ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಕೃಷಿ ಭೂಮಿಯ ಮೂಲ ಸೌಲಭ್ಯ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಅವರ ಜಾಗಗಳಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿ ಅವರನ್ನೇ ಕೂಲಿಯಾಳುಗಳನ್ನಾಗಿ ದುಡಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಹೇಳಿದ್ದಾರೆ. ಅವರು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಆಯೋಜಿಸಲಾಗಿದ್ದ ದ.ಕ.ಜಿಲ್ಲಾ ರೈತ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 380 ಕಾರ್ಪೊರೇಟ್ ಕಂಪೆನಿಗಳಿಗೆ 6 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದಾಗ ಸರಕಾರಕ್ಕೆ ನಷ್ಟವಾಗಿಲ್ಲ. 1,48,000 ಕೋಟಿ ರೈತರಿಗೆ ಸಬ್ಸಿಡಿ ಕೊಡಬೇಕಾದಲ್ಲಿ ಕೇಂದ್ರ ಸಚಿವ ಅರವಿಂದ ಸುಬ್ರಹ್ಮಣ್ಯಂ ನಷ್ಟದ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ಧರಾಮಯ್ಯ ಸರಕಾರ ಹಿಂದಿನ ಬಜೆಟಿನಲ್ಲಿ ಲಿಕ್ಕರ್ ವ್ಯವಹಾರದಲ್ಲಿನ 800 ಕೋಟಿ ತೆರಿಗೆ ಬಾಕಿಯಿರುವ ಕುರಿತು ಹೇಳಿದ್ದರು. ಇತ್ತೀಚೆಗೆ ನಡೆದಿರುವ ಬಜೆಟಿನಲ್ಲಿ ಅದರ ಕುರಿತ…
Author: UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಇಸ್ಲಾಮಾಬಾದ್: ಭಾರತ ದೇಶದಲ್ಲಿರುವ ಹಿಂದೂ ವಿವಾಹ ಮಸೂದೆಯಂತೆ ಇನ್ನು ಮುಂದೆ ಪಾಕಿಸ್ತಾನದಲ್ಲೂ ಹಿಂದೂಗಳ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ಐತಿಹಾಸಿಕ ಹಿಂದೂ ವಿವಾಹ ಮಸೂದೆ-2017ಕ್ಕೆ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಅಂಕಿತ ಹಾಕಿದ್ದು, ಕಾಯ್ದೆಯಾಗಿ ಸೋಮವಾರ ಜಾರಿಯಾಗಿದೆ. ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಸಲಹೆಯ ಮೇರೆಗೆ ಅಧ್ಯಕ್ಷರು ಮಸೂದೆಗೆ ಅಂಕಿತ ಹಾಕಿದ್ದಾರೆಂದು ಪಾಕಿಸ್ತಾನ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. ಜಾರಿಯಾಗಿರುವ ಕಾಯ್ದೆ ಹಿಂದೂಗಳ ಕುಟುಂಬಕ್ಕೆ ಕಾನೂನಾತ್ಮಕ ಅಧಿಕಾರ ನೀಡುವುದರ ಜೊತೆಗೆ, ತಾಯಂದಿರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲಿದೆ. ಇದರಂತೆ ಹಿಂದೂಗಳು ತಮ್ಮ ಸಂಪ್ರದಾಯದಂತೆ ವಿವಾಹ ಆಗಬಹುದಾಗಿದೆ. ವಿವಾಹ ನೋಂದಣಿಗೆ ಸರ್ಕಾರ ರೆಜಿಸ್ಟ್ರಾರ್ ಗಳನ್ನು ನೇಮಿಸಲಿದೆ. ಅಲ್ಲದೆ, ಮರುವಿವಾಹ ಮತ್ತು ವಿಚ್ಛೇದನಕ್ಕೂ ಅವಕಾಶವನ್ನು ಕಲ್ಪಿಸಿದೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಅಲಹಾಬಾದ್: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಮುಖಂಡ ಮೊಹಮ್ಮದ್ ಶಮಿ ಎಂಬುವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಭಾನುವಾರ ರಾತ್ರಿ ನಡೆದಿದೆ. ಅಲಹಾಬಾದ್ ನ ಮೌವ್ ಐಮಾ ಎಂಬಲ್ಲಿ ಮೊಹಮ್ಮದ್ ಶಮಿ ಅವರ ಕಚೇರಿ ಬಳಿ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಶಸ್ತ್ರ ಸರ್ಜಿತ ಆಗಂತಕರಿಬ್ಬರು ಶಮಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 60 ವರ್ಷದ ಮೊಹಮ್ಮದ್ ಶಮಿ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ಸ್ಥಳೀಯರು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ:ಶ್ರೀರಾಮಕೃಷ್ಣ ಮಠ ಮಂಗಳಾದೇವಿ ಇದರ ಆಶ್ರಯದಲ್ಲಿ ಜೈ ವೀರಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟು,ಶ್ರೀ ವಿಠೋಭ ರುಕ್ಮಯ ಭಜನಾ ಮಂದಿರ, ಅಮ್ಮ ಭಗವಾನ್ ಮಾನವ ವಿಕಾಸ ಸೇವಾ ಸಮಿತಿ, ಜಗತ್ ಫ್ರೆಂಡ್ಸ್ ಸರ್ಕಲ್, ವೆಲ್ ಕಂ ಗ್ರೂಪ್ಸ್ ,ಉಮಾಮಹೇಶ್ವರಿ ದೇವಸ್ಥಾನದ ಸಹಯೋಗ ದೊಂದಿಗೆ ಚೆಂಬು ಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವು ಭಾನುವಾರ ನಡೆಯಿತು. ವೇದಿಕ್ ಕುಮಾರ್ ಕೊಲ್ಯ,ರಾಮಚಂದ್ರ, ಪುರುಷೋತ್ತಮ್, ವಿಶ್ವನಾಥ್ ಮೆಂಡನ್, ರಾಜೀವ ಮೆಂಡನ್, ಬಾಝಿಲ್ ಡಿ’ಸೋಜ,ಜಯಾನಂದ ಅಂಚನ್, ಭಾಸ್ಕರ್ ತೊಕ್ಕೊಟ್ಟು, ನಾಗೇಶ್ ಶೆಟ್ಟಿ, ಕಿಶೋರ್ ಕುಮಾರ್, ಶೇಖರ್ ಚೆಂಬುಗುಡ್ಡೆ ಈ ಸಂದರ್ಭ ಉಪಸ್ಠಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಠಾಣೆ ಎದುರು ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಪಜೀರು ಹಿಂದು ಹಿತರಕ್ಷಣಾ ವೇದಿಕೆ ಕೊಣಾಜೆ ಠಾಣೆ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡ ಪ್ರಕಾಶ್ ಶೆಟ್ಟಿ ಎಂಬವರು ತಿಂಗಳೊಳಗ ಆರೋಪಿಗಳನ್ನು ಹಿಡಿದರೆ ಪೊಲೀಸರಿಗೆ ರೂ. ೧ ಲಕ್ಷ ಬಹುಮಾನ ಕೊಡುವುಿದಾಗಿ ಘೋಷಿಸಿದ ಪ್ರಸಂಗ ಭಾನುವಾರನಡೆದಿದೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಹಾಗೂ ದಿವಂಗತ ಉಪಕುಲಪತಿಗಳ ಪುತ್ರಿಯೋರ್ವರು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಪ್ರಯಾಣ ಬೆಳೆಸಿದ್ದು, 37ನೇ ದಿನವಾದ ಶುಕ್ರವಾರ ಮಂಗಳೂರು ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಮಾರ್ಗವಾಗಿ ಕೇರಳದ ಕಡೆ ಪ್ರಯಾಣ ಬೆಳೆಸಿದರು. ಲಿಂಗ ಸಮಾನತೆ ಮತ್ತು ಹದಿಹರೆಯದವರಿಗೆ ಜೀವನ ಕೌಶಲ್ಯ ಶಿಕ್ಷಣದ ಉದ್ದೇಶವನ್ನಿಟ್ಟುಕೊಂಡು ಸೈಕಲ್ ಜಾಥಾ ಆರಂಭಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾಗಿದ್ದ ದಿ.ಶಿವಶಂಕರ ಮೂರ್ತಿ ಇವರ ಪುತ್ರಿಯಾಗಿರುವ ಮೈಸೂರು ಮೂಲದ 27ರ ಹರೆಯದ ಶ್ರುತಿ ಸೈಕಲ್ ಜಾಥಾ ನಡೆಸುತ್ತಿರುವವರು. ಫೆ.8 ರಂದು ಜಮ್ಮು ಕಾಶ್ಮೀರದಿಂದ ಸೈಕಲ್ ಪ್ರಯಾಣ ಆರಂಭಿಸಿರುವ ಶ್ರುತಿ ಈವರೆಗೆ 3,000 ಕ್ಕೂ ಅಧಿಕ ಕಿ.ಮೀ.ನಷ್ಟು ಕ್ರಮಿಸಿ 11 ರಾಜ್ಯಗಳನ್ನು ದಾಟಿ ಇದೀಗ ಕರ್ನಾಟಕದ ಗಡಿಯನ್ನು ದಾಟಿ ಕೇರಳವನ್ನು ತಲುಪಿದ್ದಾರೆ. ಮೂಲತ: ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಶ್ರುತಿ ಮೂರು ವರ್ಷ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕೆಲಸ ಮಾಡಿ ವೃತ್ತಿಯನ್ನು ಬಿಟ್ಟು ಹದಿಹರೆಯದ ಮಕ್ಕಳ ವಿಷಯದಲ್ಲಿ ಫೆಲೋಶಿಪ್ ಪಡೆದು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಾಡೂರು: ವಿಶ್ವಹಿಂದೂ ಪರಿಷತ್, ಬಜರಂಗದಳದ ಶ್ರೀ ಹರಿ ಶಾಖೆ ಮಾಡೂರು ಇದರ ವತಿಯಿಂದ ಮಾಡೂರು ಶ್ರೀ ಅಯ್ಯಪ್ಪ ಮಂದಿರದ ಅಯ್ಯಪ್ಪ ಸ್ವಾಮಿಗೆ ಬೆಳ್ಳಿಯ ಪೀಠ ಮತ್ತು ಪ್ರಭಾವಳಿಯನ್ನು ಶುಕ್ರವಾರ ಬೀರಿ ಸಿದ್ಧಿ ವಿನಾಯಕ ಮಂದಿರದಿಂದ ಮಾಡೂರು ಅಯ್ಯಪ್ಪ ಭಜನಾ ಮಂದಿರದವರೆಗೆ ಮೆರವಣಿಗೆಯ ಮೂಲಕ ತಂದು ಅಪಿ೯ಸಲಾಯಿತು. ಮೆರವಣಿಗೆಯ ಉದ್ಘಾಟನೆಯನ್ನು ಕೊಲ್ಯ ಮೂಕಾಂಭಿಕಾ ದೇವಸ್ಥಾನದ ಅಧ್ಯಕ್ಷ ಮಧುಸೂಧನ್ ಅಯ್ಯರ್ ನೆರವೇರಿಸಿದರು. ಈ ಸಂದರ್ಭ ಬಜರಂಗದ ದಳ ಪ್ರಾಂತ್ಯ ಸಂಯೋಜಕ ಶರಣ್ ಪಂಪ್‍ವೆಲ್, ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕುತ್ತಾರು, ಜಿಲ್ಲಾ ಸಹ ಸಂಚಾಲಕ ಗಣೇಶ್ ಕುಂಪಲ, ವಿಶ್ವ ಹಿಂದೂ ಪರಿಷತ್ತು ಉಳ್ಳಾಲ ಪ್ರಖಾಂಡದ ಕಾರ್ಯದರ್ಶಿ ರವಿ ಅಸೈಗೋಳಿ, ನಾರಾಯಣ ಕುಂಪಲ, ಪ್ರಖಾಂಡ ಸಂಚಾಲಕ ಪವಿತ್ರ ಕೆರೆಬೈಲು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ವಿಶ್ವನಾಥ್ ಕೊಲ್ಯ, ಮಂಗಳೂರು ವಿಧಾನ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಇರುವ ಮಸೀದಿಗೆ ಕಿಡಿಗೇಡಿಯೋವ೯ ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಆರೋಪಿಯನ್ನು ಸಾವ೯ಜನಿಕರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ತೊಕ್ಕೊಟ್ಟು ಮಸ್ಜಿದುಲ್ ಹುದಾ ಮಸೀದಿಗೆ ಹಾನಿಯಾಗಿದೆ. ಮಸೀದಿಯ ಕಿಟಕಿಯ ಮೂರು ಗಾಜುಗಳು ಪುಡಿಯಾಗದೆ. ಮಸೀದಿಯೊಳಗೆ ಧಮ೯ ಗುರುಗಳು ಇರುವ ಸಂದಭ೯ ಒಳಪೇಟೆಯಿಂದಾಗಿ ರೈಲ್ವೇ ಕೆಳ ಸೇತುವೆ ಮೂಲಕ ಮಸೀದಿ ಹತ್ತಿರ ಬಂದ ಕಿಡಿಗೇಡಿ ಮೂರು ಕಲ್ಲುಗಳನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯನ್ನು ಮಸೀದಿಯೊಳಗಿದ್ದ ಧಮ೯ಗುರುಗಳು ನೋಡಿ ಕೆಳಗಿಳಿದು ಇತರರಲ್ಲಿ ವಿಷಯ ತಿಳಿಸಿದ್ದು, ಅವರು ಕಿಡಿಗೇಡಿಗೆ ಹುಡುಕಾಡಿದಾಗ, ಭಟ್ನಗರ ನಿವಾಸಿ ಗಾಂಜಾ ವ್ಯಸನಿ ಸಾಗರ್ ಪತ್ತೆಯಾಗಿದ್ದಾನೆ. ಈತನ ಕೈಯಿಂದ ಗಾಂಜಾ, ಕಲ್ಲು ಪತ್ತೆಯಾಗಿದ್ದು ಉಳ್ಳಾಲ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉತ್ತರಕರ್ನಾಟಕ ಮೂಲದ ಯುವತಿಯರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದು, ಉಳ್ಳಾಲಕ್ಕೆಂದು ಕೆಲಸಕ್ಕೆ ಬಂದವರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹಳಿಯಾಳ ರಾಯಪಟ್ಟಣದಿಂದ ಉಳ್ಳಾಲದ ಕೈಕೋ ಸಮೀಪ ಕಂಪೆನಿಗೆ ಕೆಲಸಕ್ಕೆ ಬಂದು ನಾಪತ್ತೆಯಾದ ಯುವತಿಯನ್ನು ಹುಡುಕುತ್ತಾ ಶುಕ್ರವಾರ ಉಳ್ಳಾಲ ಪೊಲೀಸ್ ಠಾಣೆಗೆ ಯುವತಿ ಸಂಬಂಧಿಕರು ಹಾಗೂ ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಹಳಿಯಾಳದ ರಾಯಪಟ್ಟಣದ ಸಿದ್ದಿ ಜನಾಂಗದ ಬಾಬು ಚಿಮನು ಬಾಜಾರಿ ಅವರ ಪುತ್ರಿ ದೊಂಡಿಬಾಯಿ ಚಿಮನು ಬಾಜಾರಿ(20) ನಾಪತ್ತೆಆದ ಯುವತಿಯಾಗಿದ್ದು, ಈಕೆ ಉಳ್ಳಾಲದ ಕೈಕೋ ಫಿಶ್‍ಮಿಲ್‍ಗೆ ಎಂಟು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಳು. ಈಕೆಯನ್ನು ಯಲ್ಲಾಪುರದ ಸುನಿತಾ ದುಳು ಬಿಚ್ಚಕಲೆ ಉಳ್ಳಾಲಕ್ಕೆ ಕೆಲಸಕ್ಕೆ ಸೇರಿಸಿದ್ದಳು. ಹೋಳಿಗೆ ಬಂದಿರಲಿಲ್ಲ : ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದ ದೊಂಡಿ ಬಾಯಿ ಹೋಳಿಗೆ ಊರಿಗೆ ಬರುವವಳಿದ್ದಳು ಅದರೆ ಈಕೆ ಹೋಳಿ ಹಬ್ಬಕ್ಕೆ ಬಾರದೆ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾಳಿಗೆ ಕರೆ ಮಾಡಿದಾಗ ಅಕೆಯೂ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮೋದಿ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ಮಹಿಳೆಯರು ಕಷ್ಟದ ದಿನಗಳನ್ನೇ ಎದುರಿಸುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಜಯಂತಿ ಶೆಟ್ಟಿ ಹೇಳಿದ್ದಾರೆ. ಅವರು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯುವ ಜನಾಂಗ ಇಂದು ದಿಕ್ಕೆಟ್ಟು ಹೋಗಿದೆ. ಬದುಕಿಗೆ ಆಸರೆ, ನೆಮ್ಮದಿ ಸಿಗುತ್ತಿಲ್ಲ. ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಯುವತಿಯರು ಉದ್ಯೋಗ ವಂಚಿತರಾಗಿದ್ದಾರೆ. ಉದ್ಯೋಗದ ಹಕ್ಕಿಗಾಗಿ ಎಲ್ಲರೂ ಹೋರಾಡಬೇಕಾಗಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡಿಸೀಲ್ ಬೆಲೆಯೂ ನಿರಂತರ ಏರಿಕೆಯಾಗುತ್ತಲೇ ಇದೆ. ಶ್ರೀಮಂತರ ಪರವಾಗಿ ಕಾರ್ಯಾಚರಿಸುತ್ತಿರುವ ಸರಕಾರಗಳ ವಿರುದ್ಧ ಎಚ್ಚೆತ್ತು ಜನ ಹೋರಾಡದಿದ್ದಲ್ಲಿ, ಮುಂದಿನ ದಿನಗಳಲ್ಲಿ ಎಲ್ಲರೂ ಬೀದಿಪಾಲಾಗುವುದರಲ್ಲಿ ಸಂಶಯವಿಲ್ಲ ಎಂದರು. ಜೆ.ಎಂ.ಎಸ್ ಜಿಲ್ಲಾ ಸಂಚಾಲಕಿ ಪದ್ಮಾವತಿ.ಯಸ್.ಶೆಟ್ಟಿ ಮಾತನಾಡಿ ಜಾತ್ಯಾತೀತ ಪಕ್ಷಗಳು ಬೆಲೆ ಏರಿಕೆಯನ್ನು ನಡೆಸುತ್ತಲೇ…

