ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮಂಗಳೂರು: ರಾಜ್ಯದ ವಿಚಾರವಾದಿ ಕಲಬುರ್ಗಿ ಹತ್ಯೆ ಬಳಿಕ ಇದೀಗ ಮತ್ತೆ ಮಂಗಳೂರಲ್ಲಿ ಮತ್ತೊಬ್ಬ ವಿಚಾರವಾದಿಯ ಹತ್ಯೆ ಯತ್ನ ನಡೆದಿದೆ. ಅಪರಿಚಿತರ ತಂಡವೊಂದು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಹತ್ಯೆಗೆ ವಿಫಲ ಯತ್ನ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ವಿಚಾರವಾದಿಗಳಿಗೆ ಭದ್ರತೆ ಇಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ.
ಕಲಬುರ್ಗಿ ಹತ್ಯೆಯ ಆರೋಪಿಗಳು ವರ್ಷ ಕಳೆದರೂ ಪತ್ತೆಯಾಗದೇ ಇರುವುದು ಪೊಲೀಸ್ ಇಲಾಖೆಗೂ ಸವಾಲಾಗಿದ್ದು ಇದೀಗ ನರೇಂದ್ರ ನಾಯಕ್ ಹತ್ಯೆಗೆ ಸಂಚು ನಡೆದಿದೆ. ನಗರದ ಲೇಡಿಹಿಲ್ ಬಳಿ ವಾಸವಾಗಿರುವ ವಿಚಾರವಾದಿ ನರೇಂದ್ರ ನಾಯಕ್ ಅವರನ್ನು ಬುಧವಾರ ಬೆಳಿಗ್ಗಿನ ಜಾವ ಆರು ಘಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಬೈಕಿನನಲ್ಲಿ ಬಂದ ಇಬ್ಬರು ಅಪರಿಚಿತರು ಕಾರಿನ ಟೈರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾರೆ. ಆದರೆ ನಾಯಕ್ ಅನುಮಾನಗೊಂಡು ಕಾರನ್ನು ನಿಲ್ಲಿಸದೇ ತೆರಳಿದ್ದಾರೆ ನಂತರ ಹತ್ತಿರದಲ್ಲಿದ್ದ ಪೆಟ್ರೋಲ್ ಪಂಪ್ ಗೆ ತೆರಳಿ ಕಾರಿನ ಗಾಳಿ ಪರೀಕ್ಷಿಸಿದಾಗ ಕೊಂಚವೂ ಗಾಳಿ ಕಡಿಮೆಯಾಗಿರಲಿಲ್ಲ. ಹೀಗಾಗಿ ಇದೊಂದು ಹತ್ಯೆ ಯತ್ನ ಅಂತ ಆರೋಪಿಸಿರುವ ನಾಯಕ್ ಈ ಬಗ್ಗೆ ಉರ್ವಾ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಮಾರ್ಚ್ 22ರಂದು ಬೆಸೆಂಟ್ ಕಾಲೇಜಿನ ಮನೆಯಿಂದ ಹೊರ ಬರುತ್ತಿದ್ದ ವೇಳೆ ಆರ್‍ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರನ್ನು ಕೂಡ ವಿಳಾಸ ಕೇಳೋ ನೆಪದಲ್ಲಿ ಬೈಕಿನಲ್ಲಿ ಬಂದ ಕಿಡಿಗೇಡಿಗಳಿಬ್ಬರು ಹತ್ಯೆಗೈದಿದ್ದರು. ಅದು ಕೂಡ ಬೆಳಿಗ್ಗೆ ಸುಮಾರು 6 ಘಂಟೆ ವೇಳೆಗೆ ನಡೆದಿತ್ತು. ಹೀಗಾಗಿ ನಾಯಕ್ ಹತ್ಯೆ ಯತ್ನ ಕೂಡ ಅದೇ ಮಾದರಿಯಲ್ಲಿದ್ದು, ಬಾಳಿಗಾ ಹಂತಕ ಶಿವನ ಮೇಲೆಯೇ ನಾಯಕ್ ಅನುಮಾನ ವ್ಯಕ್ತಪಡಿಸಿದ್ಧಾರೆ. ಈ ಮಧ್ಯೆ ನಾಯಕ್ ಗೆ ಪೊಲೀಸ್ ಇಲಾಖೆ ಒಂದು ಗನ್ ಮ್ಯಾನ್ ಕೊಟ್ಟಿದ್ದರು ಆದರೆ ಅವರು ಬೆಳಿಗ್ಗಿನ ವೇಳೆ ಇರೋದಿಲ್ಲ ಅನ್ನೋದನ್ನು ಮನಗಂಡ ದುಷ್ಕರ್ಮಿಗಳು ಈ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಅಲ್ಲದೇ ನಾಯಕ್ ಬಾಳಿಗಾ ಹತ್ಯೆ ಆರೋಪಿ ನರೇಶ್ ಶೆಣೈ ನಗರದ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಿದ್ದಾರೆ ಎಂಬ ಅವ್ಯವಹಾರಗಳ ಬಗ್ಗೆಯೂ ನಾಯಕ್ ಧ್ವನಿಯೆತ್ತಿದ್ದರು. ಜೊತೆಗೆ ಶೆಣೈಗೆ ಜಾಮೀನು ಸಿಗದಂತೆಯೂ ಬಾಳಿಗಾ ಕುಟುಂಬಿಕರ ಜೊತೆ ಸೇರಿಕೊಂಡು ನ್ಯಾಯಾಲಯದಲ್ಲಿ ಸದ್ಯ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಕಳೆದೊಂದು ವರ್ಷಗಳಿಂದಲೂ ನಾಯಕ್ ಗೆ ಬೆದರಿಕೆ ಕರೆಗಳು ಬರುತ್ತಿದ್ದು ಹೀಗಾಗಿ ನರೇಶ್ ಶೆಣೈ ಬೆಂಬಲಿಗರೇ ಈ ಹತ್ಯೆ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅಲ್ಲದೇ ನಾಯಕ್ ನೀಡಿರುವ ಹೆಸರುಗಳ ಆಧಾರದಲ್ಲಿ ತನಿಖೆ ಆರಂಭಿಸಲಾಗಿದ್ದು, ನಾಯಕ್ ಮಂಗಳೂರು ಪೊಲೀಸ್ ಆಯುಕ್ತರು ಹೆಚ್ಚಿನ ಭದ್ರತೆ ಕೂಡ ನೀಡಿದ್ದಾರೆ.
ನರೇಶ್ ಶೆಣೈ ಜಾಮೀನಿನಲ್ಲಿ ಹೊರಗಿದ್ದು, ಅವರ ಮೇಲೆ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸೋ ಆರೋಪವೂ ಇದೆ. ಅಲ್ಲದೇ ಈ ಬಗ್ಗೆ ನಾಯಕ್ ನ್ಯಾಯಾಲಯಕ್ಕೂ ಮನವರಿಕೆ ಮಾಡೋ ಮೂಲಕ ಬಾಳಿಗಾ ಹತ್ಯೆಗೆ ಸಂಬಂಧಿಸಿದ ಒಂದಷ್ಟು ಸಾಕ್ಷಿಗಳನ್ನ ಸಂಗ್ರಹಿಸಿ ಕೋರ್ಟ್‍ಗೆ ಸಲ್ಲಿಸಿದ್ದಾರೆ. ಹಾಗೂ ಹತ್ಯೆ ಖಂಡಿಸಿ ಮಾರ್ಚ್ 22ರಂದು ಬೃಹತ್ ಜಾಥಕ್ಕೂ ಸಿದ್ದತೆ ನಡೆಸಿದ್ದು ಈ ಘಟನೆಗಳಿಂದ ಬೇಸತ್ತ ಎದುರು ಬಣ ಹತ್ಯೆಗೆ ಯತ್ನಿಸಿದೆ ಎಂಬ ಆರೋಪವನ್ನು ನಾಯಕ್ ನೀಡಿದ್ದಾರೆ. ಒಟ್ಟಾರೆ ಪೆÇಲೀಸ್ ಇಲಾಖೆಯ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.


