ಉಳ್ಳಾಲ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಸ್ವಪ್ನ ಹರೀಶ್ ಅವರ ತಾಯಿ ದೇವಕಿ ಕೇಪು ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸ್ವಪ್ನ ಅವರ ವಿಟ್ಲ ಸಮೀಪದ ಕೇಪು ನಿವಾಸಕ್ಕೆ ಭೇಟಿ ಸಂತಾಪ ಸೂಚಿಸಿ, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ವಪ್ನ ಅವರ ಸಹೋದರರು ಹಾಗೂ ಸಹೋದರಿಯರು, ಕೇಪು ಗ್ರಾಮ ಪಂಚಾಯತ್ ಸದಸ್ಯ ಕೆರೀಂ ಕುದ್ದುಪದವು, ವಿಟ್ಲ ಪಟ್ಟಣ ಪಂಚಾಯತ್‌ನ ನಾಮ ನಿರ್ದೇಶಿತ ಸದಸ್ಯ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್, ಉದ್ಯಮಿ ಮನ್ಸೂರ್ ಖಾದರ್ ಹಾನೆಸ್ಟ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.
Author: UllalaVani
ಕೇರಳ ಸರಕಾರವು (ಮಲಯಾಳ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸುತ್ತಿದೆ. ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಸಂವಿಧಾನವು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ. ಭಾಷಾ ಅಲ್ಪಸಂಖ್ಯಾಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ – ಕಾನೂನುಗಳನ್ನು ರೂಪಿಸಬೇಕಾಗುತ್ತದೆ.ಭಾಷಾ ಅಲ್ಪ ಸಂಖ್ಯಾಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಒದಗಿಸಲು ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿರುತ್ತದೆ. ರಾಜ್ಯ ಸರಕಾರಗಳು ರೂಪಿಸುವ ಭಾಷಾ ನೀತಿಗಳು ದೇಶ ರಾಜ್ಯ ಅಥವಾ ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಾರದು ಎಂಬುದು ಸಂವಿಧಾನದ ಮೂಲತತ್ವ ಆಶಯವಾಗಿದೆಯೆಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.ಮಲಯಾಳ ಭಾಷಾ ಬಿಲ್ಸ್- 2025 ಪ್ರಕಾರ ಹತ್ತನೇ ತರಗತಿಯವರೆಗೆ ಕೇರಳದ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಡ್ಡಾಯ ಮತ್ತು ಪ್ರಥಮ…
ಉಳ್ಳಾಲ: ಕರ್ನಾಟಕ ಸಲಫಿ ಎಸೋಸಿಯೇಷನ್ (ರಿ), ಮಂಗಳೂರು ಮತ್ತು ವಿಶ್ವಮ್ ಇಸ್ಲಾಮಿಕ್ ಆರ್ಗನೈಝೇಷನ್ ಇವುಗಳ ಜಂಟಿ ಆಶ್ರಯದಲ್ಲಿ “ತೌಹೀದ್ ಇಸ್ಲಾಮಿನ ಬುನಾದಿ; ಇದು ಪ್ರವಾದಿಗಳ ಹಾದಿ” ಎಂಬ ಮಹತ್ವದ ಧ್ಯೇಯ ವಾಕ್ಯದೊಂದಿಗೆ ಸಲಫಿ ಸಮ್ಮೇಳನವು 2026ರ ಮೇ 3 ರಂದು ಭಾನುವಾರ ಸಂಜೆ 4 ಗಂಟೆಗೆ ತಲಪಾಡಿಯ ಕೆ ಸಿ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಲಫಿ ಎಸೋಸಿಯೇಷನ್ ನ ಅಧ್ಯಕ್ಷ ಡಾ.ಮುಹಮ್ಮದ್ ಹಫೀಝ್ ಹೇಳಿದರು. ಅವರು ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮ್ಮೇಳನದಲ್ಲಿ ಮುಖ್ಯ ಭಾಷಣವನ್ನು ಹುಸೈನ್ ಸಲಫಿ ಶಾರ್ಜಾ ನೀಡಲಿದ್ದಾರೆ. ಪಿ ಎನ್ ಅಬ್ದುಲ್ ಲತೀಫ್ ಮದನಿ, ಸರ್ಫ್ ರಾಝ್ ಫೈಝಿ, ಸಿ ಪಿ ಸಲೀಮ್, ಡಾ.ಹಫೀಝ್ ಸ್ವಲಾಹಿ, ಯಾಸಿರ್ ಅಲ್ ಹಿಕಮಿ, ನಝೀರ್ ಸಲಫಿ, ಇಜಾಝ್ ಸ್ವಲಾಹಿ, ಖಲೀಲ್ ತಲಪಾಡಿ ಮತ್ತು ಅಬ್ದುಲ್ಲ ಫರ್ಹಾನ್ ರವರು ವಿವಿಧ ವಿಷಯಗಳ ಕುರಿತು ಉಪನ್ಯಾಸಗಳ ನ್ನು ನೀಡಲಿದ್ದಾರೆ.ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಡಾ. ಯು.ಟಿ ಖಾದರ್ , ಕೆಪಿಸಿಸಿ ಪ್ರಧಾನ…
ಉಳ್ಳಾಲ: ಕುಡಿಯುವ ನೀರು ಪೂರೈಕೆ, ವಿಳಂಬ ಕಾಮಗಾರಿ ಬಗ್ಗೆ ವ್ಯಾಪಕ ಚರ್ಚೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಮೃತ್ 2.0 ಕುಡಿಯುವ ನೀರು ಯೋಜನೆ ಇಂಜಿನಿಯರ್ ಶೋಭಾ ಮಾತನಾಡಿ, ಮಾಡೂರಿನಲ್ಲಿ ಟ್ಯಾಂಕ್ ಕಾಮಗಾರಿ ಸಂಪರ್ಕ ಆಗಿದೆ. ಪನೀರ್ ನಲ್ಲಿ ಟ್ಯಾಂಕ್ ವ್ಯವಸ್ಥೆ ಆಗಿದೆ. ನಾಟೆಕಲ್ ಕಣಚೂರು ಬಳಿ ಟ್ಯಾಂಕ್ ನಿರ್ಮಾಣ ಯೋಜನೆ ಇದೆ. ಈ ಯೋಜನೆ ಯಡಿ ಆಗಿರುವ ಕಾಮಗಾರಿ ಕಾರ್ಯನಿರ್ವಹಣೆ ಪ.ಪಂ ಮಾಡಬೇಕು ಎಂದು ಎಸ್ಟಿಮೆಂಟ್‌ನಲ್ಲಿ ಇದೆ. ಕಾರ್ಯನಿರ್ವಹಣೆಯ ಖರ್ಚು ಪಂಚಾಯತ್ ಭರಿಸಬೇಕು. ಒಂದು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಕೋಟೆಕಾರ್‌ನ ಕೆಲವು ಕಡೆ ಸಿವಿಲ್ ಕಾಮಗಾರಿ ಆಗುತ್ತಿಲ್ಲ, ಕೆಲವು ಕಡೆ ಮೀಟರ್ ಅಳವಡಿಕೆ, ಪೈಪ್ ಜೋಡಣೆ ಆಗಿಲ್ಲ. ಬಹಳಷ್ಟು ಮನೆಗಳಿಗೆ ಸಂಪರ್ಕ ಬಾಕಿ ಇದೆ. ನೀರು ಕೆಲವು ಬಾರಿ ಬಾರದ ದಿನಗಳಿವೆ. ಒಂದು ಲೈನ್‌ನಲ್ಲಿ 60…
ತೊಕ್ಕೊಟ್ಟಿನ ಹೂವಿನ ವ್ಯಾಪಾರಿಯಾಗಿದ್ದ, ಚೆಂಬುಗುಡ್ಡೆ ನಿವಾಸಿ ವಸಂತ್ ಪೂಜಾರಿ (48) ಅವರು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರೀಯೆ ಇಂದು ಬೆಳಗ್ಗೆ 10 ಗಂಟೆಗೆ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಹಾಗೂ ಎರಡು ಮಕ್ಕಳನ್ನು ಅಗಲಿದ್ದಾರೆ.
ಕೋಟೆಕಾರ್: ಎಸ್ಸೆಸ್ಸಫ್ ಹಿದಾಯತ್ ನಗರ ವತಿಯಿಂದ ಎಸ್ಸೆಸ್ಸಫ್ ಸ್ಥಾಪಕ ದಿನಾಚರಣೆ ಎ. 29 ರಂದು ಆಚರಿಸಲಾಯಿತು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಎಸ್ಸೆಸ್ಸಫ್ ಧ್ವಜಾರೋಹಣ ಮಾಡಿದರು, ಮಸೀದಿ ಮುಹಧ್ಸಿನ್ ಶಕೂರ್ ಸಅದಿ.ಸದರ್ ಉಸ್ತಾದ್ ಅಬ್ದುಲ್ಲ ನಯೀಮಿ, ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ಎಸ್ಸೆಸ್ಸಫ್ ಸದಸ್ಯರು ಉಪಸ್ಥಿತರಿದ್ದರು ಕಾರ್ಯದರ್ಶಿ ಹರ್ಶದ್ ನಿರೂಪಿಸಿದರು
ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳಿಂದ ಕಾರ್ಯನಿರ್ವಹಿಸುವ ವಾಹನಗಳಿಗೆ ದೀರ್ಘಾವಧಿಯಲ್ಲಿ ಭವಿಷ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆಟೋಮೊಬೈಲ್ ಉದ್ಯಮವು ಶುದ್ಧ ಇಂಧನಗಳತ್ತ ತ್ವರಿತವಾಗಿ ಪರಿವರ್ತನೆಗೊಳ್ಳಬೇಕಿದ್ದು, ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸುಧಾರಣೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಜೈವಿಕ ಇಂಧನಗಳು, ಸಿಎನ್‌ಜಿ, ಎಲ್‌ಎನ್‌ಜಿ ಹಾಗೂ ವಿದ್ಯುತ್ ಪವರ್‌ಟ್ರೇನ್‌ಗಳಂತಹ ಪರ್ಯಾಯ ಇಂಧನಗಳ ಬಳಕೆ ಹೆಚ್ಚಿಸುವ ಅಗತ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಆಮದು ಅವಲಂಬನೆ ಮತ್ತು ಪರಿಸರ ಮಾಲಿನ್ಯವನ್ನು ಹೆಚ್ಚಿಸುವುದರಿಂದ ಇದು ಗಂಭೀರ ಸಮಸ್ಯೆಯಾಗಿದೆ ಎಂದು ಗಡ್ಕರಿ ಎಚ್ಚರಿಸಿದರು.ಹೈಡ್ರೋಜನ್ ಇಂಧನ ಕ್ಷೇತ್ರದಲ್ಲಿಯೂ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಪೈಲಟ್ ಯೋಜನೆಗಳು ಪ್ರಾರಂಭವಾಗಿವೆ. ಟಾಟಾ ಮೋಟಾರ್ಸ್, ವೋಲ್ವೋ, ಅಶೋಕ್ ಲೇಲ್ಯಾಂಡ್ ಹಾಗೂ ಮಹೀಂದ್ರಾ ಸೇರಿದಂತೆ ಪ್ರಮುಖ ಕಂಪನಿಗಳು ಹೈಡ್ರೋಜನ್ ಇಂಧನ ಪ್ರಯೋಗಗಳಲ್ಲಿ ತೊಡಗಿಕೊಂಡಿವೆ.ದೇಶದಲ್ಲಿ ಈಗಾಗಲೇ 10 ಮಾರ್ಗಗಳಲ್ಲಿ ಹೈಡ್ರೋಜನ್ ಟ್ರಕ್‌ಗಳು ಮತ್ತು ಬಸ್‌ಗಳ ಸಂಚಾರ ನಡೆಯುತ್ತಿದೆ ಎಂದು ತಿಳಿಸಿದ ಅವರು, “ಹೈಡ್ರೋಜನ್ ಭವಿಷ್ಯದ ಇಂಧನ” ಎಂದು ಹೇಳಿದರು.…
ಉಳ್ಳಾಲ: ಹರೇಕಳ-ಅಡ್ಯಾರ್ ಸಂಪರ್ಕ ಸೇತುವೆಯಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿರುವುದರಿಂದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಕಾಂಕ್ರೀಟ್ ಸ್ಲಾಬ್‌ನ ಮೇಲ್ಭಾಗದಲ್ಲಿ ಆಸ್‌ಪಾಲ್ಟ್ ವೆರಿಂಗ್ ಕೋಟ್ ಅಳವಡಿಸುವ ಕೆಲಸ ಮೇ.5ಮತ್ತು 6ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನಗಳವರೆ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂದಿಸಲಾಗಿದೆ ಎಂದು ಹರೇಕಳ ಗ್ರಾಮ ಪಂಚಾಯಿತಿ ಪಿಡಿಒ ಮುತ್ತಪ್ಪ ಡಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಭೂಮಿಯನ್ನು ಕಬಳಿಸುವ ದಂಧೆ ಮತ್ತು ಅದಕ್ಕೆ ಬೆಂಬಲವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಭ್ರಷ್ಟಾಚಾರ ವಿರುದ್ಧ ಮಹತ್ವದ ತಿರುವು ಸಿಕ್ಕಿದೆ. Karnataka High Court ಇದೀಗ ನೀಡಿರುವ ಕಠಿಣ ನಿರ್ದೇಶನಗಳು, ಕಂದಾಯ ಇಲಾಖೆಯೊಳಗಿನ ಅಕ್ರಮಗಳಿಗೆ ಬ್ರೇಕ್ ಹಾಕುವ ದಿಟ್ಟ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ವೇಳೆ ಹೊರಬಂದ ಅಂಶಗಳು ಆಡಳಿತ ವ್ಯವಸ್ಥೆಯ ಗಂಭೀರ ದೌರ್ಬಲ್ಯವನ್ನು ಬಯಲಿಗೆಳೆದಿವೆ. ಸರ್ಕಾರಿ ಜಾಗಗಳನ್ನು ಕಬಳಿಸಲು ಕೆಲವು ಪ್ರಭಾವಿಗಳು ಮತ್ತು ಭೂಮಾಫಿಯಾ, ಕಂದಾಯ ಅಧಿಕಾರಿಗಳ ಸಹಕಾರದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಿಡಿಕಾರಿದ್ದು, “ರಕ್ಷಣೆ ಕೊಡಬೇಕಾದವರೇ ದ್ರೋಹ ಮಾಡಿದರೆ ಕಾನೂನು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು” ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯದ ದ್ವಿಸದಸ್ಯ ಪೀಠವು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ಯಾವುದೇ ಕಂದಾಯ ಅಧಿಕಾರಿ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಅಕ್ರಮಕ್ಕೆ ಸಹಕರಿಸಿದ್ದರೆ, ಅವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆದೇಶಿಸಿದೆ. ಇನ್ನು ಮುಂದೆ ಕೇವಲ ಅಮಾನತು…
ಬೆಂಗಳೂರು, ಏ. 28: ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಗುಂಡಿ ಮುಚ್ಚಲು ಕೋಟಿ ಕೋಟಿ ಹಣ ಖರ್ಚು ಮಾಡಿದ ವಿಚಾರವಾಗಿ ಮಾತನಾಡಿದ ಅವರು, “ಗುಂಡಿ ಮುಚ್ಚಿದ ಹಣ ಗುಂಡಿಗೆ ಹೋಗಿದೆ. ಗುಂಡಿ ಮುಚ್ಚೋಕೆ ಎಲ್ಲಾದ್ರೂ ಒಂದು ಲಕ್ಷ ಖರ್ಚಾಗುತ್ತದೆಯಾ? ಬೆಂಗಳೂರು ಜನ ಶಾಪ ಹಾಕುತ್ತಿದ್ದಾರೆ. ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಗುಂಡಿ ಮುಚ್ಚೋದ್ರಲ್ಲಿ ಹೇಗೆ ಹಣ ಮಾಡಬೇಕು ಎಂದು ಕಾಂಗ್ರೆಸ್ ಅವರನ್ನ ಕೇಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಷ್ಟು ಹಣ ಖರ್ಚು ಮಾಡಿರೋದು ಬೋಗಸ್. ಈ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಸದನದ ಸಮಿತಿ ರಚನೆ ಮಾಡಿ ತನಿಖೆ ಆಗಲಿ. ನಾವು ಅವರಿಗೆ ಲೆಕ್ಕ ಕೊಡ್ತೀವಿ. ಮುಚ್ಚಿರುವ ಗುಂಡಿಗಳು ಮತ್ತೆ ಓಪನ್ ಆಗಿವೆ. ಇವರ ಬೋಗಸ್ ಗುಂಡಿ ಲೆಕ್ಕ ನಾವು ಕೊಡ್ತೀವಿ” ಎಂದು ಹೇಳಿದ್ದಾರೆ.

