Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಪೆರ್ಮನ್ನೂರು: ವಿಶ್ವದಂತ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ ಪೆರ್ಮನ್ನೂರು ಅಡಂಕುದ್ರುವಿನ ಸಂತ ಸೆಬಾಸ್ಟಿಯನರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಚೂಂತಾರು ಸರೋಜಿನಿ ಪ್ರತಿಷ್ಠಾನನ ಟ್ರಸ್ಟಿ ಡಾ. ರಾಜಶ್ರೀ ಮೋಹನ್ ಮಾತನಾಡಿ ಸುಂದರವಾದ ಸುದೃಢವಾದ ಹಲ್ಲು ಆರೋಗ್ಯದ ಸಂಕೇತ. ಆರೋಗ್ಯವಂತ ಹಲ್ಲು ದೇಹದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತೀ ಅವಶ್ಯಕ. ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹಲ್ಲಿನ ಪರೀಕ್ಷೆ ಮಾಡಿಸಿಕೊಳ್ಳಿ. ಹಲ್ಲಿನ ಆರೋಗ್ಯಕ್ಕೆ ಮತ್ತು ದೇಹದ ಆರೋಗ್ಯಕ್ಕೆ ಪೂರಕವಾದ ಹಸಿ ತರಕಾರಿ ಹಣ್ಣು ಹಂಪಲುಗಳನ್ನು ಹೆಚ್ಚು ತಿನ್ನಬೇಕು. ಜಂಕ್ ಫುಡ್‍ಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಲೀಡಿಯಾ ಡಿಸೋಜ, ಶಿಕ್ಷಕಿಯರುಗಳಾದ ಕವಿತ ಮತ್ತು ಸುಮಾ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಉಪಸ್ಥಿತರಿದ್ದರು. ಇದೇ ಸಂದರ್ಭ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಸಮಾಜಕ್ಕೆ ಅಂಟಿಕೊಂಡಿರುವ ಅನೇಕ ಸಾಮಾಜಿಕ ಪಿಡುಗುಗಳ ಪೈಕಿ ಬಾಲ್ಯ ವಿವಾಹ ಕೂಡ ಒಂದು. ಬಾಲ್ಯ ವಿವಾಹ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಧರ್ಮ, ಪಂಗಡಗಳಲ್ಲೂ ನಡೆಯುತ್ತಿರುವುದನ್ನು ಕಾಣುತ್ತೇವೆ. ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಯಿಂದ ಸಣ್ಣವಯಸ್ಸಿನ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಚಿಕ್ಕ ಪ್ರಾಯದಲ್ಲೇ ಗರ್ಭಧಾರಣೆಯ ಅಪಾಯವನ್ನು ಎದುರಿಸುತ್ತಾರೆ ಮತ್ತು ನಿರಂತರ ಲೈಂಗಿಕ ಮತ್ತು ದೈಹಿಕ ಶೋಷಣೆಗೆ ತುತ್ತಾಗುತ್ತಾರೆ. ಬಾಲ್ಯವಿವಾಹ ಅಂದರೇನು?: 21 ವರ್ಷ ತುಂಬದ ಹುಡುಗ ಮತ್ತು 18 ವರ್ಷ ತುಂಬದ ಹುಡುಗಿಯನ್ನು ಬಾಲಕ/ಬಾಲಕಿ ಎಂದು ಪರಿಗಣಿಸಲಾಗುತ್ತದೆ. ವಿವಾಹವಾಗಲು ನಿಗದಿ ಪಡಿಸಿರುವ ಅರ್ಹ ವಯಸ್ಸು ಹುಡುಗನಿಗೆ 21 ವರ್ಷಗಳು ಮತ್ತು ಹುಡುಗಿಗೆ 18 ವರ್ಷಗಳು. ಆದ್ದರಿಂದ ವಿವಾಹವಾಗುವ ಗಂಡು/ಹೆಣ್ಣಿನಲ್ಲಿ ಯಾರಾದರೊಬ್ಬರು ನಿಗದಿಪಡಿಸಿದ ವಯಸ್ಸನ್ನು ಪೂರ್ಣಗೊಳಿಸದಿದ್ದರೆ ಅದು ಬಾಲ್ಯ ವಿವಾಹ ಎಂದು ಕರೆಯಲ್ಪಡುತ್ತದೆ. ಸಣ್ಣ ವಯಸ್ಸಿನಲ್ಲೇ ಸಂಸಾರದ ಹೊಣೆ: ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯಲ್ಲಿ ಹೆತ್ತವರು ತಮ್ಮ ಹದಿಹರೆಯದ ಹೆಣ್ಣನ್ನು ಮದುವೆ ಮಾಡಿಕೊಡುವ ಮೂಲಕ ಸಣ್ಣ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಬಾಳೆಪುಣಿ : ಮಹಾತ್ಮಾ ಗಾಂಧಿ ರಾಷ್ಟಿ ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿ ನಡೆಸಲು ಅವಕಾಶವಿದ್ದು ಈ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮದ ಅತಿ ಹೆಚ್ಚಿನ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಡಾ.ಎಂ.ಆರ್.ರವಿ ಹೇಳಿದರು. ಬಾಳೆಪುಣಿ ಗ್ರಾಮ ಪಂಚಾಯಿತಿಯ ಹೂ ಹಾಕುವ ಕಲ್ಲಿನ ಜಿ.ಪ.ಹಿ.ಪ್ರಾ. ಶಾಲೆಯ ರಂಗಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಾಳೆಪುಣಿ, ನರಿಂಗಾನ, ಪಜೀರು, ಇರಾ ಹಾಗೂ ಕುರ್ನಾಡು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕೊಳವೆ ಬಾವಿ ತೋಡಿ ನೀರು ಸಿಗದಿರುವುದು ಸಾಮಾನ್ಯವಾಗಿಬಿಟ್ಟಿದ್ದು ಅದಕ್ಕಾಗಿ ಬದಲಿ ಪರಿಹಾರ ಅಗತ್ಯವಿದೆ. ಹಾಗಾಗಿ ನೂರಾರು ವರ್ಷದಿಂದ ಮುಚ್ಚಿ ಹೋಗಿರುವ ಕೆರೆಯನ್ನು…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:   ಇಲ್ಲಿನ ಜಂಕ್ಷನ್ನಿನ ರಸ್ತೆಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ವಿವಿಧ ವಸ್ತುಗಳ ಮಳಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಭಾರೀ ಅಗ್ನಿ ಅವಘಢ ಸಂಭವಿಸಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘmನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದ್ದು, ಎರಡು ವಾರಗಳಲ್ಲಿ ತೊಕ್ಕೊಟ್ಟುವಿನಲ್ಲಿ ಸಂಭವಿಸಿದ ನಾಲ್ಕನೇ  ಅಗ್ನಿ ಪ್ರಕರಣ ಇದಾಗಿದೆ. ಮಂಗಳವಾರ ತಡರಾತ್ರಿ 11ರ ವೇಳೆಗೆ  ಏಕಾಏಕಿ   ಬಾಂಬೆ ಬಝಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲೆ ವ್ಯಾಪಕವಾಗಿ ಹರಡಲು ಆರಂಭವಾಗಿ ಇಡೀ ಮಳಿಗೆಯನ್ನೇ ವ್ಯಾಪಿಸಿತು. ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ   ಬೆಂಕಿ ಹತೋಟಿಗೆ ಬರಲಿಲ್ಲ.   ಒಳಗಿದ್ದ ಸೊತ್ತುಗಳೆಲ್ಲವೂ ಉರಿದು, ತಗಡು ಶೀಟುಗಳು ಕೆಂಡದಂತಾಗಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡುವಷ್ಟರಲ್ಲಿ  ಬಝಾರ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ನಾಲ್ಕನೇ ಅವಘಢ: ಫೆ.23 ರ ತಡರಾತ್ರಿ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರು.  ಫೆ.27ರ ತಡರಾತ್ರಿ ತೊಕ್ಕೊಟ್ಟು  ರೈಲ್ವೇ ಹಳಿ ಸಮೀಪ ಎರಡು ಗೂಡಂಗಡಿಗಳು ಬೆಂಕಿಗೆ ಆಹುತಿಯಾಗಿತ್ತು.…

Read More

ನರಿಂಗಾನ: ಜಿಲ್ಲೆಯಾದ್ಯಂತ 1,000 ಕಿಂಡಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಕಳೆದ ವರ್ಷದ ಬರ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಸರಕಾರ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಕೃಷಿಗೆ ಪೂರಕವಾಗಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಮಹಾತ್ಮಾ ಗಾಂಧಿ ರಾಷ್ಟಿ ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲ ಬಾಳಿಕೆಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಅಣೆಕಟ್ಟು ನಿರ್ಮಾಣದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ನೇತ್ರಾವತಿ ನದಿ ಹರಿಯುತ್ತಿದ್ದರೂ, ಜನರಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಕೃಷಿ ಚಟುವಟಿಕೆಗೂ ಬಹಳ ತೊಂದರೆಯಾಗಿತ್ತು. ಕೊಳವೆ ಬಾವಿಗಳ ನಿರ್ಮಾಣದಿಂದ ಭೂಮಿಯ ಮೇಲೆ ಮಾನವ ಅತ್ಯಾಚಾರ ನಡೆಸುವಂತಹ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ 600 ಅಡಿಯಷ್ಟು ಕೊಳವೆ ಬಾವಿ ನಿರ್ಮಿಸುವ ಮೂಲಕ ಜಿಲ್ಲೆಗೂ ಕೋಲಾರ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ವಾಜಪೇಯಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 100 ಮನೆಗಳ ವಿತರಿಸುವ ಯೋಜನೆಯಿದ್ದು, ಉಳ್ಳಾಲ ಮತ್ತು ಮಂಗಳೂರು ಕ್ಷೇತ್ರದ ಅಭಿವೃದ್ಧಿಗೆ ಸುಮಾರು 260 ಕೋಟಿ ಅನುದಾನ ನೀಡಲಾಗಿದೆ ಎಂದು ಎಂದು ರಾಜ್ಯ ಲೋಕೋಪಯೋಗಿ ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ| ಎಚ್.ಸಿ.ಮಹಾದೇವಪ್ಪ ತಿಳಿಸಿದರು. ಉಳ್ಳಾಲ ನಗರದಭೆಯಲ್ಲಿ ಸುಮಾರು 3.7 ಕೋಟಿ ರೂ ವೆಚ್ಚದಲ್ಲಿ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರದ ಜೆ.ಆರ್. ಲೋಬೋ ಅವರ ಕೇಲಿಕೆಯಯ ಮೇರೆಗೆ ಹಲವಾರು ಅನುದಾನಗಳನ್ನು ಬಿಡುಗಡೆ ಮಾಡಿದ್ದು, ಕರಾವಳಿ ರಕ್ಷಣೆ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಇಲ್ಲಿಗೆ ಹರಿದು ಬರಲಿದೆ. ಉಳ್ಳಾಲಕ್ಕೆ ಈಗಾಗಲೇ ನಗರೋತ್ಥಾನ ಅನುದಾನದಡಿ 25 ಕೋಟಿ ಬಿಡುಗಡೆಯಾಗಿದ್ದು, 10 ಕೋಟಿಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಲಾಗಿದ್ದ 165 ಭರವಸೆಗಳ ಪೈಕಿ 135 ಈಡೇರಿಸಲಾಗಿದ್ದು, ಇನ್ನುಳಿದ ಭರವಸೆಗಳನ್ನು…

Read More

ಉಚ್ಚಿಲ: ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ತಡೆ ಯೋಜನೆಗೆ ಪರಿಣತ ಸಮಿತಿಯಿಂದ ಸಲಹೆ ಪಡೆದು ಟೆಂಡರ್ ಕರೆಯಲಾಗಿದ್ದು, ಮುಂಗಾರು ಮುಗಿದ ತಕ್ಷಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು. ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮುದ್ರ ತೀರದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸೋಮೇಶ್ವರ ಉಚ್ಚಿಲ ಸಮುದ್ರ ತೀರಕ್ಕೆ ಭೇಟಿ ನೀಡಿದರು. ಉಳ್ಳಾಲ ಭಾಗದಲ್ಲಿ ಬ್ರೇಕ್ ವಾಟರ್ ಕಾಮಗಾರಿ ಕೈಗೊಂಡ ಬಳಿಕ ಸೋಮೇಶ್ವರ ಉಚ್ಚಿಲ ತೀರದಲ್ಲಿ ಅನೇಕ ಮನೆಗಳು ಸಮುದ್ರಪಾಲಾಗಿವೆ. ಇಲ್ಲಿನ ಸಮುದ್ರ ತಡೆ ಯೋಜನೆ ರೂಪಿಸಲು ಪರಿಣತ ತಂಡದಿಂದ ಸಲಹೆಯನ್ನು ಪಡೆಯಲಾಗಿದೆ. ಅದಕ್ಕಾಗಿ ಹೆಚ್ಚುವರಿ 4 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ತಾಂತ್ರಿಕತೆ, ಹಣಕಾಸು ವ್ಯವಸ್ಥೆ ಸಿದ್ಧಗೊಳ್ಳುತ್ತಿದ್ದಂತೆ ಮುಂಗಾರು ಕಳೆದ ತಕ್ಷಣ ಕಾಮಗಾರಿಯನ್ನು ಆರಂಭಿಸುವುದಾಗಿ ಹೇಳಿದರು. ಈ ಸಂದರ್ಭ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ನಗರಸಭೆ ಸದಸ್ಯರು, ಸೋಮೇಶ್ವರ ಪಂ. ಸದಸ್ಯರು ಹಾಗೂ ಬಂದರು…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ದೇಶದಲ್ಲಿ ಜಾತಿಪದ್ದತಿ ವ್ಯವಸ್ಥೆ ದೂರವಾಗಿದ್ದರೂ ಹಿಂದುತ್ವದ ಆಧಾರದಲ್ಲಿ ಆಡಳಿತ ನಡೆಸುವ ರಾಜ್ಯಗಳಲ್ಲಿ ಶೇ.20 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೀಸಲಾತಿಗಳನ್ನು ಒದಗಿಸಲಾಗುತ್ತಿದ್ದು, ಇದು ಹಿಂದಿನ ಜಾತಿಪದ್ಧತಿಗಳನ್ನು ಮತ್ತೆ ನೆನಪಿಸುವಂತಹ ವಾತಾವರಣ ನಿರ್ಮಿಸುವುದರ ಮೂಲಕ ಅಂತಹ ರಾಜ್ಯಗಳಲ್ಲಿ ಅಭಿವೃದ್ಧಿಯೂ ಕುಂಠಿತವಾಗಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ಇದರ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ ಎಂ.ಬಿ.ಎ ಸೆಮಿನಾರ್ ಹಾಲ್ ನಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜೀವನ ತತ್ವ ಪ್ರಸರಣ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿದರು. 19ನೇ ಶತಮಾನದಲ್ಲಿ ಕೇರಳದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಇದ್ದ ವರ್ಣಬೇಧ ಹಾಗೂ ಜಾತಿಪದ್ದತಿ ವ್ಯವಸ್ಥೆಯ ವಿರುದ್ಧ ನಾರಾಯಣ ಗುರು, ಮಹಾತ್ಮ ಫುಲೆ, ಬಸವಣ್ಣ, ಪೆರಿಯಾರ್‍ರಾಮಸ್ವಾಮಿ, ಗುರುನಾನಕ್ ನಂತಹ ಸಮಾಜ ಸುಧಾರಕರು ಹೋರಾಡಿ ನವೋದಯ ಎಂಬ ಹೊಸ ಬದಲಾವಣೆಯನ್ನು ಹುಟ್ಟು ಹಾಕಿದರು. ಸಮಾನತೆ ಹಾಗೂ ಏಕತೆಯ ಉದ್ದೇಶವನ್ನಿಟ್ಟುಕೊಂಡು ಸಮಾಜ ಸುಧಾರಣೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದರು.…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಧಾರ್ಮಿಕ ಕ್ಷೇತ್ರದಲ್ಲಿದ್ದುಕೊಂಡು ವಿದ್ಯಾರ್ಜನೆಗೈದರೆ ಮಾತ್ರ ಧರ್ಮ ಮತ್ತು ಸಂಪ್ರದಾಯದ ಬಗ್ಗೆ ಅರಿವು ಮೂಡಲು ಸಾಧ್ಯ. ಹಿರಯರು, ಗುರುಗಳು, ಪವಾಢ ಪುರುಷರಿಗೆ ಸಲ್ಲಬೇಕಾದ ಗೌರವವನ್ನು ನೀಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಸಯ್ಯದ್ ಆಟಕೋಯ ತಂಙಳ್ ಹೇಳಿದರು. ಅವರು ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹುಸೈನ್ ಮುಸ್ಲಿಯಾರ್‍ರವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಕೂಟು ಝಿಯಾರತ್ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಗೆ ಗೌರವ ಜಾಸ್ತಿ ಇದೆ. ಈ ಪ್ರಾರ್ಥನೆಯಿಂದ ನಮಗೆ ಪ್ರತಿಫಲ ಕೂಡಾ ಸಿಗುತ್ತದೆ. ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಂಡು ಹೆಚ್ಚು ಪುಣ್ಯ ಗಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು. ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹುಸೈನ್ ಕುಂಞ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಮಸೀದಿಯ ಮುದರ್ರಿಸ್ ಅಬೂಬಕರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಿದರು. ಸಯ್ಯದ್ ಭಾತಿಷ್ ತಂಙಳ್ ಅಝ್‍ಅರಿ, ಕುತುಬಿನಗರ ಮಸೀದಿ ಖತೀಬ್ ಅಬ್ದುರ್ರಝಾಕ್ ಮದನಿ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಹೊಸದಿಲ್ಲಿ : ಸುಮಾರು 30 ವರ್ಷಗಳ ಕಾಲ ಭಾರತೀಯ ನೌಕಾಪಡೆಗೆ ಅಮೂಲ್ಯವಾದ ಸೇವೆ ಸಲ್ಲಿಸಿದ ಐಎನ್ಎಸ್ ವಿರಾಟ್ ತನ್ನ ಸೇವೆಯಿಂದ ನಿವೃತ್ತಿಯಾಗಲಿದ್ದು ಎರಡನೇ ಬೃಹತ್ ಸಮರ ನೌಕೆಯಾಗಿರುವ ಐಎನ್ಎಸ್ ವಿರಾಟ್ ಸೋಮವಾರ ವಿದಾಯ ಹೇಳಲಿದೆ. ಐಎನ್ಎಸ್ ವಿರಾಟ್ ಭಾರತೀಯ ನೌಕಾ ಪಡೆಯು ಈ ಮೊದಲು ಬ್ರಿಟನ್ನ ರಾಯಲ್ ನೇವಿಯೊಂದಿಗೆ ಸೇವೆ ಸಲ್ಲಿಸುವ ಮೂಲಕ 27 ಬಾರಿ ವಿಶ್ವ ಪರ್ಯಟನೆ ಮಾಡಿದೆ. ಬರೋಬ್ಬರಿ 11 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದೆ. ಭಾರತೀಯ ನೌಕಾ ಪಡೆ ಕಳೆದ 30 ವರ್ಷಗಳಲ್ಲಿ ಕೈಗೊಂಡಿರುವ ಹಲವಾರು ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಐಎನ್ಎಸ್ ವಿರಾಟ್, ಆಪರೇಶನ್ ಪವನ್ ಮತ್ತು ಪರಾಕ್ರಮ್ ಆ ಪೈಕಿ ಪ್ರಮುಖವಾಗಿವೆ. ಮುಂಬಯಿಯಿಲ್ಲ ಇಂದು ಸೋಮವಾರ ಐಎನ್ಎಸ್ ವಿರಾಟ್ ವಿದಾಯ ಕಾರ್ಯಕ್ರಮ ನಡೆಯಲಿದ್ದು ಸುಮಾರು 21 ಮಾಜಿ ಕಮಾಂಡರ್ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಐಎನ್ಎಸ್ ವಿರಾಟ್ ನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಪ್ರಸ್ತಾವವದಲ್ಲಿ ಆಂಧ್ರ ಪ್ರದೇಶ ಸರಕಾರ ಆಸಕ್ತಿ ತೋರಿತ್ತು. ಆದರೆ…

Read More