿಯಾ ಉತ್ಸವದ ಪ್ರಯುಕ್ತ ವಿದ್ಯಾರ್ಥಿಗಳ ಜತೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ವಿದ್ಯಾರ್ಥಿನಿಯೋರ್ವಳು, `ಏನಾದ್ರೂ ಡೈಲಾಗ್ ಹೇಳಿ ಸರ್’ ಎಂದಾಗ ರಕ್ಷಿತ್ ಅವರು ಒಮ್ಮಿಂದೊಮ್ಮೆಲೆ, `ಹೇ ಬೋಳಿಮಕ್ಳಾ ನಗ್ತಾ ಇದ್ದೀರಾ?’ ಎಂದು ಕೇಳಿದರು. ನಗೆಗಡಲಿನಲ್ಲಿ ಸಂವಾದವನ್ನು ಮುಂದುವರಿಸಿದ ನಟ ರಕ್ಷಿತ್ ಶೆಟ್ಟಿಗೆ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಮುಂದಿಟ್ಟರು. ಪುತ್ತೂರಿನ ಚಿತ್ರಮಂದಿರದಲ್ಲಿ ಕಿರಿಕ್ ಪಾರ್ಟಿ ಚಿತ್ರ ಪ್ರದರ್ಶನವಾಗದೆ, ಊರಿನ ಜನರಿಗೆ ಚಿತ್ರ ವೀಕ್ಷಿಸಲು ಸಾಧ್ಯವಾಗಿಲ್ಲ, ಕನ್ನಡ ಚಿತ್ರಗಳು ಉಳಿದ ರಾಜ್ಯಗಳಲ್ಲಿ…

Read More