ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುತ್ತಾರು: ಶ್ರೀಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿ ವಿನಾಯಕ ದೇವಸ್ಥಾನದ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾಗಿ ರಾಜೇಶ್ ಗಟ್ಟಿ ಮುಂಡೋಳಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಯಾದವ ಗಟ್ಟಿ ಮುಂಡೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ದೇರಳಕಟ್ಟೆ, ಕೋಶಾಧಿಕಾರಿಯಾಗಿ ರವಿ ಕುಕ್ಕುದಕಟ್ಟೆ, ಶೋಭಾ ಯಾತ್ರೆ ಸಂಚಾಲಕರಾಗಿ ಚಂದ್ರಹಾಸ್ ಕೊಟ್ಟಾರಿ ಪವಿತ್ರ ಕುಮಾರ ಗಟ್ಟಿ, ಜಗನ್ನಾಥ್ ಸಾಲಿಯಾನ್, ರಾಜೇಶ್ ಅತ್ತಾವರ, ಭವಾನಿ ಶಂಕರ್ ಸೇವಂತಿಗುತ್ತು, ನಂದಕುಮಾರ್ ಬಬ್ಬುಕಟ್ಟೆ, ಈಶ್ವರ್ ಬಡಾಜೆ, ದಿನೇಶ್ ಎಲ್ .ಎಸ್, ಸುಧಾಕರ್ ಅಮೀನ್ ಕುತ್ತಾರು, ಉಪಾಧ್ಯಕ್ಷರುಗಳಾಗಿ ಗೋಪಾಲ್ ಸರ್ವೇಯರ್ ಮುಂಡೋಳಿ, ಉದಯ ಬಾಕಿಮಾರ್, ಸುಹಾಸಿನಿ ಬಬ್ಬುಕಟ್ಟೆ, ವೇದ ಪವಿತ್ರ ಕುಮಾರ್ ಗಟ್ಟಿ, ಜಾನಕಿ ಗೋಕುಲ್ ದಾಸ್. ನವೀನ್ ಕುಮಾರ್ ಸಂತೋಷ್ ನಗರ, ಜಯಂತ್ ಪದ್ಮಾಶಾಲಿ, ಮನೋಜ್ ರೈ ಪಂಡಿತ್‍ಹೌಸ್, ಪುರಂದರ, ಜಯಪ್ರಕಾಶ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ಚರಣ್ ಕುತ್ತಾರು, ಗೌರವ ಸಲಹೆಗಾರರಾಗಿ ಜಯರಾಮ್ ಚೆಂಬುಗುಡ್ಡೆ, ಚಂದ್ರಹಾಸ್ ಪಂಡಿತಹೌಸ್, ಪದ್ಮನಾಭ ಮರ್ಕೆದು, ನಿತೇಶ್…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಜೇಶ್ವರ: ಸುರಕ್ಷಾ ದಂತ ಚಿಕಿತ್ಸಾಲಯದ ವಿಂಶತಿಯ ಸಂಭ್ರಮವನ್ನು ಬಹಳ ವಿಶಿಷ್ಟ ರೀತಿಯಿಂದ ಆಚರಿಸಲಾಯಿತು. ಜುಲೈ 3 1997ರಲ್ಲಿ ಅಂದಿನ ಬಂಟ್ವಾಳ ಕ್ಷೇತ್ರದ ಶಾಸಕರಾಗಿದ್ದ ಬಿ. ರಮಾನಾಥ ರೈ ಇವರಿಂದ ಉದ್ಘಾಟನೆಗೊಂಡು 20 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ನೆನಪಿನಲ್ಲಿ ಇಂದು ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಸಾಗುವಾನಿ ಮತ್ತು ನೇರಳೆ ಗಿಡಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಲಾಯಿತು. 20 ವರ್ಷಗಳ ಹಿಂದೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂದಿನ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾಗಿದ್ದ ಅಹ್ಮದ್ ಕುಂಞÂ ಇಂದು ಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿ ಗಿಡ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೋಗಿಗಳಿಗೆ ಉನ್ನತ್ತ ಮಟ್ಟದ ದಂತ ಚಿಕಿತ್ಸೆ ನೀಡುವುದರ ಜೊತೆಗೆ, ವೈದ್ಯಕೀಯ ರಂಗದ ಬಗ್ಗೆ ಲೇಖನಗಳನ್ನು ಬರೆದು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಡಾ. ಮುರಲೀ ಮತ್ತು ಡಾ. ರಾಜಶ್ರೀ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಹೊಸದಿಲ್ಲಿ : “ಭಾರತದಿಂದ ಕಾಶ್ಮೀರವನ್ನು ವಿಮೋಚನೆಗೊಳಿಸುವ ತನಕವೂ ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ’ ಆದ್ದರಿಂದ ಭಾರತದ ಯಾವುದೇ ಭಾಗದ ಮೇಲೆ ದಾಳಿ ನಡೆಸಬಲ್ಲೆವು ಎಂದು ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಹುದ್ದೀನ್ ಪಾಕಿಸ್ತಾನದಲ್ಲಿ ಬೆದರಿಕೆ ನೀಡಿದ್ದಾನೆ. ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಎಂದು ಸಲಾಹುದ್ದೀನ್ ಭಾರತದಲ್ಲಿ ಈಗಾಗಲೇ ಹಲವಾರು ಭಾರಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿಕೊಂಡು ಬಂದಿದ್ದು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವರೆಗೂ ನಮ್ಮ ಹೋರಾಟ ಅಂತ್ಯಗೊಳ್ಳುವುದಿಲ್ಲ. ನಾನೊಬ್ಬ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಮೂರ್ಖ ಎಂದು ಹೇಳಿದ್ದಾನೆ. ಭಾರತದಲ್ಲಿ ತಾನು ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವುದು ನಿಜ ಎಂದು ಒಪ್ಪಿಕೊಂಡಿರುವ ಸಲಾಹುದ್ದೀನ್, ಕೆಲ ದಿನಗಳ ಹಿಂದಷ್ಟೇ ಅಮೆರಿಕ ಸಲಾಹುದ್ದೀನ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಣೆ ಮಾಡಿತ್ತು. ಅಮೆರಿಕದ ಈ ಕ್ರಮವನ್ನು ಪಾಕಿಸ್ತಾನ ಸಂಪೂರ್ಣ ಅಸಮರ್ಥನೀಯ ಎಂದು ಹೇಳಿತ್ತು. ಅಲ್ಲದೆ, ಸ್ವಯಂ ಆಡಳಿತೆಯ ಕಾಶ್ಮೀರಿಗಳ ಹಕ್ಕನ್ನು ಬೆಂಬಲಿಸುವ ವ್ಯಕ್ತಿ ಸಲಾಹುದ್ದೀನ್ ಎಂದು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲಾ ಸಭಾ ಭವನದಲ್ಲಿ ಭಾನುವಾರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಂ.ಜಿ.ಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೆರ್ಮನ್ನೂರು ಚರ್ಚ್‍ನ ಧರ್ಮಗುರುಗಳಾದ ವಂದನೀಯ ರೆ| ಫಾ| ಜೆ.ಬಿ.ಸಲ್ದಾನ ಭಾಗವಹಿಸಿ ಮಕ್ಕಳು ಸ್ಕೌಟ್ ಗೈಡ್ ಶಿಕ್ಷಣ ಪಡೆಯುವುದರ ಜತೆಗೆ ಸದ್ಭಾವನೆ, ಸಚ್ಚಾರಿತ್ರ್ಯ ಸರ್ವಧರ್ಮ ಸಹಿಷ್ಣುತೆ ಮೊದಲಾದ ಸದ್ಗುಣಗಳನ್ನು ಪಡೆದು ಹೆತ್ತವರಿಗೆ, ಶಾಲೆಗೆ, ಊರಿಗೆ ಆ ಮೂಲಕ ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದರು. ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ಮಾತನಾಡಿ ಸ್ಕೌಟ್ಸ್ ಗೈಡ್ಸ್ ಗಳು ಕಲಿಕೆಯ ಜತೆಗೆ ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಸ್ವಚ್ಚತಾ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಪಾಲಿನ ಕರ್ತವ್ಯವನ್ನು ಮಾಡಬೇಕು ಎಂದ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲೆ ಮತ್ತು ರಾಜ್ಯದ ಹಲವಾರು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ,…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಯ ಹೆಸರಿನ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ರಾಜ್ಯ ಸರಕಾರ ಹಾಗೂ ಅದನ್ನು ಬೆಂಬಲಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೊ ಹೇಳಿದ್ದಾರೆ. ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರ ರಾಂ ಶೆಟ್ಟಿ ಹೆಸರನ್ನು ಇಡುವುದರ ವಿರುದ್ಧ ಸಂತ ಅಲೋಷಿಯಸ್ ಸಂಸ್ಥೆ ಹಾಗೂ ವಿಜಯ ಬ್ಯಾಂಕ್ ನೌಕರರ ಸಂಘ ದಿಂದ ವಿರೋಧ ವ್ಯಕ್ತವಾಗಿದೆ. 2013 ರಲ್ಲಿ ಮಂಗಳೂರು ನಗರಪಾಲಿಕೆ ಹೆಸರು ಬದಲಾವಣೆ ಕುರಿತು ನಿರ್ಣಯ ಮಂಡಣೆ ಸಂದರ್ಭ ಅಲ್ಲಿನ ಕಾರ್ಪೊರೇಟರ್ ಆಗಲಿ, ದಕ್ಷಿಣ ಶಾಸಕರು ಹಾಗೂ ಮುಖ್ಯಸಚೇತಕರೂ ಸುದ್ದಿಯಲ್ಲಿರಲಿಲ್ಲ, ಆ ವೇಳೆ ಎಲ್ಲರೂ ದನ ಮೇಯಿಸುತ್ತಿದ್ದರೆಂದು ಕಾಣುತ್ತಿದೆ. ಇದೀಗ ತಡೆಯಾಜ್ಞೆ ತರುವ ಮೂಲಕ ಎರಡು ಪಂಗಡಗಳ ಮಧ್ಯೆ ವೈಮನಸ್ಸು ತರುವ ಪ್ರಯತ್ನ ಆಗಿದೆ. ಎಲ್ಲರೂ ಭಾವನೆಗಳಿಗೆ ತಕ್ಕಂತೆ ಹೆಸರು ಕೇಳುತ್ತಿದ್ದಾರೆ. ಅದಕ್ಕಾಗಿ ಎರಡು ಪಂಗಡಗಳು ಜತೆಯಾಗಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಮಕ್ಕಳು ಸಕಾರಾತ್ಮಕ ಗುಣಗಳನ್ನು ಬೆಳೆಸುವುದರ ಜತೆಗೆ ಗುರಿಯನ್ನು ಹೊಂದಬೇಕಿದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ಸಹಾಯಕ ಪೊಲೀಸ್ ಆಯುಕ್ತೆ ಶೃತಿ.ಎನ್.ಆರ್ ಅಭಿಪ್ರಾಯಪಟ್ಟರು. ಅವರು ಮಂಗಳೂರಿನ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಭಾನುವಾರ ದೇರಳಕಟ್ಟೆ ಪಾನೀರು ದಿ ಮರ್ಸಿ ಅಮ್ಮನವರ ಮಕ್ಕಳ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಿಗೆ ನೂತನ ಬಟ್ಟೆಗಳ ವಿತರಣಾ ಕಾರ್ಯಕ್ರಮವಾದ ಪ್ರೀತಿ ವಂಚಿತ ಕಂದಮ್ಮಗಳಿಗೆ ವಾತ್ಸಲ್ಯದ ಅಪ್ಪುಗೆ ‘ ಯಲ್ಲಿ ಭಾಗವಹಿಸಿ ಮಾತನಾಡಿದರು. ಆತ್ಮಶಕ್ತಿ ಇದ್ದಲ್ಲಿ ಗುರಿ ಸಾಧಿಸಲು ಸಾಧ್ಯವಿದ್ದು, ಅದನ್ನು ಬೆಳೆಸುವ ಕಾರ್ಯ ಮಕ್ಕಳಲ್ಲಿ ಆಗಬೇಕಿದೆ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ಮುಖೇನ ಸಂಬಂಧಿಕರ ಪ್ರೀತಿಯಿಂದ ವಂಚಿತ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯ ಕಾರ್ಯಕ್ರಮದಿಂದ ಆಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೊ ಮಾತನಾಡಿ ರಾಷ್ಟ್ರೀಯತೆ ಚಿಂತನೆಯ ಉದ್ದೀಪನ ಆಗುವ ದೃಷ್ಟಿಯಿಂದ ವೇದಿಕೆಯನ್ನು ಸ್ಥಾಪಿಸಲಾಗಿದೆ. ಸಮಾಜದಲ್ಲಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಗಿಡವೊಂದು ಬೆಳೆದಲ್ಲಿ ವಾತಾವರಣದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ದೇರಳಕಟ್ಟೆ ದಶಮಾನೋತ್ಸವ ಅಂಗವಾಗಿ ಒಂದು ದಿನದಲ್ಲಿ 1,000 ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು 2017-18 ನೇ ಸಾಲಿನ ರೋಟರಿ ಕ್ಲಬ್ ದೇರಳಕಟ್ಟೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ಅವರು ರೋಟರಿ ಕ್ಲಬ್ ದೇರಳಕಟ್ಟೆ ಇದರ ದಶಮಾನೋತ್ಸವ ಅಂಗವಾಗಿ ಕೊಣಾಜೆ, ಕೋಟೆಕಾರು ಹಾಗೂ ಉಳ್ಳಾಲ ವ್ಯಾಪ್ತಿಯಲ್ಲಿ ಭಾನುವಾರ ಹಮ್ಮಿಕೊಂಡ 1,000 ಗಿಡ ನೆಡುವ ಕಾರ್ಯಕ್ರಮಕ್ಕೆ ಕೊಣಾಜೆ ಮುಲಾರಗುತ್ತು ಅರಸುಮುಂಡಿತ್ತಾಯ ನಾಗಬನದ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಅದಕ್ಕೆ ಪೂರಕವಾಗಿ ವಿವಿಧ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಪರಿಸರ ಪ್ರೇಮಿ ಮತ್ತು ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲೂ ರೋಟರಿ ಕ್ಲಬ್ ಪಾಲ್ಗೊಳ್ಳುವ ಯೋಚನೆ ಮಾಡಲಾಗಿದೆ ಎಂದರು. ಧಾರ್ಮಿಕ ಮುಖಂಡ ಸುದರ್ಶನ್ ಭಟ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುತ್ತಾರು: ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗಿರದೆ, ಮಸ್ತಕಕ್ಕೂ ಕೆಲಸವನ್ನು ಕೊಡುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮನೋಸ್ಥಿತಿಯನ್ನು ಬೆಳೆಸಬೇಕಿದೆ ಎಂದು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು. ಅವರು ಸಂತ ಆಗ್ನೆಸ್ ಕಾಲೇಜು ಮಂಗಳೂರು ಇದರ ಸಮುದಾಯದತ್ತ ಆಗ್ನೆಸ್ , ಜಿಲ್ಲಾ ಪಂಚಾಯತ್ ಮಂಗಳೂರು ಇದರ ಮಲೇರಿಯಾ ಮಾಸಾಚರಣೆ-2017ರ ಪ್ರಯುಕ್ತ ನಡೆದ ` ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸಿ’ ಕಾರ್ಯಕ್ರಮಕ್ಕೆ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಳಿಯಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು. ಪರಿಸರದ ಸ್ವಚ್ಛತೆಗೆ ಹೆಚ್ಚಿನ ಗಮನವನ್ನು ಇಡುತ್ತಾ, ಕೈಲಿ ಕೆಸರಾದರೂ ಆರೋಗ್ಯದ ಮತ್ತು ಸಮಾಜದ ಹಿತದೃಷ್ಟಿಯಿಂದ ಶುಚಿತ್ವವನ್ನು ಕಾಪಾಡಬೇಕಿದೆ. ಇದನ್ನು ಮುಂದಿಟ್ಟುಕೊಂಡು ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುನ್ನೂರು, ಅಂಬ್ಲಮೊಗರು , ಹರೇಕಳ ಮತ್ತು ಸೋಮೇಶ್ವರ ಗ್ರಾ.ಪಂ ವ್ಯಾಪ್ತಿಗಳಲ್ಲಿ ವಿದ್ಯಾರ್ಥಿನಿಯರೇ ಸೇರಿಕೊಂಡು ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನು ಮಾಡುವಳು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ವೈದ್ಯಕೀಯ ವೃತ್ತಿಯಲ್ಲಿ ಹಣ ಗಳಿಸುವುದಕ್ಕೆ ಮುಖ್ಯವಲ್ಲ. ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸುವುದರಿಂದ ರೋಗಿಗಳು ಶಾಶ್ವತವಾಗಿ ಆ ವೈದ್ಯರನ್ನು ನಂಬುತ್ತಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸೇವೆ ಆತ್ಮತೃಪ್ತಿ ಕೊಡುವಂತೆ ಇರಬೇಕು ಎಂದು ನಿಟ್ಟೆ ವಿಶ್ವ್ವವಿದ್ಯಾಲಯದ ಸಹ ಕುಲಾ„ಪತಿ ಡಾ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಭಾರತ ರತ್ನ ಡಾ. ಬಿ.ಸಿ.ರಾಯ್ ಜನ್ಮ ದಿನಾಚರಣೆ `ಡಾಕ್ಟರ್ಸ್ ಡೇ’ ಪ್ರಯುಕ್ತ ಪ್ರತಿ ವರ್ಷ ಜು. 1ರಂದು ಕ್ಷೇಮದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಮೂರು ಖ್ಯಾತ ವೈದ್ಯರನ್ನು ಸನ್ಮಾನಿಸಲಾಗುತ್ತಿದ್ದು ಅದರಂತೆ ಖ್ಯಾತ ವೈದ್ಯರಾದ ಡಾ. ಎಂ.ಪಿ. ಶೆಟ್ಟಿ ಸಿದ್ಧಾಪುರ, ಬಿ. ವಸಂತ ಬಾಳಿಗಾ ಬಂಟ್ವಾಳ, ಡಾ. ಹರಿದಾಸ್ ವೆರ್ ಕೋಟ್ ನೀಲೇಶ್ವರ ಅವರನ್ನು ಕ್ಷೇಮ ಸೆಮಿನಾರ್ ಹಾಲ್‍ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರ ಹಾಗೂ ರೋಗಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ರೋಗಿಗಳಿಗೆ ನೀಡುತ್ತಿರುವ ಪ್ರಾಮಾಣಿಕ ಸೇವೆಯಿಂದಾಗಿ ರೋಗಿಗಳಿಂದ ಉತ್ತಮವಾದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನವದೆಹಲಿ: ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ಉದ್ದೇಶದೊಂದಿಗೆ ದೇಶದ ಇತಿಹಾಸದ ಪುಟದಲ್ಲಿ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್‍ಟಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಯಾಗಿದ್ದು ದೇಶದ ಜನತೆಗೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಆಗುವ ಮೂಲಕ ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಭರವಸೆ ಎಲ್ಲೆಡೆ ವ್ಯಕ್ತವಾಗಿದೆ. ಜು.30 ರ ಮಧ್ಯರಾತ್ರಿ ನಡೆದ ಸಂಸತ್ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಜಿಎಸ್ ಟಿ ಜಾರಿ ಗೊಳಿಸುವ ಮೂಲಕ ಈ ಹಿಂದೆ ಇದ್ದ ಹತ್ತುಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ತೆರಿಗೆಗಳು ವಿಲೀನವಾಗಿದ್ದು, ತೆರಿಗೆಗಳ ಮೇಲಿನ ತೆರಿಗೆಗಳು ಹಾಗೂ ಗ್ರಾಹಕರು ತಿಳಿಯದೇ ನೀಡುತ್ತಿದ್ದ ಪರೋಕ್ಷ ತೆರಿಗೆಗಳಿಗೂ ಕೂಡ ಕಡಿವಾಣ ಬಿದ್ದಂತಾಗಿದೆ. ಇನ್ನು ನಿತ್ಯ ಬಳಕೆಯ ಅನೇಕ ಅಗತ್ಯ ಸರಕುಗಳ ಬೆಲೆ ಇಳಿಕೆಯಾಗಲಿದ್ದು, ಮಾಲ್, ಶಾಪಿಂಗ್, ಬ್ಯಾಕಿಂಗ್ ನಂತಹ ಕೆಲ ಆರ್ಥಿಕ ಸೇವೆಗಳು ಕೊಂಚ ದುಬಾರಿಯಾಗಲಿವೆ. ಸರಕು ಮತ್ತು ಸೇವಾ…

