Author: UllalaVani

Kannada News From Coastal Karnataka

UN NETWORKS ಸೋಮೇಶ್ವರ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮವಾಸ್ಯೆ ಪ್ರಯುಕ್ತ ಸಾವಿರದಷ್ಟು ಮಂದಿ ಸಮುದ್ರದಲ್ಲಿ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ರೋಗ ಬಾಧೆಗಳ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸಿಕೊಂಡರು. ಖಗ್ರಾಸ ಸೂರ್ಯ ಗ್ರಹಣವಿದ್ದರೂ, ಭಾರತಕ್ಕೆ ವಿಶೇಷ ಫಲವಿಲ್ಲವೆಂದು ಜ್ಯೋತಿಷಿಗಳ ಅಭಿಪ್ರಾಯಗಳಾಗಿದ್ದರಿಂದಾಗಿ ಶ್ರಾವಣ ಅಮಾವಸ್ಯೆಗೆ ತೀರ್ಥ ಸ್ನಾನ ಮಾಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿರಲಿಲ್ಲ. ಜಿಲ್ಲೆ ಮತ್ತು ಹೊರಜಿಲ್ಲೆಗಳಿಂದ ಆಗಮಿಸಿದ ಭಕ್ತಾಧಿಗಳು ದೇವಸ್ಥಾನದ ಉತ್ತರದಲ್ಲಿರುವ ಗದಾತೀರ್ಥ ಕೆರೆಯಲ್ಲಿ ಮಿಂದು, ಬಳಿಕ ಸಂಪ್ರದಾಯದಂತೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಸಮುದ್ರಕ್ಕೆ ಸಲ್ಲಿಸಿದ ನಂತರ ಸಮುದ್ರದ ನೀರಿನಲ್ಲಿ ತೀರ್ಥಸ್ನಾನಗೈದರು.. ಬೆಳಿಗ್ಗೆ 4 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ  ಜಿಲ್ಲೆ ಮತ್ತು ಹೊರಜಿಲ್ಲೆಯ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದರು. ಕಡಲತಡಿಗೆ ತೆರಳಿ ಸಮುದ್ರ ಗಂಗಾ ಮಾತೆಗೆ ನಮಸ್ಕರಿಸಿ ವರ್ಷದ ಪಾಪ ವಿಮೋಚನೆಗೆ ಪ್ರಾರ್ಥಿಸುವುದು ಮತ್ತು ಚರ್ಮ ರೋಗಗಳ ನಿವಾರಣೆಯ ಸಲುವಾಗಿ ಉಪ್ಪು ನೀರಿನಲ್ಲಿ ತೀರ್ಥಸ್ನಾನಗೈಯ್ಯುತ್ತಾರೆ ಅನ್ನುವುದು ಹಿರಿಯರ ಅಭಿಪ್ರಾಯ. ಸಮುದ್ರದ ನೀರಿನಲ್ಲಿ 5 ಮತ್ತು 7 ಬಾರಿ ಮುಳುಗುತ್ತಾರೆ. ಬಳಿಕ…

Read More

UN NETWORKS ಉಳ್ಳಾಲ : ಭಾರತ ಬಹು ಸಂಸ್ಕೃತಿಯನ್ನು ಹೊಂದಿರುವ ಕೃಷಿ ಪರಂಪರೆ ಇಂತಹ ದೇಶವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಭೂಮಿಯನ್ನು ಕಾರ್ಪೋರೇಟ್  ಕಂಪೆನಿಗಳಿಗೆ ಮಾರುವ ಮೂಲಕ ದೇಶದಲ್ಲಿ ರುಷಿ ಪರಂಪರೆಯನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಜನಪರ ಚಿಂತಕಿ ಹಾಗೂ ಬರಹಗಾರ್ತಿ ಕೆ. ನೀಲಾ ಅಭಿಪ್ರಾಯಪಟ್ಟರು. `ಅಬ್ಬಕ್ಕನ ಮಡಿಲು ಸೌಹಾರ್ದತೆಯ ಕಡಲು’ ಅರಿವು, ಸೌಹಾರ್ದತೆ, ಮುನ್ನಡೆಗಾಗಿ ಘೋಷ ವಾಕ್ಯದೊಂದಿಗೆ ಕುತ್ತಾರಿನ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ಭಾನುವಾರ ನಡೆದ 13 ನೇ ಉಳ್ಳಾಲ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಭಾರತದ ಆನಾದಿ ಕಾಲದಿಂದಲೂ ಕೃಷಿ ಆಧಾರಿತ ದೇಶವಾಗಿದೆ. ಜಗದ ಜೀವರಾಶಿಗೆ ಅನ್ನ ನೀಡುವ ಕೃಷಿ ಸಂಸ್ಕೃತಿಯನ್ನು ಮೋದಿ ನೇತೃತ್ವದಲ್ಲಿ ಅದಾನಿ ಅಂಬಾನಿಗಳು ಕೂತು ತಿನ್ನುವ ರುಷಿ ಪರಂಪರೆಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ದೇಶದ ಕೃಷಿ ಭೂಮಿಗಳನ್ನು ಕಾರ್ಪೋರೇಟ್  ಸಂಸ್ಥೆಗಳಿಗೆ ಪರಭಾರೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಯುವಜನತೆ ಹಣಕ್ಕಾಗಿ ತಪ್ಪು ದಾರಿಗಳನ್ನು ಹುಡುಕುತ್ತಿದ್ದಾರೆ. ಕೇಂದ್ರ ಸರಕಾರದ ಸರ್ವೇಯಂತೆ ದೇಶದಲ್ಲಿ ಶೇ. 71ರಷ್ಟು…

Read More

UN NETWORKS ಅಸೈಗೋಳಿ: ಅಸೈಗೋಳಿ ಕೇಂದ್ರ ಮೈದಾನದಲ್ಲಿ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಕಬ್ಬಿಣದ ತಗಡು ಶೀಟಿನ ಚಪ್ಪರವೊಂದು ಏಕಾಏಕಿ ಕುಸಿದು ಬಿದ್ದ ಘಟನೆ ಶನಿವಾರ ಸಂಜೆ ಸಂಭವಿಸಿದ್ದು, ಘಟನೆ ವೇಳೆ ಚಪ್ಪರದ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಅಸೈಗೋಳಿಯ ಮೈದಾನದಲ್ಲಿ ಇತ್ತೀಚೆಗೆ ಮೊಸರು ಕುಡಿಕೆ ಉತ್ಸವ ನಡೆದಿದ್ದು ಇದಕ್ಕಾಗಿ ಶೀಟಿನ ಚಪ್ಪರವನ್ನು ಹಾಕಲಾಗಿತ್ತು. ಅಲ್ಲದೆ ಮುಂದಿನ ವಾರ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೂ ಇದೇ ಚಪ್ಪರವನ್ನು ಇಡಲು ನಿರ್ಧರಿಸಲಾಗಿತ್ತು. ಇದೇ ವೇಳೆ ಚಪ್ಪರವನ್ನು ಇನ್ನಷ್ಟು ವಿಸ್ತರಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ಸಹಿತ ಚಪ್ಪರವು ಹಠಾತ್ತನೆ ಕುಸಿದು ಬಿದ್ದಿದೆ. ಕೂಡಲೇ ಚಪ್ಪರದಡಿಯಲ್ಲಿದ್ದ ಕಾರ್ಮಿಕರು ಓಡಿ ಜೀವವನ್ನು ರಕ್ಷಿಸಿಕೊಂಡಿದ್ದಾರೆ. ಒಂದು ವೇಳೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಚಪ್ಪರ ಕುಸಿದು ಬೀಳುತ್ತಿದ್ದ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು.

Read More

UN NETWORKS ಉಳ್ಳಾಲ: ಅಂಬ್ಲಮೊಗರು ಗ್ರಾಮದ ಕೋಟೆದಡಿ ಬಾಕಿಮಾರ್ ಪರಿಸರದಲ್ಲಿ ಶನಿವಾರ ಗಾಳಿ ಮಳೆಗೆ ಮರಗಳು ಬಿದ್ದು, ಒಂದು ಮನೆ, ದೈವಸ್ಥಾನ ಮತ್ತು ಒಂದು ದನದ ಕೊಟ್ಟಿಗೆಗೆ ಹಾನಿಯಾಗಿದ್ದು ಸುಮಾರು 7 ಲಕ್ಷ ರೂ, ನಷ್ಟ ಆಂದಾಜಿಸಲಾಗಿದೆ. ಪದ್ಮನಾಭ ಕೋಟೆದಡಿ ಅವರ ಮನೆಗೆ ಹಾನಿಯಾಗಿದ್ದು ಸುಮಾರು 5 ಲಕ್ಷ ನಷ್ಟವದರೆ, ಲೋಕಯ್ಯ ಪೂಜಾರಿ ಅವರ ಮನೆಯ ಎದುರಿನ ದೈವಸ್ಥಾನಕ್ಕೆ ಹಾನಿಯಾಗಿದ್ದು, ಅಗಸ್ತಿನಾ ಡಿ.ಸೋಜ ಅವರ ಮನೆಯ ಕೊಟ್ಟಿಗೆಗೆ ಹಾನಿಯಾಗಿದ್ದರಿಂದ ಸುಮಾರು 2 ಲಕ್ಷರೂ. ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಆಂಬ್ಲಮೊಗರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದರು.

Read More

UN NETWORKS ಉಳ್ಳಾಲ:ಆರ್‍ಎಸ್‍ಎಸ್ ಕೃಪಾಪೋಷಿತ ಸಂಘಟನೆಗಳು ಇಲ್ಲಿರುವ ಮುಸ್ಲಿಂ, ಕ್ರೈಸ್ತರ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈ ಎಲ್ಲಾ ಜಾತಿಗಳು ಸಂಘಟಿತವಾದರೆ ಮಾತ್ರ ಫ್ಯಾಸಿಸ್ಟ್ ಶಕ್ತಿಗಳನ್ನು ಎದುರಿಸಲು ಸಾಧ್ಯ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅಭಿಪ್ರಾಯಪಟ್ಟರು. ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಜನತೆಯ ಅಭಿಯಾನದ ಅಂಗವಾಗಿ ಆ, 1ರಿಂದ ಆ.25ರವರೆಗೆ ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಭಾರತದ ನೋವು ಭರಿತ ರಕ್ತ ಸುರಿಯುತ್ತದೆ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ತೊಕ್ಕೊಟ್ಟು ಜಂಕ್ಷನ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆ ಹಾಗೂ ರ್ಯಾಲಿಯಲ್ಲಿ ಭಾಗವಹಿಸಿ ಪ್ರಧಾನ ಭಾಷಣ ಮಾಡಿದರು. ಗೋರಕ್ಷಣೆಯ ಹೆಸರಲ್ಲಿ ಹೊಸ ಅಜೆಂಡಾದ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ. ಇದರ ಹಿಂದೆ ಭಾರತವನ್ನು ಹಿಂದೂ ಫ್ಯಾಸಿಸ್ಟ್ ರಾಷ್ಟ್ರವನ್ನಾಗಿ ಮಾಡುವ ಸಂಘ ಪರಿವಾರ ನಡೆಸಿರುವ ಅಜೆಂಡಾದ ಭಾಗವೇ ಈ ಗುಂಪು ಹಿಂಸಾ ಹತ್ಯೆಯಾಗಿದ್ದು, ಇದರ ವಿರುದ್ಧ ಆ. 25ರಂದು ಮನೆಯಿಂದ ಹೊರಗೆ ಬನ್ನಿ…

Read More

UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಶ್ಣ ಪ್ರೌಢಶಾಲೆಯ ಸೌಜನ್ಯ ಸ್ಕೌಟ್ ದಳದ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಶ್ರೀ ಕೃಷ್ಣನ ಸಂದೇಶವನ್ನು ತಿಳಿಸಿದ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯವರು ಭಗವಾನ್ ಶ್ರೀ ಕೃಷ್ಣನ ಜೀವನಾದರ್ಶಗಳು ಮಾನವ ಬದುಕಿಗೆ ದಾರಿ ದೀಪವಾಗಿದೆ. ಈತನು ಓರ್ವ ಪರಿಸರ ಪ್ರೇಮಿ. ಪರಿಸರದಲ್ಲಿರುವ ನೀರು, ಗಾಳಿ, ಮಣ್ಣು, ಮರಗಿಡಗಳು, ಪ್ರಾಣಿ ಪಕ್ಷಿಗಳಲ್ಲಿಯೂ ದೇವತಾಂಶವಿದೆ ಎಂಬುದನ್ನು ತೋರಿಸಿಕೊಟ್ಟವನು. ನರಕಾಸುರನ ಸೆರೆಮನೆಯಿಂದ ಮುಕ್ತಗೊಳಿಸಿ ಅನಾಥ ಮಹಿಳೆಯರಿಗೆ ರಕ್ಷಣೆ ನೀಡಿದವನು. ಅನಾಥ ಮಹಿಳೆಯರ ರಕ್ಷಣೆ ನಮ್ಮ ಧರ್ಮವಾಗಿರಬೇಕು, ತ್ಯಾಗ ಮತ್ತು ಪರೋಪಕಾರ ನಮ್ಮ ದಿನನಿತ್ಯದ ಕಾರ್ಯವಾಗಿರಬೇಕು, ಭೇದ ಮರೆತು ಎಲ್ಲರೊಡಗೂಡಿ ಬದುಕುವುದೇ ನಮ್ಮ ಜೀವನವಾಗಬೇಕು ಎಂಬುದು ಭಗವಾನ್ ಶ್ರೀ ಕೃಷ್ಣನ ದಿವ್ಯ ಸಂದೇಶವಾಗಿದೆ ಎಂದು ಹೇಳಿದರು. ಪ್ರಸ್ತಾವಿಕವಾಗಿ ಮಾತನಾಡಿದ ಸಂತೋಜಕ ಸ್ಕೌಟ್ ಮಾಸ್ಟರ್ ತ್ಯಾಗಂ ರವರು ಶೈಕ್ಷಣಿಕ ವರ್ಷದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಕ್ರಿಸ್‍ಮಸ್ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಆಚರಿಸಲ್ಪಡುತ್ತಿದ್ದು, ಪ್ರತಿಯೊಂದು ಹಬ್ಬದಲ್ಲಿ ಮಹಾತ್ಮರ…

Read More

UN NETWORKS ಮುಡಿಪು: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿ ಆಡಳಿತ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಶ್ರಮಿಸುತ್ತಿದ್ದು, ಇದರ ಒಂದು ಅಂಗವಾಗಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ಮಂದಿರಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಎಸ್ ಸಿ ಡಿಸಿಸಿ ನಿರ್ದೇಶಕರಾದ ಟಿ.ರಾಜರಾಂ ಭಟ್ ಹೇಳಿದ್ದಾರೆ. ಅವರು ಕುರ್ನಾಡು ಪಂಚಾಯಿತಿನ ರೂ. 2 ಲಕ್ಷ ಅನುದಾನ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಡಿ ನಿರ್ಮಾಣವಾಗಲಿರುವ ಮುಡಿಪು ಗಣೇಶಮಂದಿರಕ್ಕೆ ಹೋಗುವ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹಲವು ವರ್ಷಗಳಿಂದ ಮಂದಿರದಲ್ಲಿ ನಡೆಯುವ ಉತ್ಸವದ ಸಂದರ್ಭಗಳಲ್ಲಿ ಹಾಗೂ ರಸ್ತೆಯನ್ನು ಅವಲಂಬಿಸಿರುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈ ಕುರಿತು ಮಂದಿರದ ಆಡಳಿತ ಪಂಚಾಯಿತಿಗೆ ಸಲ್ಲಿಸಿದ ಮನವಿಗೆ ಶೀಘ್ರವೇ ಸ್ಪಂಧಿಸಿದ ಅಧ್ಯಕ್ಷರು, ನೂತನ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯ ಸದಸ್ಯರ ಹಾಗೂ ತಾ.ಪಂ ಸದಸ್ಯರ ಶ್ರಮದಿಂದ ಶಾಶ್ವತ ರಸ್ತೆ ಕಾರ್ಯಗತವಾಗಿದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಮಾತನಾಡಿ ಕುರ್ನಾಡು…

Read More

UN NETWORKS ಉಳ್ಳಾಲ: ಭಾರತದ ಮಣ್ಣನ್ನು ಪ್ರೀತಿಸುವುದು ಮಾತ್ರ ದೇಶ ಪ್ರೇಮವಲ್ಲ ಬದಲು ದೇಶದಲ್ಲಿ ಬದುಕು ಕಟ್ಟಿಕೊಂಡ ಸರ್ವ ಜಾತಿ, ಧರ್ಮ, ಪಂಗಡಗಳ ಜನರನ್ನು ಪ್ರೀತಿಸುವುದೇ ನಿಜವಾದ ದೇಶ ಪ್ರೇಮವಾಗಿದೆ ಎಂದು ಎಸ್ಸೆಸ್ಸೆಪ್ ರಾಷ್ಷೀಯ ಸಮಿತಿ ಪ್ರಧಾನ ಕಾರ್ಯದರ್ಶಿ,ರಾಜ್ಯ ಹಜ್ಜ್ ಸಮಿತಿ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸ್ವಾತಂತ್ರೋತ್ಸವದ ಅಂಗವಾಗಿ “ದೇಶ ಉಳಿಸಿ, ದ್ವೇಷ ಅಳಿಸಿ” ಎಂಬ ಘೋಷಣೆಯೊಂದಿಗೆ ಒಂದು ತಿಂಗಳ ಆಭಿಯಾನದ ಭಾಗವಾಗಿ ನಡೆದ ಅಝಾದಿ ರ್ಯಾಲಿಯ ಸಮಾರೋಪ  ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ದೇಶಾದ್ಯಂತ ಅಸಹಿಷ್ಣುತೆ ಬೆಳೆಯುತ್ತಿದ್ದು, ಇದನ್ನು ನಿಯಂತ್ರಿಸುವುದು ಸ್ವತಂತ್ರ ಭಾರತದ ಅತೀ ದೊಡ್ಡ ಸವಾಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ವಿರುವ ವಿವಿಧ ಧರ್ಮಗಳ ಮನುಷ್ಯರನ್ನು ಪ್ರೀತಿಸುವ ಕೆಲಸವಾಗಬೇಕಿದೆ. ದೇಶದ ಮಣ್ಣನ್ನು ಮಾತ್ರ ಪ್ರೀತಿಸಿದಲ್ಲಿ ದೇಶಪ್ರೇಮವಾಗುವುದಿಲ್ಲ, ಅದನ್ನು ಕಟ್ಟಬೇಕಾದ ಜನರನ್ನು ಪ್ರೀತಿಸುವವರು ಬೆಳೆಯಬೇಕಿದೆ ಎಂದರು. ಕರ್ನಾಟಕ ಇಹ್ಸಾನ್ ಚೇರ್ ಮೆನ್ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಮುಖ್ಯ ಪ್ರಭಾಷಣಗ್ಯದರು. ಎಸ್ಸೆಸ್ಸೆಪ್ ಜಿಲ್ಲಾಧ್ಯಕ್ಷ ಕೆ.ಪಿ…

Read More

UN NETWORKS ಉಳ್ಳಾಲ: ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಅರಿವಳಿಕಾ ಶಾಸ್ತ್ರದ ಅಂತಿಮ ವರ್ಷದ ವಿದ್ಯಾರ್ಥಿನಿ ಡಾ.ಸಾರಾ ಜೈಸನ್ ಇವರು ಕರ್ನಾಟಕ ರಾಜ್ಯಮಟ್ಟದ ಅರಿವಳಿಕಾ ಶಾಸ್ತ್ರದ ಸಮಾವೇಶದಲ್ಲಿ ಉದಯೋನ್ಮುಖ ಅಧ್ಯಾಪಕ ಶೋಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Read More

UN NETWORKS ದೇರಳಕಟ್ಟೆ: ಎಸ್ ಇ ಝೆಡ್ ನಲ್ಲಿರುವ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿ. ನ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಹಾಗೂ ಹಿಂದುಸ್ತಾನ್ ಇಮಡಸ್ಟ್ರಿಯಲ್ ಸೇಫ್ಟಿ ಮತ್ತು ಮಲ್ಪೆ ಲರ್ನಿಂಗ್ ಜಂಟಿಯಾಗಿ ಶಿಬಿರವನ್ನು ಹಮ್ಮಿಕೊಂಡಿತ್ತು. ಕೆ.ಎಸ್ ಹೆಗ್ಡೆ ವೈದ್ಯಕೀಯ ವಿಭಾಗದ ಅರ್ಥಶಾಶ್ತ್ರ ಪ್ರಾಧ್ಯಾಪಕ ಶ್ರೀಪಾದ ಜಿ ಮೆಹಂದಳೆ ಅವರು ತರಬೇತಿ ನಡೆಸಿಕೊಟ್ಟರು. ಸೈಟ್ ಪ್ರಬಂಧಕ ಅವನೀಶ್ ಹಾಗೂ ಸೇಫ್ಟಿ ಅಧಿಕಾರಿ ಘನಿ ಮೊಹಮ್ಮದ್ ಉಪಸ್ಥಿತರಿದ್ದರು. 30 ಮಂದಿ ಕಾರ್ಮಿಕರು ಶಿಬಿರದಲ್ಲಿ ಪಾಲ್ಗೊಂಡರು.

Read More