Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ವಿಮಾನ ಸುತ್ತಾಟದಲ್ಲಿ ಮೋದಿ ಬ್ಯುಸಿ

UllalaVaniBy UllalaVaniMarch 16, 2017Updated:March 16, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಪ್ರಧಾನಿ ಮೋದಿ ವಿಮಾನದಲ್ಲಿ ಹಾರಾಡಿ ಉತ್ಕøಷ್ಟ ಆಹಾರ ತಿನ್ನುವುದರಲ್ಲೇ ನಿರತರಾಗಿದ್ದಾರೆ. ಇಲ್ಲಿ ಬಡ ಜನತೆ ಊಟವಿಲ್ಲದೆ ಉಪವಾಸ ಸತ್ತರೂ, ಅವರು ಕಾರ್ಪೊರೇಟ್ ಸಂಸ್ಥೆಗಳ ಏಳಿಗೆಗಾಗಿ ಮಾತ್ರ ದುಡಿಯುತ್ತಿದ್ದಾರೆ ಎಂದು ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹೇಳಿದ್ದಾರೆ.

ಅವರು ಕೇಂದ್ರ ಸರಕಾರದ ಜನವಿರೋಧಿ ಮತ್ತು ಬೆಲೆ ಏರಿಕೆಯ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

DSC_0166 DSC_0167 DSC_0168 DSC_0169 DSC_0171 DSC_0173 DSC_0176 DSC_0178 DSC_0182 DSC_0184 DSC_0187 DSC_0188 DSC_0189ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಮೋದಿ ಸರಕಾರ ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಬಡಜನರಿಗೆ ಜೀವನ ನಡೆಸುವಂತಹ ವಾತಾವರಣ ನಿರ್ಮಿಸುತ್ತಿಲ್ಲ. ಕಾರ್ಪೊರೇಟ್ ಕುಳಗಳ ಪರವಾಗಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿಬೇಕಾದ ಪ್ರತಿಪಕ್ಷಗಳು ಮೌನಸಮ್ಮತಿಯನ್ನು ವಹಿಸಿರುವುದು ದುರಾದೃಷ್ಟ. ಬೀದಿಗಳಲ್ಲಿ ಪ್ರತಿಭಟಿಸಿ ಜನರನ್ನು ಮೋಸಗೊಳಿಸುವ ಬದಲು ಪಾರ್ಲಿಮೆಂಟಿನ ಒಳಗಡೆ ದನಿ ಎತ್ತಿ ಪ್ರತಿಭಟಿಸಲು ಮುಂದಾಗದೇ ಮೋದಿ ಪರವಾಗಿಯೇ ಪ್ರತಿಪಕ್ಷಗಳು ನಿಂತಿದೆ ಅನ್ನುವುದನ್ನು ಸಾಬೀತುಪಡಿಸುತ್ತದೆ. ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗುತ್ತಲೇ ಇದೆ. ರೈತರ ಸಾಲಮನ್ನ ಮಾಡಲು ಎರಡು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದೆ. ಎಸ್ ಡಿಪಿಐ ಚುನಾವಣೆ ಎದುರಿಸಲು ಮಾತ್ರವಿರುವ ರಾಜಕೀಯ ಪಕ್ಷವಾಗಿರದೆ, ನ್ಯಾಯಕ್ಕಾಗಿ ಹೋರಾಟ ನಡೆಸುವ ಉದ್ದೇಶದಿಂದ ಹುಟ್ಟಿಕೊಂಡಿದೆ. ಪ್ರಧಾನಿ ಮೋದಿ ವಿಮಾನದಲ್ಲಿ ಹಾರಾಡಿ ಉತ್ಕøಷ್ಟ ಆಹಾರ ತಿನ್ನುವುದರಲ್ಲೇ ನಿರತರಾಗಿದ್ದಾರೆ. ಇಲ್ಲಿ ಬಡ ಜನತೆ ಊಟವಿಲ್ಲದೆ ಉಪವಾಸ ಸಾಯುತ್ತಿದ್ದಾರೆ. ಕಪ್ಪು ಹಣ ಮಟ್ಟ ಹಾಕಿ ನಾಟಕವಾಡಿರುವ ಕೇಂದ್ರ ಸರಕಾರ ಅದನ್ನೇ ಉಪಯೋಗಿಸಿಕೊಂಡು ಉತ್ತರಪ್ರದೇಶ, ಮಣಿಪುರ, ಗೋವಾದಲ್ಲಿ ಸರಕಾರವನ್ನು ಯಶಸ್ವಿಯಾಗಿ ರಚಿಸಿಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದರೂ ದೇಶದಲ್ಲಿ ಕಡಿಮೆಯಾಗಿಲ್ಲ. ಬಡಜನರನ್ನು ಮೋಸಗೊಳಿಸುವ ಮತ್ತು ಅವರನ್ನು ದೇಶದಿಂದ ಓಡಿಸುವ ಕೆಲಸ ಮೋದಿ ಸರಕಾರದಿಂದ ಆಗುತ್ತಿದೆ. ಅಂಬಾನಿ, ಅಧಾನಿ, ಬಿಜೆಪಿ ಶಾಸಕರು, ಸಚಿವರಿಗೆ ಮಾತ್ರ ಒಳ್ಳೆಯ ದಿನಗಳು ಆರಂಭವಾಗಿದೆ. ಮುಖಕ್ಕೆ ಮಸಿ ಬಳಿಯುವ ಸಿದ್ಧಾಂತ ಹೊಂದಿರುವ ಸರಕಾರಕ್ಕೆ, ಬಿಸಾಡಿದ ಮಸಿಯನ್ನು ಬಳಸಿಕೊಂಡೇ ಪ್ರತಿಭಟನೆ ನಡೆಸುವ ಶಕ್ತಿ ಎಸ್‍ಡಿಪಿಐ ನಲ್ಲಿದೆ ಎಂದು ತೋರಿಸಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭ ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಅಧ್ಯಕ್ಷ ಅಬ್ಬಾಸ್ ಕಿನ್ಯ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಉಪಾಧ್ಯಕ್ಷ ನೌಶಾದ್ ಕಲ್ಕಟ್ಟ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಕಾರ್ಯದರ್ಶಿ ಹಾರಿಸ್ ಮಲಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಜೊತೆ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಕೋಶಾಧಿಕಾರಿ ಎ.ಆರ್.ಅಬ್ಬಾಸ್ ಉಳ್ಳಾಲ, ಝೂಹಿದ್ ಮಲಾರ್, ಸಂಶುದ್ದೀನ್ ಮುಡಿಪು, ಹಸೈನಾರ್ ಕೊಣಾಜೆ, ಫಯಾಝ್ ಮಂಜನಾಡಿ, ಅಶ್ರಫ್ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ

August 15, 2026

ನೂರುಲ್ ಇಸ್ಲಾಂ ಮದ್ರಸ ಬಾಳೆಪುಣಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

August 15, 2026

ಹಿದಾಯತ್ ನಗರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

By UllalaVaniAugust 15, 20260

ದೇರಳಕಟ್ಟೆ: ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15, 2026ರಂದು ಕಣಚೂರು ಶಿಕ್ಷಣ…

ಬಗಂಬಿಲ ಫ್ರೆಂಡ್ಸ್ ಸರ್ಕಲ್ ಬಗಂಬಿಲ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026

ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ

August 15, 2026

ನೂರುಲ್ ಇಸ್ಲಾಂ ಮದ್ರಸ ಬಾಳೆಪುಣಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

August 15, 2026
1 2 3 … 2,060 Next
Automatic YouTube Gallery

ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ  ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ
Now Playing
ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ...
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Now Playing
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version