ಕಾರ್ಕಳ,ಏ. 27: ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು , ಉಡುಪಿಯ ಬೈರಂಪಳ್ಳಿ ಗ್ರಾಮದ ಆನಂದ ಕುಲಾಲ್ (40), ಕೈಕಂಬ ಅಜೆಕಾರು ಮರ್ಣೆ ಗ್ರಾಮದ ಜಯರಾಮ ಆಚಾರ್ಯ (54) ಎಂದು ಗುರುತಿಸಲಾಗಿದೆ. ಘಟನೆ ನಡೆದು 24 ಗಂಟೆಯೊಳಗೆ ಆನಂದ ಕುಲಾಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಈತ ಕಳವು ಮಾಡಿದ ಚಿನ್ನವನ್ನು ಜಯರಾಮ ಆಚಾರ್ಯ (54)ಗೆ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ಜಯರಾಮ ಆಚಾರ್ಯನನ್ನು ಕೂಡ ಬಂಧಿಸಲಾಗಿದೆ.ಕಳವು ಆದ ಸುಮಾರು 5,60,000 ರೂ ಮೌಲ್ಯದ 39.00 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದೆ.ಶಂಕರ ಕುಲಾಲ್ ಎಂಬವರು ಮನೆಗೆ ಬೀಗ ಹಾಕಿ ಎ.23ರಂದು ಕೆಲಸಕ್ಕೆ ಹೋಗಿದ್ದು, ಎ.24ರಂದು ಸಂಜೆ ವೇಳೆ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು,…
Author: UllalaVani
ಬೇಸಿಗೆಯ ತೀವ್ರ ಉಷ್ಣತೆಯಲ್ಲಿ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉರಿ ಬಿಸಿಲಿನಲ್ಲಿ ಗಂಟೆಗಳ ಕಾಲ ನಿಲ್ಲುವುದರಿಂದ ದೇಹ ನಿರ್ಜಲೀಕರಣ, ತಲೆಸುತ್ತು, ದಣಿವು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ, ಪೊಲೀಸ್ ಸಿಬ್ಬಂದಿಗಳ ಹಿತದೃಷ್ಟಿಯಿಂದ ಕರ್ತವ್ಯದ ಸ್ಥಳಗಳಲ್ಲಿ ನೆರಳಿಗಾಗಿ ಪ್ಯಾರಾಚೂಟ್ ಕೊಡೆಗಳ ವ್ಯವಸ್ಥೆ, ಮಾಸ್ಕ್‌ಗಳ ಪೂರೈಕೆ, ಸಮರ್ಪಕ ಕುಡಿಯುವ ನೀರು ಹಾಗೂ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಒದಗಿಸುವಂತೆ ಡಿಜಿ & ಐಜಿಪಿ ಕಚೇರಿಯಿಂದ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಮಹತ್ವದ ಆದೇಶ ಹೊರಡಿಸಲಾಗಿದೆ. ಇದು ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗಾಗಿ ತೆಗೆದುಕೊಳ್ಳಲಾದ ಸಕಾರಾತ್ಮಕ ಮತ್ತು ಮಾನವೀಯ ಕ್ರಮವಾಗಿದೆ. ಈ ರೀತಿಯ ಮೂಲಭೂತ ಸೌಲಭ್ಯಗಳು ಒದಗಿಸಿದರೆ, ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಆರೋಗ್ಯಕರವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಟ್ರಾಫಿಕ್ ಸುವ್ಯವಸ್ಥಿತ ಕಾಪಾಡಲು ಸಾರ್ವಜನಿಕರೂ ಮಾನವೀಯತೆ ಮೆರೆಯಬೇಕು—ನಿಯಮಗಳನ್ನು ಪಾಲಿಸುವುದು, ಅನಾವಶ್ಯಕ ಗೊಂದಲ ಸೃಷ್ಟಿಸದಿರುವುದು ಹಾಗೂ ಕರ್ತವ್ಯದಲ್ಲಿರುವ…
ಕೋಟೆಕಾರ್ : ಕೋಟೆಕಾರ್ ಅಜ್ಜಿನಡ್ಕ ದಲ್ಲಿರುವ ಮರ್ಕಝುಲ್ ಹಿದಾಯ ವಿದ್ಯಾ ಸಂಸ್ಥೆಯು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಮೂಲಕ ಗೌರವ ತಂದಿದೆ. ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಎರಡನ್ನೂ ನೀಡುತ್ತಿರುವ ಈ ಸಂಸ್ಥೆಯಿಂದ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಯಿಲ್ ಐಮೆನ್ 554(88.64%), ಆಯಿಷಾ ಶಿರಿನ್ 545(87.20%) ಹಾಗೂ ನುಹಾ ಹಲೀಮಾ ಫಾತಿಮಾ 543(86.88%) ಅಂಕಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಉಳ್ಳಾಲ : ಮನುಷ್ಯರು, ಪ್ರಾಣಿಗಳು, ಪ್ರಕೃತಿ ಎಲ್ಲವೂ ಒಂದೇ ಸರಪಳಿಯಲ್ಲಿ ಜೋಡಿಸಿಕೊಂಡಿವೆ ಎಂಬ ಅರಿವು. ಎಲ್ಲರೂ ಒಂದಾಗಿ ಬದುಕಬೇಕು ಎನ್ನುವ ಮನಸ್ಥಿತಿ ಬೆಳೆಸಿದಾಗ ಮಾತ್ರ ಸಮತೋಲನ ಸಾಧ್ಯ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು. ಕರ್ನಾಟಕ ಪಶುವೈದ್ಯಕೀಯ ಸಂಘ , ದ. ಕ ಜಿಲ್ಲಾ ಘಟಕ , ಫೀಡ್ ಯಾನಿಮಲ್ಸ್ , ಸೇವ್ ಅನಿಮಲ್ಸ್ ಟ್ರಸ್ಟ್ ಮಂಗಳೂರು ಮತ್ತು ಅಸ್ತ್ರ ಗ್ರೂಪ್ ಇವರ ಸಂಯುಕ್ತ ಆಶ್ರಯದಲ್ಲಿ ನಂದಾ ದೀಪ ಸೇವಾ ಬಳಗ ಮಡ್ಯಾರ್ ಕೋಟೆಕಾರ್ ಇವರ ಸಹಕಾರದೊಂದಿಗೆ ಮಡ್ಯಾರ್ ಶಾಸ್ತಾರ ಅಶ್ವಥಕಟ್ಟೆ ಮುಂಭಾಗದಲ್ಲಿ ಶನಿವಾರ ವಿಶ್ವ ಪಶು ವೈದ್ಯಕೀಯ ದಿನಾಚರಣೆ 2026 ಅಂಗವಾಗಿ ಸಾಕು ಪ್ರಾಣಿಗಳಿಗೆ ( ನಾಯಿ ಮತ್ತು ಬೆಕ್ಕು ) ಹಾಗೂ ಬೀದಿ ನಾಯಿಗಳಿಗೆ ಹಮ್ಮಿಕೊಂಡ ಉಚಿತ ರೇಬಿಸ್ ಲಸಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮರಗಳನ್ನು ಬೆಳೆಸುವುದು, ಪ್ರಾಣಿಗಳನ್ನು ಕಾಪಾಡುವುದು, ಪರಿಸರದ ಜೊತೆ ಸಮನ್ವಯದಿಂದ ಬದುಕುವುದು — ಇದು ಜಗತ್ತಿನ ಸಹಜ ನಿಯಮ. ಹಿಂದಿನ ಕಾಲದಲ್ಲಿ ಜನರು…
ಉಳ್ಳಾಲ : ‘ಎಳೆಯ ಮಕ್ಕಳು ಮನೆ ಮತ್ತು ಶಾಲೆಗಳಲ್ಲಿ ದೊರೆಯುವ ಸಂಸ್ಕಾರ ಹಾಗೂ ಶಿಕ್ಷಣಕ್ಕೆ ಹೊರತಾಗಿ ಸಮಾಜದಿಂದಲೂ ಕಲಿಯುವುದು ಬಹಳಷ್ಟಿದೆ. ರಜಾದಿನಗಳಲ್ಲಿ ಅಲ್ಲಲ್ಲಿ ನಡೆಯುವ ವಿವಿಧ ಶಿಬಿರಗಳಲ್ಲಿ ಸೇರಿಕೊಳ್ಳುವುದರಿಂದ ಮಕ್ಕಳಿಗೆ ಜೀವನ ಕೌಶಲ್ಯದ ಪಾಠ ಲಭಿಸುತ್ತದೆ. ಸೌಹಾರ್ದ ಕಲಾವಿದರಂತಹ ಯುವ ಸಂಘಟನೆಗಳು ಇಂತಹ ಶಿಬಿರಗಳನ್ನು ಸಂಘಟಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿವೆ’ ಎಂದು ವಿಶ್ರಾಂತ ಪ್ರಾಚಾರ್ಯರು ಹಾಗೂ ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಸೌಹಾರ್ದ ಕಲಾವಿದರು ಕುತ್ತಾರು ಇದರ ವತಿಯಿಂದ ಮುನ್ನೂರು ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ದಿನಗಳ ಕಾಲ ನಡೆಯುವ ‘ಚಿಣ್ಣರ ಚಿಗುರು’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರ್, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮುನ್ನೂರು ಮುಖ್ಯ ಶಿಕ್ಷಕಿ ಶಕುಂತಲಾ ಎಸ್. ಉಳ್ಳಾಲ್ , ವಾಮಂಜೂರ್ ವಿದ್ಯಾ ಜ್ಯೋತಿ ಶಾಲೆಯ ಶಿಕ್ಷಕಿ ಚಂಚಲಾಕ್ಷಿ ಪದವಿನಂಗಡಿ , ಮುನ್ನೂರು ದ.ಕ.ಜಿ ಪಂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ…
ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್ ತನ್ನ ಬ್ರಾಂಡ್ ಪಾರ್ಟ್ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಘೋಷಣೆ ಮಾಡಿದೆ. ರವಿಚಂದರ್ ಅವರ instagram ರೀಲ್ ನಲ್ಲಿ ಸ್ಕಿನ್ ಕೇರ್ ಡಿಕನ್ಸ್ ಸ್ಟ್ರಕ್ಟ್ ಇತ್ತು. ಇದನ್ನು ಅಭಿಮಾನಿಗಳು ಗಮನಿಸಿದರು. ಆ ಬಳಿಕ ಇದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತು. ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಆದ ವಿಷಯ ಈಗ ಪಾರ್ಟ್ನರ್ ಶಿಪ್ ಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಅವರು ಮಾತನಾಡಿದ್ದಾರೆ. ಜನರು ಸಹಜವಾಗಿ ಸ್ಪಂದಿಸಿ ಬ್ರಾಂಡ್ ನ್ನು ನೋಡಿದಾಗ ಅದನ್ನು ಮುಂದುವರಿಸಿಕೊಂಡು ಹೋಗುವುದು ನಮಗೆ ಸರಿ ಅನಿಸಿತು. ಅನಿರುದ್ಧ್ ಅವರು ನಮ್ಮ ಬ್ರಾಂಡಿಗೆ ಸರಿ ಹೊಂದುತ್ತಾರೆ. ಹೀಗಾಗಿ ಇಂಟರ್ನೆಟ್ ನಲ್ಲಿ ಉಂಟಾದ ವಿಡಿಯೋದ ಪ್ರಭಾವ ಸಹಯೋಗಕ್ಕೆ ಪ್ರೇರಣೆ ನೀಡಿತು ಎಂದು ಹೇಳಿದ್ದಾರೆ. ತಮ್ಮ ಹಿಟ್ ಹಾಡುಗಳು ಗಳಿಂದ ಯುವ ಜನರ ಮೇಲೆ ಅಪಾರ ಪ್ರಭಾವ ಬೀರಿರುವ ಅನಿರುದ್ಧ ರವಿಚಂದರ್ ಪ್ರೇಕ್ಷಕರಿಗೆ…
ಪ್ರಸ್ತುತ ದಿನಗಳಲ್ಲಿ ಹಾಳಾಗಿರುವುದು ಮನುಷ್ಯನೇ ಹೊರತು ಕಾಲವಲ್ಲ. ಕಲಿಯುಗದಲ್ಲಿ ದೇವರ ಆರಾಧನೆಯ ಏಕೈಕ ಮಾರ್ಗ ಭಜನೆ. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಾಗ ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯಿರಿ, ಯಾವ ಸಂದರ್ಭದಲ್ಲಿ ಯಾವ ರೀತಿಯ ವಸ್ತ್ರ ಧರಿಸಬೇಕು ಎನ್ನುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಾಹಿತಿ ವಿಜಯಲಕ್ಷ್ಮಿ ಕಟೀಲ್ ಅಭಿಪ್ರಾಯಪಟ್ಟರು. ನಡಾರು ಸಾಯಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ವಾರ್ಷಿಕ ಕೋಲೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಕೋಟೆಕಾರ್ ಪ.ಪಂ. ಸದಸ್ಯ ಸುಜಿತ್ ಮಾಡೂರು ಮಾತನಾಡಿ, ಯಾವುದೇ ಕಾರ್ಯ ನಡೆಯಬೇಕಾದರೆ ಅದಕ್ಕೆ ವ್ಯಕ್ತಿಗಿಂತ ದೈವ ಪ್ರೇರಣೆ ಅಗತ್ಯ. ಸ್ಥಳೀಯ ಭಾಗದಲ್ಲಿ ಕೊರಗಜ್ಜ ಕ್ಷೇತ್ರ ವೇಗವಾಗಿ ಬೆಳೆದಿರುವುದೇ ಸಾಕ್ಷಿ ಎಂದು ತಿಳಿಸಿದರು. ಈ ಸಂದರ್ಭ ಸಾಯಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣಕಾಂತ್ ಸಾಯಿನಗರ ಅಧ್ಯಕ್ಷತೆ ವಹಿಸಿದ್ದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್ ರಾವ್, ಕ್ಷೇತ್ರದ ಅರ್ಚಕ ಕೃಷ್ಣ ಶೆಟ್ಟಿ…
ಪುತ್ತೂರು; ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಗುಂಪೊoದು ಹಲ್ಲೆ ನಡೆಸಿದ ಘಟನೆ ಪುತ್ತೂರು ಕಸಬಾ ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ (21) ಅವರು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಎಪ್ರಿಲ್ 22ರಂದು ಸಂಜೆ ತನ್ನ ಸ್ನೇಹಿತರಾದ ಸುಹೇಲ್ ಹಾಗೂ ಅಝಾರ್ ಜೊತೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಪಿರ್ಯಾದಿದಾರರ ಪರಿಚಯದ ಆರೋಪಿಗಳಾದ ಬಿ.ಕೆ.ಮೊಯಿನುದ್ದೀನ್, ಮೊಹದ್ ಸೇರಿದಂತೆ ಇತರ ಐವರು ಸ್ಥಳಕ್ಕೆ ಬಂದು ಆದಿಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯನ್ನು ಪ್ರಶ್ನಿಸಿದ ಸ್ನೇಹಿತರಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಬಳಿಕ ಸಾರ್ವಜನಿಕರು ಗಲಾಟೆಯನ್ನು ನಿಲ್ಲಿಸಲು ಮುಂದಾದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಆದಿಲ್ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯನ್ನು ಆದಿಲ್ ಬಿಡಿಸಿದ್ದ ಹಿನ್ನಲೆ ಈ ದಾಳಿ…
ಉಚ್ಚಿಲ ಸಮೀಪದ ಸೋಮೇಶ್ವರದಲ್ಲಿರುವ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆ 2025–26ನೇ ಸಾಲಿನ SSLC ಪರೀಕ್ಷೆಯಲ್ಲಿ 100% ಫಲಿತಾಂಶ ಸಾಧಿಸಿ ಗಮನ ಸೆಳೆದಿದೆ. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಒಟ್ಟು 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಗೆ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವರ್ಗ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಸ್ತನ್ನು ಶ್ಲಾಘಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. 108 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆ, ಸಮಾಜಕ್ಕೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಈ ಬಾರಿ ಪಡೆದಿರುವ ಫಲಿತಾಂಶ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಪುತ್ತೂರಿನ ಯುವತಿಯೊಬ್ಬಳಿಗೆ ವಂಚಿಸಿದ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭವತಿ ಮಾಡಿ ವಂಚಿಸಿದ ಆರೋಪ ಕೃಷ್ಣ ಜೆ.ರಾವ್ ಮೇಲಿದೆ. ಈ ಸಂಬAಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪುಸನ್ನು ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿತು. 2 ಪ್ರಕರಣಕ್ಕೆ ತಡೆ ನೀಡಿದರೂ, ಸಂತ್ರಸ್ತ ಮತ್ತು ಮಗುವಿನ ಹಿತದೃಷ್ಟಿಯಿಂದ ನ್ಯಾಯಾಲಯವು ಆರ್ಥಿಕ ನೆರವು ನೀಡುವಂತೆ ಆದೇಶಿಸಿದೆ. ಅರ್ಜಿದಾರರು ಅಥವಾ ಅವರ ಪೋಷಕರು ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಹಣವನ್ನು ಪಾವತಿಸಬೇಕು” ಎಂದು ನ್ಯಾಯಪೀಠ ಷರತ್ತು ವಿಧಿಸಿದೆ. ಆದೇಶದ ಅನ್ವಯ, ಅರ್ಜಿದಾರರು ಮೊದಲ ಕಂತಿನ 75 ಸಾವಿರ ರೂಪಾಯಿಗಳನ್ನು ಮುಂದಿನ ಒಂದು ವಾರದೊಳಗೆ…

