Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ದಿಲ್ ವಾಲೆ ಸಿನಿಮಾ ವೀಕ್ಷಣೆಗೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಜರಂಗದಳದ ಮುಖಂಡ ಮತ್ತು ಕಾರ್ಯಕರ್ತರ ಮೇಲೆ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ದೂರು ನೀಡಿದ ಬಗ್ಗೆ  ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾರೂಕ್ ಖಾನ್ ದೇಶದ್ರೋಹಿ ಎಂದು ಆರೋಪಿಸಿ ಭಾನುವಾರ ನಗರದ ಪಾಂಡೇಶ್ವರದ ಪಿವಿಆರ್ ಚಿತ್ರಮಂದಿರದಲ್ಲಿ ದಿಲ್ ವಾಲೆ ಚಿತ್ರವನ್ನು ನಿಲ್ಲಿಸುವಂತೆ ಬಜರಂಗಿಗಳು ಒತ್ತಾಯಿಸಿದ್ದು ನಂತರ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು.

Read More

ಹೊಸದಿಲ್ಲಿ : ವಿಮಾನ ಅಪಘಾತಕ್ಕೀಡಾಗಿ ೧೦ ಮಂದಿ ಬಿಎಸ್ಎಪ್ ಯೋಧರು ದಾರುಣವಾಗಿ ಸಾವನ್ನಪ್ಪ್ಪಿರುವ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ದ್ವಾರಕಾ ಬಳಿ ಸಂಭವಿಸಿದೆ. ಸೂಪರ್ ಕಿಂಗ್ ಹೆಸರಿನ ಬಿಎಸ್ ಎಫ್ ವಿಮಾನ ದೆಹಲಿಯಿಂದ ರಾಂಚಿಗೆ ತೆರಳುತ್ತಿತ್ತು. ಸೈನಿಕರು, ಸೇರಿದಂತೆ ಒಟ್ಟು 12 ಮಂದಿ ಇದ್ದರೆಂದು ಹೇಳಲಾಗುತ್ತಿದ್ದ ಈ ವಿಮಾನದಲ್ಲಿ ಬಿಎಸ್ ಎಫ್ ಕಮಾಂಡರ್ ಕೂಡ ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ ಇಂಜಿನಿಯರಿಂಗ್‌ ವಿಭಾಗದ 10 ಮಂದಿ ಸೈನಿಕಾಧಿಕಾರಿಗಳು ಇದ್ದರು ಎಂದು ವರದಿಯಾಗಿದೆ. ಈಗಾಗಲೇ ಎರಡು ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ 15 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದೆಂದು ಹೇಳಲಾಗುತ್ತಿದ್ದು, ಬೆಳಗ್ಗೆ 9.30 ರ ಸುಮಾರಿಗೆ ವಿಮಾನ ಗೊಡೆಯೊಂದಕ್ಕೆ ಅಪ್ಪಳಿಸಿದ್ದು ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯಾಡಳಿತ ಜನಪ್ರತಿನಿ„ಗಳ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಸಮಾವೇಶ ಮುಡಿಪು ಆಡಿಟೋರಿಯಂನಲ್ಲಿ ಡಿ. 22ರಂದು ಮಧ್ಯಾಹ್ನ ಮೂರು ಗಂಟೆ ನಡೆಯಲಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಹೇಳಿದರು. ಕುತ್ತಾರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರ ಗೆಲುವು ಖಂಡಿತ. ಪಕ್ಷದ ತತ್ವ ಹಾಗೂ ಸಿದ್ಧಾಂತದಂತೆ ನಡೆದಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರ ಪಕ್ಷ ನಿಷ್ಠೆ, ಜನರ ಜೊತೆಗಿನ ಒಡನಾಟ, ಕ್ಷೇತ್ರದ ಅಭಿವೃದ್ಧಿ ಎಲ್ಲವನ್ನೂ ಗಮನಿಸಿದಾಗ ಅವರ ಗೆಲುವು ನಿಶ್ಚಿತ ಎಂದು ನುಡಿದರು. ಪ್ರತಾಪ್‍ಚಂದ್ರ ಶೆಟ್ಟಿ ಅವರ ವಿರುದ್ಧವಾಗಿ ಈ ಹಿಂದೆ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ನಾಯಕರು ಈಗ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದು ಅಂತಹ ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಲಾಗಿದೆ. ಮುಡಿಪು ಬ್ಲಾಕ್‍ನಲ್ಲಿ 107 ಮಂದಿ ಪಂಚಾಯಿತಿ ಸದಸ್ಯರು, ನಾಲ್ಕು ಮಂದಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಒಂದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೀರಿ : ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಪವಾಡಸದೃಶವಾಗಿ ಪಾರಾದ ಘಟನೆ ಕೋಟೆಕಾರು ಸಮೀಪದ ಬೀರಿ ಚೆಕ್ ಪೋಸ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಉಪ್ಪಳ ನಿವಾಸಿ ಅಝೀಂ(23) ಪಾರಾದ ಕಾರು ಚಾಲಕ. ಮಂಗಳೂರಿನಿಂದ ಉಪ್ಪಳ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಚೆಕ್ ಪೋಸ್ಟ್ ಎದುರುಗಡೆ ರಾ.ಹೆ.ಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ತಪ್ಪಿಸಿ ಎದುರಿಗೆ ತೆರಳುತ್ತಿದ್ದಂತೆ ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಅಝೀಂ ಪವಾಡಸದೃಶವಾಗಿ ಪಾರಾದರೆ, ಬಸ್ಸಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಪೊಲೀಸರ ಜತೆ ಕುಡುಕನ ಅನುಚಿತ ವರ್ತನೆ: ಬಂಧನ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕನೋರ್ವ ಸ್ಥಳಕ್ಕೆ ಬಂದಿದ್ದ ಪೊಲೀಸರ ಜತೆಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದನು. ಮೊದಲಿಗೆ ಪೊಲೀಸರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕಲಿಕೆ ದುಡಿಮೆ ಬದುಕು ಒಂದಾಗಿಸಿದ ಮನಸ್ಸು ಕಟ್ಟುವ ಪ್ರೀತಿ ಹಂಚುವ ನವಸಾಕ್ಷರರ ಸಂಘಟನೆಯ 24 ನೇ ವರ್ಷದ ಅಕ್ಷರೋತ್ಸವ ಹಾಗೂ ಸಂಪೂರ್ಣ ಸೌರಶಕ್ತಿ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದ ವಠಾರದಲ್ಲಿ ನಡೆಯಿತು. ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ, ಸುಗ್ರಾಮ ಸಂಘ, ಅಪ್ನಾದೇಶ್, ಆದಿವಾಸಿ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ನಡೆದ ಉತ್ಸವವನ್ನು ಸೌರದೀಪ ಬೆಳಗಿಸುವ ಮೂಲಕ ನವಸಾಕ್ಷರೆ ಪ್ರೇಮ ಉದ್ಘಾಟಿಸಿದರು. ಇಡೀ ಭೂಲೋಕಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ತ್ಯಾಜ್ಯ ಮುಕ್ತ ಸ್ವಚ್ಛ ಮನೆ ಹಾಗೂ ಬಡವರ ಮನೆಗಳಿಗೆ ಸೌರ ದೀಪ ಅಳವಡಿಸಿ ಕತ್ತಲು ಮುಕ್ತ ಗ್ರಾಮ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿ ಒಮ್ಮನಸ್ಸಿನಿಂದ ಕೆಲಸ ಮಾಡುವುದು ಅಗತ್ಯ ಎಂದರು. ಸಾಕ್ಷರತೆ, ಸ್ವಚ್ಛತೆ, ಮಹಿಳಾ ಸಬಲೀಕರಣ ಹಾಗೂ ವಿಟ್ಲ ಪಡ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಸುಧಾ ಶೆಟ್ಟಿಯವರು ರಚಿಸಿದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಸಹಾಯಕ ಪೋಲಿಸ್ ಆಯುಕ್ತ ವಿನಯ.ಎಸ್.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇರಾ: ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಆರ್ಥಿಕ ಸಬಲೀಕರಣ ಸಾಧ್ಯವಿದ್ದು, ಸಮುದಾಯ ಭವನ ನಿರ್ಮಿಸುವ ಮೂಲಕ ಮಲೆಯಾಳಿ ಬಿಲ್ಲವ ಸಂಘ ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಆರ್ಥಿಕವಾದ ಸಬಲೀಕರಣಕ್ಕೆ ನಾಂದಿ ಹಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ ಕಲ್ಲಾಡಿಯಲ್ಲಿ ನಿರ್ಮಿಸಿದ ನೂತನ ಮಲೆಯಾಳಿ ಬಿಲ್ಲವ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಸಾಮಾಜಿಕವಾದ ಸಬಲೀಕರಣ ಆದರೆ ಸಾಲದು. ಸಾಮಾಜಿಕ ಸಬಲೀಕರಣ ತನ್ನಿಂತಾನೆ ಆಗುತ್ತದೆ. ಸಾಮಾಜಿಕ ಸಬಲೀಕರಣದೊಂದಿಗೆ ಆರ್ಥಿಕವಾದ ಸಬಲೀಕರಣ ಆಗಬೇಕು ಎಂದ ಅವರು ಇರಾದಂತಹ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ ಸ್ಥಾಪಿಸುವ ಮೂಲಕ ತಮ್ಮ ತ್ಯಾಗ ಮನೋಭಾವನೆಗೆ ಧಕ್ಕೆ ತರದ ರೀತಿಯಲ್ಲಿ ಯುವ ಜನಾಂಗ ಈ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗಬೇಕು ಇದರೊಂದಿಗೆ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಬೇಕು ಎಂದರು. ತೀಯಾ ಅಮೃತ ಸ್ಮರಣ ಸಂಚಿಕೆಯನ್ನು ಜಿಲ್ಲಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಸಮೀಪದ ನಡುಪದವು ಬಳಿ ಗುರುವಾರ ಅಟೋ ರಿಕ್ಷಾ ಹಾಗೂ ಸ್ಕೂಟರ್ ನಡುವೆ ನಡೆದ ಡಿಕ್ಕಿಯಲ್ಲಿ ರಿಕ್ಷಾ ನಿಯಂತ್ರಣ ತಪ್ಪಿ ಉರುಳಿ ಬಿದ್ದು ನಜ್ಜುಗುಜ್ಜಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಅದು ಅದ್ದೂರಿ ಸಾಹಿತ್ಯ ಜಾತ್ರೆಗಳ ಮಧ್ಯೆ ತಲೆ ಎತ್ತಿದ ವೈಚಾರಿಕ ನುಡಿಹಬ್ಬ. ಖಾಸಗಿ ಸಮ್ಮೇಳನಗಳಿಗೆ ಸಡ್ಡು ಹೊಡೆದ ಪ್ರಗತಿಪರರ ಅಭಿವ್ಯಕ್ತಿಯ ಸಂಗಮ. ಇಲ್ಲಿ ಖಾಸಗಿ ಸಾಹಿತ್ಯ ಜಾತ್ರೆಯ ಅದ್ದೂರಿತನವಿಲ್ಲ, ಸರ್ಕಾರಿ ಆತಿಥ್ಯದ ಆಡಂಬರವಿಲ್ಲ ಇದು ಅಭಿಮತ ಅನ್ನೋ ಸಂಘಟನೆ ಮಂಗಳೂರಿನಲ್ಲಿ ಪ್ರತಿ ವರ್ಷ ನಡೆಸುತ್ತಾ ಬರುತ್ತಿರುವ ಜನನುಡಿ ಕಾರ್ಯಕ್ರಮದ ವಿಶೇಷ. ಈ ಬಾರಿ ಮೂರನೇ ವರ್ಷದ ಅದ್ದೂರಿ ಜನನುಡಿ ಕಾರ್ಯಕ್ರಮವು ಹಿರಿಯ ಸಾಹಿತಿ ದೇವನೂರು ಮಹಾದೇವರಿಂದ ಉದ್ಘಾಟನೆಗೊಂಡಿತು.ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ನೂರಾರು ಸಮಾನಮನಸ್ಕರು ಜನನುಡಿಯ ವಿಭಿನ್ನತೆಗೆ ಸಾಕ್ಷಿಯಾಗಿದ್ದರು. ನುಡಿಜಾತ್ರೆಯಲ್ಲಿ ರಾಜ್ಯದ ಹಿರಿಯ ಸಾಹಿತಿಗಳು ಪಾಲ್ಗೊಂಡಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಮುಖ್ಯವಾಗಿ ಅದ್ದೂರಿ ಸಾಹಿತ್ಯ ಜಾತ್ರೆಗಳ ವಿರುದ್ಧ ಹುಟ್ಟಿಕೊಂಡ ಪರಿಕಲ್ಪನೆ ಅನ್ನೋ ಮಾತಿದೆ. ಅದರಲ್ಲೂ ಮೂಡಬಿದ್ರೆಯಲ್ಲಿ ಮೋಹನ್ ಆಳ್ವಾ ನಡೆಸುವ ಆಳ್ವಾಸ್ ನುಡಿಸಿರಿಯ ವಿರುದ್ಧವಾಗಿ ಹುಟ್ಟಿಕೊಂಡ ಪ್ರಗತಿಪರರ ನುಡಿಹಬ್ಬ ಎಂದರೆ ತಪ್ಪಗಲಾರದು. ಕಳೆದ ಮೂರು ವರ್ಷಗಳಿಂದ ಎರಡು ದಿನಗಳ ಕಾಲ ನಡೆಯೋ ಈ ನುಡಿ ಹಬ್ಬದಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಾಲೆಗೆ ಹೋದ ಬಾಲಕನನ್ನು ತಂಡವೊಂದು ಅಪಹರಿಸಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮಹಮ್ಮದ್ ರಾಶೀದ್ ಅಪಹರಣಕ್ಕೊಳಗಾದ ವಿದ್ಯಾರ್ಥಿ. ಡಿ.16 ರಂದು ಮನೆಯಿಂದ ಶಾಲೆಗೆ ತೆರಳಿದವನು ಮನೆಗೆ ವಾಪಸ್ಸು ಬಂದಿರಲಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿರಲಿಲ್ಲ. ಕಿಡಿಗೇಡಿಗಳು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆ ಇರುವುದಾಗಿ ಉಳ್ಳಾಲ ಠಣೆಯಲ್ಲಿ ದೂರು ನೀಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಜ್ಜಿನಡ್ಕ: ಪರವಾನಿಗೆ ಇಲ್ಲದೆ ಕೇರಳ ರಾಜ್ಯಕ್ಕೆ  ಮರಳು ಸಾಗಾಟ ನಡೆಸುತ್ತಿದ್ದ ಎರಡು ಲಾರಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಂದರ್ಭಿಕ ಚಿತ್ರ ಉಳ್ಳಾಲ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಅಜ್ಜಿನಡ್ಕ ಬಳಿ ಲಾರಿಯನ್ನು ಪರಿಶೀಲನೆ ನಡೆಸಿದಾಗ  ಪ್ರಕರಣ ಬೆಳಕಿಗೆ ಬಂದಿದೆ.  ತಲಾ 14 ಟನ್ ನಂತೆ ಎರಡು ಲಾರಿಗಳಲ್ಲಿ 28 ಟನ್  ಮರಳು ಇತ್ತು.  ಒಟ್ಟು 9,50,000 ಬೆಲೆಯ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  ಲಾರಿ ಚಾಲಕ ಜೋನಿ(48), ವಿ.ತಂಗವೇಲು(48)  ಹಾಗೂ ಕೆ.ಸಿರೋಡಿನ ಅಶ್ಫಾಕ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಮರಳು ಕಳವು ನಡೆಸಿ  ಸಾಗಾಟ ಮಾಡುತ್ತಿದ್ದರು.

Read More