ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗವು (UKTL) ದಕ್ಷಿಣ ಕನ್ನಡ ಜಿಲ್ಲೆಯ ಗದ್ದೆ ಮತ್ತು ತೋಟಗಳ ಮೂಲಕ ಹಾದುಹೋಗುತ್ತಿರುವಾಗ, ನೆರೆಯ ಕೇರಳದ ರೈತರಿಗೆ ಕರ್ನಾಟಕಕ್ಕಿಂತ ಉತ್ತಮ ಪರಿಹಾರ ಸಿಕ್ಕಿದೆ ಎಂಬ ಬಲವಾದ ನಂಬಿಕೆಯೊಂದು ಸ್ಥಳೀಯ ರೈತರಲ್ಲಿ ಮನೆಮಾಡಿದೆ. ಇದು ವಾಟ್ಸಪ್ ಸಂದೇಶಗಳು ಮತ್ತು ಸಭೆಗಳ ಮೂಲಕ ವ್ಯಾಪಕವಾಗಿ ಹರಿದಾಡುತ್ತಿದ್ದು, ರೈತರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ. ಎರಡು ರಾಜ್ಯಗಳು ಹೊರಡಿಸಿರುವ ಅಧಿಕೃತ ಆದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ನಂಬಿಕೆಗೂ ವಾಸ್ತವಕ್ಕೂ ಅಜಗಜಾಂತರ ಸ್ಪಷ್ಟವಾಗುತ್ತದೆ. ಮೇಲ್ನೋಟಕ್ಕೆ ಕಾಣುವ ಶೇಕಡಾವಾರು ಲೆಕ್ಕಾಚಾರಕ್ಕಿಂತ, ಕರ್ನಾಟಕದ ಪರಿಹಾರದ ಸೂತ್ರವು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿದೆ ಎಂಬುದು ವಿಶ್ಲೇಷಣೆಯಿಂದ ಸಾಬೀತಾಗಿದೆ.ಈ ಅಂತರರಾಜ್ಯ ಯೋಜನೆಯು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ವಿದ್ಯುತ್ ಗೋಪುರ (ಟವರ್) ಶಾಶ್ವತವಾಗಿ ನಿಲ್ಲುವ ಜಾಗ ಮತ್ತು ಓವರ್‌ಹೆಡ್ ಲೈನ್‌ಗಳ (RoW- ರೈಟ್ ಆಫ್ ವೇ) ಅಡಿಯಲ್ಲಿ ಬರುವ ಜಾಗಕ್ಕೆ ಪರಿಹಾರವನ್ನು ನೀಡಲಾಗುತ್ತದೆ. ವಿವಾದದ ಮೂಲವೇ ಕೇರಳ ಸರ್ಕಾರ 2026ರ ಜನವರಿಯಲ್ಲಿ…
Author: UllalaVani
ಮಂಗಳೂರು, ಮಾ. 03 : ಬಜ್ಪೆಯಲ್ಲಿ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಫೋಟೋ ಇರುವ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ, ಉಳ್ಳಾಲದ ಮಸೀದಿಯ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದ ದುಷ್ಕರ್ಮಿಯ ವಿರುದ್ಧ ಉಳ್ಳಾಲ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಶಂಕರ್11916’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಚೋದನಕಾರಿ ಸಂದೇಶವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ಖಾತೆಯಲ್ಲಿ ‘ಸಪೋರ್ಟ್ ಮಾಡಿ ಬ್ರೋ ಉಳ್ಳಾಲ ಮಸೀದಿ ಹತ್ರ ಬಾಂಬ್ ಬ್ಲಾಸ್ಟ್ ಮಾಡ್ತೀನಿ’ ಎಂದು ಸಂದೇಶ ಹಾಕಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.ಸೋಮವಾರ ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸಂತೋಷ್ ದೊಡ್ಡಮನಿ ಅವರು ಈ ಸಂದೇಶವನ್ನು ಗಮನಿಸಿ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯು ಧರ್ಮಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದಾನೆ. ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಜನರನ್ನು ಎತ್ತಿಕಟ್ಟಲು ಈ ಪೋಸ್ಟ್ ಮಾಡಲಾಗಿದೆ.…
ಮಂಗಳೂರು, ಮಾ. 02: ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗುತ್ತಿದ್ದ ವೇಳೆ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ರೆವೆನ್ಯೂ ಇಂಟಲಿಜೆನ್ಸ್ ನಿರ್ದೇಶನಾಲಯ (ಡಿಆರ್ ಐ) ಮಂಗಳೂರು ಘಟಕ ತಿಳಿಸಿದೆ. ಫೆ.27ರಂದು ವಿಮಾನ ನಿಲ್ದಾಣದ ನಿರ್ಗಮನ ಹಾಲ್‌ನಲ್ಲಿ ಒಬ್ಬ ಪುರುಷ ಮತ್ತು ಇಬ್ಬರು ಮಹಿಳಾ ಪ್ರಯಾಣಿಕರು ಅಬುಧಾಬಿಗೆ ಪ್ರಯಾಣಿಸಲು ಆಗಮಿಸಿದ್ದರು. ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಡಿಆರ್ ಐ ಮಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು ಅವರನ್ನು ತಡೆದು ತಪಾಸಣೆಗೆ ಒಳಪಡಿಸಿದರು. ಆರೋಪಿಗಳು ವಿದೇಶಿ ಕರೆನ್ಸಿಗಳನ್ನು ಅವರ ಕೈಚೀಲ ಮತ್ತು ಚೆಕ್ ಇನ್ ಬ್ಯಾಗ್ ಗಳಲ್ಲಿಅತ್ಯಂತ ಚಾಣಾಕ್ಷತನದಿಂದ ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಕರೆನ್ಸಿಯಲ್ಲಿ ಅಮೆರಿಕನ್ ಡಾಲರ್‌ಗಳು, ಸ್ವಲ್ಪ ಪ್ರಮಾಣದ ಪೌಂಡ್ ಸ್ಟರ್ಲಿಂಗ್, ಸೌದಿ ರಿಯಾಲ್ ಮತ್ತು ಯುಎಇ ದಿರಾಮ್ ಸೇರಿವೆ.ಕೇರಳ ಮೂಲದ ಈ ಮೂವರನ್ನು ಕಸ್ಟಮ್ಸ್ ಕಾಯ್ದೆ, 1962ರಡಿ ಬಂಧಿಸಲಾಗಿದ್ದು, ನ್ಯಾಯಾಲಯವು…
ಮಂಗಳೂರು, ಮಾ. 02 : ಇಸ್ರೇಲ್-ಅಮೆರಿಕಾ ದಾಳಿಗೆ ಪ್ರತಿಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆ ಹಾಗೂ ಇತರ ಕೆಲವು ಸ್ಥಳಗಳ ಮೇಲೆ ಇರಾನ್ ನಡೆಸಿರುವ ದಾಳಿಯಿಂದಾಗಿ ಅಲ್ಲಿ ನೆಲೆಸಿರುವ ಕರಾವಳಿಗರಲ್ಲಿ ಗೊಂದಲ, ಆತಂಕ ಮುಂದುವರಿದಿದೆ. ಆದರೆ ಸದ್ಯ ದೊಡ್ಡ ಅಪಾಯ ಕಂಡುಬಂದಿಲ್ಲ. ವಿಮಾನ ಸಂಚಾರ ಸ್ಥಗಿತವಾಗಿರುವುದರಿಂದ ಸಮಸ್ಯೆಯಾಗಿದೆ. ಉಳಿದಂತೆ ತುಂಬಾ ಸಮಸ್ಯೆಯಾಗಿಲ್ಲ ಎಂದು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನೇಕ ಮಂದಿ ಕರಾವಳಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಪರಿಸ್ಥಿತಿ ಹೀಗೆ ಮುಂದುವರಿದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಕುವೈಟ್‌ನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಏರ್‌ಪೋರ್ಟ್ ಬಂದ್ ಇದೆ. ಉಳಿದಂತೆ ಜನಜೀವನ ಸಹಜವಾಗಿಯೇ ಇದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಮೂಲತಃ ಸುರತ್ಕಲ್‌ನವರಾಗಿದ್ದು ಕುವೈತ್‌ನಲ್ಲಿ ನೆಲೆಸಿರುವ ಭಾರತೀಯ ಪ್ರವಾಸಿ ಪರಿಷತ್‌ನ ಸಂಚಾಲಕ ರಾಜ್ ಭಂಡಾರಿ ತಿಳಿಸಿದ್ದಾರೆ. ಪದೇ ಪದೇ ಸೈರನ್ ಹಾಕಲಾಗುತ್ತಿದ್ದು ಇದು ಎಚ್ಚರಿಕೆಯ ಸೈರನ್ ಗಳಲ್ಲ. ಬದಲಾಗಿ ಕುವೈಟ್ ಸುರಕ್ಷಿತವಾಗಿದೆ ಎಂದು ತಿಳಿಸುವ ಸೈರನ್ ಸದ್ದು. ಸದ್ಯ ಇಲ್ಲಿ ಆಹಾರ ವಸ್ತುಗಳ…
ಉಳ್ಳಾಲ: ಕೆಫೆ ಡೇ ಸಿದ್ದಾರ್ಥ್ ಆತ್ಮಹತ್ಯೆ ನಂತರ ಸುಸೈಡ್ ಪಾಯಿಂಟ್ ಆಗಿ ಗುರುತಿಸಿಕೊಂಡಿದ್ದ ನೇತ್ರಾವತಿ ಸೇತುವೆಯ ತಡೆಬೇಲಿ ವಾಹನ ಅಪಘಾತದಲ್ಲಿ ಮುರಿದು ಕೆಲವೇ ದಿನಗಳು ಆಗುವ ಮುನ್ನವೇ ವ್ಯಕ್ತಿಯೋರ್ವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಅವರನ್ನು ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಪಂಪ್ ವೆಲ್ ನಾಗುರಿ ನಿವಾಸಿ ವಯಸ್ಕರೊಬ್ಬರು ನದಿಗೆ ಸೇತುವೆಯಿಂದ ಹಾರಿದ್ದರು. ಕೆಳಗಡೆ ಮೀನುಗಾರಿಕೆಯಲ್ಲಿ ನಿರತರಾಗಿದ್ದವರು ತಕ್ಷಣವೇ ನದಿಗೆ ಹಾರಿ ವ್ಯಕ್ತಿಯನ್ನು ದೋಣಿಗೆ ಎಳೆದು ಬಳಿಕ ಪ್ರಾಥಮಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನೇತ್ರಾವತಿ ಸೇತುವೆಗೆ ಅಳವಡಿಸಲಾದ ಬೇಲಿ ವಾಹನವೊಂದರ ಅಪಘಾತದಿಂದ ಮುರಿದು ಹೋಗಿತ್ತು. ಲಕ್ಷಾಂತರ ವ್ಯಯಿಸಿ ನಿರ್ಮಿಸಿದ ತಡೆಬೇಲಿಯನ್ನು ದುರಸ್ತಿಗೆ ಇಲಾಖೆಗಳು ಮುಂದಾಗಲಿಲ್ಲ. ಇದೀಗ ಅಲ್ಲಿಂದಲೇ ವ್ಯಕ್ತಿ ಹಾರಿರುವ ಶಂಕೆಯನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ.ಮೀನುಗಾರರಾದ ಜಮಾಲ್, ಇದಿನಬ್ಬ ಮತ್ತು ಮೈಯ್ಯದಿ ಎಂಬುವ ಮೀನುಗಾರರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸೋಲಾರ್ ಹನೀಫ್ ಮತ್ತು ಉಳ್ಳಾಲ ಠಾಣಾ ಎಸ್. ಐ ಜತೆಗಿದ್ದರು.
ನವದೆಹಲಿ: ಯುದ್ಧ ಭೀತಿಯಿಂದ ಇರಾನ್ ದೇಶದ ವಾಯು ಮಾರ್ಗ ಮುಚ್ಚಿದ ಹಿನ್ನೆಲೆ ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ಹಲವು ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಸಂಚಾರ ಸ್ಥಗಿತ ಹಾಗೂ ವಿಮಾನಗಳು ವಾಪಾಸ್ಸಾಗಿವೆ. IX 831 (ಮಂಗಳೂರು-ದುಬೈ)ವಿಮಾನ ಟೇಕಾಫ್ ಬಳಿಕ ಮತ್ತೆ ಮಂಗಳೂರು ಏರ್ಪೋರ್ಟ್ಗೆ ವಾಪಸ್ಸಾಗಿದೆ. ಮಧ್ಯಾಹ್ನ 3 ಗಂಟೆಗೆ ವಿಮಾನ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದು, 174 ಪ್ರಯಾಣಿಕರು 6 ಸಿಬ್ಬಂದಿ ಸೇರಿ ಎಲ್ಲರು ಮತ್ತೆ ಸ್ವಸ್ಥಾನಕ್ಕೆ ವಾಪಸ್ಸಾದರು. IX 821 (ಮಂಗಳೂರು-ದೋಹಾ)ವಿಮಾನವನ್ನು ಮುಂಬೈ (ಃಔಒ)ಗೆ ಡೈವರ್ಟ್ ಮಾಡಲಾಗಿದೆ. 6ಇ 1467 (ಮಂಗಳೂರು–ದುಬೈ)ವಿಮಾನ ಸಂಪೂರ್ಣವಾಗಿ ರದ್ದಾಗಿದ್ದು, ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿಗೆ ಆಗಮಿಸಲಿದ್ದ ಹಲವು ವಿಮಾನಗಳು ರದ್ದಾಗಿದೆ. IX 822 (ದೋಹಾ–ಮಂಗಳೂರು) ವಿಮಾನ ರದ್ದು- ಆಗಮನ ಸಮಯ: 20:45 IX 832 (ದುಬೈ–ಮಂಗಳೂರು) – ಆಗಮನ ಸಮಯ: 22:10 ಮಂಗಳೂರಿನಿAದ ಗಲ್ಫ್ ರಾಷ್ಟ್ರಗಳಿಗೆ ಹೊರಡಲಿದ್ದ ಎಲ್ಲಾ ವಿಮಾನಗಳು ರದ್ದು IX 831 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 13:20 IX 847 (ಮಂಗಳೂರು–ದಮ್ಮಾಮ್)…
ಮಂಗಳೂರು, ಫೆ. 28; ಜೈನ್ ಲಿಂಕ್ ಹೆಸರಲ್ಲಿ ಜನಸಾಮಾನ್ಯರನ್ನು ಮೋಸಗೊಳಿಸಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ಬ್ಲೇಡ್ ಕಂಪನಿ ವೆಕ್ಸನ್ ವಿರುದ್ಧ ಮಂಗಳೂರಿನ ಕದ್ರಿ ಠಾಣೆಯಲ್ಲಿ ಕೊನೆಗೂ ಎಫ್ಐಆರ್ ದಾಖಲಾಗಿದೆ. ಹಣ ಕೊಟ್ಟು ಮೋಸ ಹೋಗಿರುವ ವಿದ್ಯಾರ್ಥಿನಿಯೊಬ್ಬರ ದೂರಿನಂತೆ ಪ್ರಕರಣ ದಾಖಲಾಗಿದೆ. ವೆಕ್ಸನ್ ಎನ್ನುವುದು ಮಹಾರಾಷ್ಟ್ರ ಮೂಲದ ನಕಲಿ ಕಂಪನಿಯಾಗಿದ್ದು ಕುದ್ರೋಳಿಯ ಅಳಕೆಯಲ್ಲಿ ಕಾರ್ಯಾಚರಿಸುತ್ತಿದೆ. ಸಂಸ್ಥೆಯ ಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ತೇವಳ, ಸುನಿಲ್ ಸಾವಂತ, ಅನಾನ್ ಅಹೈರ್, ಮಂಗಳೂರಿನ ಕಚೇರಿಯಲ್ಲಿ ಉದ್ಯೋಗಿಗಳಾಗಿರುವ ಪಲ್ಲವಿ, ಅಂಜಲಿ, ನವ್ಯಾ ನಿವೇಶ್, ಜಯಶ್ರೀ ಮತ್ತು ಜುನೈದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಈ ಪೈಕಿ ಅಂಜಲಿ, ನವ್ಯಾ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿನಿಯರಾಗಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ತನ್ನ ಪರಿಚಯದ ನವ್ಯಾ ಎಂಬಾಕೆ ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಪಾರ್ಟ್ ಟೈಮ್ ಕೆಲಸವಿದ್ದು, ತಿಂಗಳಿಗೆ 15 ಸಾವಿರದಿಂದ 30 ಸಾವಿರ ದುಡಿಯಬಹುದು ಎಂದು ಹೇಳಿ ವೆಕ್ಷನ್ ಕಂಪನಿಗೆ ಕರೆದೊಯ್ದಿದ್ದಳು. ಮೊದಲಿಗೆ ವೆಬ್ ಡೆವಲಪರ್,…
ಮಂಗಳೂರು: ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವ 5ರ ಹರೆಯದ ಶಿವಾಂಶಿಗೆ ವಿಷನ್ ಕುಡ್ಲ ಟ್ರಸ್ಟ್ ಅಧ್ಯಕ್ಷರಾದ ಜಿತೇಂದ್ರ ರಾವ್ ಇವರ ನೇತೃತ್ವದ ತಂಡದಿಂದ ಸಹಾಯಧನ ವನ್ನು ಮಂಗಳೂರಿನ ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ಹೆತ್ತವರ ಮೂಲಕ ವಿತರಿಸಲಾಯಿತು. 5 ವರ್ಷದ ಬಾಲಕಿ ಶಿವಾಂಶಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸುಮಾರು 25 ಲಕ್ಷ ತಗಲಲಿದೆ. ಸಹೃದಯಿಗಳಿಂದ ಸಹಾಯ ಹಸ್ತವನ್ನು ಕುಟುಂಬ ಯಾಚಿಸಿದ್ದು, ಅದರಂತೆ ಟ್ರಸ್ಟ್ ವತಿಯಿಂದ ಸಹಾಯಧನ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ರಾಮಚಂದ್ರ ಗಟ್ಟಿ, ದೇವಿಪ್ರಸಾದ್ ಶೆಟ್ಟಿ ಹಾಗೂ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು: ದ.ಕ,ಉಡುಪಿ ಹಾಗು ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರು ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ಮಧ್ಯೆ ನೇರ ವಿಮಾನಯಾನ ಸೇವೆಯು ಮಾ.1ರಿಂದ ಪುನರಾಂಭಗೊಳ್ಳಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟನೆ ನೀಡಿರುವ ಅವರು ಕರಾವಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಮಸ್ಕ÷ತ್‌ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಗೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ತಾನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ವ್ಯವಹಾರ ನಡೆಸಿ, ವಿಮಾನಯಾನವು ಪುನಾರಂಭಿಸುವAತೆ ಮನವಿ ಮಾಡಿದ್ದೆ. ಸದ್ಯದ ವೇಳಾಪಟ್ಟಿಯ ಪ್ರಕಾರ ವಾರದಲ್ಲಿ ಎರಡು ದಿನ ಅಂದರೆ ಪ್ರತಿ ರವಿವಾರ ಮತ್ತು ಮಂಗಳವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹಾರಾಟ ನಡೆಸಲಿವೆ. ಈ ನೇರ ಸೇವೆಯಿಂದಾಗಿ ಪ್ರಯಾಣದ ಸಮಯ ಉಳಿತಾಯವಾಗುದಲ್ಲದೆ ಅನಿವಾಸಿ ಭಾರತೀಯರಿಗೆ ತಮ್ಮ ಊರುಗಳಿಗೆ ನೇರವಾಗಿ ಪ್ರಯಾಣಿಸಲು ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆಯು ಹಠಾತ್…
ಮಂಗಳೂರು, ಫೆ. 28 : ಕದ್ರಿ, ಶಕ್ತಿನಗರ, ಭಾಗಗಳಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಕದ್ರಿ ಕೈಬಟ್ಟಲ್, ಶಕ್ತಿನಗರದ ಕೋರ್ಡೆಲ್ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನುಗಳನ್ನು ಇಡಲಾಗಿದೆ.ಈ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಆಗಿರುವ ಸಾಧ್ಯತೆಯೂ ಇದೆ. ಚಿರತೆ ಸಂಚಾರ ಮಾಡಿರುವ ಪ್ರದೇಶದಲ್ಲಿ ಹಗಲು ರಾತ್ರಿ ಗಸ್ತು ತಿರುಗಲು ಅರಣ್ಯ ಇಲಾಖೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದೇವೆ. ಸದ್ಯ ಚಿರತೆ ಇಲ್ಲೇ ಉಳಿದಿರದೇ, ಕಾಡು ಪ್ರದೇಶಕ್ಕೆ ಮರಳಿರುವ ಬಗ್ಗೆ ಅಂದಾಜಿಸಲಾಗಿದೆ. ಹಾಗಿದ್ದೂ ಸಾರ್ವಜನಿಕರು ಚಿರತೆ ಸಹಿತ ಯಾವುದೇ ಅಪಾಯಕಾರಿ ಕಾಡುಪ್ರಾಣಿಗಳು ಕಂಡು ಬಂದಲ್ಲಿ ಕೂಡಲೇ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆ 1926 ಗೆ ಮಾಹಿತಿ ನೀಡಿ ಸಹಕರಿಸಿದರೆ ಇನ್ನಷ್ಟು ತ್ವರಿತ ಮತ್ತು ಪರಿಣಾಮಕಾರಿಯಾಗಿ ಕಾರ್ಯ…

