ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಎಲ್ಲರೂ ಚಲನಚಿತ್ರವನ್ನು ನೋಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಸಿನಿಮಾಗಳನ್ನು ಮಾತ್ರ ನೋಡದೆ ಕೆಟ್ಟ ಸಿನಿಮಾಗಳನ್ನು ಕೂಡಾ ನಾವು ನೋಡಬೇಕು. ಕೆಲವರಿಗೆ ಇಷ್ಟವಾಗದ್ದು ನಮಗೆ ಇಷ್ಟವಾಗಬಹುದು. ಅಥವಾ ಸಿನಿಮಾವು ಎಲ್ಲಿ ಎಡವಿದೆ ಎಂಬ ಪರಾಮರ್ಷೆಯನ್ನು ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ತುಳು ಚಲನಚಿತ್ರ ನಿರ್ದೇಶಕ ಡಾ.ರಿಚರ್ಡ್ ಕ್ಯಾಸ್ಟಲಿನೋ ಅವರು ಅಭಿಪ್ರಾಯಪಟ್ಟರು ಅವರು ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿಭಾಗದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಇಂದು ತಂತ್ರಜ್ಞಾನದ ಯುಗವಾಗಿದ್ದು ಸಿನಿಮಾ ರಂಗದಲ್ಲೂ ನಾವು ಸಾಕಷ್ಟು ಆಧುನಿಕತೆ ಮತ್ತು ಬದಲಾವಣೆಗಳಾಗಿರುವುದನ್ನು ಗಮನಿಸಬಹುದು. ಸಿನಿಮಾ ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ನಾವು ಸಿನಿಮಾ ರಂಗದ ಹಲವು ಮಗ್ಗುಲುಗಳನ್ನು ಅರಿತುಕೊಂಡರೆ ಮುಂದಿನ ದಿನಗಳಲ್ಲಿ ನಾವು ಕೂಡಾ ಈ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮೂಹ ಸಂವಹನ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬ್ಲಮೊಗರು: ಅಂಬ್ಲಮೊಗರು ಪಂಚಾಯತ್ ವ್ಯಾಪ್ತಿಯ ತಾರಿಪಡ್ಪು ಎಂಬಲ್ಲಿ ಕೊಳವೆಬಾವಿ ತೆಗೆಯುವುದನ್ನು ವಿರೋಧಿಸಿದ ತಾರಿಗುಡ್ಡೆ ಕೆರೆಬೈಲು, ಬರುವ ನಿವಾಸಿಗಳು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಗುರುವಾರ ನಡೆದಿದೆ. ತಾರಿಪಡ್ಪು ಪ್ರದೇಶದಲ್ಲಿ ಈಗಾಗಲೇ ಮೂರು ಕೊಳವೆಬಾವಿಗಳನ್ನು ಕೊರೆಯಲಾಗಿದೆ. 100 ಕ್ಕಿಂತಲೂ ಅಧಿಕ ಮನೆಗಳಿಗೆ ಪಂಚಾಯಿತಿ ವತಿಯಿಂದ ಕೊಡುತ್ತಿರುವ ನೀರು ಇಲ್ಲಿನ ಕೊಳವೆಬಾವಿಗಳಿಂದಲೇ ಹೋಗುತ್ತಿದೆ. ಮತ್ತೆ ಇದೀಗ ಗ್ರಾಮದ 300 ರಷ್ಟು ಮನೆಗಳಿರುವ ಮದಕ ಪ್ರದೇಶಕ್ಕೆ ನೀರು ಕೊಡಲು ತಾರಿಪಡ್ಪು ಬಳಿ ಕೊಳವೆಬಾವಿ ನಿರ್ಮಿಸಲು ಇಂದು ಬೋರ್‍ವೆಲ್ ಕೊರೆಯುವ ಯಂತ್ರ ಆಗಮಿಸಿತ್ತು. ಇದನ್ನು ಕಂಡ ಸ್ಥಳೀಯರು ಕಾಮಗಾರಿ ನಡೆಸದಂತೆ ತಡೆಯೊಡ್ಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಅಂಬ್ಲಮೊಗರು ಪಂಚಾಯತ್ ಅಧ್ಯಕ್ಷ ರಫೀಕ್ ಅವರ ಜತೆಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿ ಮೂರು ಕೊಳವೆಬಾವಿ ನಿರ್ಮಿಸಿದಾಗಲೂ ವಿರೋಧ ವ್ಯಕ್ತಪಡಿಸಿಲ್ಲ. ಇಡೀ ಅಂಬ್ಲಮೊಗರು ಪಂಚಾಯಿತಿ ವ್ಯಾಪ್ತಿ ಬಹುದೊಡ್ಡ ಇರುವಾಗ ಒಂದೇ ಪ್ರದೇಶವನ್ನು ಕೇಂದ್ರೀಕರಿಸಿ ಕೊಳವೆ ಬಾವಿ ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಸ್ಥಳದಲ್ಲಿರುವ ಮನೆಗಳ ಬಾವಿಗಳಲ್ಲಿ ಈಗಾಗಲೇ ನೀರು ಬತ್ತಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ನರಿಂಗಾನ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡಿನ ಸಿ.ಎಚ್.ರಹ್ಮಾನ್ ಅವರ ಅನುದಾನದಿಂದ ಚಂದಹಿತ್ತುಲುನಿಂದ ಕಟ್ಟೆಪುಣಿತನಕ ನಿರ್ಮಾಣಗೊಂಡ ನೂತನ ರಸ್ತೆಯನ್ನು ಆಹಾರ ಸಚಿವರಾದ ಯು.ಟಿ.ಖಾದರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ನರಿಂಗಾನ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಂಚಾಯಿತಿ ಸದಸ್ಯ ಸಿ.ಎಚ್.ರಹ್ಮಾನ್, ಪಯಾಝ್ ಮೊಂಟೆಪದವು, ಲತೀಫ್ ಕಾಪಿಕಾಡ್, ಸೆಫಿಯಾ ವಿದ್ಯಾನಗರ, ಪದ್ಮನಾಭ ನರಿಂಗಾನ, ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ಖಾದರ್ ಕಟ್ಟೆಪುಣಿ, ಹನೀಫ್ ಚಂದಹಿತ್ತುಲು, ಶಾಕಿರ್, ಚಂದ್ರ ಗಟ್ಟತಡಿ, ಖಲೀಲ್, ಲತೀಫ್, ಅಹ್ಮದ್ ಕುಂಞ ಹಮೀದ್ ಹಾಜಿ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು :ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ಬುಧವಾರ ನಡೆದ 5ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 7ಮಂದಿ ಬಡ ಹೆಣ್ಣು ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಸಿರಿಸಿದರು. ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇಲ್ಲಿನ ಖತೀಬರಾದ ಮುಹಮ್ಮದ್ ಶಮೀಮ್ ಸಖಾಫಿ ಅವರು ದುವಾ ನೆರವೇರಿಸಿದರು. ಬೋಳಂಗಡಿ ಹವ್ವಾ ಮಸ್ಜಿದ್ ಖತೀಬರಾದ ಸಯ್ಯದ್ ಯಾಹ್ಯಾ ತಂಗಳ್ ಜೋಡಿಗಳಿಗೆ ಸಂದೇಶ ನೀಡಿದರು. ಮುಹಿಯಗಯುದ್ದೀನ್ ಜುಮಾ ಮಸ್ಜಿದ್ ಮೇಲಂಗಡಿ ಉಳ್ಳಾಲ ಇಲ್ಲಿನ ಖತೀಬರಾದ ಯೂಸುಫ್ ಮಿಸ್ಬಾಹಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್,.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ. ರಶೀದ್, ಉಳ್ಳಾಲ ಶ್ರೀ ಚೀರಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ದ.ಕ.ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ,…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಮಂಗಳೂರು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಎಪ್ರಿಲ್ ತಿಂಗಳಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾಗಲಿದ್ದು, ಮಂಗಳೂರು ಘಟಕ ಕಾಲೇಜುಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ. ಮಂಗಳವಾರ ವಿವಿಯ ಹೊಸ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಹಾಗೂ 2017-18ನೇ ಸಾಲಿನ ಬಜೆಟ್ ಮಂಡನಾ ಸಭೆಯಲ್ಲಿ ಹೇಳಿದರು. ವಿವಿಯಲ್ಲಿ ಹಲವು ವಿಭಾಗಗಳಿರುವುದರಿಂದ ಕೆಲವೊಂದು ಕೊರತೆಗಳು ಸಾಮಾನ್ಯ, ಆದರೂ ಶೈಕ್ಷಣಿಕವಾಗಿ ತೊಂದರೆಯಾಗದ ರೀತಿಯಲ್ಲಿ ನೂತನ ತಂತ್ರಜ್ಞಾನಗಳನ್ನು ನಿಭಾಯಿಸಲಾಗುತ್ತಿದೆ. ವಿವಿಯಲ್ಲಿ ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋಸೊಟೊಫರ್ಸ್ ಆ್ಯಂಡ್ ರೇಡಿಯೇಶನ್ ಟೆಕ್ನಾಲಜಿ (ಸಿಎಆರ್‍ಆರ್‍ಟಿ) ಸ್ಥಾಪನೆ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 22 ಕೋಟಿ ಯೋಜನೆಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿ ಹಾಗೂ ಅತಿಥಿ ಗೃಹ ನಿರ್ಮಾಣವಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳ ಪೋಷಕರಿಗೂ ಅನುಕೂಲವಾಗಲಿದೆ ಎಂದ ಅವರು ಮಂಗಳೂರು ವಿವಿಯಡಿ 150 ಖಾಸಗಿ, 32 ಸರ್ಕಾರಿ, 19ಬಿಎಡ್-ಬಿಪಿಟಿ, 5 ಸ್ವಾಯತ್ತೆ ಹಾಗೂ ನಾಲ್ಕು ವಿವಿ ಘಟಕ ಕಾಲೇಜುಗಳ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ.22 ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ 7 ಜತೆ ಬಡ ಹೆಣ್ಣು ಮಕ್ಕಳಿಗೆ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಟ್ರಸ್ಟಿನ ಸದಸ್ಯ ಕೆಎಂಕೆ ಮಂಜನಾಡಿ ಹೇಳಿದರು. ತೊಕ್ಕೊಟ್ಟು ಅಳೇಕಲದ ಟ್ರಸ್ಟ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಳೆದ 4 ವರ್ಷಗಳಿಂದ 40 ಜತೆ ಉಚಿತ ಸಾಮೂಹಿಕ ವಿವಾಹವನ್ನು ಟ್ರಸ್ಟ್ ನೆರವೇರಿಸಿದೆ. ಈ ವರ್ಷ 10 ಜತೆ ಉಚಿತ ಸಾಮೂಹಿಕ ವಿವಾಹ ಮಾಡುವ ಯೋಜನೆಯನ್ನು ಹಾಕಿತ್ತು. ಆದರೆ ಆಯ್ಕೆ ಸಂದರ್ಭ 7 ಕುಟುಂಬಗಳು ಮಾತ್ರ ಆಯ್ಕೆ ಮಾಡಲಾಗಿದೆ. ಮುಂದಿನ 3 ಜತೆ ವಿವಾಹವನ್ನು ಬಡ ಹೆಣ್ಮಕ್ಕಳನ್ನು ಹುಡುಕಿ ರಂಝಾನ್ ನಂತರ ಅವರವರ ಮನೆಗಳಲ್ಲಿ ನಡೆಸಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ವಿವಾಹವಾದವರು ಸುಖಮಯ ಜೀವನ ನಡೆಸುತ್ತಿದ್ದಾರೆ. ಟ್ರಸ್ಟ್ ಎಲ್ಲಾ ಧರ್ಮದಲ್ಲಿರುವ ಕಡುಬಡವರನ್ನು ಗುರುತಿಸಿ ಅವರಿಗೆ ಮಾಸಿಕ ರೇಷನ್ ವಿತರಣೆ,…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇಲ್ಲಿನ ಕೈಕೋ ಮೀನಿನ ಕಾರ್ಖಾನೆಗೆ ಕೆಲಸಕ್ಕೆಂದು ಬಂದಿದ್ದ ಉತ್ತರಕನ್ನಡ ಹಳಿಯಾಳ ಮೂಲದ ಬಾಬು ಚಿಮನು ಬಾಜಾರಿ ಅವರ ಪುತ್ರಿ ದೊಂಡಿಬಾಯಿ ಚಿಮನು ಬಾಜಾರಿ(20) ಮತ್ತು ಆಕೆಯನ್ನು ಕೆಲಸಕ್ಕೆ ಸೇರಿಸಿದ ಯಲ್ಲಾಪುರದ ಸುನಿತಾ ದುಳು ಬಿಚ್ಚಕಲೆ ಎಂಬವರು ಹಳಿಯಾಳ ಪೊಲೀಸ್ ಠಾಣೆಗೆ ಸೋಮವಾರ ತೆರಳಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದ ದೊಂಡಿ ಬಾಯಿ ಹೋಳಿಗೆ ಊರಿಗೆ ಬರುವವಳಿದ್ದಳು. ಅದರೆ ಈಕೆ ಹೋಳಿ ಹಬ್ಬಕ್ಕೆ ಬಾರದೆ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾಳಿಗೆ ಕರೆ ಮಾಡಿದಾಗ ಅಕೆಯೂ ಕರೆ ಸ್ವೀಕರಿಸದೇ ಇದ್ದಾಗ ಮನೆಯವರಿಗೆ ಅತಂಕ ಉಂಟಾಗಿತ್ತು. ಇದರಿಂದ ಅತಂಕಿತರಾದ ಈಕೆಯ ಸಂಬಂಧಿಕರು ಉಳ್ಳಾಲದಲ್ಲಿ ಈಕೆಯ ಹುಡುಕಾಟದಲ್ಲಿ ತೊಡಗಿದ್ದು, ಶುಕ್ರವಾರ ಬೆಳಿಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಯುವತಿ ಮಾರಾಟ ನಡೆದಿರುವ ಆರೋಪಗಳು ರಾಜ್ಯಾದ್ಯಂತ ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಉಳ್ಳಾಲ ಪೊಲೀಸರು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಜೆಪ್ಪು: ಮಂಗಳೂರಿನ ಕೆಲರಾಯಿಯ ಪ್ರೆಸಿಡೆನ್ಸಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪ್ರೆಸಿಡೆನ್ಸಿ ಅಂತರ್ ಶಾಲಾ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯ 6ರಿಂದ 8ರ ಹರೆಯದ ಬಾಲಕರ ವಿಭಾಗದಲ್ಲಿ ಪ್ರೆಸಿಡೆನ್ಸಿ ಶಾಲಾ ವಿದ್ಯಾರ್ಥಿ ಮಹಮ್ಮದ್ ಫರಾಝ್ ಅಲಿ ಅವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಫರಾಝ್ ಅವರು ಉಮ್ಮರ್ ಫಾರೂಕ್ ಹಾಗೂ ಝರೀನಾ ದಂಪತಿಯ ಪುತ್ರ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಶಿಕ್ಷಣಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಕೆಯ ರೂಪದಲ್ಲಿ ಅಧ್ಯಯನ ಮಾಡುವ ಮೂಲಕ ಎಲ್ಲರಿಗೂ ಶಿಕ್ಷಣವನ್ನು ನೀಡುವ ಕೆಲಸವನ್ನು ತಾಜುಲ್ ಉಲಮಾರವರು ಮಾಡಿದ್ದರು ಎಂದು ಕೇರಳ ಎಸ್ ಎಂಎ ಉಪಾಧ್ಯಕ್ಷ ಮಹಮ್ಮದ್ ಕುಂಞÂ ಸಖಾಫಿ ಕೊಲ್ಲಂ ಹೇಳಿದರು. ಅವರು ಮುಹಿಮ್ಮಾತ್ ಮುಸ್ಲಿಮೀನ್ ಎಜುಕೇಶನಲ್ ಸೆಂಟರ್, ಎಸ್‍ವೈಎಸ್ ದೇರಳಕಟ್ಟೆ ಸೆಂಟರ್, ಎಸ್‍ಜೆಎಂ ದೇರಳಕಟ್ಟೆ ರೇಂಜ್ ಇದರ ಸಂಯುಕ್ತ ಆಶ್ರಯದಲ್ಲಿ ಮುಹಿಮ್ಮಾತ್ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರಾರ್ಥ ಈ ಶತಮಾನದ ಸಮುದಾರಕ ತಾಜು ಲ್ ಉಲಮಾ ಎಂಬ ವಿಚಾರದ ಕುರಿತು ಭಾನುವಾರ ದೇರಳಕಟ್ಟೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು. ಸುನ್ನಿ ಸಮುದಾಯದ ಮತ್ತು ಭಾಷೆಗಳ ಏಳಿಗೆಗೆ ಬಹಳಷ್ಟು ಪ್ರೇರಣೆಯನ್ನು ತಾಜುಲು ಉಲಮಾ ನೀಡಿದ್ದರು. ಅವರ ಪ್ರೇರಣೆಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು. ಮುಹಿಮ್ಮಾತ್ ಮೆನೇಜರ್ ಅಬ್ದುಲ್ ಖಾದಿರ್ ಸಖಾಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಾಫಿಳ್ ಸುಫ್‍ಯಾನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಯ್ಯದ್ ಶರಫುದ್ದೀನ್ ತಂಙಳ್ ಕಾರ್ಯಕ್ರಮವನ್ನು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:ದುಡಿಮೆಯ ಆದಾಯದಿಂದ ಮನೆಗೆ ಬೇಕಾಗುವ ರೇಷನ್ ಸಾಮಾಗ್ರಿಗಳನ್ನು ಕೊಂಡೊಯ್ಯಲು ಸಾಧ್ಯವಾಗದೇ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ರೇಷನ್ ಸಾಮಾಗ್ರಿಗಳನ್ನು ಎಸ್ಎಸ್ಎಫ್ ತೊಕ್ಕೋಟ್ಟು ಸೆಕ್ಟರ್ ರೀಲಿಫ್ ಸವಿರ್ಸ್ ಬಹುತೇಕ ವಿತರಿಸುತ್ತಿದ್ದು ಈ ಕಾರ್ಯ ದೇಶಕ್ಕೆ ಮಾದರಿಯಾಗಿದೆ. ಎಂದು ಎಸ್ಎಸ್ಎಫ್ ಇಹ್ಶಾನ್ ಕರ್ನಾಟಕ ಕನ್ವೀನರ್ ಅಬ್ದುಲ್ ರಹಮಾನ್ ರಝ್ವಿ ಕಲ್ಕಟ್ಟ ಹೇಳಿದರು. ಅವರು ಭಾನುವಾರ ದೇರಳಕಟ್ಟೆಯಲ್ಲಿ ನಡೆದ ಎಸ್ಎಸ್ಎಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸವಿರ್ಸ್ ವತಿಯಿಂದ ರೇಷನ್ ವಿತರಿಸಿ ಮಾತನಾಡಿದರು. ಎಸ್ಎಸ್ಎಫ್ ರಿಲೀಫ್ ಸವಿರ್ಸ್ ಚೆಯರಮನ್ ಅಲ್ತಾಪ್ ಕುಂಪಲ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ , ಎಸ್ಎಸ್ಎಫ್ ತೊಕ್ಕೋಟ್ಟು ಸೆಕ್ಟರ್ ಕೋಶಾಧಿಕಾರಿ ಜುನೈದ್ ಮಧನಿ ನಗರ ಎಸ್ಎಸ್ಎಫ್ ತೊಕ್ಕೋಟ್ಟು ಸೆಕ್ಟರ್ ಉಪಾಧ್ಯಕ್ಷರಾದ ಇಮ್ರಾನ್ ಸ್ವಲಾತ್ ನಗರ , ಎಸ್ಎಸ್ಎಫ್ ಕೊಣಾಜೆ ಸೆಕ್ಟರ್ ನಾಯಕ ಅಬ್ದುಲ್ ಮಜೀದ್ ಉಪಸ್ಥಿತರಿದರು

