ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವಿಧಾನ ಪರಿಷತ್ ಸದಸ್ಯರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಸ್ಥಳೀಯ ಜನಪ್ರತಿನಿ„ಗಳು ಬಹುಳ ಉತ್ಸುಕತೆಯಿಂದಲೇ ಬೆಳಗ್ಗೆಯೇ ಮತಹಾಕುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ಅದಾಗ್ಯೂ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 99.5ಶೇ. ಮತ ಚಲಾವಣೆ ಆಗಿದ್ದು ಪುದು ಗ್ರಾಮ ಪಂಚಾಯಿತಿಯ ಸದಸ್ಯೆ ಲಿಡಿಯಾ ವಿದೇಶದಲ್ಲಿದ್ದ ಕಾರಣ ಒಂದು ಮತ ಚಲಾವಣೆ ಆಗಿಲ್ಲ. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಉಳ್ಳಾಲ ನಗರ ಸಭೆ, ಸೋಮೇಶ್ವರ, ತಲಪಾಡಿ, ಕಿನ್ಯ, ಮಂಜನಾಡಿ, ಬೆಳ್ಮ, ಮುನ್ನೂರು, ಅಂಬ್ಲಮೊಗರು, ಕೊಣಾಜೆ, ಹರೇಕಳ, ಪಾವೂರು, ಬೋಳಿಯಾರು, ನರಿಂಗಾನ, ಬಾಳೆಪುಣಿ, ಇರಾ, ಸಜಿಪ ಪಡು, ಕುರ್ನಾಡು, ಪಜೀರು, ಸಜಿಪ ನಡು, ಪುದು, ಮೇರೆಮಜಲು ಹಾಗೂ ತುಂಬೆ ಪಂಚಾಯಿತಿ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು ಪುದು ಗ್ರಾಮ ಪಂಚಾಯಿತಿಯ ಸದಸ್ಯೆಯೊಬ್ಬರ ಗೈರು ಮಾತ್ರ ಕಂಡಿದೆ. ಉಳ್ಳಾಲ ನಗರ ಸಭೆಯ ಸದಸ್ಯರಾದ ಉಸ್ಮಾನ್ ಕಲ್ಲಾಪು ಹಾಗೂ ಬಾಜಿಲ್ ಡಿಸೋಜ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರಿಗೆ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿದ್ಯಾರ್ಥಿಗಳೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿದಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಹೆತ್ತವರು ಕೇವಲ ಸಂಪತ್ತನ್ನು ಗಳಿಸುವ ಬದಲಿಗೆ ಮಕ್ಕಳನ್ನೇ ಸಂಪತ್ತನ್ನಾಗಿ ಬೆಳೆಸಿದಾಗ ಮುಂದಿನ ದಿನಗಳಲ್ಲಿ ಸದೃಡವಾದ ಸಮಾಜ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಅಭಿಪ್ರಾಯಪಟ್ಟರು. ಅವರು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ದೇರಳಕಟ್ಟೆ ಇದರ ಧರ್ಮಗುರು ಅಬ್ದುಲ್ ನಾಸೀರ್ ಫೈಝಲ್, ಸಾಮಾಜಿಕ ಮುಂದಾಳು ಟಿ.ಎಸ್. ಅಬ್ದುಲ್ಲಾ, ಸಂಸ್ಥೆಯ ಕೋಶಾಧಿಕಾರಿ ರತ್ನಾವತಿ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ಚಂದನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತಂತ್ರಜ್ಞಾನದ ವೇಗಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಆದರಲ್ಲೂ ವಾಟ್ಸ್‍ಆ್ಯಪ್ ಹಾಗೂ ಫೇಸ್‍ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಿಪ್ರಗತಿಯಲ್ಲಿ ಹರಿದಾಡುವ ಸುದ್ದಿಗಳಿಂದಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಕಾಪಿಕಾಡಿನ ಅಂಬಿಕಾರೋಡಿನಲ್ಲಿರುವ ಗಟ್ಟಿ ಸಮಾಜಭವನದಲ್ಲಿ ಶನಿವಾರ ತೊಕ್ಕೊಟ್ಟಿನ ಪೆÇಸಕುರಲ್ ಬಳಗದ ಆಶ್ರಯದಲ್ಲಿ ನಡೆದ ಪೋಸಕುರಲ್ ದೃಶ್ಯ ಮಾಧ್ಯಮದ 12ನೆಯ ವಾರ್ಷಿಕ ಸಮಾರಂಭ ಉದ್ಘಾಟಿಸಿ ಹದಿಮೂರು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಹದಿನೈದು ವರುಷಗಳ ಹಿಂದೆ ಒಂದು ಸುದ್ದಿ ಜನರಿಗೆ ತಿಳಿಯಲು ರೇಡಿಯೋ, ಪತ್ರಿಕೆ ಹಾಗೂ ಟಿವಿ ಜನರಿಗೆ ಬಹಳ ಹತ್ತಿರದ ಮಾಧ್ಯಮವಾಗಿತ್ತು. ಆದರೆ ಈಗ ಕೈಬೆರಳ ತುದ್ದಿಯಲ್ಲಿ ಸುದ್ದಿಯನ್ನು ತಿಳಿಯಲು ಸಾಧ್ಯವಾಗಿದೆ. ಅದು ತಂತ್ರಜ್ಞಾನದ ಪ್ರಭಾವವಾದರೆ ತುಳು ಭಾಷೆಯ ಮೂಲಕ ತುಳುನಾಡಿನ ಎಲ್ಲ ಧರ್ಮಗಳ ಸಂಸ್ಕಾರ ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವನ್ನು ಪೆÇಸಕುರಲ್ ಮಾಡುತ್ತಾ ಬಂದಿದೆ. ಸಮಾಜವೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ವಾರದ ಹಿಂದೆ ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕುಂಪಲ ಹನುಮಾನನಗರ ನಿವಾಸಿ ತಾನೇಶ್ (28) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ. ಮಂಗಳಾದೇವಿಯಲ್ಲಿ ಟೈಲರ್ ಅಂಗಡಿಯನ್ನು ಹೊಂದಿರುವ ತಾನೇಶ್ ಅವರು ಡಿ.18ರ ಸಂಜೆ ಕೆಲಸ ಮುಗಿಸಿ ಕುಂಪಲದ ಮನೆ ಕಡೆಗೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿತ್ತು. ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಸಂದರ್ಭ ತಾನೇಶ್ ಅವರು ನಿಯಂತ್ರಣ ಕಳೆದು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸ್ವಲ್ಪ ಗಾಯಗೊಂಡ ಮಹಿಳೆಯನ್ನು ತಾನೇಶ್ ಅವರೇ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತನ್ನ ಸಹೋದರರಿಗೆ ಅಪಘಾತವಾದ ವಿಚಾರವನ್ನು ತಿಳಿಸಿದ್ದರು. ಆಸ್ಪತ್ರೆಗೆ ಬಂದ ಸಹೋದರರು ತಾನೇಶ್ ಅವರ ತಲೆಗೂ ಗಾಯ ಆಗಿರುವುದನ್ನು ಗಮನಿಸಿ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವಿಪರೀತ ತಲೆಯೊಳಗೆ ಆಗಿರುವ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ತಮ್ಮ ಸ್ವಕ್ಷೇತ್ರ ಉಳ್ಳಾಲ ಇಲ್ಲಿನ ಉಳ್ಳಾಲದ ನಗರಸಭೆಯಲ್ಲಿ ವಿಧಾನಪರಿಷತ್ ಚುನಾವಣೆಯ ಮತ ಹಾಕಿದರು. ಮಂಗಳೂರಿನ ತಾಲೂಕು ಪಂಚಾಯಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮತ ಚಲಾವಣೆ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ಸಚಿವರು ಅಲ್ಲಿ ತಮ್ಮ ಮತಪಟ್ಟಿಯಲ್ಲಿ ಹೆಸರು ಇರದೆ ಉಳ್ಳಾಲ ನಗರಸಭೆಯತ್ತ ದೌಡಾಯಿಸಬೇಕಾಯಿತು. ಉಳ್ಳಾಲದ ನಗರಸಭೆಯಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಂದ ಆಯ್ಕೆಗೊಳ್ಳಲಿರುವಂತಹ ವಿಧಾನಪರಿಷತ್ ನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರ ಪರವಾಗಿ ಮತ ಚಲಾಯಿಸಿದ್ದೇನೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಕಾಂಗ್ರೆಸ್ ನ ಅಭ್ಯರ್ಥಿಗಳನ್ನೇ ಸ್ಥಳೀಯ ಜನಪ್ರತಿನಿಧಿಗಳು ಚುನಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ. ಗ್ರಾ.ಪಂ, ಜಿ.ಪಂ, ತಾ.ಪಂ ಇವರು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸಲು ಅಧಿಕಾರ ಮತ್ತು ಶಕ್ತಿಯನ್ನು ಕೊಟ್ಟಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಮುಖ್ಯಮಂತ್ರಿಯವರು ಸಮಿತಿಯೊಂದನ್ನು ರಚಿಸಿ ಸ್ಥಳೀಯ ಸಂಸ್ಥೆಗಳ ಕುಂದು ಕೊರತೆಗಳನ್ನು ಬಗೆಹರಿಸಿದ್ದಾರೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಾಪಿಕಾಡು: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಸಂಗಮದಂತಹ ಕಾರ್ಯಕ್ರಮಗಳು ಪೂರಕ ಎಂದು ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ ಉಳ್ಳಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟಿನ ಪೆÇಸಕುರಲ್‍ನ ಇದರ 12ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ನಡೆದ ಪೆÇಸಕುರಲ್ ಬಳಗ, ರೋಟರಿ ಸಮುದಾಯ ದಳ, ಕೊಲ್ಯ ಸೋಮೇಶ್ವರ, ರೋಟರಿ ಕ್ಲಬ್ ದೇರಳಕಟ್ಟೆ, ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಉಳ್ಳಾಲ ತೊಕ್ಕೊಟ್ಟು ಇದರ ಆಶ್ರಯದಲ್ಲಿ ಉಳ್ಳಾಲ ವಲಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಜಾಗೃತ ವಿವಿದ್ದೋದ್ಧೇಶ ಸಹಕಾರಿ ಸಂಘ ಅಧ್ಯಕ್ಷ ರಘುಚಂದ್ರ ಬಳ್ಳಾಲ್, ರೋಟರಿ ಕ್ಲಬ್ ದೇರಳಕಟ್ಟೆ ಅಧ್ಯಕ್ಷ ಡಿ. ಎನ್. ರಾಘವ, ರೋಟರಿ ಸಮುದಾಯದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ಶಶಿಕಾಂತ್ ಪರ್ಯತ್ತೂರು, ಭಗತ್‍ಸಿಂಗ್ ಸೇವಾ ಪ್ರತಿಷ್ಟಾನ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವ ಶಿಕ್ಷಣ ಸಿಕ್ಕಾಗ ಅವರು ಮುಂದಿನ ದಿನಗಳಲ್ಲಿ ಈ ದೇಶಕ್ಕೆ ಕೀರ್ತಿ ತರುವ ಕೆಲಸಕ್ಕೆ ಮುಂದಾಗುತ್ತಾರೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಪರಿಪೂರ್ಣ ಶಿಕ್ಷಣ ನೀಡಿದಾಗ ಆ ವಿದ್ಯಾರ್ಥಿಗಳು ಮುಂದಕ್ಕೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸುವುದರಲ್ಲಿ ಸಂಶಯವಿಲ್ಲ. ಅಂತಹ ಶಿಕ್ಷಣದ ಪ್ರಭಾವದಿಂದ ಪ್ರಪಂಚ ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ನೋಡುವಂತೆ ಮಾಡಿದ್ದು ಶಾರದಾ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಶ್ಲಾಘನೀಯ ಎಂದು ವಿಧಾನ ಪರಿಷತ್‍ನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಶಾರದಾ ವಿದ್ಯಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ ತಲಪಾಡಿ ಕಿನ್ಯ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ದಶಮ ಸಂಭ್ರಮ ಹಾಗೂ ಹೊನಲು ಬೆಳಕಿನ ಕ್ರೀಡೋತ್ಸವ-2015ನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ದೇಶದ ಪ್ರಗತಿಯನ್ನು ಕೇವಲ ಆರ್ಥಿಕ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸುವಂತಿಲ್ಲ. ಎಲ್ಲ ವಿಧದಲ್ಲೂ ಸಮಗ್ರ ಅಭಿವೃದ್ಧಿ ಸಾಧಿಸಿರಬೇಕು. ಆ ದಿಸೆಯಲ್ಲಿ ಭಾರತ ಪ್ರಪಂಚಕ್ಕೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾನೀರ್: ಮಕ್ಕಳ ಕಣ್ಣು ಪ್ರಕಾಶಿಸಿದರೆ ದೇಶ ಪ್ರಕಾಶಿಸಿದಂತೆ, ಈ ನಿಟ್ಟಿನಲ್ಲಿ ಹೆತ್ತವರು, ಪೋಷಕರು ಮಕ್ಕಳ ಕಣ್ಣು ಪ್ರಕಾಶಿಸುವಂತೆ ಮಾಡಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಪಾನೀರ್ ಮರ್ಸಿದೆ ಆಶ್ರಮ ಹಾಗೂ ಮಂಗಳೂರಿನ ಮಾ ಕ್ರಿಯೇಶನ್ ಜಂಟಿ ಆಶ್ರಯದಲ್ಲಿ ಶುಕ್ರವಾರ ಪಾನೀರ್ ಆಶ್ರಮದಲ್ಲಿ ನಡೆದ ಕ್ರಿಸ್‍ಮಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೊಬ್ಬನ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವುದು ಏಸು ಕ್ರಿಸ್ತರ ಸಂದೇಶವಾಗಿದೆ. ಅದನ್ನು ಪಾಲಿಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ. ಮನುಷ್ಯ ಯಾರಿಗೂ ಉಪಕಾರ ಮಾಡದೆ ತಾನೊಬ್ಬನೇ ಬದುಕಬೇಕೆನ್ನುವ ಹಂಬಲ ಇದ್ದರೆ ಯಾವುದೇ ಕಷ್ಟ ಪಡಬೇಕಿಲ್ಲ. ಆದರೆ ಇಂತಹ ಭಾವನೆಯಿಂದ ಹೊರಬಂದು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮರ್ಸಿದೆ ಆಶ್ರಮದ ಮುಖ್ಯಸ್ಥೆ ಸಹೋದರಿ ಲೂಸಿಯಾನ ಅವರನ್ನು ಸನ್ಮಾನಿಸಲಾಯಿತು. ಪಾನೀರ್ ಚರ್ಚ್ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್, ಉದ್ಯಮಿ ಜೋಸೆಫ್ ಮಥಾಯಿಸ್, ಅರ್ಸುಲಿನಾ ಫ್ರಾನ್ಸಿಸ್ ಸಂಸ್ಥೆಯ ಸಲಹೆಗಾರರಾದ ಲಿಲ್ಲಿ ಫೆರ್ನಾಡೀಸ್, ರೀಟಾವಾಸ್, ಉದ್ಯಮಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಬಿಜೆಪಿ ಕ್ಷೇತ್ರ ಸಮಿತಿ ಹಾಗೂ ಯುವಮೋರ್ಚಾ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 91ನೇ ಜನ್ಮ ದಿನದ ಪ್ರಯುಕ್ತ ಕುತ್ತಾರು ಬಾಲಸಂರಕ್ಷಣಾ ಕೆಂದ್ರದ ಮಕ್ಕಳಿಗೆ ಹಣ್ಣು ವಿತರಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಯುವಮೋರ್ಚಾ ಅಧ್ಯಕ್ಷ ಜೀವನ್ ತೊಕ್ಕೊಟ್ಟು, ಜಿಲ್ಲಾ ಉಪಾಧ್ಯಕ್ಷ ಗೋಪಿನಾಥ ಬಗಂಬಿಲ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಯಶವಂತ ಅಮೀನ್, ಸಂಜೀವ ಶೆಟ್ಟಿ, ಪ್ರಕಾಶ್ ಗಾಂಧಿನಗರ, ಗಣೇಶ್ ಕಾಪಿಕಾಡ್, ಉಮೇಶ್ ಕುಂಪಲ, ಹರಿಯಪ್ಪ ಸಾಲ್ಯಾನ್, ಸುರೇಶ್ ಶೆಟ್ಟಿ, ಸುರೇಂದ್ರ ಪಾವೂರು, ಸಚಿನ್ ಮೋರೆ, ಗುರು ನರಿಂಗಾನ, ಸಂಸ್ಥೆಯ ಮುಖ್ಯಸ್ಥೆ ಸುಧಾ ಮೊದಲಾದವರು ಉಪಸ್ಥಿತರಿದ್ದರು. ಶಿವಪ್ರಸಾದ್ ಕಕ್ಕೆಮಜಲು ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ಪಜೀರು ಮೆರ್ಸಿಯಮ್ಮನವರ ಇಗರ್ಜಿ ಹಾಗೂ ಕೆಥೊಲಿಕ್ ಸಭಾ ಪಜೀರು ಘಟಕದ ವತಿಯಿಂದ ಕಿಡ್ನಿ ವೈಫಲ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಮುಂಡೋಳಿಯ ಸುಪ್ರಿಯಾ ಅವರಿಗೆ ಸಹಾಯಧನ ನೀಡಲಾಯಿತು. ಕ್ರಿಸ್‍ಮಸ್ ಪ್ರಯುಕ್ತ ಶುಕ್ರವಾರ ಸುಪ್ರಿಯಾ ಮನೆಗೆ ಭೇಟಿ ನೀಡಿದ ಚರ್ಚ್ ಹಾಗೂ ಸಂಘಟನೆ ಮುಖಂಡರು 10ಸಾವಿರ ರೂಪಾಯಿಯ ಚೆಕ್ ಹಾಗೂ ಕ್ರಿಸ್‍ಮಸ್ ತಿನಿಸುಗಳನ್ನು ನೀಡಿದರು. ಈ ಸಂದರ್ಭ ಬ್ರ.ರೋಶನ್ ಡಿಸೋಜ ನೇತೃತ್ವದಲ್ಲಿ ಸುಪ್ರಿಯಾ ಶೀಘ್ರ ಗುಣಮುಖವಾಗುವಂತೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಕ್ಟರ್ ಮೊಂತೆರೋ, ಕಾರ್ಯದರ್ಶಿ ಫೆಲಿಕ್ಸ್ ಮೊಂತೆರೋ, ಸಂತ ವಿನ್ಸೆಟ್ ಪಾವುಲ್ ಸೊಸೈಟಿಯ ಅಧ್ಯಕ್ಷ ಮೈಕೆಲ್ ಲೋಬೋ, ಜಾನ್ ಎಂ.ವಿಕ್ಟರ್ ಸಲ್ದಾನಾ, ಬ್ರ.ಲ್ಯಾನ್ಸನ್ ಪಿಂಟೋ, ಕೆಥೋಲಿಕ್ ಸಭಾ ಕೇಂದ್ರೀಯ ಘಟಕ ಅಧ್ಯಕ್ಷೆ ಪ್ಲೇವಿ ಡಿಸೋಜ, ಪಜೀರು ಘಟಕ ಅಧ್ಯಕ್ಷ ಹಿಲರಿ ಡಿಸೋಜ, ಕಾರ್ಯದರ್ಶಿ ಅವಿಲ್ ಡಿಸೋಜ, ಕೆಥೊಲಿಕ್ ಸಭಾ ಪ್ರಾಂತ್ಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ ಧರ್ಮತೋಟ, ಪ್ರಮುಖರಾದ ಲವಿನಾ ದಾಂತಿ, ಲೋಯ್ ಡಿಸೋಜ,…

