ಪೆಟ್ರೋಲ್ ಮತ್ತು ಡೀಸೆಲ್ನಂತಹ ಪಳೆಯುಳಿಕೆ ಇಂಧನಗಳಿಂದ ಕಾರ್ಯನಿರ್ವಹಿಸುವ ವಾಹನಗಳಿಗೆ ದೀರ್ಘಾವಧಿಯಲ್ಲಿ ಭವಿಷ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಆಟೋಮೊಬೈಲ್ ಉದ್ಯಮವು ಶುದ್ಧ ಇಂಧನಗಳತ್ತ ತ್ವರಿತವಾಗಿ ಪರಿವರ್ತನೆಗೊಳ್ಳಬೇಕಿದ್ದು, ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸುಧಾರಣೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಜೈವಿಕ ಇಂಧನಗಳು, ಸಿಎನ್ಜಿ, ಎಲ್ಎನ್ಜಿ ಹಾಗೂ ವಿದ್ಯುತ್ ಪವರ್ಟ್ರೇನ್ಗಳಂತಹ ಪರ್ಯಾಯ ಇಂಧನಗಳ ಬಳಕೆ ಹೆಚ್ಚಿಸುವ ಅಗತ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಆಮದು ಅವಲಂಬನೆ ಮತ್ತು ಪರಿಸರ ಮಾಲಿನ್ಯವನ್ನು ಹೆಚ್ಚಿಸುವುದರಿಂದ ಇದು ಗಂಭೀರ ಸಮಸ್ಯೆಯಾಗಿದೆ ಎಂದು ಗಡ್ಕರಿ ಎಚ್ಚರಿಸಿದರು.ಹೈಡ್ರೋಜನ್ ಇಂಧನ ಕ್ಷೇತ್ರದಲ್ಲಿಯೂ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಪೈಲಟ್ ಯೋಜನೆಗಳು ಪ್ರಾರಂಭವಾಗಿವೆ. ಟಾಟಾ ಮೋಟಾರ್ಸ್, ವೋಲ್ವೋ, ಅಶೋಕ್ ಲೇಲ್ಯಾಂಡ್ ಹಾಗೂ ಮಹೀಂದ್ರಾ ಸೇರಿದಂತೆ ಪ್ರಮುಖ ಕಂಪನಿಗಳು ಹೈಡ್ರೋಜನ್ ಇಂಧನ ಪ್ರಯೋಗಗಳಲ್ಲಿ ತೊಡಗಿಕೊಂಡಿವೆ.ದೇಶದಲ್ಲಿ ಈಗಾಗಲೇ 10 ಮಾರ್ಗಗಳಲ್ಲಿ ಹೈಡ್ರೋಜನ್ ಟ್ರಕ್ಗಳು ಮತ್ತು ಬಸ್ಗಳ ಸಂಚಾರ ನಡೆಯುತ್ತಿದೆ ಎಂದು ತಿಳಿಸಿದ ಅವರು, “ಹೈಡ್ರೋಜನ್ ಭವಿಷ್ಯದ ಇಂಧನ” ಎಂದು ಹೇಳಿದರು. ಇದೇ ವೇಳೆ, E20 ಇಂಧನ ಬಳಕೆ ಹಾಗೂ ಫ್ಲೆಕ್ಸ್ ಇಂಧನ ಎಂಜಿನ್ಗಳ ಅಭಿವೃದ್ಧಿಯತ್ತ ಉದ್ಯಮ ಗಮನ ಹರಿಸುತ್ತಿದ್ದು, ಪರ್ಯಾಯ ಇಂಧನವಾಗಿ ಎಥೆನಾಲ್ ಬಳಕೆಯ ಮಹತ್ವವನ್ನೂ ಗಡ್ಕರಿ ಒತ್ತಿಹೇಳಿದರು.

