ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು ಸಾಧಿಸಿದ್ದಾರೆ. ಹೆಚ್.ವೈ. ಮೇಟಿ ನಿಧನದ ಹಿನ್ನೆಲೆ ಅವರ ಪುತ್ರ ಉಮೇಶ್‌ರನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಉಮೇಶ್ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನೊಂದಿಗೆ ಬಾಗಲಕೋಟೆ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ವಿಜಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಸಹೋದರ ಮಲ್ಲಿಕಾರ್ಜುನ ಮೇಟಿ ಅವರು, “ಇದೊಂದು ಭಾವುಕ ಕ್ಷಣವಾಗಿದ್ದು, ಈ ಗೆಲುವಿನಿಂದ ನಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಕ್ಕ ಹಾಗಾಗಿದೆ. ನಮ್ಮ ತಂದೆ ಕೈ ಹಿಡಿದಿದ್ದ ಜನರು ಈಗ ನಮ್ಮ ಸಹೋದರನ ಕೈಯನ್ನೂ ಹಿಡಿದಿದ್ದಾರೆ. ಸಿಎಂ, ಸಚಿವರು ಮತ್ತು ಮತದಾರರಿಗೆ ಧನ್ಯವಾದ ಹೇಳೋದಾಗಿ” ತಿಳಿಸಿದ್ದಾರೆ.
Author: UllalaVani
ಅಡ್ಕರೆ ಪಡ್ಪು: ಸಂಘಟನೆಗಳು ಸಮಾಜದ ಏಳಿಗಾಗಿ ಕಾರ್ಯನಿರ್ವಹಿಸಿ, ಸರ್ಕಾರದ ಉತ್ತಮ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಿಸುವ ಸೇತುವೆಯಾಗಬೇಕು ಎಂದು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಡ್ಕರೆಯ ಅಧ್ಯಕ್ಷ ಅಬ್ದುಲ್ ಖಾದರ್ ಹೇಳಿದರು. ಅವರು ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಅಡ್ಕರೆ ಪಡ್ಪು ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾದ ಸುಕನ್ಯಾ ಸಮೃದ್ಧಿ ಯೋಜನೆ ನೋಂದಣಿ ಹಾಗೂ ಆಧಾರ್ ತಿದ್ದುಪಡಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರಿಗೆ ಉಪಯುಕ್ತ ಸೇವೆಗಳನ್ನು ತಲುಪಿಸುವಲ್ಲಿ ಅಲ್ ಇಹ್ಸಾನ್ ಸಂಘಟನೆ ಮಾದರಿಯಾಗಿದೆ. ಇಂತಹ ಸಂಘಟನೆಗಳು ಪ್ರತಿಯೊಂದು ಊರಲ್ಲೂ ಸ್ಥಾಪನೆಯಾಗಬೇಕು. ಯುವಕರು ತಪ್ಪು ದಾರಿಯಲ್ಲಿ ಹೋಗದಂತೆ ತಡೆದು, ಅಹ್ಲು ಸುನ್ನತ್ ಆಶಯದಂತೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಅಲ್ ಇಹ್ಸಾನ್ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ ಮಾತನಾಡಿ, ಸಂಘಟನೆಯು ಪ್ರಾರಂಭದಿಂದಲೇ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸದಸ್ಯರ ಒಗ್ಗಟ್ಟು, ಶ್ರಮ ಹಾಗೂ ಅನಿವಾಸಿ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ…
ಮಂಗಳೂರು, ಮೇ 4: ಮಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಲರ್ನಿಂಗ್‌ನ ಆರು ಮಂದಿ ವಿದ್ಯಾರ್ಥಿಗಳು ಮೇ-ಜೂನ್ ಪರೀಕ್ಷಾ ಅವಧಿಯಲ್ಲಿ ನಡೆದ ಯುಎಸ್ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆAಟ್ (ಸಿಎಂಎ) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಏಪ್ರಿಲ್ 14ರಂದು ಫಲಿತಾಂಶ ಪ್ರಕಟವಾಗಿದ್ದು, ಇದು ಸಂಸ್ಥೆಗೆ ಗಮನಾರ್ಹ ಶೈಕ್ಷಣಿಕ ಸಾಧನೆಯಾಗಿದೆ. ಅಮೃತ್ ಸಿ ಶೆಟ್ಟಿ, ಸ್ಥಿತಿ ಜೆ ಶೆಟ್ಟಿ, ಮೇಘಶ್ರೀ ಕೆ ಪೂಜಾರಿ, ಪ್ರಾರ್ಥನಾ ಪ್ರಭು, ನೀಷ್ಮಾ ಹಾಗೂ ಪ್ರಿಯಾಂಕಾ ಚೌಧರಿ ಯಶಸ್ವಿಯಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಕೌಂಟೆoಟ್ಸ್ ವತಿಯಿಂದ ನೀಡಲಾಗುವ ಯುಎಸ್ ಸಿಎಂಎ ಅರ್ಹತೆಯು ಹಣಕಾಸು ನಿರ್ವಹಣೆ ಹಾಗೂ ಕಾರ್ಯತಂತ್ರದ ಲೆಕ್ಕಪತ್ರ ನಿರ್ವಹಣೆಯಲ್ಲಿ ಜಾಗತಿಕವಾಗಿ ಮಾನ್ಯತೆ ಪಡೆದ ಅರ್ಹತೆಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ವೃತ್ತಿಪರ ಜೀವನದಲ್ಲಿ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಶುಭಹಾರೈಸಿದೆ.
ಮಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹993 ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಸಣ್ಣ ಉದ್ಯಮಿಗಳು ಮತ್ತು ಹೋಟೆಲ್ ಮಾಲೀಕರ ಬದುಕನ್ನು ಬೀದಿಗೆ ತಳ್ಳುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಈ ಸಮಯದಲ್ಲಿ, ಒಂದೇ ಬಾರಿ ಸಾವಿರ ರೂಪಾಯಿಯಷ್ಟು ಬೆಲೆ ಏರಿಸುವುದು ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಇದು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದ ‘ಅಚ್ಛೇ ದಿನ’ (ಒಳ್ಳೆಯ ದಿನಗಳು) ಹೀಗಿರುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ, ಕಾಫಿ ಮತ್ತು ಊಟದ ದರಗಳು ಏರಿಕೆಯಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿ, ಹೋಟೆಲ್…
ಕರ್ನಾಟಕದಲ್ಲಿ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಹಾಗೂ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮೂರನೇ ಸುತ್ತಿನಲ್ಲಿ 4800 ಮತಗಳ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಹಿನ್ನಡೆ ಅನುಭವಿಸಿದ್ದಾರೆ.ಬಾಲಕೋಟೆಯಲ್ಲಿ 6ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಗೆ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ – 32,363 ಹಾಗೂ ಬಿಜೆಪಿ – 16,906 ಮತ ಪಡೆದಿದ್ದು, 15,457 ಮತಗಳಿಂದ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ನವದೆಹಲಿ, ಮೇ. 04 : ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆಗಳ ಹಾಗೂ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಸ್ಥಾನಗಳಿದ್ದು, ಅವುಗಳಲ್ಲಿ 62 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಸ್ಥಾನಗಳಿದ್ದು, 77 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಕೇರಳದಲ್ಲಿ ಒಟ್ಟು 140 ವಿಧಾನಸಭಾ ಸ್ಥಾನಗಳಿದ್ದು, 140 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಅಸ್ಸಾಂನಲ್ಲಿ 126 ವಿಧಾನಸಭಾ ಸ್ಥಾನಗಳಿದ್ದು, 40 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪುದುಚೇರಿಯಲ್ಲಿ 30 ವಿಧಾನಸಭಾ ಸ್ಥಾನಗಳಿದ್ದು, ಅವುಗಳಲ್ಲಿ 6 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಮತ ಎಣಿಕೆ ನಡೆಯುತ್ತಿದ್ದು, ಇದೀಗ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಕೇರಳದಲ್ಲಿ…
ಮಂಗಳೂರು ಸಮೀಪದ ಬಗಂಬಿಲ ಅಮೃತನಗರದಲ್ಲಿ ನೂತನವಾಗಿ ನಿರ್ಮಿಸಲಾದ “ವೀರಮ್ಮ ನಿಲಯ” ಮನೆಯ ಗೃಹಪ್ರವೇಶ ಕಾರ್ಯಕ್ರಮವು ಮೇ 3, 2026ರ ಆದಿತ್ಯವಾರ ಬೆಳಿಗ್ಗೆ 11.05ಕ್ಕೆ ನೆರವೇರಲಿದೆ. ರಾಷ್ಟ್ರೀಯ ಸೇವಾ ಭಾರತಿ ಕೇಸರಿ ಶಾಖಾ, ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ (ರಿ.), ಕೇಸರಿ ಮಿತ್ರವೃಂದ (ರಿ.) ಹಾಗೂ ಕೇಸರಿ ಮಾತೃಮಂಡಳಿ ವ್ಯಾಸನಗರ, ಕುಂಪಲ ಇವರ ಆಶ್ರಯದಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ. ಶ್ರೀ ಕಲಿಯುಗಾಬ್ದ 5128ರ ಪರಾಭವ ನಾಮ ಸಂವತ್ಸರದ ಉತ್ತರಾಯಣ ಮೇಷ ಮಾಸದ ಶುಭ ಸಂದರ್ಭದಲ್ಲಿ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ ಗೃಹಪ್ರವೇಶ ನಡೆಯಲಿದ್ದು, ಇದರ ಅಂಗವಾಗಿ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಶ್ರೀಮತಿ ವೀರಮ್ಮ, ಶ್ರೀಮತಿ ಮಲ್ಲಿಕಾ (ಸೊಸೆ) ಹಾಗೂ ಮೊಮ್ಮಕ್ಕಳು ಉಪಸ್ಥಿತರಿರಲಿದ್ದು, ಅತಿಥಿಗಳ ಸ್ವಾಗತಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೇ 1 ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಮಂಗಳೂರಿನ ಪೌರ ಕಾರ್ಮಿಕರಿಗೆ ಕಾಯಕ ಗೌರವ ಕಾರ್ಯಕ್ರಮ ಪಂಪ್ವೆಲ್ ನಡೆಯಿತು. ಕಾರ್ಮಿಕರ ಪರಿಶ್ರಮದ ಕುರಿತು ಜಿಲ್ಲಾಧ್ಯಕ್ಷ ಇಬ್ರಾಹೀಂ ನವಾಝ್ ನವರು ಮಾತನಾಡಿ ಕಾರ್ಮಿಕ ದಿನಾಚರಣೆ ಪ್ರಾರಂಭ ದಿನದಿಂದ ನಡೆದು ಬಂದ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಪೌರ ಕಾರ್ಮಿಕರು ಭಾಗವಹಿಸಿದ ನೆನಪುಗಳನ್ನ ಮೆಲುಕು ಹಾಕಿ ಅವರ ಕೆಲಸಕ್ಕೆ ಯಾವ ಗೌರವವೂ ಕಡಿಮೆಯಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಮಿಕರ ದಿನ ಹಬ್ಬವಾಗಿ ಜನ್ಮ ಪಡೆದದ್ದಲ್ಲ ಅದು ಒಂದು ಹೋರಾಟದ ಸಂಕೇತ. ದೇಶದ ಹೋರಾಟದ ಬಹುಪಾಲು ಕಾರ್ಮಿಕರೇ ಇದ್ದರು. ಕಾಂಗ್ರೆಸ್ ಅಂದೂ ಕಾರ್ಮಿಕರ ಪರ, ಎಂದೆಂದಿಗೂ ಕಾರ್ಮಿಕರ ಪರ ಎಂದು ಒತ್ತಿ ಹೇಳಿದರು. ವೇದಿಕೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರಮಾನಂದ ಪೂಜಾರಿ, ಸಮರ್ಥ್ ಭಟ್, ಆಸಿಫ್ ಬಜಾಲ್, ಸಾಗರ್ ಕಟೀಲ್, ಮಿತೇಶ್ ಡಿಸೋಜಾ, ಉಮ್ಮರ್ ಸಾಲೆತ್ತೂರು, ಅನ್ಸಾರ್ ಸಾಲ್ಮರ, ಲುಕ್ಮನ್ ಅಡ್ಯಾರ್, ಅಬ್ದುಲ್ ಅಕ್ಮಲ್, ನಜೀಬ್ ಕಾರ್ಮಿಕ…
ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಡಬಲ್ ಡಿಜಿಟ್ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಂಜೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಸುಮಾರು 20% ಮತಗಳನ್ನು ಪಡೆದಿದ್ದು, ತ್ರಿಶೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದರು. ಕೇರಳದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿದ್ದೇವೆ, ಇದೇ ರೀತಿಯಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು. ಬಿಜೆಪಿ ಹಿಂದುತ್ವ ಆಧಾರಿತ ಪಕ್ಷವಾಗಿದ್ದು, ಕರ್ನಾಟಕ, ಕರಾವಳಿ ಅಥವಾ ಕೇರಳ ಎಂಬ ಭೇದವಿಲ್ಲದೆ ಒಂದೇ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಸಂಸದ ಸುರೇಶ್ ಗೋಪಿ ಅವರು “ಬೀಫ್ ಸೇವಿಸುವುದರಲ್ಲಿ ತಪ್ಪಿಲ್ಲ” ಎಂದು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುರೇಂದ್ರನ್, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ಸಾಮೂಹಿಕ ನಿಲುವು ಅಲ್ಲ ಎಂದು ಹೇಳಿದರು.
ಉಳ್ಳಾಲ, ಸನದು ಸ್ವೀಕರಿಸಿ ಹೋಗುವ ವಿದ್ಯಾರ್ಥಿಗಳು ಪಡೆದ ವಿದ್ಯೆಯನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಮರೆಯಬಾರದು. ಉಳ್ಳಾಲ ದರ್ಗಾ ದಲ್ಲಿ ನೀಡಲಾದ ಸನದು ಧಾರ್ಮಿಕ, ಲೌಕಿಕ ಶಿಕ್ಷಣ ಬೆಳೆಸುವ ಉದ್ದೇಶದಿಂದ ಆಗಿದೆ ಎಂದು ಇಂಡಿಯನ್ ಸುಲ್ತಾನುಲ್ ಉಲಮಾ ಉಳ್ಳಾಲ ಖಾಝಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು . ಅವರು ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ ಹಾಗೂ ಸನದುದಾನ ಮಹಾ ಸಮ್ಮೇಳನದಲ್ಲಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಜನರಿಗೆ ರೋಗ ಬಂದರೆ ಗುಣಪಡಿಸುವುದು ಅಲ್ಲಾಹನು ಆಗಿದ್ದಾನೆ. ನಾನು ಅಸೌಖ್ಯದಿಂದ ಇದ್ದ ಸಂದರ್ಭದಲ್ಲಿ ಬಹಳಷ್ಟು ಚಿಕಿತ್ಸೆ, ಪ್ರಾರ್ಥನೆ ನಡೆದಿದೆ. ಈಗ ನನ್ನ ರೋಗವನ್ನು ಅಲ್ಲಾಹು ಗುಣಪಡಿಸಿದ್ಜು, ಈಗ ಕಾಲೇಜಿನಲ್ಲಿ ಪ್ರತಿದಿನ ದರ್ಸ್ ಕ್ಲಾಸ್ ಮಾಡುತ್ತಿದ್ದೇನೆ ಎಂದರುಉಳ್ಳಾಲ ದಲ್ಲಿ ಶಿಕ್ಷಣ ಬೆಳೆಸಲು ತಾಜುಲ್ ಉಲಮಾ ತಂಙಳ್ ಬಹಳಷ್ಟು ಕೆಲಸ ಮಾಡಿದ್ದರು.ಉಳ್ಳಾಲ ದರ್ಗಾ ದಲ್ಲಿ ಸ್ಥಾಪಿಸಲಾದ ನೂತನ ಕಟ್ಟಡ ಧಾರ್ಮಿಕ, ಲೌಕಿಕ ಶಿಕ್ಷಣ ಬೆಳೆಸುವ ಉದ್ದೇಶದಿಂದ ಆಗಿದೆ . ಆ ಕೆಲಸ ವನ್ನು ಮಾಡಬೇಕು. ನಮ್ಮ ಏನು ಕಾರ್ಯ ಮಾಡಿದರೂ ಅದು…

