ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಅಡ್ಕರೆ :ತುಳುನಾಡ ರಕ್ಷಣಾ ವೇದಿಕೆಯಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರಇದರ ನೇತ್ರತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಮಂಗಳೂರು ಸಹಭಾಗಿತ್ವ ದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಇಂದು (14-5-2017) ಬೆಳಿಗ್ಗೆ 10 :00 ಘಂಟೆ ಸರಿಯಾಗಿ ಗ್ರೀನ್ ವೀವ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಅಡ್ಕರೆ ಪಡ್ಪುವಿನಲ್ಲಿ ಬೃಹತ್ ರಕ್ತದಾನ ಶಿಭಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ತುರವೇ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು, ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ್ಯಕ್ಷರಾದ ಎಂ. ಸಿರಾಜ್ ಅಡ್ಕರೆ ಅಧ್ಯಕ್ಷತೆ ವಹಿಸಿದ್ದರು,
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತುರವೇ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ಸಾಮಾಜಿಕ ಬದುಕಿನಲ್ಲ ಮಾನವೀಯತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ನಮ್ಮ ಬದುಕುವ ಸಾರ್ಥಕ ವಾಗುತ್ತದೆ, ಬದುಕು ಮತ್ತು ಸಾವಿನ ನಡುವೆ ನಾವು ಮಾಡುವಂಥಹ ಸಾದನೆಯೇ ಅಮರ, ಮರಣದ ನಂತರ ನಮ್ಮ ಹೆಸರು ಯಾರೂ ಕರೆಯುವುದಿಲ್ಲ , ನಾವು ಸಮಾಜಕ್ಕೆ ನೀಡಿದ ಸೇವೆಯು ಅಮರವಾಗಲಿದೆ ಎಂದರು, ನಂತರ ಮಾತನಾಡಿದ ಗ್ರೀನ್ ವೀವ್ ಹಿರಿಯ ಪ್ರಾಥಮಿಕ ಶಾಲೆ ಅಡ್ಕರೆ ಪಡ್ಪು ಇದರ ಸಂಚಾಲಕರಾದ ಇಬ್ರಾಹಿಂ ಕೋಡಿಜಾಲ್ ರವರು ತುರವೇ ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ, ಎಲ್ಲರನ್ನೂ ಒಗ್ಗೂಡಿಸಿ ಸಂಘಟನೆ ನಡೆಸುವುದು ನಿಜಕ್ಕೂ ಶ್ಲಾಘನೀಯ, ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಗಳು ತುರವೇ ಯಿಂದ ಆಗಲಿ ಎಂದರು , ಕಾರ್ಯಕ್ರಮದಲ್ಲಿ ಅಡ್ಕರೆ ಪಡ್ಪುವಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶಿಕ್ಷಣ ದಾನಿ ಜನಾಬ್ ಬಿ. ಯೂಸುಪ್ ರವರಿಗೆ ಸನ್ಮಾನಿಸಲಾಯಿತು, ಹಾಗೂ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಉತ್ತಮ ಅಂಕ ಗಳಿಸ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು, ತುರವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಮುಖ್ಯಸ್ಥರಾದ ಎಡ್ವರ್ಡ್ ವಾಸ್ ಮುಂತಾದವರು ಮಾತನಾಡಿದರು, ಕಾರ್ಯಕ್ರಮದಲ್ಲಿ ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು , ತುರವೇ ಯುವ ಘಟಕದ ಜಿಲ್ಲಾಧ್ಯಕ್ಷರಾದ ಹರೀಶ್ ಶೆಟ್ಟಿ ಶಕ್ತಿನಗರ , ಮೊಹಿಯುದ್ದೀನ್ ಜುಮಾ ಮಸೀದಿ ಇದರ ಉಪಾದ್ಯಕ್ಷರಾಗಿದ್ದ ಕೆ.ಬಿ. ಹುಸೈನ್ , ಗ್ರೀನ್ ವೀವ್ ಮಹಿಳಾ ಕಾಲೇಜು ಇದರ ಪ್ರಾಂಶುಪಾಲರಾದ ಅಬೂಬಕರ್ ಕೆ. , ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುತ್ತಾರ್, ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಪಾದ್ಯಕ್ಷರಾದ ರಹೀಂ ಕುತ್ತಾರ್, ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾದ ಅರುಣ್ ಡಿಸೋಜ ಅಸೈಗೋಳಿ, ಗ್ರೀನ್ ವೀವ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್, ತುರವೇ ಕೊಣಾಜೆ ಘಟಕದ ಅದ್ಯಕ್ಷರಾದ ಮಹಮ್ಮದ್ ನಿಯಾಝ್, ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬಿ.ಪಿ. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಎ.ಬಿ. ಹಸೈನಾರ್, ಮಹಮ್ಮದ್, ಮುಂತಾದವರು ಉಪಸ್ಥಿತರಿದ್ದರು, ರಹೀಂ ಕುತ್ತಾರ್ ಸ್ವಾಗತ ಮಾಡಿದರು, ಮಹಮ್ಮದ್ ನಿಯಾಝ್ ಧನ್ಯವಾದಗೈದರು,












