Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಚ್ಚಿಲಗುಡ್ಡೆ: ರಸ್ತೆ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ರಾಜ್ಯ ಸರಕಾರ ನೀಡುತ್ತಿದ್ದು, ಸಚಿವರು ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೆಡೆಯೂ ಸಕಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅವರು ಶಾಸಕರ ನಿಧಿಯಿಂದ ರೂ. 10 ಲಕ್ಷ ಅನುದಾನದಿಂದ ಕಾಂಕ್ರೀಟಿಕರಣಗೊಂಡ ಸೋಮೇಶ್ವರ ಗ್ರಾಮದ ಉಚ್ಚಿಲಗುಡ್ಡೆಯ ಅಡ್ಡರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹಮ್ಮದ್ ಹುಸೈನ್ ವಹಿಸಿದ್ದರು. ಸೋಮೆಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಅಬ್ದುಲ್ ರೆಹಮಾನ್ ಕೋಡಿಜಾಲ್, ಉಚ್ಚಿಲ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ನಿನ ಅಧ್ಯಕ್ಷ ಮೊಹ್ಸಿನ್ ರೆಹ್ಮಾನ್, ಸೋಮೇಶ್ವರ ಪಂ. ಸದಸ್ಯರಾದ ಎನ್.ಇಸ್ಮಾಯಿಲ್, ಉಚ್ಚಿಲ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕರೀಂ ನಾಗತೋಟ, ಫ್ರೆಂಡ್ಸ್ ಉಚ್ಚಿಲಗುಡ್ಡೆಯ ಅಧ್ಯಕ್ಷ ಅಬ್ದುಲ್ ನಝೀರ್ ಯು.ಟಿ, ಗುತ್ತಿಗೆದಾರರಾದ ಪಿಯುಶ್ ಮೊಂತೇರೊ, ಗಣೇಶ್ ತಲಪಾಡಿ, ಹಾಗೂ ಕೆ.ಪಿ.ಇಸ್ಮಾಯಿಲ್,…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಪ್ಪಿನಂಗಡಿ: ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಶನಿವಾರ ತಮ್ಮ ಹುಟ್ಟೂರಾದ ಮಂಗಳೂರಿಗೆ ಆಗಮಿಸಿದ್ದರು ಆದರೆ ಪ.್ರತೀ ಬಾರಿಯಂತೆ ಖುಷಿಖುಷಿಯಾಗಿ ಹುಟ್ಟೂರಿಗೆ ಭೇಟಿ ಕೊಡುತ್ತಾ ಇದ್ದ ಐಶ್ ಮೊಗದಲ್ಲಿ ಈ ಬಾರಿ ಮಾತ್ರ ಸಂತಸ ಇರಲಿಲ್ಲ. ತಂದೆಯನ್ನು ಕಳೆದುಕೊಂಡಿರೋ ಐಶ್ ಅಪ್ಪನ ಅಸ್ಥಿ ವಿಸರ್ಜನೆಗಾಗಿ ಕುಟುಂಬದ ಜೊತೆಗೆ ಊರಿಗೆ ಬಂದಿದ್ದರು. ಬೇಸರದ ಮಧ್ಯೆಯೇ ಸಂಗಮ ಕ್ಷೇತ್ರದಲ್ಲಿ ತಂದೆಯ ಅಂತಿಮ ವಿಧಿಗಳನ್ನ ಪೂರೈಸಿ ತೆರಳಿದ್ದಾರೆ. ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಹುಟ್ಟೂರಿನ ಮೇಲೆ ಅದೆಂಥದ್ದೋ ಪ್ರೀತಿ. ಪ್ರತೀ ಬಾರಿ ಹುಟ್ಟೂರಾದ ಮಂಗಳೂರಿಗೆ ಭೇಟಿ ನೀಡೋ ಐಶ್ ಇಲ್ಲಿನ ಸಂಬಂಧಿಕರ ಮನೆ, ದೇವಸ್ಥಾನಗಳಿಗೆ ಭೇಟಿ ನೀಡಿ ವಾಪಾಸಾಗುತ್ತಾರೆ. ಆದರೆ ಈ ಬಾರಿಯ ಭೇಟಿ ಮಾತ್ರ ಅವರ ಪಾಲಿಗೆ ಅತ್ಯಂತ ದುಃಖದಾಯವಾಗಿತ್ತು. ಇದೇ ಮೊದಲ ಬಾರಿಗೆ ಪ್ರೀತಿಯ ಅಪ್ಪನ ಸಾಂಗತ್ಯವಿಲ್ಲದೇ ಐಶ್ ಹುಟ್ಟೂರಿಗೆ ಆಗಮಿಸಿದ್ದರು. ಅದು ಕೂಡ ತಂದೆ ಕೃಷ್ಣ ರಾಜ್…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬೋಳಿಯಾರ್: ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿ ರಸ್ತೆಗೆ ಅಡ್ಡವಾಗಿ ಮಗುಚಿಬಿದ್ದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಇಂದು ಮುಂಜಾನೆ ವೇಳೆ ಸಂಭವಿಸಿದೆ. ಮೆಲ್ಕಾರಿನಿಂದ ಕೊಣಾಜೆ ಕಡೆಗೆ ಮರದ ಲೋಡನ್ನು ಸಾಗಾಟ ನಡೆಸುತ್ತಿದ್ದ ಲಾರಿ ಎದುರಿನಲ್ಲಿದ್ದ ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿದೆ. ಘಟನೆಯಿಂದ ಮೆಲ್ಕಾರ್ ಮುಡಿಪು ಕಡೆಗೆ ಚಲಿಸುವ ವಾಹನಗಳಿಗೆ ಕೆಲಕಾಲ ಅಡ್ಡಿಯುಂಟಾಯಿತು. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿ ಕ್ರೇನ್ ಮೂಲಕ ಮೇಲೆತ್ತಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಕನಕದಾಸರ ಕೀರ್ತನೆ ಅಥವಾ ಅವರ ಕಾವ್ಯಗಳು ಬರಿ ಸಾಹಿತ್ಯ ಕೃತಿಗಳಾಗದೆ, ಅವು ಒಂದು ಸಾಂಸ್ಕøತಿಕ ಪಠ್ಯವಾಗಿವೆ. ಕೀರ್ತನೆಗಳನ್ನು ಸಾಹಿತ್ಯದ ನೆಲೆಗಳಾದ ಉಪಮೆ, ರೂಪಕದ ಭಾಷೆಯಾಗಿ ಮಾತ್ರ ನೋಡದೆ ಅದರ ಸಾಮಾಜಿಕ ಎಚ್ಚರದ ಬಗ್ಗೆ ಅಧ್ಯಯನವಾಗಬೇಕಾದ ಅಗತ್ಯತೆ ಇದೆ. ಆದರೆ ಅವಜ್ಞೆಯಲ್ಲಿದ್ದ ದಾಸ ಸಾಹಿತ್ಯಕ್ಕೆ ಇತ್ತೀಚಿನ ದಶಕಗಳಲ್ಲಿ ಕನಕದಾಸರ ಅಧ್ಯಯನ ಮೂಲಕ ಹೊಸ ನೆಲೆ ಬೆಲೆ ಅದರ ಪುನರ್ ಪರಿಶೀಲನೆಗೆ ಅವಕಾಶ ಸಿಕ್ಕಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಖ್ಯಾತ ಸಾಹಿತಿ ಪ್ರೊ.ಎ.ವಿ.ನಾವಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಗುರುವಾರ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ `ಕನಕ ಸ್ಮøತಿ’ ಕಾರ್ಯಕ್ರಮದಲ್ಲಿ `ಕನಕ ಪ್ರಸರಣ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನಕದಾಸರ ಬಗ್ಗೆ ಹೊಸ ಎಚ್ಚರ, ಹೊಸ ಆಲೋಚನೆಗಳು ಹುಟ್ಟಿಕೊಳ್ಳುವ ಮೂಲಕ ಕರ್ನಾಟಕ ಸಾಂಸ್ಕøತಿಕ ಲೋಕದಲ್ಲಿ ಒಂದು ತಿರುವು ಕಾಣಿಸಿಕೊಂಡಿದೆ. ಕೆಳವರ್ಗದ ಒಬ್ಬ ಸಂತ ಮಹೋನ್ನತ್ತವಾದ ಸಾಧನೆ, ಹೊಸ ವಿಚಾರಧಾರೆಯು ಹರಿಯಬಿಟ್ಟಿದ್ದಾನೆ ಎನ್ನುವ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಗಳಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜ್ಞಾನ ಕೌಶಲ್ಯವನ್ನು ವೃದ್ದಿಸಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಹೇಳಿದರು.ಅವರು ಮಂಗಳೂರು ವಿವಿ ಬಯಲು ರಂಗಮಂದಿರದಲ್ಲಿ ಗುರುವಾರ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿರುವ ವಿಶ್ವವಿದ್ಯಾಲಯ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಕೌಶಲವನ್ನು ವೃದ್ಧಿಸಿಕೊಳ್ಳಲು ವಿವಿ ಕ್ಯಾಂಪಸ್‍ನಲ್ಲಿ ಉತ್ತಮ ಅವಕಾಶಗಳಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಲ್ಲಿರುವ ಬಿಎ, ಬಿಕಾಂ ಜೊತೆಗೆ ವಿಜ್ಞಾನ ವಿಭಾಗವನ್ನು ಯೋಜನೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿಲ್ಲಿ ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗದ ಜೊತೆಗೆ ವಿವಿಧ ಕಾಲೇಜಿನಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಕಾಲೇಜಿಗೂ ಕೀರ್ತಿಯನ್ನು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ವಿದ್ಯಾರ್ಥಿಗಳಲ್ಲಿ ಸಂಭ್ರಮ ಪಡುವ ಮನಸ್ಸಿನ ಜೊತೆಗೆ ಧ್ಯಾನಸ್ಥರಾಗುವ ಮನಸ್ಸು ಅಗತ್ಯವಾಗಿರಬೇಕು. ಇತ್ತೀಚೆಗೆ ಎಳೆಯ ಪೀಳಿಗೆಯಲ್ಲಿ ಈ ಎರಡು ಬಗೆಯ ಮನಸ್ಸುಗಳು ಕಡಿಮೆಯಾಗುತ್ತಿರುವಂತೆಯೇ ನಮ್ಮ ಹಿಂದಿನ ಕಾಲದಿಂದ ಆಚರಣೆಯಲ್ಲಿದ್ದಂತಹ ಸಂಪ್ರದಾಯದ ಆಚರಣೆಗಳನ್ನು ನೆನಪಿಸುವ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಬಹಳ ಮಹತ್ವಪೂರ್ಣವಾದವು ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಶುಕ್ರವಾರ ವಿಭಾಗದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನಾಚರಣೆ `ದೇಸಿ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಬೇರೆ ಕಾಲಘಟ್ಟದ ಸಾಂಸ್ಕøತಿಕ ಸಂಗತಿಗಳು, ಆಚರಣೆಗಳು, ಸಂಪ್ರದಾಯಗಳನ್ನು ಒಂದೆಡೆ ಕಟ್ಟಿ ಯುವ ಜನಾಂಗಕ್ಕೆ ಇದರ ಮಹತ್ವವನ್ನು ವಿಸ್ತರಿಸುವ ಕೆಲಸ ಬಹಳ ಕಠಿಣ. ಇಂದು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಗ್ರಾಮೀಣ ಬದುಕಿನ ಚಿತ್ರಣವನ್ನು ಬಹಳ ಸುಂದರವಾಗಿ ಕಟ್ಟಿಕೊಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದ್ದಾರೆ ಎಂದರು. ಪ್ರಾಧ್ಯಾಪಕರಾದ ಪ್ರೊ.ಶಿವರಾಮ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುಡಿಯುವ ನೀರಿನ ಯೋಜನೆಯನ್ನು ಸಮಗ್ರವಾಗಿ ಗ್ರಾಮಸ್ಥರಿಗೆ ಒದಗಿಸಬೇಕೆನ್ನುವ ಉದ್ದೇಶದಿಂದ  ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ  ಬಾವಿ ನಿರ್ಮಿಸಲಾಗಿದ್ದು,  ಇದರ ಅನುಷ್ಠಾನ ಗ್ರಾಮಸ್ಥರ ಸಹಕಾರದಿಂದ ಸಾಧ್ಯವಾಗಿದೆ ಎಂದು ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಹೇಳಿದ್ದಾರೆ. ಹಿಂದೆ ಮಾಧವಪುರ, ಮೇಗಿನ ಪಂಜಾಳದಲ್ಲಿ ಗ್ರಾಮಸ್ಥರು ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿಲ್ಲದೆ ಗ್ರಾಮದಿಂದ ಗುಳೆ ಹೋಗುವ ಸ್ಥಿತಿ ಇತ್ತು. ಇವೆಲ್ಲಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 5 ಲಕ್ಷ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ 14ನೇ ಹಣಕಾಸು ಯೋಜನೆಯಡಿ ಮಂಜೂರಾದ ರೂ. 2 ಲಕ್ಷ ಅನುದಾನವನ್ನು ಪಂಚಾಯತ್ ವತಿಯಿಂದ ಭರಿಸಿ ಸ್ಥಳದಾನಿಯ ಸಹಕಾರದಿಂದ ಬಾವಿಯನ್ನು ನಿರ್ಮಿಸಲಾಗಿದೆ ಎಂದರು. ಈ ಸಂದರ್ಭ ತಲಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ , ಪಂಚಾಯಿತಿ ಸದಸ್ಯರುಗಳಾದ ಜಯಂತಿ ಪಕಳ, ಫಯಾಝ್ ಪಿಲಿಕೂರು, ಚಂದ್ರಹಾಸ್ ದೇವಿನಗರ, ಇಬ್ರಾಹಿಂ ತಲಪಾಡಿ, ಹಾಗೂ ಸ್ಥಳೀಯ ಕುಡಿಯುವ ನೀರಿನ ಸಮಿತಿಯ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುಂಪಲ: 108 ದಿನಗಳ ಭಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಭಜನೆ ಕುರಿತ ಜಾಗೃತಿಯನ್ನು ಹಮ್ಮಿಕೊಂಡಿರುವ ಕ್ಷೇತ್ರದ ಕಾರ್ಯ ಸಂಸ್ಕøತಿಯನ್ನು ಉಳಿಸುವಂತಹದ್ದು, ಭಜನೆಯಿಂದ ಎಂದಿಗೂ ವಿಭಜನೆಯಿಲ್ಲ ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕುಂಪಲ ಗುರುನಗರದ ಶ್ರೀ ಮಾರುತಿಮಠದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪ್ರಥಮ ಪ್ರತಿಷ್ಠಾ ಮಹೋತ್ಸವ ಹಾಗೂ 108 ದಿನಗಳ ಭಜನೆಯ ಶತದಿನೋತ್ಸವ ಪ್ರಯುಕ್ತ ಸೋಮವಾರ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮನೆಗಳಲ್ಲಿ ಭಜನೆ ಮಾಡುವ ಸಂಸ್ಕøತಿಯೇ ನಶಿಸಿ ಹೋಗುತ್ತಿದೆ. ಈ ನಡುವೆ 108 ದಿನಗಳ ಭಜನೆಯನ್ನು ನೆರವೇರಿಸುವ ಮೂಲಕ ಭಜನೆ ಕುರಿತ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಮುಖ್ಯಪ್ರಾಣದಿಂದ ಆಗಿದೆ. ಇದರಿಂದ ಭಕ್ತರು ಭಜನೆಯಲ್ಲಿನ ಜಾಗೃತಿಯನ್ನು ಹೆಚ್ಚಿಸಿಕೊಂಡು ಮನೆಗಳಲ್ಲಿ ಭಜನೆಗಳನ್ನು ಆರಂಭಿಸುವ ಮೂಲಕ ಯುವಪೀಳಿಗೆಯನ್ನು ಉತ್ತಮ ಸಂಸ್ಕøತಿಯಲ್ಲಿ ಬೆಳೆಸುವಂತಾಗಬೇಕು ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್, ಯುವಕಾಂಗ್ರೆಸ್…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕೊಣಾಜೆ ಪೊಲೀಸ್ ಪೇದೆ ಆದರ್ಶ್ ಎಂಬವರಿಗೆ ಕಪಾಲಮೋಕ್ಷ ಮಾಡಿ ಹಲ್ಲೆಗೈದ ನಟೋರಿಯಸ್ ಆರೋಪಿ ಸೇರಿದಂತೆ ಇಬ್ಬರನ್ನು ಉರ್ವ ಪೊಲೀಸರು ಮಂಗಳೂರಿನಿಂದ ಬುಧವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದು, ಈರ್ವರು ಉರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಐತಪ್ಪ ಅವರಿಗೂ ಹಲ್ಲೆ ನಡೆಸಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುರತ್ಕಲ್ ಕಾಟಿಪಳ್ಳದ ಶಮೀರ್ (28) ಮತ್ತು ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಝ್ (20) ಬಂಧಿತರು. ಇಬ್ಬರು ಪೊಲೀಸರ ಮೇಲೆ ದಾಳಿ ನಡೆಸುವ ಸಂದರ್ಭ ಬಳಸಿದ ಯಮಹಾ ಆರ್15 ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಿಎಫ್‍ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪ್ರಕರಣದಿಂದ ಪ್ರಚೋದನೆಗೊಂಡ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಆರೋಪಿ ಶಮೀರ್ ಯಮಹಾ ಬೈಕಿನಲ್ಲಿ ಬೋಳಿಯಾರ್ ಕಡೆಗೆ ಬರುವ ಸಂದರ್ಭ ಆಯತಪ್ಪಿ ಮಾರ್ಗ ಮಧ್ಯೆಯಿದ್ದ ಹೊಂಡಕ್ಕೆ ಬಿದ್ದಿದ್ದ. ಮಾನವೀಯತೆ ಮೆರೆದ ಸ್ಥಳೀಯರು ಮತ್ತು ಸ್ಥಳದಲ್ಲಿ ಬಂದೋಬಸ್ತಿನಲ್ಲಿ ಪೇದೆ ಆದರ್ಶ್ ಸಹಾಯಕ್ಕೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ` ಮುಗ್ಗಟ್ಟು ನೀತಿಗಳ ಬಲವರ್ಧನೆ, ದೂರದೃಷ್ಟಿಯ ರಾಷ್ಟ್ರೀಯ ಕ್ರಿಯಾ ಯೋಜನೆಗಳು, ಸೂಕ್ಷ್ಮಜೀವಿ ನಿರೋಧಕ ಜವಾಬ್ದಾರಿಯುತ ಬಳಕೆಯ ಮೀನುಗಾರಿಕೆ ‘ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ಕಾರ್ಯಗಾರ ಎ.10 ರಂದು ಮಂಗಳೂರಿನ ಹೊಟೇಲ್ ತಾಜ್ ಗೇಟ್ ವೇ ಇಲ್ಲಿ ಎ.10 ಸೋಮವಾರ ಉದ್ಘಾಟನೆಗೊಳ್ಳಲಿದೆ. ದೆಹಲಿ ಕೃಷಿ ಸಂಶೋಧನೆ ಭಾರತೀಯ ಮಂಡಳಿಯ ನಿರ್ದೇಶಕ ಡಾ.ಜೆ.ಕೆ.ಜೇನಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿಟ್ಟೆ ವಿ.ವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದರು, ಉಪಕುಲಪತಿ ಪ್ರೊ.ಎಸ್.ರಮಾನಂದ ಶೆಟ್ಟಿ, ರೋಮ್ ನ ಆಹಾರ ಮತ್ತು ಕೃಷಿ ಸಂಸ್ಥೆಯ ಹಿರಿಯ ಅಧಿಕಾರಿ ಡಾ.ಮೆಲ್ಬಾ ರೇಂಟಾಸೊ ಭಾಗವಹಿಸಲಿದ್ದಾರೆ.

Read More