ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುಂಪಲ: 108 ದಿನಗಳ ಭಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಭಜನೆ ಕುರಿತ ಜಾಗೃತಿಯನ್ನು ಹಮ್ಮಿಕೊಂಡಿರುವ ಕ್ಷೇತ್ರದ ಕಾರ್ಯ ಸಂಸ್ಕøತಿಯನ್ನು ಉಳಿಸುವಂತಹದ್ದು, ಭಜನೆಯಿಂದ ಎಂದಿಗೂ ವಿಭಜನೆಯಿಲ್ಲ ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕುಂಪಲ ಗುರುನಗರದ ಶ್ರೀ ಮಾರುತಿಮಠದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪ್ರಥಮ ಪ್ರತಿಷ್ಠಾ ಮಹೋತ್ಸವ ಹಾಗೂ 108 ದಿನಗಳ ಭಜನೆಯ ಶತದಿನೋತ್ಸವ ಪ್ರಯುಕ್ತ ಸೋಮವಾರ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮನೆಗಳಲ್ಲಿ ಭಜನೆ ಮಾಡುವ ಸಂಸ್ಕøತಿಯೇ ನಶಿಸಿ ಹೋಗುತ್ತಿದೆ. ಈ ನಡುವೆ 108 ದಿನಗಳ ಭಜನೆಯನ್ನು ನೆರವೇರಿಸುವ ಮೂಲಕ ಭಜನೆ ಕುರಿತ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಮುಖ್ಯಪ್ರಾಣದಿಂದ ಆಗಿದೆ. ಇದರಿಂದ ಭಕ್ತರು ಭಜನೆಯಲ್ಲಿನ ಜಾಗೃತಿಯನ್ನು ಹೆಚ್ಚಿಸಿಕೊಂಡು ಮನೆಗಳಲ್ಲಿ ಭಜನೆಗಳನ್ನು ಆರಂಭಿಸುವ ಮೂಲಕ ಯುವಪೀಳಿಗೆಯನ್ನು ಉತ್ತಮ ಸಂಸ್ಕøತಿಯಲ್ಲಿ ಬೆಳೆಸುವಂತಾಗಬೇಕು ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್, ಯುವಕಾಂಗ್ರೆಸ್…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕೊಣಾಜೆ ಪೊಲೀಸ್ ಪೇದೆ ಆದರ್ಶ್ ಎಂಬವರಿಗೆ ಕಪಾಲಮೋಕ್ಷ ಮಾಡಿ ಹಲ್ಲೆಗೈದ ನಟೋರಿಯಸ್ ಆರೋಪಿ ಸೇರಿದಂತೆ ಇಬ್ಬರನ್ನು ಉರ್ವ ಪೊಲೀಸರು ಮಂಗಳೂರಿನಿಂದ ಬುಧವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದು, ಈರ್ವರು ಉರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಐತಪ್ಪ ಅವರಿಗೂ ಹಲ್ಲೆ ನಡೆಸಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುರತ್ಕಲ್ ಕಾಟಿಪಳ್ಳದ ಶಮೀರ್ (28) ಮತ್ತು ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಝ್ (20) ಬಂಧಿತರು. ಇಬ್ಬರು ಪೊಲೀಸರ ಮೇಲೆ ದಾಳಿ ನಡೆಸುವ ಸಂದರ್ಭ ಬಳಸಿದ ಯಮಹಾ ಆರ್15 ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಿಎಫ್‍ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪ್ರಕರಣದಿಂದ ಪ್ರಚೋದನೆಗೊಂಡ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಆರೋಪಿ ಶಮೀರ್ ಯಮಹಾ ಬೈಕಿನಲ್ಲಿ ಬೋಳಿಯಾರ್ ಕಡೆಗೆ ಬರುವ ಸಂದರ್ಭ ಆಯತಪ್ಪಿ ಮಾರ್ಗ ಮಧ್ಯೆಯಿದ್ದ ಹೊಂಡಕ್ಕೆ ಬಿದ್ದಿದ್ದ. ಮಾನವೀಯತೆ ಮೆರೆದ ಸ್ಥಳೀಯರು ಮತ್ತು ಸ್ಥಳದಲ್ಲಿ ಬಂದೋಬಸ್ತಿನಲ್ಲಿ ಪೇದೆ ಆದರ್ಶ್ ಸಹಾಯಕ್ಕೆ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ` ಮುಗ್ಗಟ್ಟು ನೀತಿಗಳ ಬಲವರ್ಧನೆ, ದೂರದೃಷ್ಟಿಯ ರಾಷ್ಟ್ರೀಯ ಕ್ರಿಯಾ ಯೋಜನೆಗಳು, ಸೂಕ್ಷ್ಮಜೀವಿ ನಿರೋಧಕ ಜವಾಬ್ದಾರಿಯುತ ಬಳಕೆಯ ಮೀನುಗಾರಿಕೆ ‘ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ಕಾರ್ಯಗಾರ ಎ.10 ರಂದು ಮಂಗಳೂರಿನ ಹೊಟೇಲ್ ತಾಜ್ ಗೇಟ್ ವೇ ಇಲ್ಲಿ ಎ.10 ಸೋಮವಾರ ಉದ್ಘಾಟನೆಗೊಳ್ಳಲಿದೆ. ದೆಹಲಿ ಕೃಷಿ ಸಂಶೋಧನೆ ಭಾರತೀಯ ಮಂಡಳಿಯ ನಿರ್ದೇಶಕ ಡಾ.ಜೆ.ಕೆ.ಜೇನಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿಟ್ಟೆ ವಿ.ವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದರು, ಉಪಕುಲಪತಿ ಪ್ರೊ.ಎಸ್.ರಮಾನಂದ ಶೆಟ್ಟಿ, ರೋಮ್ ನ ಆಹಾರ ಮತ್ತು ಕೃಷಿ ಸಂಸ್ಥೆಯ ಹಿರಿಯ ಅಧಿಕಾರಿ ಡಾ.ಮೆಲ್ಬಾ ರೇಂಟಾಸೊ ಭಾಗವಹಿಸಲಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯಾ: ಆಡಿನ ವಿಚಾರಕ್ಕೆ ಸಂಬಂಧಿಸಿ ವೃದ್ಧ ದಂಪತಿ ಸೇರಿದಂತೆ ಪುತ್ರನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಿನ್ಯಾ ಬೆಳರಿಂಗೆ ನಿವಾಸಿ ಜನಾರ್ದನ್ ಆಳ್ವ ( 70) , ಪತ್ನಿ ಪುಷ್ಪಾವತಿ (52) ಹಾಗೂ ಅವರ ಪುತ್ರ ಅಜಿತ್ ( 30) ಎಂಬವರ ಮೇಲೆ ನೆರೆಮನೆಯ ಇಬ್ಬರು ಸಹೋದರರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಂತೆ ಆರೋಪಿಗಳಾದ ಕಿನ್ಯಾ ಬೆಳರಿಂಗೆಯ ಸಫಾಕ್ (22) ಮತ್ತು ಶಕೀಲ್ (21) ಎಂಬ ಸಹೋದರರನ್ನು ಬಂಧಿಸಲಾಗಿದೆ. ಹಮೀದ್ ಎಂಬವರಿಗೆ ಸೇರಿದ ಆಡು ನೆರೆಮನೆಯ ಜನಾರ್ದನ್ ಆಳ್ವ ಅವರ ಗಿಡಗಳನ್ನು ತಿಂದು ಹಾನಿ ಮಾಡುತ್ತಿತ್ತು. ಈ ಬಗ್ಗೆ ಹಮೀದ್ ಅವರಲ್ಲಿ ಕಟ್ಟಿಹಾಕುವಂತೆ ಒತ್ತಾಯಿಸಿದ್ದರೂ ಅವರು ಕೇಳದೇ , ಮತ್ತೆ ಆಡು ಮೇಯಲು ಬಿಟ್ಟಿದ್ದರು. ಪರಿಣಾಮ ಮತ್ತೆ ಗಿಡಗಳನ್ನು ತಿಂದಾಗ ನೊಂದ ಪುಷ್ಪಾವತಿ ಅವರು ಆಡನ್ನು ಹೊಡೆದೋಡಿಸಿದ್ದರು. ಇದರ ಪ್ರತೀಕಾರವಾಗಿ ಹಮೀದ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಇಂದು ಪುಸ್ತಕಗಳನ್ನು ಓದುವವರು ವಿರಳ, ಅಂತಹ ಸಂದರ್ಭ ಶಾಲೆಗಳಿಗೆ ಪುಸ್ತಕ ನೀಡುವುದಕ್ಕಿಂತಲೂ ಓದುವವರೆಷ್ಟಿದ್ದಾರೆ ಎನ್ನುವುದೇ ಮುಖ್ಯ ಎಂದು ಮಂಗಳೂರಿನ ಚೂಂತಾರು ಪ್ರತಿಷ್ಠಾನದ ಅಧ್ಯಕ್ಷ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು. ಚೂಂತಾರು ಪ್ರತಿಷ್ಠಾನದ ವತಿಯಿಂದ ಖರೀದಿಸಲಾದ ಜ್ಞಾನ ವರ್ಧಿತ ಪುಸ್ತಕಗಳನ್ನು ಗುರುವಾರ ಪಾವೂರು ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ ಮಾತನಾಡಿದರು. ಪಠ್ಯದ ಜೊತೆ ಇತರ ಪುಸ್ತಕಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಬಹುದು, ಆದರೆ ಇಂದು ಪುಸ್ತಕ ಓದುವರರ ಕೊರತೆಯಿದೆ, ಆದರೂ ಪಾವೂರು ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತ, ಸಮಗ್ರ ಗ್ರಂಥಾಲಯ ನಿರ್ಮಿಸುವ ಮೂಲಕ ಇಲ್ಲಿನ ಶಿಕ್ಷಕ ವೃಂದ ಮೌಲ್ಯಯುತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ, ಇಂತಹ ಪ್ರಯತ್ನಕ್ಕೆ ಕೈಜೋಡಿಸುವುದೇ ಭಾಗ್ಯ. ಆರೋಗ್ಯ ಸಂಬಂಧಿ ವಿಚಾರದಲ್ಲಿ ಶಾಲೆಗೆ ಅಗತ್ಯವಿರುವ ಸಹಕಾರ, ಸಹಾಯ ನೀಡಲು ಸಿದ್ಧ ಎಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ಮಾತನಾಡಿ, ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಹೊಂದಿರುವುದರಿಂದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2016ನೇ ಸಾಲಿನ ‘ಯಕ್ಷಮಂಗಳ ಪ್ರಶಸ್ತಿ’ಗೆ ತೆಂಕುತಿಟ್ಟಿನ ಪ್ರಸಿದ್ದ ಭಾಗವತರಾದ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥದಾರಿ, ಸಂಶೋಧಕ ಡಾ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಮತ್ತು ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಆಯ್ಕೆಯಾಗಿದ್ದಾರೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಗೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ `ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ತಲಾ 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡಿದೆ. ಕೃತಿ ಪ್ರಶಸ್ತಿಯು 10,000 ರೂ ನಗದು, ಪ್ರಶಸ್ತಿ ಪತ್ರವನ್ನು ಸನ್ಮಾನವನ್ನು ಒಳಗೊಂಡಿದೆ. ಪ್ರೊ.ಎಂ.ಎಲ್.ಸಾಮಗ, ಪ್ರೊ.ಪಾದೇಕಲ್ಲು ವಿಷ್ಣು ಭಟ್, ಪ್ರೊ.ಕೆ.ಚಿನ್ನಪ್ಪ ಗೌಡ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸರ್ವಾನುಮತದಿಂದ ಈ ಹೆಸರುಗಳನ್ನು ಆಯ್ಕೆ ಮಾಡಿದೆ. ಬಲಿಪ ನಾರಾಯಣ ಭಾಗವತ: ತೆಂಕುತಿಟ್ಟು ಯಕ್ಷಗಾನದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನಡುಪದವು : ಕೊಣಾಜೆ ನಡುಪದವಿನ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಕಾಲೇಜುಗಳ ಮಂಗಳೂರು ವಲಯ ಮಟ್ಟದ ಅಂತರ್‍ಕಾಲೇಜು ಫುಟ್ಬಾಲ್ ಪಂದ್ಯಾಟ ಎ.5 ಮತ್ತು 6 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಚಿಸುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಸಂಯೋಜನೆಗೊಳಪಟ್ಟ ತಾಂತ್ರಿಕ ಮಹಾವಿದ್ಯಾಲಯ ತಂಡಗಳು ಎ.5ರ ಬೆಳಿಗ್ಗೆ 9ಕ್ಕೆ ಮೈದಾನದಲ್ಲಿ ತಂಡದ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯಾ: ಆಡಿನ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ಯುವಕನೋರ್ವ ರಾಡಿನಿಂದ ವೃದ್ಧ ದಂಪತಿ ಸೇರಿದಂತೆ ಅವರ ಪುತ್ರನಿಗೆ ಹಲ್ಲೆ ನಡೆಸಿರುವ ಘಟನೆ ಕಿನ್ಯಾ ಶಾಲೆ ಸಮೀಪದ ಬೆಳರಿಂಗೆ ಬಳಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಗಾಯಗೊಂಡಿರುವ ಮೂವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿನ್ಯಾ ಬೆಳರಿಂಗೆ ನಿವಾಸಿಗಳಾದ ಜನಾರ್ದನ ಆಳ್ವ (70), ಅವರ ಪತ್ನಿ ಪುಷ್ಪಾವತಿ (52) ಹಾಗೂ ಪುತ್ರ ಅಜಿತ್ (30) ದಾಳಿಗೊಳಗಾದವರು. ನೆರೆಮನೆಯ ಸಫಾಕ್ ((28) ಆತನ ಸಹೋದರನ ನೆರವಿನಿಂದ ದಾಳಿ ನಡೆಸಿರುವುದಾಗಿ ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ವಿವರ: ಸಂಜೆ ವೇಳೆ ಜನಾರ್ದನ ಹಾಗೂ ಮನೆಯವರು ಟಿ.ವಿ ನೋಡುತ್ತಿದ್ದ ಸಂದರ್ಭ ನೆರೆಮನೆಯ ಸಫಾಕ್ ರಾಡಿನಿಂದ ನಾಯಿಗೆ ಬಡಿಯಲು ಆರಂಭಿಸಿದ್ದನು. ಇದನ್ನು ಕಂಡು ಜನಾರ್ದನ ಅವರು ಪ್ರಶ್ನಿಸುತ್ತಿದ್ದಂತೆ ಅವರ ಮೇಲೆಯೂ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ಪುತ್ರ ಅಜಿತ್ ತಡೆಯಲು ಮುಂದಾದಾಗ ಅವರ ಮೇಲೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನರಿಂಗಾನ : ನರಿಂಗಾನ ವಿದ್ಯಾನಗರದ ರಕ್ತೇಶ್ವರಿ ಕಟ್ಟೆಯ ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ತೃತೀಯ ವರ್ಧಂತಿ ಉತ್ಸವ ಎ.23 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆಯ ಬಿಡುಗಡೆ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಅಮ್ಮೆಂಬಳ ಸದಾಶಿವ ನಾವಡ ಇವರು ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ಮಹಾದ್ವಾರವನ್ನು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇದಮೂರ್ತಿ ವಾಸುದೇವ ಆಸ್ರಣ್ಣ ಸಮರ್ಪಣೆ ನಡೆಸಲಿದ್ದಾರೆ. ಬೋಳಂತಕೋಡಿ ರಾಮಭಟ್ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಯಾಗ ಮತ್ತು ಶ್ರೀ ಲಲಿತಾ ಸಹಸ್ರನಾಮ ಯಾಗ ಜರಗಲಿದ್ದು, ಸಾಂಸ್ಕøತಿ ಕಾರ್ಯಕ್ರಮ, ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಕೊಣಾಜೆ : ಕರ್ತವ್ಯ ಮೆರೆದ ಪೊಲೀಸ್ ಪೇದೆಗೆ ದುಷ್ಕರ್ಮಿಯೋರ್ವ ಕೆನ್ನೆಗೆ ಬಡಿದು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಎಂಬಲ್ಲಿ ನಡೆದಿದೆ. ಕೊಣಾಜೆ ಪೊಲೀಸ್ ಠಾಣೆಯ ಪೇದೆ ಆದರ್ಶ್(21) ಹಲ್ಲೆಗೊಳಗಾದವರು. ಘಟನೆ ವಿವರ: ಮಂಗಳೂರಿನಲ್ಲಿ ಪಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಬೋಳಿಯಾರು ಸಮೀಪ ಕೊಣಾಜೆ ಠಾಣೆಯ ಪೇದೆ ಆದಶ್ ್ ಗಸ್ತಿನಲ್ಲಿದ್ದರು. ತಡರಾತ್ರಿ ಸಮಯದಲ್ಲಿ ಮುಡಿಪು ಕಡೆಯಿಂದ ಬೋಳಿಯಾರು ಕಡೆಗೆ ಬರುತ್ತಿದ್ದ ಬೈಕ್ ಸವಾರನೋರ್ವ ಮಾರ್ಗ ಮಧ್ಯೆ ರಸ್ತೆ ವಿಭಜಕಕ್ಕೆಂದು ಅಗೆಯಲಾಗಿದ್ದ ಹೊಂಡಕ್ಕೆ ಬೈಕ್ ಸಮೇತ ಉರುಳಿಬಿದ್ದಿದ್ದನು. ಇದನ್ನು ಕಂಡ ಸ್ಥಳೀಯ ಯುವಕರು ಪೊಲೀಸ್ ಪೇದೆಯ ಜತೆಗೆ ಕೈಜೋಡಿಸಿ ಹೊಂಡಕ್ಕೆ ಬಿದ್ದವನನ್ನು ಬೈಕ್ ಸಮೇತ ಮೇಲಕ್ಕೆ ಎತ್ತಿದ್ದರು. ಬಳಿಕ ಬೈಕ್ ಸವಾರ ಪೊಲೀಸ್ ಪೇದೆಯನ್ನು ತರಾಟೆಗೆ ತೆಗೆದು, ಹೊಂಡವನ್ನು ಮುಚ್ಚಲು ನಿಮ್ಮಿಂದ ಸಾಧ್ಯವಿಲ್ಲ. ಅದನ್ನು ಬಿಟ್ಟು ಬೇರೆಲ್ಲಾ ದೌರ್ಜನ್ಯ ಎಸಗುತ್ತೀರಿ’…

