Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಹಿಂದು ಯುವಕರಿಬ್ಬರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಐವರನ್ನು ಎಸಿಪಿ ನೇತೃತ್ವದ ವಿಶೇಷ ಪೊಲೀಸ್ ತಂಡ, ಉಳ್ಳಾಲ ಪೊಲೀಸರ ದಸಹಕಾರದೊಂ ದಿಗೆ ಬಂಧಿಸಿದೆ. ಮದನಿನಗರ ನಿವಾಸಿಗಳಾದ ತಸ್ಲೀಂ(24), ಅಂಬ್ಲಮೊಗರು ನೌಷಾದ್ (32), ರಮೀಜ್ (20), ಖುರ್ಷಿದ್ (20), ನವಾಝ್ (24) ಬಂಧಿತರು. ಜೂ.18, 2017 ರಂದು ಆರೋಪಿಗಳು ಕುತ್ತಾರು ಸಮೀಪ ಗಂಗಾಧರ್ ಎಂಬವರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದರು. ಆದರೆ ಆರೋಪಿಗಳಿಂದ ತಪ್ಪಿಸಿದ್ದ ಗಂಗಾಧರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆರೋಪಿಗಳು ಎ.26, ,2016 ರಂದು ಉಳ್ಳಾಲದ ತಂಡ ದಿಂದ ಹತ್ಯೆಗೀಡಾದ ಪಿಲಾರು ನಿವಾಸಿ ಸಫ್ವಾನ್ (22) ಕೊಲೆಗೆ ಪ್ರತೀಕಾರವಾಗಿ , ಇಬ್ಬರು ಹಿಂದು ಯುವಕರ ಹತ್ಯೆಗೆ ಸಂಚು ರೂಪಿಸಿದ್ದರು. ಅಂಬ್ಲಮೊಗರು ಮತ್ತು ಕುತ್ತಾರು ಮೂಲದ ಇಬ್ಬರು ಹಿಂದು ಯುವಕರ ಹತ್ಯೆಗೆ ಸಂಚು ರೂಪಿಸಿದ್ದರೂ, ಪೊಲೀಸರ ಪತ್ತೆಯಿಂದ ಅದು ಅಸಾಧ್ಯವಾಗಿದೆ. ರಾಣಿಪುರ ಸಮೀಪ ಆರ್ ಎಸ್ ಎಸ್ ಕಾರ್ಯಕರ್ತ ರಾಮಮೋಹನ್ ಮತ್ತು ಚಿರಂಜೀವಿ ಎಂಬವರನ್ನು ತಲವಾರಿನಿಂದ ಕಡಿದು ಹತ್ಯೆಗೆ…

Read More

UN NETWORKS ಉಳ್ಳಾಲ: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ನಾಟೆಕಲ್ ಬಳಿ ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕ ಪರಾರಿಯಾಗಿದ್ದಾನೆ. ಹರೇಕಳ ಕಡೆಯಿಂದ ಮಂಜನಾಡಿ ಮಾರ್ಗವಾಗಿ ಅಕ್ರಮ ಮರಳನ್ನು ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಲಾರಿಯನ್ನು ನಿಲ್ಲಿಸಲೆತ್ನಿಸಿದಾಗ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಪ್ರಭಾರ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಮತ್ತು ಎಸ್‍ಐ ಸುಕುಮಾರ್ ಮತ್ತು ಸಿಬಂದಿಗಳು ಭಾಗವಹಿಸಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಉಳ್ಳಾಲ: ನೇಪಾಲ ಮೂಲದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಚಾರ ನಡೆಸಿದ ಆರೋಪದಲ್ಲಿ ನೇಪಾಲ ಮೂಲದ ಯುವಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು ಬಂಧಿತ ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟಿನಲ್ಲಿ ಫಾಸ್ಟ್ ಫುಡ್ ಮಾಡುತ್ತಿರುವ ದೇರಳಕಟ್ಟೆಯಲ್ಲಿ ವಾಸವಾಗಿರುವ ನೇಪಾಲ ನಿವಾಸಿ ಕುಮ್ಮ ಸಿಂಗ್(22) ಬಂಧಿತ ಆರೋಪಿಯಾಗಿದ್ದು, ಈತ ಕಳೆದ ಆರು ತಿಂಗಳಿನಿಂದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ದೇರಳಕಟ್ಟೆಯ ಬಾಡಿಗೆ ಮನೆಯಲ್ಲಿ ನೇಪಾಲ ಮೂಲದ ಮೂರು ಕುಟುಂಬಗಳು ವಾಸವಾಗಿದ್ದು, ಬಾಲಕಿ ತನ್ನ ತಾಯಿ ತಂದೆಯೊಂದಿಗೆ ವಾಸವಾಗಿದ್ದರೆ, ಆರೋಪಿ ಕುಮ್ಮಸಿಂಗ್ ಮತ್ತು ಆತನ ಸಹೋದರ ಇದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಕುಮ್ಮ ಸಿಂಗ್ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿ ಬಸುರಿಯಾದ ವಿಚಾರ ತಿಳಿದು ತಲೆಮರೆಸಿಕೊಂಡಿದ್ದ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಕೊಣಾಜೆ ಪೊಲೀಸರು ಕೊಣಾಜೆ ಪ್ರಭಾರ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಅವರ ಮಾರ್ಗದರ್ಶನದಲ್ಲಿ…

Read More

UN NETWORKS ಕೊಣಾಜೆ: ಕೊಣಾಜೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಕಾರಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

Read More

UN NETWORKS ಉಳ್ಳಾಲ: ಮಂಗಳೂರಿನ ಶಾರದಾ ವಿದ್ಯಾಲಯದಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಪಂದ್ಯಾಟದಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಒಟ್ಟು 7 ಚಿನ್ನ, 6 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕ ಪಡೆದಿರುತ್ತಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡ 11ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 10ನೇ ತರಗತಿಯ ರೋಹಿತ್ ಪಾಲ್ ಹಾಗೂ 8ನೇ ತರಗತಿಯ ಸನ್ನಿಧಿ ವೈಯಕ್ತಿಕ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

Read More

UN NETWORKS ಕಣಚೂರು: ದೇರಳಕಟ್ಟೆಯ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಕಾಲೇಜಿನ ಆಶ್ರಯದಲ್ಲಿ `ಕಿಮ್ಸ್ ಕಲ್‍ರವ್’- 2017 ಅಂತರ್ ಕಾಲೇಜ್ ಸ್ಪರ್ಧೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಪ್ರೋ  ರವಿಶಂಕರ್ ಮಾತನಾಡಿ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವುದರ ಮುಖ್ಯ ಉದ್ದೇಶವನ್ನು ವಿದ್ಯಾರ್ಥಿಗಳು ಮೊದಲು ತಿಳಿದು ಕೊಳ್ಳಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವು ಎಂಬುದು ಸಾಮಾನ್ಯ. ಆದರೆ ನಮ್ಮ ಪ್ರಯತ್ನವನ್ನು ಮುಂದುವರಿಸುತ್ತಲೇ ಇರಬೇಕು. ಆಗ ಭವಿಷ್ಯದಲ್ಲಿ ಗೆಲುವು ನಿಶ್ಚಿತ. ಅದೇ ಜೀವನದ ಸಿದ್ಧಾಂತ ಎಂದು ನುಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ವಿನೀತಾ ಮಥಾಯಸ್, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಆನಂದಿ ಹಾಗೂ ಪ್ರಿಸ್ಕೂಲ್‍ನ ಮುಖ್ಯ ಶಿಕ್ಷಕಿ ಲಿನೇಟ್ ಡಿಸೋಜ ಉಪಸ್ಥಿತರಿದ್ದರು. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೋ  ಇಕ್ಬಾಲ್ ಅಹಮದ್ ಯು.ಟಿ. ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಮುಬೀನ್ ತಾಜ್ ಕಾರ್ಯಕ್ರಮ ನಿರೂಪಿಸಿದರು. ಬಿ.ಸಿ.ಎ. ವಿಭಾಗದ…

Read More

UN NETWORKS ಉಳ್ಳಾಲ: ಕುಂಪಲ ಸರ್ಕಾರಿ ಪ್ರೌಢಶಾಲೆ (ಆರ್‍ಎಂಎಸ್‍ಎ) ವಿಜ್ಞಾನ ಸಂಘದ ವತಿಯಿಂದ 50 ವಿದ್ಯಾರ್ಥಿಗಳು ಕುಲಶೇಖರದಲ್ಲಿ ಕೆ.ಎಂ.ಎಫ್‍ಗೆ ಭಾನುವಾರ ಭೇಟಿ ನೀಡಿದರು. ಹಾಲಿನ ಪ್ಯಾಕಿಂಗ್, ಉತ್ಪನ್ನಗಳ ತಯಾರಿಕೆ ಸಹಿತ ಸಮಗ್ರ ಮಾಹಿತಿಯನ್ನು ತರಬೇತುದಾರ ಹುಸೈನ್ ಅವರ ಮುಖಾಂತರ ಕಲೆ ಹಾಕಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ರಾಧಿಕಾ ಎಸ್.ರಾವ್, ಸಹಶಿಕ್ಷಕಿಯರಾದ ಸುಮಾನ ಕುಂದರ್, ತೆರೆಜಾ ಲೀನಾ, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ವಿನೋದ್ ಕುಂಪಲ ಸಹಕರಿಸಿದರು.

Read More

UN NETWORKS ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶನಿವಾರ ಜರಗಿದ 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ವೇಳೆ ಕಂಡು ಬಂದ ಆಕರ್ಷಕ ಸ್ತಬ್ಧಚಿತ್ರಗಳು.

Read More

UN NETWORKS  ತಲಪಾಡಿ: ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ 3.25 ಎಕರೆ ಜಮೀನು ಮೀಸಲಿಡಲಾಗಿತ್ತು. ಆದರೆ ಖಾಸಗಿಯವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂದು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಹೇಳಿದ್ದಾರೆ. ಸ್ವಚ್ಛ ಭಾರತ್ ಮಿಷನ್‍ನಡಿ ತಲಪಾಡಿ ಗ್ರಾಮ ಪಂಚಾಯಿತಿಯಿಂದ ಶನಿವಾರ ಕೆ.ಸಿ.ನಗರ ಫಲಾಹ್ ಶಾಲೆಯಲ್ಲಿ ಶನಿವಾರ ನಡೆದ ಸ್ವಚ್ಛತಾ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಜಮೀನು ಮೀಸಲಿಟ್ಟರೂ ತಡೆಯಾಜ್ಞೆಯಿಂದಾಗಿ ಅದು ಸಾಧ್ಯವಾಗಿಲ್ಲ. ಫಲಾಹ್ ಶಾಲೆ ಬಳಿ ಜನವಸತಿ ಇಲ್ಲದ ಕಾರಣ ರಸ್ತೆಬದಿ ಕಸ ಬೀಳುತ್ತಿದ್ದು, ತಿಂಗಳಿಗೆರೆಡು ಬಾರಿ ತೆಗೆಯಲಾಗುತ್ತಿದೆ. ಆದರೆ ಮನಪಾದಿಂದ ಸ್ವೀಕರಿಸದ ಕಾರಣ ಸಮಸ್ಯೆ ಬಂದಿದೆ. ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಅಂಗಡಿ, ಫ್ಲ್ಯಾಟುಗಳಿಗೆ ಮಾಹಿತಿ ನೀಡಿ ಸಂಬಂಧಪಟ್ಟವರು ಮನಸ್ಸು ಗೆಲ್ಲುತ್ತೇವೆ. ನಂತರವೂ ಬಗ್ಗದಿದ್ದರೆ ಕಾನೂನು ಕ್ರಮದ ಮುಖಾಂತರ ಬಗ್ಗಿಸುವ ಪ್ರಯತ್ನ ಮಾಡುತ್ತೇವೆ ಎಂದುತ್ತರಿಸಿದರು. ಪ್ಲಾಸ್ಟಿಕ್ ಎನ್ನುವುದು ಕೊಡುಗೆಯೂ ಹೌದು, ಕುರ್ಚಿ, ಬಕೆಟ್ ಹೀಗೆ ವಿವಿಧ ರೀತಿಯಲ್ಲಿ ಪ್ಲಾಸ್ಟಿಕ್ ಮರುಬಳಕೆ ಮಾಡಲಾಗುತ್ತಿದೆ. ತೆಳುವಾದ…

Read More

UN NETWORKS  ಉಳ್ಳಾಲ: ಆಯಾಯ ಮಸೀದಿ ಮದರಸಗಳಲ್ಲಿ ಕಾರ್ಯ ನಿರ್ವಹಿಸುವ ಉಸ್ತಾದರಿಗೆ ಮತ್ತು ಖತೀಬರಿಗೆ ಅವರ ವಾಸ್ತವ್ಯ ಪ್ರದೇಶದಲ್ಲಿ ವ್ಯಾಪಾರ ವ್ಯವಹಾರ ನಡೆಸಲು ಪೂರಕವಾಗುವಂತೆ ಶ್ರಮಶಕ್ತಿ ಯೋಜನೆಯಡಿ ದೊಡ್ಡ ಮಟ್ಟದ ಹಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸರಕಾರಕ್ಕೆ ನೀಡಿದ್ದು ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು. ಅವರು ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕ ದ.ಕ ಜಿಲ್ಲಾ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಎನ್.ಎಸ್ ಕರೀಂರವರಿಗೆ ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೇಕ್ಸ್‍ನಲ್ಲಿ ಅಯೋಜಿಸಿದ ಅಭಿನಂದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಖತೀಬರು ಮತ್ತು ಉಸ್ತಾದರಿಗೆ ಹೊರಗಿನ ಪ್ರದೇಶದಲ್ಲಿ ಹೋಗಿ ಕೆಲಸ ಅಥವಾ ವ್ಯಾಪಾರ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದ್ದು, ಫಲಾನುಭವಿಗಳನ್ನು ಗುರುತಿಸುವ ಕಾರ್ಯ ವಕ್ಪ್ ಮಂಡಳಿಗಳು ಮಾಡಬೇಕು ಎಂದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅಲ್ಪ ಸಂಖ್ಯಾತ…

Read More