Author: UllalaVani

Kannada News From Coastal Karnataka

ದೇರಳಕಟ್ಟೆಯ ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ ಆಸ್ಪತ್ರೆ ವೈದ್ಯರ ತಂಡವು 13 ಗಂಟೆಗಳ ದೀರ್ಘಕಾಲದ ಶಸ್ತ್ರಚಿಕಿತ್ಸೆ ನಡೆಸಿ, ಕ್ಯಾನ್ಸರ್‌ನಿಂದಾಗಿ ತುಂಡರಿಸಬೇಕಾಗಿದ್ದ ವ್ಯಕ್ತಿಯ ಕಾಲನ್ನು ಉಳಿಸುವಲ್ಲಿ ಯಶಸ್ವಿಯಾಗಿ ಹೊಸ ದಾಖಲೆ ನಿರ್ಮಿಸಿದೆ. ಹಾವೇರಿ ಮೂಲದ 39 ವರ್ಷದ ವ್ಯಕ್ತಿಯ ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಕ್ಯಾನ್ಸರ್‌ ಇರುವುದನ್ನು ಬಯೋಪ್ಸಿ ಮೂಲಕ ದೃಢಪಟ್ಟಿತ್ತು. ರಾಜ್ಯದ ಹಲವು ಆಸ್ಪತ್ರೆಗಳು ಕಾಲು ತೆಗೆಯುವ (ಅಂಪ್ಯುಟೇಶನ್) ಸಲಹೆ ನೀಡಿದ್ದರೂ, ಯೆನೆಪೋಯ ಆಸ್ಪತ್ರೆಯ ವೈದ್ಯರು ಪರ್ಯಾಯ ಚಿಕಿತ್ಸಾ ಮಾರ್ಗವನ್ನು ಹುಡುಕಿ, ಕಾಲು ಉಳಿಸುವ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಮುಂದಾದರು. ಇದೇ ಮಾದರಿಯ ಶಸ್ತ್ರಚಿಕಿತ್ಸೆಯನ್ನು ಯುನೈಟೆಡ್ ಕಿಂಗ್ಡಮ್‌ನ ಬರ್ಮಿಂಗ್‌ಹ್ಯಾಮ್‌ನ ರಾಯಲ್ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಬಾರಿ ನಡೆಸಲಾಗಿದ್ದು, ಅದೇ ರೀತಿಯ ತಂತ್ರವನ್ನು ಇಲ್ಲಿ ಯಶಸ್ವಿಯಾಗಿ ಅನ್ವಯಿಸಲಾಗಿದೆ. ಸುಮಾರು 13 ಗಂಟೆಗಳ ಕಾಲ ನಡೆದ ಈ ಮಹಾ ಶಸ್ತ್ರಚಿಕಿತ್ಸೆಯಲ್ಲಿ, ಕ್ಯಾನ್ಸರ್‌ ಪೀಡಿತ ಮೂಳೆ ಮತ್ತು ಸ್ನಾಯುಗಳನ್ನು ತೆಗೆದು, ಟೈಟಾನಿಯಂ ಮೆಗಾ ಪ್ರೊಸ್ಥೆಸಿಸ್ ಬಳಸಿ ಕಾಲಿನ ಪುನರ್‌ನಿರ್ಮಾಣ ಮಾಡಲಾಗಿದೆ. ಜೊತೆಗೆ, ದೇಹದ ಇತರೆ…

Read More

ಉಳ್ಳಾಲ: 110ಕೆವಿ ಕೆಪಿಟಿಸಿಎಲ್ ಜೆಪ್ಪು ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಉಳ್ಳಾಲ, ಕುತ್ತಾರ್ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಉಳ್ಳಾಲ ವ್ಯಾಪ್ತಿಯ ಮಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್, ಸುಂದರ್ ಭಾಗ್, ಸುಮ್ಮರ್ಸ್ ಸ್ಯಾಂಡ್, ಮುಕ್ಕಚೇರಿ, ಕ್ಯಾಲಿಕೋ, ಹಿಲೇರಿಯಾ ನಗರ, ಸುಭಾಷ್ ನಗರ, ಹೈಡ್ರಾಲ್ ನಗರ, ಸುಲ್ತಾನ್ ನಗರ, ಬಾಬು ಕಂಪೌoಡ್ ಪ್ರದೇಶಗಳು ಇದರಲ್ಲಿ ಸೇರಿವೆ. ಕುತ್ತಾರ್ ಪ್ರದೇಶದ ಬಬ್ಬುಕಟ್ಟೆ, ಹಿರಾ ನಗರ, ನಿಟ್ಟಿಕಡಾರ್ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿ ನಗರ, ಮುಂಡೋಳಿ, ಸೆವಂತಿ ಗುಡ್ಡೆ, ಹೊಸಗದ್ದೆ, ತಾರಿಪದ್ಪು, ದರೈಂದಬಾಗಿಲು ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇದಲ್ಲದೆ ಮೆಲಂಗಡಿ, ಕುಂಪಳ, ಅಬ್ಬಕ್ಕ ಇಂಡಸ್ಟ್ರಿಯಲ್ ಏರಿಯಾ ಹಾಗೂ ಕದೇಕಾರ್‌ನ ಆಡಂ ಕುದ್ರು, ಕಲ್ಲಾಪು, ತೊಕ್ಕೊಟ್ಟು ಜಂಕ್ಷನ್ ಸೇರಿದಂತೆ ಹಲವೆಡೆ ಈ ವ್ಯತ್ಯಯದ ಪರಿಣಾಮ ಕಾಣಿಸಿಕೊಳ್ಳಲಿದೆ. ಸಾರ್ವಜನಿಕರು ಸಹಕರಿಸುವಂತೆ ವಿದ್ಯುತ್ ಇಲಾಖೆ ಮನವಿ ಮಾಡಿದೆ.

Read More

ಬೆಂಗಳೂರು, ಏ. 27:ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ‌ ಸ್ಪೆಷಲ್ ಕೋರ್ಟ್‌ ಆದೇಶ ಹೊರಡಿಸಿದೆ. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಗಾಯಗೊಂಡಿದ್ದರು. ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿತ್ತು.ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯವು, ಆರೋಪಿ ವಿರುದ್ಧದ ಸಾಕ್ಷ್ಯಗಳನ್ನು ಪುರಸ್ಕರಿಸಿದೆ. ಶಾರಿಕ್ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ.ಐಪಿಸಿ ಸೆಕ್ಷನ್ 121ಎ (ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಸಂಚು) ಐಪಿಸಿ ಸೆಕ್ಷನ್ 122 (ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಸಂಗ್ರಹಣೆ) ಐಪಿಸಿ ಸೆಕ್ಷನ್ 326 (ಮಾರಕ ಆಯುಧಗಳಿಂದ ಗಂಭೀರ ಗಾಯಗೊಳಿಸುವುದು) ಯುಎಪಿಎ (UAPA)(ಭಯೋತ್ಪಾದನಾ…

Read More

ಉಳ್ಳಾಲ‌:ತೊಕ್ಕೊಟ್ಟು,ಗಾಂಧಿ‌ನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರು ಮತ್ತು ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠಾಪನಾ ಕಲಶೋತ್ಸವವು ಏ.29ರಿಂದ ಮೇ.3ರವರೆಗೆ ನಡೆಯಲಿದೆಯೆಂದು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗಿರೀಶ್ ಕುಮಾರ್ ಯು.ಕೆ ತಿಳಿಸಿದರು. ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,1982ರಲ್ಲಿ ಚಾಮುಂಡೇಶ್ವರಿಯ ಸಣ್ಣ ಗುಡಿಯೊಂದನ್ನು ನಿರ್ಮಿಸಲಾಗಿದ್ದು,ನಂತರದ ದಿನಗಳಲ್ಲಿ ತಾಯಿಯ ಕಾರಣಿಕದಿಂದಾಗಿ ನಾಲ್ಕು ವರ್ಷಗಳಲ್ಲೇ ಭಕ್ತರು ಗುಡಿಗೆ ದೇವಸ್ಥಾನದ ಸ್ವರೂಪ ನೀಡಿದ್ದರು.ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ಧಾರಕ್ಕೆ ಮುಂದಾಗಿ ಕಳೆದ ವರ್ಷ ಜೂನ್ ನಲ್ಲಿ ಶಂಕುಸ್ಥಾಪನೆ ನಡೆಸಿದಾಗ ಕಲ್ಲು, ಮರಳು ನಿಷೇಧ ಆದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ಕೆಲಸ ಸ್ಥಗಿತಗೊಂಡಿತ್ತು.ಭಕ್ತರ ಸಹಕಾರದಿಂದ ಇದೀಗ ಕ್ಷೇತ್ರವು ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಕಲಶೋತ್ಸವದ ಸಂಭ್ರಮದಲ್ಲಿದೆಯೆಂದರು. ಏ.29ರಂದು ಸಂಜೆ 4:30ಕ್ಕೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸಾನಿಧ್ಯದಿಂದ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮರವಣಿಗೆ ನಡೆಯಲಿದ್ದು ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲ್ಯಣ್ಣ…

Read More

ಕೋಟೆಕಾರ್ ಅಜ್ಜಿನಡ್ಕ ಸಮೀಪದ ಮರ್ಕಝುಲ್ ಹಿದಾಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಆಯಿಶಾ ಶೆರೀನಾ ಅವರು 2025-26ನೇ ಸಾಲಿನ ಎಸೆಸೆಲ್ಸೀ ಪರೀಕ್ಷೆಯಲ್ಲಿ 545 ಅಂಕಗಳನ್ನು ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ತಲಪಾಡಿ ಗ್ರಾಮದ ಹೊಸನಗರ ನಿವಾಸಿಗಳಾದ ಅಹ್ಮದ್ ರಿಝ್ವಾನ್ ಮತ್ತು ಸಾಜಿದಾಬಾನು ದಂಪತಿಯ ಪುತ್ರಿಯಾದ ಇವರು, ತಮ್ಮ ಪರಿಶ್ರಮ ಮತ್ತು ಅಧ್ಯಯನದ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಬಂಧುಬಳಗದವರು ಆಯಿಶಾ ಶೆರೀನಾಳ ಸಾಧನೆಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

Read More

ಉಡುಪಿ : ಅಕ್ರಮ ಮರಳು ಸಾಗಣೆ ಮತ್ತು ಓವರ್‌ಲೋಡ್ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 13 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆಗಳಲ್ಲಿ, ಚೆಕ್‌ಪೋಸ್ಟ್‌ಗಳಲ್ಲಿ ಮತ್ತು ಪ್ರಮುಖ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇಟ್ಟುಕೊಂಡು ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಮರಳನ್ನು ಸಾಗಿಸುತ್ತಿದ್ದ ಹಾಗೂ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು ತಪಾಸಣೆ ವೇಳೆ ಹಲವಾರು ಲಾರಿಗಳು ಓವರ್‌ಲೋಡ್, ಅಗತ್ಯ ದಾಖಲೆಗಳ ಕೊರತೆ ಮತ್ತು ಪರವಾನಗಿ ಉಲ್ಲಂಘನೆಗಳಲ್ಲಿ ತೊಡಗಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಒಟ್ಟು 13 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಲಾರಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಂಡ ಸೇರಿದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾಹನ ಮಾಲೀಕರು ಮತ್ತು ಚಾಲಕರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಏಪ್ರಿಲ್ 25ರಂದು ಈ ಕಾರ್ಯಾಚರಣೆ ನಡೆದಿದ್ದು, ವಿವಿಧ…

Read More

ಬೆಂಗಳೂರು : ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಮತ್ತು ಅವರನ್ನು ಇತ್ತೀಚಿನ ಸುದ್ದಿಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಲು, ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದನ್ನು ಕಡ್ಡಾಯಗೊಳಿಸಿ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ. ಪ್ರಾರ್ಥನೆ ಮುಗಿದ ತಕ್ಷಣ, ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ದಿನಪತ್ರಿಕೆಗಳನ್ನು ಓದಿಸುವುದು ಕಡ್ಡಾಯವಾಗಿದೆ. ಈ ನಿಯಮವು ರಾಜ್ಯದ ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ವಸತಿ ಶಾಲೆಗಳು ಸೇರಿದಂತೆ ಎಲ್ಲಾ ರೀತಿಯ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಇಲಾಖೆ ತಿಳಿಸಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಮಾಡಿತ್ತು. ಆಯೋಗದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆಯು, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಆದೇಶ ಹೊರಡಿಸಿದೆ.

Read More

ಸೋಮೇಶ್ವರ; ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು 16ವರ್ಷದ ಹುಡುಗ ರಕ್ಷಿಸಿದ ಘಟನೆ ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿದೆ. ಪಾಲಕರ ಜೊತೆ ಸೋಮೇಶ್ವರ ಕಡಲ ಕಿನಾರಕ್ಕೆ ಬಂದಿದ್ದ ವಿಟ್ಲ ಮೇಗಿನಪೇಟೆಯ ಮುಹಮ್ಮದ್ ಅರ್ಷಮನ್ (10) ಎಂಬ ಬಾಲಕ ಸಮುದ್ರದ ಅಲೆಗಳ ಸುಳಿಗೆ ಸಿಲುಕಿದ್ದ. ಅದನ್ನು ತಕ್ಷಣ ಗಮನಿಸಿದ ಮುಡಿಪು ಸಮೀಪದ ಆಶ್ರಫ್ ಎಂಬವರ ಪುತ್ರ ಮುಹಮ್ಮದ್ ಇಸ್ಮಾಯಿಲ್ ಫಾಯಿಝ್ (16) ಎಂಬಾತ ತಕ್ಷಣ ಜೀವದ ಹಂಗು ತೊರೆದು ಸಮುದ್ರಕ್ಕೆ ಹಾರಿ 10 ನಿಮಿಷಗಳ ಕಾಲ ಹೋರಾಟ ನಡೆಸಿ ಬಾಲಕನನ್ನು ರಕ್ಷಿಸಿದ್ದಾನೆ. ರಕ್ಷಣೆಯ ವೇಳೆ ಸುಸ್ತಾಗಿದ್ದ ಫಾಯಿಝ್ ಕೂಡ ಅಸ್ವಸ್ಥಗೊಂಡು ಮೂರ್ಛೆ ಹೋಗಿದ್ದ ತಕ್ಷಣ ಆತನನ್ನು ಮನೆಮಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಅರ್ಷಮನ್ ಕೂಡ ಅಪಾಯದಿಂದ ಪಾರಾಗಿದ್ದಾನೆ. ಮುಡಿಪು ಝೆನಿತ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಇಸ್ಮಾಯಿಲ್ ಫಾಯಿಝ್ ಇತ್ತಿಚೇಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ 509 ಅಂಕಗಳೊAದಿಗೆ ಉತ್ತೀರ್ಣನಾಗಿದ್ದ. ಕರ್ನಾಟಕ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೂಡ ಈತ…

Read More

ಉಪ್ಪಿನಂಗಡಿ : ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮನೆಗೆ ಬಂದು ಮನೆಯಲ್ಲಿ ಮಹಿಳೆಯರೇ ಇರುವುದನ್ನು ಖಚಿತಪಡಿಸಿಕೊಂಡು ಮನೆಗೆ ನುಗ್ಗಿ ಬಾಗಿಲ ಚಿಲಕ ಹಾಕಿ ಮನೆ ಮಂದಿಯನ್ನು ಭೀತಿಗೊಳಪಡಿಸಿದ್ದ ಅಪರಿಚಿತ ವ್ಯಕ್ತಿಯನ್ನು ಉಪ್ಪಿನಂಗಡಿಯ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಇಲ್ಲಿನ ಬ್ಯಾಂಕ್ ರಸ್ತೆಯ ಬಳಿ ವೃದ್ದೆಯೋರ್ವರು ಮಾತ್ರ ಮನೆಯಲ್ಲಿದ್ದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿಯು ವೃದ್ದೆ ನೀರು ತರಲೆಂದು ಅಡುಗೆ ಕೋಣೆಗೆ ಹೋದ ವೇಳೆ ನೇರವಾಗಿ ಮನೆಗೆ ನುಗ್ಗಿದವನೇ ಮನೆಯ ಬಾಗಿಲ ಚಿಲಕ ಹಾಕಿದ್ದ ಇದನ್ನು ಕಂಡು ವೃದ್ದೆ ಭೀತಿಯಿಂದ ಬೊಬ್ಬಿರಿಸಿದಾಗ ಅಲ್ಲಿಂದ ಓಡಿ ಹೋಗಿ ಸನಿಹದಲ್ಲೇ ಇದ್ದ ಇನ್ನೊಂದು ಒಂಟಿ ಮಹಿಳೆ ಇರುವ ಮನೆಯ ಕಟ್ಟಡದ ಕೊಠಡಿಯೊಂದಕ್ಕೆ ನುಗ್ಗಿ ಬಾಗಿಲ ಚಿಲಕ ಹಾಕಲೆತ್ನಿಸಿದ್ದ. ಇದನ್ನು ಗಮನಿಸಿದ ಮನೆ ಮಹಿಳೆ ಮತ್ತು ಸ್ಥಳೀಯರು ಬೊಬ್ಬೆ ಹೊಡೆದಾಗ ಅಲ್ಲಿಂದ ಪರಾರಿಯಾದ ಈತ ಉದ್ಯಮಿಯೋರ್ವರ ಮನೆಯ ಹಿಂಭಾಗದ ಕಟ್ಟಡದಲ್ಲಿ ಅವಿತು ಕೂತಿದ್ದ. ಅವನನ್ನು ಹಿಂಬಾಲಿಸಿಕೊಂಡು ಬಂದ ಸ್ಥಳೀಯರು ಈ ಬಗ್ಗೆ ಉದ್ಯಮಿಗೆ…

Read More

ದೇರಳಕಟ್ಟೆ;ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ ಹಜ್ ಯಾತ್ರಿಕರಿಗೆ ತರಬೇತಿ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ದೇರಳಕಟ್ಟೆಯ ಬಿ.ಜೆ.ಎಂ ಆಡಿಟೋರಿಯಂನಲ್ಲಿ ನಡೆಯಿತು. ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬ್ ತಾಜುದ್ದೀನ್ ರಹ್ಮಾನಿ ದುಆಗೈದರು. ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬ್ದುಲ್ ಆರ್. ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಹಜ್ ಯಾತ್ರೆಯ ಪವಿತ್ರ ವಿಧಿವಿಧಾನಗಳ ಬಗ್ಗೆ ಸಿರಾಜುದ್ದೀನ್ ಫೈಝಿ ಬಪ್ಪಲಿಗೆ ತರಬೇತಿ ನೀಡಿದರು. ವೇದಿಕೆಯಲ್ಲಿ ಅನ್ಸಾರುಲ್ ಮುಸ್ಲಿಂ ಅಸೋಸಿಯೇಶನ್ (ರಿ.)ನ ಅಧ್ಯಕ್ಷ ಅಬ್ದುಲ್ ಲತೀಫ್ ಯಾಸೀನ್, ಬದ್ರಿಯಾ ಜುಮಾ ಮಸ್ಜಿದ್‌ನ ಗೌರವ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಅಬುಸ್ವಾಲಿ, ದೇರಳಕಟ್ಟೆ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದೀಕ್ ಡಿ.ಎಂ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಮುತಾಲಿಬ್ ಹಾಗು ಮತ್ತಿತರರು ಉಪಸ್ಥಿತರಿದ್ದರು. ಬದ್ರಿಯಾ ಜುಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ಡಿ.ಎಂ ಸ್ವಾಗತಿಸಿದರು. ಅನ್ಸಾರುಲ್ ಮುಸ್ತಿಮೀನ್ ಅಸೋಸಿಯೇಶನ್ ಜೊತೆ ಕಾರ್ಯದರ್ಶಿ ಶಿಹಾಬುದ್ದೀನ್ ದೇರಳಕಟ್ಟೆ ವಂದಿಸಿದರು.

Read More