Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭ ಸಿಡಿಲು ಬಡಿದು ಮೂವರ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಬಂದಿದ್ದ  ಕಾರ್ಮಿಕರಾದ ಜಯ್ಯಮ್ಮ(28). ಕಣಕಮ್ಮ(29),ಶಶಿಕಲಾ(7)  ಸಾವನ್ನಪ್ಪಿದ ದುದೈ೯ವಿಗಳು. ಘಟನೆಯಲ್ಲಿ  ಲಿಖಿತ(2) ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಮಕ್ಕಳು ಸೇರಿ ನಾಲ್ವರು ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದರು ವೇಳೆ ಮೂವರು ಸಾವನ್ನಪ್ಪಿದ್ದು ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪುತ್ತೂರು: ಪುತ್ತೂರು ನಗಾರಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಗರ ಯೋಜನಾ ಸಹಾಯಕ ನಿರ್ದೇಶಕಿ 10ಸಾವಿರ ರೂಪಾಯಿ ಹಣ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ನಗರ ಯೋಜನಾ ಸಹಾಯಕ ನಿರ್ದೇಶಕಿ ಲಾವಣ್ಯ ಲಂಚ ಪಡೆಯುತ್ತಿದ್ದವರು ಎಂದು ತಿಳಿದುಬಂದಿದೆ. ಪೂತ್ತೂರಿನ ರಾಮ್ ಮೋಹನ್ ಪೈ ಎಂಬವರಿಗೆ ಸಂಬಂಧಿಸಿದ ಜಾಗಕ್ಕೆ ಭೂ ಪರಿವರ್ತನೆಗೆ ಎನ್.ಓ.ಸಿ ನೀಡಲು 20ಸಾವಿರ ಲಂಚ ಕೇಳಿದ್ದ ಲಾವಣ್ಯ ಎಂದು ತಿಳಿದು ಬಂದಿದ್ದು. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಹಾಗೂ ಇನ್ಸ್‍ಪೆಕ್ಟರ್ ಯೋಗೀಶ್ ಕುಮಾರು ನೇತೃತ್ವದ ತಂಡ ದಾಳಿ ನಡೆಸಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ:ಇಂಡಿಯಾನ್ ಮುಜಾದ್ದೀನ್ ನಂಟಿನ ಹಿನ್ನಲೆ ಹಾಗೂ ಸ್ಫೋಟಕ ಪತ್ತೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಿನ್ನಲೆ ಉಳ್ಳಾಲದಲ್ಲಿ ಬಂಧಿತರಾಗಿದ್ದ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪುನ್ನು ಬುಧವಾರ ನೀಡಿದೆ. ಉಳ್ಳಾಲದಲ್ಲಿ 9008ರಲ್ಲಿ ಮಂಗಳೂರು ಪೊಲೀಸರು ಏಳು ಮಂದಿಯನ್ನ ಬಂಧಿಸಿದ್ದರು.ಈ ಪೈಕಿ ಸೈಯ್ಯದ್ ಮಹಮ್ಮದ್ ನೌಷದ್, ಅಹ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್ ಅಹ್ಮದ್ ಆರೋಪ ಸಾಬೀತಾಗಿದ್ದು ಮಂಗಳೂರಿನ ಮೂರನೇ ಹೆಚ್ಚುವರಿ ಜೆಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಪುಪ್ಪಾಂಜಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ಮಹತ್ವದ ತೀರ್ಪನ್ನು ನೀಡಿದ್ದಾರೆ. ಮಹಮ್ಮದ್ ಆಲಿ, ಜಾವೇದ್ ಅಲಿ, ಮಹಮ್ಮದ್ ರಫೀಕ್, ಶಬೀರ್ ಭಟ್ಕಳ ಇವರನ್ನು ದೋಷಮುಕ್ತಗೊಳಿಸಲಾಗಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತಲಪಾಡಿ :  ತಲಪಾಡಿ ಗ್ರಾಮ ಪಂಚಾಯತ್‍ನ ಮೇಗಿನ ಪಂಜಾಳದಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯ ಏಕಾಂಗಿ ಮಹಿಳೆಯ ಮನೆ ದುರಸ್ತಿಯನ್ನು ಎಸ್‍ವೈಎಸ್ ಮೇಗಿನ ಪಂಜಾಳ ಶಾಖೆಯ ವತಿಯಿಂದ ಮಾಡಿ ಕೊಡಲಾಯಿತು.ತಲಪಾಡಿ ಎಸ್‍ಎಸ್‍ವೈಎಸ್ ಸೆಂಟರ್ ಅಧ್ಯಕ್ಷ ಉಮ್ಮರ್ ಎನ್.ಎಸ್. ನೇತೃತ್ವದಲ್ಲಿ ನಡೆದ ಮನೆ ದುರಸ್ತಿ ಕಾರ್ಯ ನಡೆಯಿತು. ಉಮ್ಮರ್ ಎನ್‍ಎಸ್ : ಎಸ್‍ವೈಎಸ್‍ನ ಮೇಗಿನ ಪಂಜಾಳ ಶಾಖೆಯ ವತಿಯಿಂದ `ಸಾಂತ್ವಾನದ ಕಡೆ ನಮ್ಮ ನಡೆ’ ಎನ್ನುವ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಗೋಪಿ ಅವರ ಮನೆಯ ದುರಸ್ತಿ ಕಾರ್ಯವನ್ನು ನಡೆಸಿಕೊಟ್ಟಿದ್ದು ಇದು ಒಂದು ಅರ್ಥಪೂರ್ಣ ಕಾರ್ಯಕ್ರಮ. ಪಂಚಾಯತ್‍ನಿಂದ ಯಾವುದೇ ಸಹಾಯ ದೊರಕದೆ ಇದ್ದಾಗ ಗೋಪಿ ಅವರು ನಮ್ಮ ಸಂಘಟನೆಯನ್ನು ಸಂಪರ್ಕಿಸಿದಾಗ ಸಂಸ್ಥೆ ಒಪ್ಪಿಕೊಂಡು ಈ ಕಾರ್ಯ ನಿರ್ವಹಿಸಿದೆ ಇದರಿಂದ ಈ ಪ್ರದೇಶದಲ್ಲಿ ಸಾಮರಸ್ಯದೊಂದಿಗೆ ಜಾತ್ಯಾತೀತವಾದ ಆದರ್ಶ ಸಮಾಜದೊಂದಿಗೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು. ಯಹ್ಯಾ : ಸ್ಥಳೀಯ ಬಡವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದರೆ ಅವರಿಗೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು : “ಕುಸೆಲ್ದರಸೆ ’ ಖ್ಯಾತಿಯ ತುಳು ರಂಗಭೂಮಿ ಹಾಗೂ ಚಿತ್ರನಟ ಮಂಗಳೂರಿನ ನವೀನ್ ಡಿ. ಪಡೀಲ್ 2016ನೆ ಸಾಲಿನ ಉತ್ತಮ ಪೋಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಪ್ರಾದೇಶಿಕ ಭಾಷೆಗಳ ಪೈಕಿ ತುಳು ಚಲನಚಿತ್ರದಲ್ಲಿ ಪ್ರಥಮ ಬಾರಿಗೆ ಪೋಷಕ ಪಾತ್ರದಲ್ಲಿ ಅಭಿನಯಿಸಿದ ಪಡೀಲ್ ಈ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ಸೂರ್ಯ ಮೆನನ್ ನಿರ್ದೇಶನದ ‘ಕುಡ್ಲ ಕೆಫೆ’ ತುಳು ಚಲನಚಿತ್ರದ ಪಾತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ‘‘ಪ್ರಶಸ್ತಿ ಬಂದಿರುವುದು ತಂಬಾ ಸಂತಸ ತಂದಿದೆ. ಕನ್ನಡ, ಕೊಂಕಣಿ ಇತರ ಪ್ರಾದೇಶಿಕ ಭಾಷೆಗಳ ನಡುವೆ ಪ್ರಥಮ ಬಾರಿಗೆ ನನಗೆ ತುಳುವಿನಲ್ಲಿ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ಇದಕ್ಕಾಗಿ ತುಳುನಾಡಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’’ಎಂದು ನವೀನ್ ಡಿ. ಪಡೀಲ್ ಪತ್ರಿಕೆಯೊಂದಿಗೆ ಹರುಷವನ್ನು ಹಂಚಿಕೊಂಡಿದ್ದಾರೆ. ತುಳು ನಾಟಕರಂಗದಲ್ಲಿ ಖ್ಯಾತ ಹಾಸ್ಯ ನಟನಾಗಿ, ಪೋಷಕ ನಟನಾಗಿ ಹಾಸ್ಯ ನಾಟಕಗಳ ಪ್ರಮುಖ ನಟನಾಗಿ ಮಿಂಚಿರುವ ನವೀನ್ ಡಿ. ಪಡೀಲ್ ಸುಮಾರು 70ಕ್ಕೂ…

Read More

 ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಡೀಸಿಲ್ ಕಳ್ಳತನ ನಡೆಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ಅಜಯ್ ಡಿಸೋಜ ಹಾಗೂ ಅವಿನಾಶ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಓರ್ವನಾದ ಅಜಯ್ ಎಂಬಾತ ಹರೇಕಳದ ಮೀನುಗಾರಿಕಾ ಸಂಸ್ಥೆಯೊಂದರಲ್ಲಿ ಎ.ಸಿ.ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಡೀಸಿಲನ್ನು ಕ್ಯಾನ್ ಮೂಲಕ ತುಂಬಿಸಿ ತನ್ನ ಸಹೋದರನಾದ ಅವಿನಾಶ್‍ನ ಮೂಲಕ ಅಲ್ಲಿಂದ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮೀನುಗಾರಿಕಾ ಸಂಸ್ಥೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತರಕಾರಿ ಅಂಗಡಿ ಮಾಲೀಕ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೋರ್ವರಿಗೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೊಣಾಜೆ ಅಪರಾಧ ವಿಭಾಗದ ಉಪನಿರೀಕ್ಷಕಿ ಮತ್ತು ಪೊಲೀಸ್ ಪೇದೆಯನ್ನು ಮಂಗಳೂರು ಪೊಲೀಸ್ ಕಮೀಷನರ್ ಹೊರಡಿಸಿದ ಆದೇಶದಂತೆ ಅಮಾನತುಗೊಳಿಸಲಾಗಿದೆ. ಎ.6 ರ ಸಂಜೆ ವೇಳೆ ಮುಡಿಪು ಪೇಟೆಯಲ್ಲಿದ್ದ ಪರಿಶಿಷ್ಟ ಜಾತಿ ಬೈರ ಸಮುದಾಯಕ್ಕೆ ಸೇರಿದ ಇರಾ ಮೂಳೂರು ನಿವಾಸಿ ರುಕ್ಮಯ್ಯ ಎಂಬªರ ಮೇಲೆ ದೌರ್ಜನ್ಯ ಮತ್ತು ಜಾತಿನಿಂದನೆಗೈದಿದ್ದರೆಂದು ದೂರಲಾಗಿತ್ತು. ಉಪನಿರೀಕ್ಷಕಿ ಶ್ರೀಕಲಾ ಮತ್ತು ಪೇದೆ ರಾಜೇಶ್ ಎಂಬವರು ಸೇರಿಕೊಂಡು ದೌರ್ಜನ್ಯ ಎಸಗಿದ್ದರೆಂದು ರುಕ್ಮಯ್ಯ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಅಶೋಕ್ ಅವರು ಪೊಲೀಸ್ ಕಮೀಷನರ್ ಅವರಿಗೆ ಪ್ರಕರಣದ ವರದಿ ಸಲ್ಲಿಸಿದ್ದರು. ಅದರಂತೆ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ವತಿಯಿಂದ 2016-17ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಹಿರಾ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ, ಅಂತರ್ ಕಾಲೇಜು ಮಟ್ಟದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮೂಹ ಮಾಧ್ಯಮ ಮತ್ತು ಪ್ರಸ್ತುತ ಸಮಾಜ ಎಂಬ ವಿಷಯದ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್ ಕಾಲೇಜಿನ ಕು. ದೀಪ್ತಿ ಜಾರ್ಜ್, ದ್ವಿತೀಯ ಬಹುಮಾನವನ್ನು ಕು. ವಿಜಯಲಕ್ಷ್ಮಿ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ತೃತೀಯ ಬಹುಮಾನವನ್ನು ಕು. ದಿಶಾ ಎಂ. ಶೆಟ್ಟಿ, ಕೆನರಾ ಕಾಲೇಜು, ಮಂಗಳೂರು ಪಡೆದಿರುತ್ತಾರೆ. ಕ್ರಮವಾಗಿ ರೂ.5000/-, ರೂ.3000/- ರೂ. 2000/- ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿಜೇತರಿಗೆ ವಿತರಿಸಲಾಯಿತು. 2015-16ನೇ ಸಾಲಿನಲ್ಲಿ ಅತ್ಯಕ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಜಿಲ್ಲೆಯಲ್ಲಿ ಸೌಹಾರ್ದ ನೆಲೆನಿಂತುವಂತೆ ಮಾಡುವ ಪ್ರಯತ್ನ ಎಲ್ಲರಿಂದಲೂ ನಡೆಯಬೇಕು, ಧರ್ಮದ ಮೇಲಿರುವ ಪರಸ್ಪರ ಅಪನಂಬಿಕೆಗಳು ದೂರಗೊಂಡಲ್ಲಿ ಸೌಹಾರ್ದತೆ ಸಾಧ್ಯ, ಈ ಹಿನ್ನೆಲೆಯಲ್ಲಿ ಇತರ ಯಾವುದೇ ದುರುದ್ದೇಶ ಇಲ್ಲದೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪಲ್ಲ ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು. ಉಳ್ಳಾಲ ಮೆಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಯಲ್ಲಿ ನಡೆದ 87ನೇ ರಾತೀಬು ನೇರ್ಚೆ, 10 ದಿನಗಳ ಮತ ಪ್ರವಚನ, ಸ್ವಲಾತ್ ಮಜ್ಲೀಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ನ್ಯಾಯವಾದಿ ಕೆ.ಪಿ.ಶುಕೂರು, ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ಯು.ಎಚ್.ಅಹ್ಮದ್ ಬಾವ, ಇಬ್ರಾಹಿಂ ಖಾಸಿಂ, ಅಶ್ರಫ್ ಮುಸ್ಲಿಯಾರ್, ಅಲಿ ಅಕ್ಬರ್, ಜಮಾಲ್ ಬಾರ್ಲಿ, ಆಸಿಫ್…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಇರಾ : ಧಾರ್ಮಿಕ ಅರಿವು ಹಿಂದಿನಿಂದಲೇ ನಡೆಯುತ್ತಿದ್ದರೂ ಮದರಸಾ ಶಿಕ್ಷಣ ಮುಖಾಂತರ ಎಳೆ ಮಕ್ಕಳೂ ಸುಲಲಿತವಾಗಿ ಧಾರ್ಮಿಕ ಜ್ಞಾನ ಪಡೆಯುಂತೆ ಮಾಡಿದ ಕೀರ್ತಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್‍ಗೆ ಸಲ್ಲುತ್ತದೆ ಎಂದು ಪಾತೂರು ಕಜೆ ಎಕೆಎಂ ಅಕಾಡೆಮಿ ಮುಖ್ಯಸ್ಥ ಇ.ಕೆ.ಎಂ ಶರೀಫ್ ಮುಸ್ಲಿಯಾರ್ ಹೇಳಿದರು.ಇರಾ ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ತೃತೀಯ ವಾರ್ಷಿಕೋತ್ಸವ ಹಾಗೂ ಅನುಸ್ಮರಣಾ ಸಂಪಿಲ ಸಂಶುಲ್ ಉಲಮಾ ನಗರದಲ್ಲಿ ಭಾನುವಾರ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಮಸೀದಿಯ ಖತೀಬ್ ಝುಬೈರ್ ಫೈಝಿ ಅಂಕೋಲ ಮಾತನಾಡಿ, ಭಗವಂತ ಅನುಗ್ರಹ ಇದ್ದಲ್ಲಿ ಯಾವುದೇ ಸಂದರ್ಭದಲ್ಲೂ ಯಾರ ಭಯವೂ ಇರುವುದಿಲ್ಲ, ಈ ನಿಟ್ಟಿನಲ್ಲಿ ಭಗವಂತನ ಅನುಗ್ರಹ ದೊರೆಯುವಂತಾಗಲು ಶ್ರಮಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಪ್ರಯುಕ್ತ ಉಸ್ತಾದ್ ಪಾತೂರು ಶೈಖುನಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಸಂಶುಲ್ ಉಲಮಾ ಮೌಲೀದ್ ಪಾರಾಯಣ ಹಾಗೂ ಸಮಸ್ತ ಕೇರಳ ಜಂ-ಇಯತುಲ್ ಉಲಮಾ ಕೇಂದ್ರ ಮುಶಾವರ ನೂತನ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್…

Read More