ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಬಾರ್ಜ್ ಬಹುತೇಕ ಮುಳುಗುವ ಹಂತವನ್ನು ಶನಿವಾರದಂದು ತಲುಪಿದ್ದು, ಪರಿಸರ ಇಲಾಖೆ ತೈಲ ಸೋರಿಕೆ ಮುಂಜಾಗ್ರತಾ ಕ್ರಮವಾಗಿ ಬಾರ್ಜ್ ಗುತ್ತಿಗೆ ಪಡೆದುಕೊಂಡ ಧರ್ತಿ ಕಂಪೆನಿ ವಿರುದ್ಧ ಜಾರಿ ಮಾಡಿದೆ. ಜೂ.3 ರಂದು ಕಡಲ್ಕೊರೆತ ಕಾಮಗಾರಿ ಮುಗಿಸಿ ವಾಪಸ್ಸು ಮುಂಬೈ ತೆರಳಬೇಕಾಗಿದ್ದ ಬಾರ್ಜ್ ಕಡಲ್ಕೊರೆತ ಶಾಶ್ವತ ತಡೆಗೋಡೆಯಾಗಿ ಹಾಕಲಾಗಿದ್ದ ರೀಫ್ ಮೇಲಿನ ಕಲ್ಲುಗಳಿಗೆ ತಗಲಿ ಹಾನಿಯಾಗಿತ್ತು. ಸಮುದ್ರದಲ್ಲಿ ಮುಂಗಾರಿನ ಹಿನ್ನೆಲೆಯಲ್ಲಿ ಬೀಸಿದ್ದ ಗಾಳಿ ಹಾಗೂ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಘಟನೆ ಸಂಭವಿಸಿತ್ತು. ಪರಿಣಾಮ ಅಪಾಯದಲ್ಲಿ ಸಿಲುಕಿದ್ದ 27 ಮಂದಿ ನೌಕರರನ್ನು ರಕ್ಷಿಸಲಾಯಿತಾದರೂ, ಬಾರ್ಜ್ ಮಾತ್ರ ಮೇಲೆತ್ತಲು ಸಾಧ್ಯವಾಗಲಿಲ್ಲ. ಈ ನಡುವೆ ಬಾರ್ಜ್ ಒಳಗಡೆಯಿದ್ದ ಡಿಸೀಲ್ ಸೋರಿಕೆಯಾಗಿದೆ ಅನ್ನುವ ಮಾಹಿತಿ ಸ್ಥಳೀಯರು ವ್ಯಕ್ತಪಡಿಸಿದ್ದರು. ಎಚ್ಚೆತ್ತುಕೊಂಡ ಪರಿಸರ ಇಲಾಖೆ : ಘಟನೆ ನಡೆದು ಐದು ದಿನಗಳಾದ ಬಳಿಕ ಜೂ.7 ರಂದು ಪರಿಸರ ಇಲಾಖೆ ಧರ್ತಿ ಕಂಪೆನಿ ವಿರುದ್ಧ ವರದಿ ನೀಡುವಂತೆ ನೋಟೀಸು ಜಾರಿ ಮಾಡಿತ್ತು. ಪರಿಸರ ಮತ್ತು…
Author: UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಂಝಾನ್ ಉಪವಾಸದ ಸಮಯದಲ್ಲಿ ಬಡವರಿಗೆ ನೀಡುವ ದಾನಕ್ಕೆ ಬಹಳಷ್ಟು ಮಹತ್ವತೆ ಇದೆ. ಇಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮ ಏರ್ಪಡಿಸಿದರೆ ಅದು ಯಶಸ್ವಿ ಕಾಣಲು ಸಾಧ್ಯ ಎಂದು ಎಸ್.ವೈ.ಎಸ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಖಾದರ್‍ಸಖಾಫಿ ಕಾಟಿಪ್ಪಾರ ಹೇಳಿದರು. ರಂಜಾನ್ ತಿಂಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ಆರಾಧನೆಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು. ಅವರು ಸಮಸ್ತ ಕೇರಳ ಸುನ್ನೀ ಯುವಜನ ಸಂಘ ಬಾಕ್ರಬೈಲ್ ಸರ್ಕಿಲ್ ಸಮಿತಿಯ ಆಶ್ರಯದಲ್ಲಿ ಬದಿಮಾಲೆ ಪಾತೂರಿನಲ್ಲಿ ರಂಜಾನ್ ಪ್ರಯುಕ್ತ ನಡೆದ ರಂಜಾನ್ ಸಂದೇಶ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ಬಾಕ್ರಬೈಲ್ ಸರ್ಕಿಲ್ ಸಮಿತಿಯ ಉಪಾಧ್ಯಕ್ಷ ಶರೀಫ್ ಸಅದಿ ನೆರವೇರಿಸಿದರು.ಪಾತೂರು ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‍ವೈಎಸ್ ಬಾಕ್ರಬೈಲ್ ಸರ್ಕಿಲ್ ಕಾರ್ಯದರ್ಶಿ ರಫೀಕ್ ಲತೀಫಿ ಸ್ವಾಗತಿಸಿದರು.ಮಹಮ್ಮದ್ ಸಖಫಿ ಧನ್ಯವಾದ ಸಮರ್ಪಿಸಿದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಭಾನುವಾರ ರಾತ್ರಿ ಸುರಿದ ಮಳೆಗೆ ಪಿಲಾರು ಬಳಿ ಗುಡ್ಡ ಕುಸಿದು ನಿರ್ಮಾಣ ಹಂತದ ಮನೆ ಸೇರಿದಂತೆ ಎರಡು ಮನೆಗೆ ಹಾನಿಯಾಗಿದ್ದು, ಹರೇಕಳ ಮತ್ತು ಕುತ್ತಾರ್‍ನಲ್ಲಿ ಎರಡು ಮನೆಗಳ ಆವರಣ ಗೋಡೆ ಕುಸಿದು ಹಾನಿಯಾಗಿದೆ. ಪಿಲಾರ್ ಮಸೀದಿ ಬಳಿ ನಿವಾಸಿ ಟಿ. ಇಬ್ರಾಹಿಂ ಅವರ ಮನೆಗೆ ಹಾನಿಯಾಗಿದ್ದು, ಮನೆಯ ಪಕ್ಕದ ನಿರ್ಮಾಣ ಹಂತದ ಮನೆಗೆ ದಾಸ್ತಾನಿರಿಸಿದ್ದ ಕಲ್ಲು ಸೇರಿದಂತೆ ಇತರ ಸಾಮಾಗ್ರಿಗಳು ಮಣ್ಣಿನೊಳಗೆ ಹೂತು ಹೋಗಿದೆ. ಹರೇಕಳದಲ್ಲಿ ಪದ್ಮಾವತಿ ಮತ್ತು ಕುತ್ತಾರ್‍ನಲ್ಲಿ ಕಿಶೋರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮನೆ ಅಪಾಯದಲ್ಲಿದೆ. ತಪ್ಪಿದ ದುರಂತ : ಪಿಲಾರ್ ತಡರಾತ್ರಿ ಗುಡ್ಡ ಕುಸಿತದಿಂದ ಟಿ. ಇಬ್ರಾಹಿಂ ಅವರ ಮನೆಗೆ ಹಾನಿಯಾಗಿದ್ದು, ಘಟನಾ ಸಂದರ್ಭದಲ್ಲಿ ಮನೆಯಲ್ಲಿ ಅವರ ಪತ್ನಿ ಮತ್ತು ಪುತ್ರಿ ಮಾತ್ರ ಇದ್ದು, ಯಾವುದೇ ಅಪಾಯಗಳಾಗಿಲ್ಲ. ಗುಡ್ಡ ಕುಸಿತದಿಂದ ಮನೆಯ ಅಡುಗೆಕೋಣೆ, ಬೆಡ್‍ರೂಂಗೆ ಹಾನಿಯಾಗಿದ್ದು ಮನೆ ಬಿರುಕು ಬಿಟ್ಟಿದೆ. ಭಟ್ಕಳ ಮೂಲದ ವ್ಯಕ್ತಿಗೆ ಸೇರಿದ ಈ ಜಾಗದಲ್ಲಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‍ನ ಸಿಬಿಎಸ್‍ಸಿ ಪರೀಕ್ಷೆಗೆ ಹಾಜರಾದ ಎಲ್ಲಾ 83 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 100 ಪಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಹರ್ಷಿತಾ ಎನ್. ಶೆಟ್ಟಿಗಾರ್, ಕವನ, ಜೀತನ್ ಪ್ರೆನೋಲ್ ವಿನ್ಸೆಂಟ್ ಡಿ.ಸೋಜ, ಶೃಜನ್‍ರಾಜ್ ಶೆಟ್ಟಿ 10 ಅಂಕಗಳನ್ನು ಪಡೆದಿದ್ದು, ರೆನ್ವಿಲ್ ಡಿ.ಸೋಜಾ(9.8), ಅಶಿಯಾ ನಿಶ್ಮಾ (9.8), ಕೀರ್ತಿ ರೋಹಿತ್ ಗಟ್ಟಿ (9.8), ಮಹಮ್ಮದ್ ಆಶಿಕ್ ರಹಿಮಾನ್ (9.8), ವರ್ಷಾ ಆರ್. ಶೆಟ್ಟಿ (9.6), ಅಶಿಯಾ ಝಿಯಾ (9.4), ಫಿದಾ ರುಕಿಯಾ(9.4), ಪ್ರೇಕ್ಷಾ ಎನ್.ವಿ.(9.2), ಜೀವನ್ ರೋಯ್ಟನ್ ಡಿ.ಸೋಜ (9.2), ಎಂ. ಸುಶಾಂತ್ ಎಸ್. ನಾಯಕ್ (9.2), ಅಯಿಶತ್ತುಲ್ ಅನ್ವೀಜಾ (9.0), ಫಾತಿಮಾ ತಸ್ಮಾ (9.0) ಅಂಕಗಳನ್ನು ಪಡೆದಿದ್ದಾರೆ, 14 ವಿದ್ಯಾರ್ಥಿಗಳು 8.8 ರಿಂದ 8 ಅಂಕಗಳನ್ನು ಪಡೆದಿದ್ದು 16 ವಿದ್ಯಾರ್ಥಿಗಳು 7.8 ರಿಂದ 7 ಅಂಕಗಳನ್ನು ಪಡೆದಿದ್ದಾರೆ ಹಾಗೂ 23 ವಿದ್ಯಾರ್ಥಿಗಳು 6.8 ರಿಂದ 6 ಅಂಕಗಳನ್ನು 14 ವಿದ್ಯಾರ್ಥಿಗಳು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ತೊಕ್ಕೊಟ್ಟು ಕಲ್ಲಾಪು ಪೀಸ್ ಪಬ್ಲಿಕ್ ಸ್ಕೂಲ್ ಸತತ ನಾಲ್ಕನೇ ಬಾರಿಗೆ ಶೇ 100 ಪಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ನಿಗಾಹ್ ರೆಹೆಮ್ ಶೇಖ್ ಮತ್ತು ನಿಶ್ಮಾ 10 ಅಂಕಗಳನ್ನು ಗಳಿಸಿದ್ದು, ಎಂ.ಎಂ. ಝಿಲೈಕಾ ಶೆಝಿಲ್(9.8), ಅಧಾ ಅತಿಖಾ(9.8), ಮುಹಮ್ಮದ್ ಹಾಸಿರ್ (9.6), ರಾಹಿಲ್ (9.6), ಅಂಕಗಳನ್ನು ಪಡೆದಿದ್ದಾರೆ. ಎಂ. ಅರ್ಫಾಝ್ (9.4), ರಸಿಕ್ (9.4), ಮರಿಯಮ್ ರಾಹಿಲಾ (9.4), ಹಿಫ್‍ಝುಲ್‍ಹುಸೈನ್ (9.2), ಅಬ್ದುಲ್ ಮುಕೀತ್ (9.0), ತಮ್‍ಶೀಲ್ ಹಿಲಾಲ್‍ಅಬ್ದುಲ್ ಖಾದರ್ (9.0) ಅಂಕಗಳನ್ನು ಪಡೆದಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಗ್ರಾಮದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸ್ಥಳೀಯ ಅರ್ಹ ಮೂರು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೆರವಿಗಾಗಿ ಬಿಲ್ಲವ ಬಳಗ(ರಿ) ಕೊಣಾಜೆ ಇದರ ವತಿಯಿಂದ ಧನ ಸಹಾಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅವಿನಾಶ್ ಪೂಜಾರಿ ಪೊಳಲಿ, ಭರತ್ ಮಂಜನಾಡಿ, ಕೊಣಾಜೆ ಪಂಚಾಯಿತಿ ಸದಸ್ಯರಾದ ಹರಿಶ್ಚಂದ್ರ ಶೆಟ್ಟಿಗಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವರದ್‍ರಾಜ್ ಕೊಣಾಜೆ, ಬಿಲ್ಲವ ಸಂಘದ ಪ್ರಮುಖರಾದ ಸುಭಾಷ್ ಧರ್ಮನಗರ, ವಿಜಯ ಪಾವೂರು, ಚಂದ್ರಹಾಸ್ ಬಂಗೇರ, ಚಂದ್ರಹಾಸ್ ಅಮೀನ್ ಹರೇಕಳ, ಜಯಾನಂದ ಅಮೀನ್ ಕಿಲ್ಲೂರು, ನವೀನ್ ಮುಟ್ಟಿಂಜ, ಬಿಲ್ಲವ ಬಳಗದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷರಾದ ಶಿವಪ್ಪ ಕಂಬಳಕೋಡಿ,ಸದಸ್ಯರಾದ ಪುಷ್ಪರಾಜ್, ಜಯರಾಜ್ ಪ್ರಕಾಶ್ ಆರ್ಯ, ನಾರಾಯಣ, ಹೇಮಂತ್, ಕೃಷ್ಣ, ಅರುಣ್ ಪಟ್ಲ, ಪುರುಷೋತ್ತಮ ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮಾಹಿತಿ ನೀಡುವುದರೊಂದಿಗೆ ಆರೋಗ್ಯದ ಚಿಂತನೆಯಲ್ಲಿ ಸಂಘ ಸಂಸ್ಥೆಗಳು ಕೈ ಜೋಡಿಸಿದರೆ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಸಂತೃಪ್ತಿ ಸೇವಾ ಟ್ರಸ್ಟ್ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಸಂತೃಪ್ತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಪಜೀರು ಗ್ರಾಮ ಪಂಚಾಯತ್ ಪಜೀರು ಇದರ ಉಚಿತ ವೈದ್ಯಕೀಯ ಶಿಬಿರ ಮತ್ತು ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ದೇವದಾಸ್ ಕಾಮತ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಯೇನೆಪೋಯ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಡಾ| ಪೂನಂ ನಾಯಕ್, ಪಜೀರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ| ಸ್ಮಿತಾ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸೇಸಪ್ಪ ಟೈಲರ್, ಎಪಿಎಮ್‍ಸಿ ಸದಸ್ಯ ಉಮರ್ ಪಜೀರು, ಪಜೀರು ಸಂತ ಮರಿಯಮ್ಮನವರ ಚರ್ಚ್ ನ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಿಲ್ಲವಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆಯ ಕಾರ್ಯಕ್ರಮವು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರಗಿತು. ಕಾರ್ಯಕ್ರಮವನ್ನು ಡಾ| ಅಮಿತ್ ರಾಜ್ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಹಾಗೂ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇದು ಉಳಿದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದೆ ಬರಲು ಪ್ರೇರಣೆಯಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಲಪಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ ವಿಶ್ವನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಟ್ರಾನ್ಸ್ ಪೋಟ್ರ್ಸ್ ಪಣಂಬೂರಿನ ಹರೀಶ್ ಉಳ್ಳಾಲ ಬೈಲು, ಕರ್ಣಾಟಕ ಬ್ಯಾಂಕ್‍ನ ಅಧಿಕಾರಿ ಮಯೂರ್ ಜಿ.ಕೆ. , ಬ್ರಹ್ಮಶ್ರೀ ನಾರಾಯಣ ಗುರು ಯುವ ಸಂಚಲನ ಬೆಳರಿಂಗೆ ಕಿನ್ಯ ಇದರ ಸ್ಥಾಪಕ ಅಧ್ಯಕ್ಷ ಜಯಂತ ಎಂ. ಪೂಜಾರಿ, ಕಿಚನ್ ವಲ್ರ್ಢ್ ಮಂಗಳೂರು ಇದರ ಮಾಲಕ ಜಯಂತ್ , ಶ್ರೀ ದುರ್ಗಾ ಫುಡ್ ಬೈಕಂಪಾಡಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೈರಂಗಳ: ಸಸ್ಯಗಳಿಲ್ಲದೇ ನಮಗೆ ಬದುಕಿಲ್ಲ, ದೇಶದ ಉಳಿವಿಗೆ ಸಸ್ಯ ಸಂಪತ್ತು ಉಳಿಯಬೇಕು, ಬೆಳೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕೆಂದು ಖ್ಯಾತ ವಿಜ್ಞಾನಿ ಪಟಿಕಲ್ಲು ಶಂಕರ ಭಟ್ ಕರೆ ನೀಡಿದರು. ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಂಕರ ಭಟ್‍ರವರು ಪ್ರಕೃತಿಯಲ್ಲಿ ಗಿಡಮರಗಳು ಜನರ ಜೀವನಕ್ಕೆ ಹೇಗೆ ಸಹಕಾರಿಯಾಗುತ್ತವೆ ಎಂದು ಹೇಳಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಸಂಚಾಲಕರು ವನಮಹೋತ್ಸವದಂದು ನೆಟ್ಟ ಗಿಡಗಳನ್ನು ವಿದ್ಯಾರ್ಥಿಗಳು ದತ್ತು ಪಡೆದುಕೊಂಡು ಅವುಗಳನ್ನು ಸಂರಕ್ಷಿಸುವ ಜವಬ್ಧಾರಿ ಹೊತ್ತಕೊಳ್ಳುವಂತೆ ಕರೆ ನೀಡಿದರು. ಶಾಲಾ ಮುಖ್ಯೋಪಧ್ಯಾಯ ಎಂ. ಸೋಮಶೇಖರ್ ವಂದಿಸಿದರು. ಹಸಿರು ಪಡೆಯ ಸಂಚಾಲಕರಾದ ಉಪನ್ಯಾಸಕಿ ದಿವ್ಯದೀಪ ಇವರ ಸಂಚಾಲನೆಯಲ್ಲಿ ಕಾರ್ಯಕ್ರಮ ನೆರವೇರಿತು. ಶಾಲೆಯ ಉಪನ್ಯಾಸಕ ವೃಂದ, ಶಿಕ್ಷಕ ವೃಂದದವರು ಹಾಗೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಟಿಪ್ಪರ್ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿರುವ ಘಟನೆ ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಕಾರಿಗೆ ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲ್ಲಾಪು , ಕುದ್ರು ಸಮೀಪ ಮಣ್ಣು ಹೇರಿಕೊಂಡು ಟಿಪ್ಪರ್ ಲಾರಿ ಅವ್ಯಾಹತವಾಗಿ ಸಾಗುತ್ತಿದ್ದು, ಹಲವು ಬಾರಿ ಅವಘಢಗಳಿಗೆ ಕಾರಣವಾಗುತ್ತಿದೆ. ಉಳ್ಳಾಲ ಪೊಲೀಸರು ಟಿಪ್ಪರ್ ಲಾರಿ ಚಾಲಕರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

