UN NETWORKS ತೊಕ್ಕೊಟ್ಟು: ಭಾರತದ ಯುವಜನತೆಯ ಪೌರುಷ, ಶತ್ರು ರಾಷ್ಟ್ರದ ವಿರುದ್ಧ ಎದೆಗುಂದದ ಹೋರಾಟ ಎಂಥದ್ದು ಎಂಬುದನ್ನು ತನ್ನ ಪ್ರಾಣವನ್ನೇ ಅರ್ಪಿಸುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಜಗತ್ತಿಗೆ ಪಸರಿಸಿದ ಮಹಾನ್ ಚೇತನ ಭಗತ್ ಸಿಂಗ್‍ನದ್ದು ವಿಶಿಷ್ಠ ವ್ಯಕ್ತಿತ್ವ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ನ್ಯಾಯವಾದಿ ಕೆ. ಮೋನಪ್ಪ ಭಂಡಾರಿ ಅಭಿಪ್ರಾಯ ಪಟ್ಟರು. ತೊಕ್ಕೊಟ್ಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ದಶಮ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ ಪ್ರಯುಕ್ತ ಕೊಲ್ಯ ಸೌಭಾಗ್ಯಸದನದಲ್ಲಿ ಭಾನುವಾರ ನಡೆದ `ಕ್ರಾಂತಿವೀರನ ನೆನಪು’ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ಮಕ್ಕಳಿಗೆ ದೇಶಪ್ರೇಮಿಗಳು ಸ್ಪೂರ್ತಿಯಾಗಬೇಕು. ಸಿನಿಮಾ ನೋಡಲಿ ತಪ್ಪಿಲ್ಲ. ಆದರೆ ನಟರನ್ನೇ ಸ್ಪೂರ್ತಿ ಯಾಗಿ ತೆಗೆದುಕೊಳ್ಳಬಾರದು. ಅವರ ನಟರಷ್ಟೆ. ನಿಜವಾದ ಹೀರೋಗಳು ನಮ್ಮ ಸೈನಿಕರು. ನಮ್ಮದು ಭಗತ್ ಸಿಂಗ್ ಸಂಸ್ಕಾರ. ಭಗತ್ ಸಿಂಗ್ ವೀರ ಪುರುಷ…
Author: UllalaVani
UN NETWORKS ಇನೋಳಿ: ಪದವಿ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿಗಾಗಿ ವ್ಯವಹಾರಿಕ ಜಗತ್ತಿಗೆ ಕಾಲಿಡುತ್ತಿದ್ದು ಅಲ್ಲಿ ಯಾವುದೇ ತಪ್ಪುಗಳನ್ನು ನಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಯಾವುದೇ ಸಣ್ಣ ತಪ್ಪುಗಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಹಾಗೆಯೇ ನಾವು ಪದವೀಧರರು ಎಂಬ ಪ್ರತಿಷ್ಠೆಯನ್ನು ಮೆರೆಯದೆ ಪ್ರತಿಯೊಬ್ಬರಿಗೂ ಗೌರವಿಸುವ ಮನೋಭಾವ ಇಟ್ಟುಕೊಳ್ಳಬೇಕು ಎಂದು ಸುರತ್ಕನ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ. ಕೆ. ಉಮಾ ಮಹೇಶ್ವರ ರಾವ್ ಅಭಿಪ್ರಾಯಪಟ್ಟರು. ಮಂಗಳೂರು ಇನೋಳಿಯ ಬ್ಯಾರೀಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಕ್ಯಾಂಪಸ್‍ನಲ್ಲಿ ನಡೆದ ಬಿಐಟಿಯ ಐದನೇ ವರ್ಷದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದಿಕ್ಸೂಚಿ ಭಾಷಣಗೈದ ಸೌದಿ ಅರೇಬಿಯಾದ ಕಿಂಗ್ ಫ್ಹಾದ್ ಪೆಟ್ರೋಲಿಯಂ ಆ್ಯಂಡ್ ಮಿನರಲ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಕಮ್ಯುನಿಕೇಶನ್ ಆ್ಯಂಡ್ ಐಟಿ ರಿಸರ್ಚ್, ಸೆಂಟರ್ ಫಾರ್ ಎಕಾನಮಿಕ್ಸ್ ಆ್ಯಂಡ್ ಮೆನೇಜ್‍ಮಂಟ್ ಸಿಸ್ಟಮ್ಸ್ ನ ನಿರ್ದೇಶಕ ಡಾ. ಸಾದಿಕ್ ಸೈದ್ ಮಹಮ್ಮದ್ ಸಂಸ್ಥೆಗಳು ಉದ್ಯೋಗಿಗಳ ಜ್ಞಾನಕ್ಕಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಎಲ್ಲರೂ…
UN NETWORKS ಮಂಗಳೂರು : ಸುನ್ನೀ ಎಜ್ಯುಕೇಶನಲ್ ಡೆವಲಪ್ ಮೆಂಟ್ ಕಮಿಟಿ ಆಫ್ ಕರ್ನಾಟಕ ಇದರ ಮಹಾಸಭೆ ಇತ್ತೀಚೆಗೆ ಕಾಟಿಪಳ್ಳ ಜಾಸ್ಮೀನ್ ಮಹಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ ವಹಿಸಿದ್ದರು. ಮಜೂರು ಅಬ್ದುರ್ರಶೀದ್ ಸಖಾಫಿ ಉದ್ಛಾಟಿಸಿದರು. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಸ್ವಾಗತಿಸಿದರು. ನೂತನ ಸಮಿತಿ: ಅಧ್ಯಕ್ಷರು: ಕೆ.ಕೆ.ಎಂ. ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ, ಕೋಶಾಧಿಕಾರಿ : ಮುಫತ್ತಿಶ್ ಹಾಫಿಝ್ ಹನೀಫ್ ಮಿಸ್ಬಾಹೀ, ಉಪಾಧ್ಯಕ್ಷರುಗಳು: ಆತೂರು ಸಅದ್ ಮುಸ್ಲಿಯಾರ್, ಒ.ಕೆ.ಸಯೀದ್ ಮುಸ್ಲಿಯಾರ್, ಉರುಮನೆ ಇಸ್ಮಾಯಿಲ್ ಸಅದಿ, ಕಳಂಜಿಬೈಲು ಅಬ್ದುಲ್ ಹಮೀದ್ ಸಅದಿ, ಮಜೂರು ಅಬ್ದುಲ್ ರಶೀದ್ ಕಾಮಿಲ್ ಸಖಾಫಿ; ಕಾರ್ಯದರ್ಶಿಗಳು : ಕಣ್ಣೂರು ಉಸ್ಮಾನ್ ಸಖಾಫಿ, ಬೆಟ್ಟಂಪಾಡಿ ಅಬ್ದುಲ್ ಅಝೀಝ್ ನೂರಾನಿ, ಸೈಫುಲ್ಲಾ ಸಖಾಫಿ ಸಾಗರ, ಕೆ.ಸಿ.ರೋಡ್ ಮುಹಮ್ಮದ್ ಮದನಿ, ಸರಳಿಕಟ್ಟೆ ಮುತ್ತಲಿಬ್ ಸಖಾಫಿ; ಹಿಫಾಝತ್ ಕಮಿಟಿ ಚಯರ್ಮಾನ್ : ಆತೂರು ಸಅದ್ ಮುಸ್ಲಿಯಾರ್, ಕನ್ವೀನರ್ :…
UN NETWORKS ಉಳ್ಳಾಲ: ಅಲ್ಜೀಮರ್ ಕಾಯಿಲೆಗೆ ತುತ್ತಾದವರನ್ನು ಕಟ್ಟಿಹಾಕದೆ, ಹಿಂಸಿಸದೆ ಗೊತ್ತಿಲ್ಲದ ವಿಚಾರವನ್ನು ಕೇಳಿ ನೋಯಿಸದೆ, ಹಿಯ್ಯಾಳಿಸದೆ ಅವರೊಂದಿಗೆ ಮಾನವೀಯತೆಯಿಂದ ವರ್ತಿಸಿ ಎಂದು ಏಜ್ ಮಂಗಳೂರು ಸ್ಥಾಪಕ ಸದಸ್ಯೆ ಹಾಗೂ ಯೆನೆಪೋಯ ವೈದ್ಯಕೀಯ ವಿಭಾಗ ಮುಖ್ಯಸ್ಥೆ ಡಾ.ಪ್ರಭಾ ಅಧಿಕಾರಿ ಕಿವಿ ಮಾತು ಹೇಳಿದ್ದಾರೆ. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಮನೋವೈದ್ಯಶಾಸ್ತ್ರ ವಿಭಾಗ ಮತ್ತು ದೇರಳಕಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ವತಿಯಿಂದ ಆಸ್ಪತ್ರೆಯ ` ಕ್ಷೇಮ ಸಂಧ್ಯಾ ‘ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ `ವಿಶ್ವ ಅಲ್ಝೀಮರ್ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತಾಯಿಯಲ್ಲಿರುವ ಅಪೌಷ್ಠಿಕತೆಯಿಂದ ಹುಟ್ಟುವ ಮಗುವಿನ ಮೆದುಳು ಸರಿಯಾಗಿ ಬೆಳೆಯದೆ, ಮದ್ಯವಯಸ್ಸಿನಲ್ಲಿ ಮನಸ್ಸಿನ ಮೇಲೆ ಆಗುವ ಆಘಾತಗಳು, ಖಿನ್ನತೆಗೆ ಜಾರುವುದು, ದೂಮಪಾನ, ಮದ್ಯಪಾನಗಳಿಂದಲೂ ಅಲ್ಝೀಮರ್‍ಗೆ 65ರ ಹರೆಯಕ್ಕಿಂತ ಮೇಲ್ಪಟ್ಟವರು ತುತ್ತಾಗುವ ಸಾಧ್ಯತೆಗಳಿವೆ. ಆದರೆ ಮನಸ್ಸನ್ನು ಸದೃಢವಾಗಿರಿಸಿಕೊಳ್ಳುವ ಮೂಲಕ ರೋಗದ ತಡೆಗಟ್ಟುವಿಕೆ ಸಾಧ್ಯ. ಮನಸ್ಸು ಆರೋಗ್ಯಯುತವಾಗಿದಲ್ಲಿ ವೃದ್ಧರಾಗಲು ಅಸಾಧ್ಯ, ವೃದ್ಧಾಪ್ಯದಲ್ಲೂ ಸದಾ ಕ್ರಿಯಶೀಲತೆಯಿಂದ ಕೂಡಿ, ಎಲ್ಲರ ಜತೆಗೆ ಬೆರೆತು, ಮನಸ್ಸಿಗೆ…
UN NETWORKS ಕೊಣಾಜೆ : ಫುಟ್ಬಾಲ್ ಲೀಗ್ ನ ಆಯೋಜನೆಯಿಂದ ಹಲವು ಉತ್ತಮ ಆಟಗಾರರು ಬೆಳೆಯಲು ಸಾಧ್ಯ, ಇಂತಹ ಲೀಗ್ ಆಯೋಜಕರ ಕಾರ್ಯ ಶ್ಲಾಘನೀಯ ಮತ್ತು ಆಟದಲ್ಲಿ ತೊಡಗಿಸುವವರು ಉತ್ತಮವಾಗಿ ಶಕ್ತಿಪ್ರದರ್ಶನವನ್ನು ಪ್ರದರ್ಶಿಸಬೇಕಿದೆ ಎಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ ಮಹಮ್ಮದ್ ರಫಿ ಹೇಳಿದ್ದಾರೆ. ಅವರು ಕೊಣಾಜೆ ನಡುಪದವಿನಲ್ಲಿರುವ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಆರನೇ ಆವೃತ್ತಿಯ ` ಪಿ ಎ ಪ್ರೀಮಿಯರ್ ಲೀಗ್ -2017 ಫುಟ್ಬಾಲ್ ಪಂದ್ಯಾಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಸಹತಂಡಗಳು ಮತ್ತು ತಂಡಗಳ ಒಳಗೆ ಉತ್ತಮ ಸಂಬಂಧವನ್ನು ನಿರ್ವಹಿಸುವ ಮೂಲಕ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಪಂದ್ಯಾಟ ನಡೆಯಲು ಸಾಧ್ಯ. ಇದರಿಂದ ಆಯೋಜಕರ ಉದ್ದೇಶವೂ ಪೂರ್ಣವಾಗುವುದು ಎಂದರು. ಈ ಸಂದರ್ಭ ಪಿ.ಎ ಕಾಲೇಜಿನ ಆಡಳಿತ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ, ನಿರ್ದೇಶಕ ಕೆ.ಎಂ.ಹನೀಫ್, ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಡಾ.ಕೆ.ಎಂ ರಮೀಝ್, ಅಕಾಡೆಮಿಕ್ಸ್ ನಿರ್ದೇಶಕ ಸಫ್ರಾಝ್ ಹಾಸಿಂ.ಜೆ, ಕ್ರೀಡಾ ನಿರ್ದೇಶಕ ಇಕ್ಬಾಲ್, ಕಾಸರಗೋಡು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ನಿನ ಅಧ್ಯಕ್ಷ ಪಿ.ಸಿ.…
UN NETWORKS ತೊಕ್ಕೊಟ್ಟು: ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ` ಸಾಮರಸ್ಯ-ಸಂಘಟನೆ- ಅಭಿವೃದ್ಧಿ ಕೊಟ್ಟ ಮಾತು ದಿಟ್ಟ ಹೆಜ್ಜೆ’ ಧ್ಯೇಯ ವಾಕ್ಯದಡಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಸೆ.22 ರಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ತಿಳಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಮುಡಿಪು ಬ್ಲಾಕ್ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು. ಕೇರಳದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಸಿ.ವಿಷ್ಣುನಾದ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಸಿದ್ಧರಾಮಯ್ಯ ನೇತೃತ್ವದ ಸರಕಾರದ ಸಾಧನೆ ಮತ್ತು ಕೇಂದ್ರದ ಮೋದಿ ಸರಕಾರದ ವೈಫಲ್ಯತೆಯನ್ನು ತಿಳಿಸಲಿದ್ದಾರೆ. ಮುಂಬರುವ ಚುನಾವಣೆಯನ್ನು ಮುಂದಿಟ್ಟು ಆಯೋಜಿಸಲಾದ ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.…
UN NETWORKS ಕೊಲ್ಯ: ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ಕದ್ರಿ ಕದಲಿ ಜೋಗಿಮಠದ ಸ್ವಾಮೀಜಿಗಳು ಭೇಟಿ ನೀಡಿ ಶ್ರೀ ರಮಾನಂದ ಸ್ವಾಮೀಜಿಯವರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ಅಧ್ಯಕ್ಷ ನ್ಯಾಯವಾದಿ ಮಹಾಬಲ ಶೆಟ್ಟಿ , ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರದ ಗೌರವಾಧ್ಯಕ್ಷರಾದ ನಾರಾಯಣ ಗೋರಿಗುಡ್ಡೆ, ಕಾರ್ಯದರ್ಶಿ ನಾರಾಯಣ ಕುಂಪಲ, ಬಾಲಕೃಷ್ಣ ಕೊಲ್ಯ, ಸಂತೋಷ್ ಕುಮಾರ್ ಕನೀರು ತೋಟ, ಕೋಶಾಧಿಕಾರಿ ರಾಧಕೃಷ್ಣ ಕೊಲ್ಯ, ರಾಘವೇಂದ್ರ, ಶೇಖರ್ ಕನೀರುತೋಟ, ಮಾತೃಮಂಡಳಿಯ ಗುಣವತಿ ಟೀಚರ್, ಹಾಗೂ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡೆರೇಶನ್ ಎಸ್ ಎಸ್ ಎಫ್ ಸಪ್ಟೆಂಬರ್ 19 ಧ್ವಜ ದಿನದ ಪ್ರಯುಕ್ತ ತೊಕ್ಕೊಟ್ಟು ಹಿದಾಯತ್ ನಗರ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಹಿದಾಯತ್ ನಗರ ಮೈದಾನದಲ್ಲಿ ನಡೆಯಿತು. ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲದ ಅಧ್ಯಕ್ಷ ಹಸನ್ ಮುಬಾರಕ್ ಸಖಾಫಿ ಧ್ವಜಾರೋಹಣ ನೆರೆವೇರಿಸಿ ಎಸ್ ಎಸ್ ಎಫ್ ನ ಮಹತ್ವವನ್ನು ವಿವರಿಸಿದರು. ಉಳ್ಳಾಲ್ ನಗರ ಸಭೆಯ ಸದಸ್ಯ ಸ್ತಳೀಯ ಕೌನ್ಸಿಲರ್ ಫಾರುಕ್ ಯು.ಎಚ್ ಮಾತನಾಡಿ ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ಬಾಂದವ್ಯ ಬೆಳೆಸಿ ಕಾರ್ಯಚರಿಸಲು ಉಪದೇಶ ನೀಡಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಸಯ್ಯದ್ ಮದನಿ ದರ್ಗ ಉಳ್ಳಾಲ ಸದಸ್ಯರಾದ ಮುಹಮ್ಮದ್ , ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಸೆಕ್ಟರ್ ರಿಲೀಫ್ ಸರ್ವಿಸ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಎಸ್ ವೈ ಎಸ್ ಸದಸ್ಯರಾದ ಅಮೀರ್ ತೊಕ್ಕೊಟ್ಟು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಕಾರೊಂದು ಸ್ಕೂಟರಿಗೆ ಢಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಮಂಗಳವಾರ ಸಂಭವಿಸಿದೆ. ತಲಪಾಡಿ ನಿವಾಸಿ ಪ್ರಜ್ವಲ್ (19) ಕಾಲಿಗೆ ಗಂಭೀರ ಗಾಯವಾಗಿದ್ದು, ಸವಾರ ಕುಂಪಲ ನಿವಾಸಿ ಧನುಷ್ (22) ಎಂಬವರಿಗೂ ಗಾಯವಾಗಿದೆ. ವಿದ್ಯಾರ್ಥಿಗಳಾಗಿರುವ ಇಬ್ಬರು ಉಚ್ಚಿಲದ ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೆದ್ದಾರಿಗೆ ಬರುತ್ತಿದ್ದಂತೆ ಕೇರಳ ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
UN NETWORKS ಕುತ್ತಾರು : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕಂಕನಾಡಿ `ಡನ್ ಗ್ರೂಪ್ ‘ ಯುವಕರ ತಂಡದ ವತಿಯಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ತಂಡ ಮಂಗಳೂರಿನ ಭಗಿನಿ ಸಮಾಜ, ಪಂಪ್ ವೆಲ್ ಆಶ್ರಮ, ವಾಮಂಜೂರು ಡಂಪಿಂಗ್ ಯಾರ್ಡ್ ಕಾಲನಿ ಮಕ್ಕಳಿಗೆ ಮತ್ತು ಆರ್ಯ ಸಮಾಜದಲ್ಲಿರುವವರಿಗೆ ಹೊಸ ಬಟ್ಟೆಗಳನ್ನು ವಿತರಿಸಿದೆ. ಈ ಸಂದರ್ಭ ಗಣೇಶ್ ಮಾಡೂರು, ವಿಕ್ರಂ ಶೆಟ್ಟಿ, ನೀತು ಶೆಟ್ಟಿ, ಸೌರಜ್, ಪವನ್ ಕುಮಾರ್, ನಾಗರಾಜ್ ಕುಂಪಲ, ಉದಯ ಸುವರ್ಣ, ಚರಣ್ ಶೆಟ್ಟಿ, ಗಂಗಾಧರ ಎಕ್ಕೂರು, ಸಂಕೇತ್, ಸಂಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

