ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಚ್ಚಿಲಗುಡ್ಡೆ: ರಸ್ತೆ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ರಾಜ್ಯ ಸರಕಾರ ನೀಡುತ್ತಿದ್ದು, ಸಚಿವರು ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೆಡೆಯೂ ಸಕಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ಶಾಸಕರ ನಿಧಿಯಿಂದ ರೂ. 10 ಲಕ್ಷ ಅನುದಾನದಿಂದ ಕಾಂಕ್ರೀಟಿಕರಣಗೊಂಡ ಸೋಮೇಶ್ವರ ಗ್ರಾಮದ ಉಚ್ಚಿಲಗುಡ್ಡೆಯ ಅಡ್ಡರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹಮ್ಮದ್ ಹುಸೈನ್ ವಹಿಸಿದ್ದರು.
ಸೋಮೆಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಅಬ್ದುಲ್ ರೆಹಮಾನ್ ಕೋಡಿಜಾಲ್, ಉಚ್ಚಿಲ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ನಿನ ಅಧ್ಯಕ್ಷ ಮೊಹ್ಸಿನ್ ರೆಹ್ಮಾನ್, ಸೋಮೇಶ್ವರ ಪಂ. ಸದಸ್ಯರಾದ ಎನ್.ಇಸ್ಮಾಯಿಲ್, ಉಚ್ಚಿಲ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕರೀಂ ನಾಗತೋಟ, ಫ್ರೆಂಡ್ಸ್ ಉಚ್ಚಿಲಗುಡ್ಡೆಯ ಅಧ್ಯಕ್ಷ ಅಬ್ದುಲ್ ನಝೀರ್ ಯು.ಟಿ, ಗುತ್ತಿಗೆದಾರರಾದ ಪಿಯುಶ್ ಮೊಂತೇರೊ, ಗಣೇಶ್ ತಲಪಾಡಿ, ಹಾಗೂ ಕೆ.ಪಿ.ಇಸ್ಮಾಯಿಲ್, ನಾಸೀರ್ ಖಾನ್, ಉಮೇಶ್ ಉಚ್ಚಿಲ, ಸಿದ್ಧೀಖ್ ಕೊಳಂಗೆರೆ, ಯೂಸುಫ್ ಉಚ್ಚಿಲ, ಎಂ.ಎಚ್ ಪೋಕರ್, ಬಾಪನ್ ಕುಂಞÂ, ಅಬ್ದುಲ್ ಸಲಾಂ.ಯು, ಅಬ್ಬಾಸ್ ಕೊಮರಂಗಳ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಹಾಗೂ ಇತ್ತೀಚೆಗೆ ಭಾರತ ಸರಕಾರದಿಂದ ನೋಟರಿಯಾಗಿ ನೇಮಕಗೊಂಡ ನ್ಯಾಯವಾದಿ ಝಾಹಿದ್ ಹುಸೇನ್ ಉಚ್ಚಿಲ್ ಇವರನ್ನು ಸನ್ಮಾನಿಸಲಾಯಿತು.


