ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ರಸ್ತೆ ಅಭಿವೃದ್ಧಿ ಸರಕಾರದ ಉದ್ದೇಶವಾಗಿದ್ದು, ಅದರ ಗುಣಮಟ್ಟದ ಪರಿಶೀಲನೆ ಹಾಗೂ ಕಾಪಾಡುವುದು ನಾಗರೀಕರ ಜವಾಬ್ದಾರಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಉಳ್ಳಾಲ ನಗರಸಭೆ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಹೊಸಗದ್ದೆ ಅಡ್ಡರಸ್ತೆ ಮತ್ತು ನಿತ್ಯಾಧರನಗರ ಸೈಟಿನಿಂದ ದಾರಂದಬಾಗಿಲು ಸಂಪರ್ಕಿಸುವ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪೆರ್ಮನ್ನೂರು ಗ್ರಾಮದ ಅಡ್ಡರಸ್ತೆ ಹೊಸಗದ್ದೆ ನಾದುರಸ್ತಿಯಲ್ಲಿತ್ತು. ಜನರ ಬೇಡಿಕೆಗೆ ಸ್ಪಂಧಿಸಿ ವಿಶೇಷ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಸಂದರ್ಭ ಗುಣಮಟ್ಟವನ್ನು ಕಾಪಾಡುವ ಜವಾಬ್ದಾರಿ ಸ್ಥಳೀಯರ ಮೇಲಿದ್ದು, ಅನುಮಾನಗಳಿದ್ದಲ್ಲಿ ತಕ್ಷಣವೇ ಸಂಬಂಧಿಸಿದ ಗುತ್ತಿಗೆದಾರರನ್ನು ಪ್ರಶ್ನಿಸಿ ಸರಿಪಡಿಸಿಕೊಳ್ಳಿ ಎಂದ ಅವರು
ದಾರಂದಬಾಗಿಲು ಸಂಪರ್ಕಿಸುವ ರಸ್ತೆಗೆ ರೂ. 50 ಲಕ್ಷ ಅನುದಾನ ಮಂಜೂರು ಮಾಡಲಾಗಿದ್ದು, ಹಂತ ಹಂತದಲ್ಲೇ ಶಾಶ್ವತ ರಸ್ತೆಯನ್ನುನಿರ್ಮಿಸಲಾಗುವುದು. ಹೊಸಗದ್ದೆಯ ಒಳರಸ್ತೆಗಳ ಅಭಿವೃದ್ಧಿಯನ್ನು ಅನುದಾನ ಬಿಡುಗಡೆಯಾದ ತಕ್ಷಣವೇ ನಡೆಸಲಾಗುವುದು ಎಂದರು.
ಈ ಸಂದರ್ಭ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಸದಸ್ಯರಾದ ಬಾಝಿಲ್ ಡಿಸೋಜ, ಉಸ್ಮಾನ್ ಕಲ್ಲಾಪು, ಭಾರತಿ, ಮುಸ್ತಾಫ ಹಾಗೂ ಸ್ಥಳೀಯರಾದ ರವಿ, ಕಿಶೋರ್, ರಿಚರ್ಡ್, ವಿನ್ಸೆಂಟ್ ಮೊದಲಾದವರು ಉಪಸ್ಥಿತರಿದ್ದರು.





