Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ತೆಂಗುಬೆಳೆಯ ಕಪ್ಪು ತಲೆ ಹುಳು ಬಾಧೆಯ ನಿಯಂತ್ರಣ ಮಾಹಿತಿ ಕಾರ್ಯಗಾರ

UllalaVaniBy UllalaVaniJune 17, 2017Updated:June 17, 2017No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತೊಕ್ಕೊಟ್ಟು : ಕಲ್ಲಾಪು ಭಾಗದಲ್ಲಿ ಒಂಭತ್ತು ಲಕ್ಷ ಪರೋಪಜೀವಿಗಳನ್ನು ತೆಂಗಿನಮರಗಳಿಗೆ ಬಿಡಲಾಗಿದ್ದರೂ , ಕೀಟಗಳ ಪ್ರಮಾಣ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತರಲು ಅಸಾಧ್ಯವಾಗಿದೆ. ಮಳೆ ಕಡಿಮೆಯಾಗಿ ಬಿಸಿಲಿನ ತಾಪವೂ ಹೆಚ್ಚಾಗಿದ್ದರಿಂದಾಗಿ ಚಿಕ್ಕ ಕೀಟಗಳು ದೊಡ್ಡದಾಗಿ ಬೆಳೆದು ಭಾಗಶ: ತೆಂಗಿನಮರಗಳು ಭಾದೆಗೆ ತುತ್ತಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ ಹೇಳಿದರು.

15ullal1

DSC_5761 DSC_5762 DSC_5763 DSC_5764 DSC_5765 DSC_5766 DSC_5767 DSC_5768 DSC_5769ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆ, ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ತೊಕ್ಕೊಟ್ಟಿನ ಯೂನಿಟಿ ಹಾಲ್ ನಲ್ಲಿ ಬುಧವಾರ ನಡೆದ ತೆಂಗುಬೆಳೆಯ ಕಪ್ಪು ತಲೆ ಹುಳು ಬಾಧೆಯ ನಿಯಂತ್ರಣ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.

ಫೆಬ್ರವರಿ ತಿಂಗಳಿನಲ್ಲಿ ಕಾಸರಗೋಡಿನ ಸಿಪಿಸಿಆರ್‍ಐ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿಕೊಂಡು ವಿಜ್ಞಾನಿಗಳ ನೇತೃತ್ವದಲ್ಲಿ ಪ್ರತಿ ಮರಕ್ಕೆ 20 ಪರೋಪಜೀವಿಗಳನ್ನು 15 ದಿನಗಳಲ್ಲಿ ಬಿಡಲಾಗಿತ್ತು. ಬಿಸಿಲಿನ ತಾಪಮಾನದಿಂದಾಗಿ ಅದು ನಿಯಂತ್ರಣಕ್ಕೆ ಬರಲಿಲ್ಲ. ಮರಗಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದಾಗಿ ಕೀಟ ಬಾಧಿಸಿದೆ. ಚಳಿಗಾಲದಲ್ಲಿ ಕೀಟ ಬಾಧಿಸಿದರೂ ಬೇಸಿಗೆಯಲ್ಲಿ ಒಣಗಿದ ಎಲೆಗಳ ಮೂಲಕ ಅದು ಬೆಳಕಿಗೆ ಬಂದಿತ್ತು. ಕೀಟ ಬಾಧೆ ಕ್ಯಾನ್ಸರ್ ರೋಗವಿದ್ದಂತೆ ಪ್ರಾಥಮಿಕ ಹಂತದಲ್ಲಿರುವಾಗಲೇ ಪರೋಪಜೀವಿಗಳನ್ನು ಬಿಡುತ್ತಿದ್ದಲ್ಲಿ ನಿಯಂತ್ರಣ ಸಾಧ್ಯವಾಗುತಿತ್ತು. ಆದರೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಅಸಾಧ್ಯವಾಗಿತ್ತು. ತೆಂಗಿನ ಗರಿಗಳಲ್ಲಿ ಇರುವಂತಹ ಕ್ಲೋರೊಫಿಲ್ ಕಡಿಮೆಗೊಳಿಸುವ ಕಾರ್ಯ ಕೀಟಗಳು ಮಾಡುವುದರಿಂದ ಮರಗಳು ಸಾಯುವ ಹಂತಕ್ಕೆ ತಲುಪಿವೆ. ಕಲ್ಲಾಪುವಿನಿಂದ ತೊಕ್ಕೊಟ್ಟು ಭಾಗದಲ್ಲಿನ ತೆಂಗಿನಮರಗಳು ಸಾಯಲು ಕೀಟಬಾಧೆಯ ಜತೆಗೆ ಬರ ಕೂಡಾ ಕಾರಣವಾಗಿದೆ. ತೆಂಗಿನ ಮರಗಳಿಗೆ ಪೊಟಾಷ್ ನೀಡಿದಲ್ಲಿ ಪೌಷ್ಠಿಕಾಂಶಯುಕ್ತವಾಗಿರುತ್ತದೆ, ಯೂರಿಯಾದಿಂದ ಮೇಲ್ನೋಟಕ್ಕೆ ಉತ್ತಮವಾಗಿ ತೆಂಗು ಕಂಡುಬಂದರೂ ಪೌಷ್ಠಿಕಾಂಶದ ಕೊರತೆ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂದೆ ರೈತರು ಪೊಟಾಷ್ ಸಿಂಪಡಿಸಿದಲ್ಲಿ ಹುಳಬಾಧೆಯನ್ನು ತಡೆಗಟ್ಟಬಹುದು.

ತೆಂಗು ಬೆಳೆಗಾರರಿಗೆ ಪುನಶ್ಚೇತನ ಸ್ಕೀಂ :

ತೆಂಗಿನ ತೋಟಗಳ ಪುನಶ್ಚೇತನ ಹಾಗೂ ಮರುನಾಟಿ ಮತ್ತು ನಿರ್ವಹಣೆಗಾಗಿ ಪ್ರತಿ ಫಲಾನುಭವಿಗೆ 0.4 ಹೆಕ್ಟø ನಿಂದ ಗರಿಷ್ಠ 1 ಹೆಕ್ಟೇರ್ ವರೆಗೆ ರೂ. 44,750 ರೂಗಳನ್ನು ಮೊದಲ ವರ್ಷ ಹಾಗೂ ರೂ. 8,750 ನ್ನು ಎರಡನೇ ವರ್ಷದ ನಿರ್ವಹಣೆಗೆ ಸಹಾಯಧನ ನೀಡಲಾಗುವುದು. ತೆಂಗಿನ ತೋಟಗಳಲ್ಲಿ ಅನುತ್ಪಾದಕ ಹಾಗೂ ರೋಗ ಕೋಟ ಬಾಧೆಗೊಳಗಾದ ಗಿಡಗಳನ್ನು ಬುಡಸಮೇತ ಕತ್ತರಿಸಿ ತೆಗೆಯಲು ಪ್ರತಿ ಗಿಡಕ್ಕೆ ರೂ. 1000 ಗಳಂತೆ ಹೆಕ್ಟೇರಿಗೆ ಗರಿಷ್ಠ 32 ಗಿಡಗಳನ್ನು ತೆಗೆಯಲು ರೂ. 32,000 ಸಹಾಯಧನ ಒದಗಿಸಲಾಗುವುದು. ಅಧಿಕ ಇಳುವರಿ ನೀಡುವ ಹೈಬ್ರೀಡ್ ಗಿಡ್ಡ/ಎತ್ತರದ ತಳಿಗಳನ್ನು ಮರು ನಾಟಿ ಮಾಡಲು ಪ್ರತಿ ಗಿಡಕ್ಕೆ ರೂ. 80 ರಂತೆ ಹೆಕ್ಟೇರಿಗೆ ರೂ.4,000 , ತೆಂಗಿನ ತೋಟಗಳ ಮಣ್ಣು ಮಾದರಿ ಪರೀಕ್ಷೆ ಆಧಾರದ ಮೇರೆಗೆ ಸಮತೋಲನ ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸಲು, ನೀರಿನ ನಿರ್ವಹಣೆ ಮತ್ತು ಬಸಿಗಾಲುವೆ ನಿರ್ಮಾಣ, ಹಸಿರೆಲೆ ಗೊಬ್ಬರ/ ಹೊದಿಕೆ ಬೆಳೆ ನಾಟಿ ಮಾಡಲು, ನೀರು ಮತ್ತು ತೇವಾಂಶ ಸಂರಕ್ಷಣೆ ಕೈಗೊಳ್ಳಲು, ಅಗತ್ಯವಿರುವ ಸಸ್ಯ ಸಂರಕ್ಷಣಾ ಕ್ರಮ ಅನುಸರಿಸಲು ರೂ. 17,500 ಎರಡು ವಾರ್ಷಿಕ ಕಂತುಗಳಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯ ಜನ ಧೈರ್ಯವಂತರು :

ಹೊರಜಿಲ್ಲೆಗಳಲ್ಲಿ ರೋಗಬಾಧಿಸಿದಲ್ಲಿ ಕೃಷಿಕರು ಆತ್ಮಹತ್ಯೆಗೈಯ್ಯುವ ಪ್ರಕರಣಗಳು ಕಣ್ಣೆದುರಿಗಿದೆ. ಆದರೆ ಜಿಲ್ಲೆಯ ಜನ ಧೈರ್ಯವಂತರು. ಧೃತಿಗೆಡದೆ ಮತ್ತೆ ತೆಂಗುಬೆಳೆಯಲು ಆಸಕ್ತರಾಗಿದ್ದಾರೆ. ಇವರಿಗೆ ಕೃಷಿ ಮತ್ತಉ ತೋಟಗಾರಿಕೆ ಇಲಾಖೆಯವರು ಪ್ರೋತ್ಸಾಹಿಸಬೇಕಿದೆ. ಪುನಶ್ಚೇತನ ಸ್ಕೀಂನಡಿ ಕೃಷಿಕರಿಗೆ ಮಾತ್ರವಲ್ಲ ತೆಂಗು ಬೆಳೆಯುವ ಎಲ್ಲರಿಗೂ ಉಚಿತವಾಗಿ ಗಿಡಗಳನ್ನು ನೀಡಬೇಕಿದೆ. ಈ ಬಾರಿ 150 ತೆಂಗಿನಮರಗಳಲ್ಲಿ 10 ಸಿಯಾಳಗಳನ್ನು ಪಡೆದವರಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಜನಸಂಪರ್ಕ ಸಭೆ ಗ್ರಾಮಮಟ್ಟಿನಲ್ಲೂ ನಡೆಯಬೇಕಿದೆ ಎಂದು
ಮಾಹಿತಿ ಕಾರ್ಯಗಾರಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಚಾಲನೆ ನೀಡಿದರು. ಸಿಪಿಸಿಆರ್ ಐ ಕಾಸರಗೋಡಿನ ಅಧಿಕಾರಿ ಪ್ರತಿಭಾ ಹುಳು ಭಾದೆಯ ನಿರ್ವಹಣೆ ಹಾಗೂ ಲಕ್ಷಣಗಳ ಮಾಹಿತಿ ನೀಡಿದರು. ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ತಾಲೂಕು ಪಂಚಾಯಿತಿ ಸದಸ್ಯೆ ಸುರೇಖಾ ಚಂದ್ರಹಾಸ್ , ನಗರಸಭೆ ಸದಸ್ಯ ಯು.ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿದ್ದರು.

12 ವರ್ಷಗಳ ಹಿಂದೆ ನಿಯಂತ್ರಣಕ್ಕೆ ತರಲಾಗಿತ್ತು
ಕಲ್ಲಾಪು ಭಾಗದಲ್ಲಿ ತೆಂಗು ಬೆಳೆಯ ಕಪ್ಪು ತಲೆ ಹುಳು ಭಾದೆ 12 ವರ್ಷಗಳ ಹಿಂದೆಯೂ ಬಾಧಿಸಿತ್ತು. ಈ ವೇಳೆ ತೆಂಗಿನ ಮರಕ್ಕೆ ರಂಧ್ರ ಕೊರೆದು ಮೊನೊಕ್ರೊಟೊಪಸ್ ಅನ್ನುವ ರಾಸಾಯನಿಕವನ್ನು ಸಿಂಪಡಿಸಲಾಗಿತ್ತು. ಇದರಿಂದ ತೆಂಗಿನಮರದಲ್ಲಿ ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ,ಜನರ ಆರೋಗ್ಯಕ್ಕೆ ಪರಿಣಾಮ ಬೀರುವುದರಿಂದ ಮತ್ತೆ ಮರಗಳಿಗೆ ಔಷಧಿ ಸಿಂಪಡಿಸುವ ವಿಧಾನವನ್ನು ಬದಲಿಸಿ, ಇದೇ ಮೊನೊಕ್ರೊಟೋಪಸ್ ರಾಸಾಯನಿಕವನ್ನು ಮರದ ಜೀವಂತ ಬೇರು ತುಂಡರಿಸಿ ಅದಕ್ಕೆ ಕಟ್ಟಿ ಸಿಂಪಡಿಸುವ ವಿಧಾನವನ್ನು ಅನುಸರಿಸಲಾಗಿತ್ತು. ಈ ಮೂಲಕ ಕಪ್ಪು ಹುಳು ತಲೆ ಬಾಧೆ ನಿಯಂತ್ರಣಕ್ಕೆ ಬಂದಿತ್ತು.

ಸುಂದರ್ ಉಳಿಯ
ಉಳ್ಳಾಲ ನಗರಸಭೆ ಸದಸ್ಯರು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರು ಪಟ್ಟಣ ಪಂಚಾಯತ್ ನ 2026-27 ನೇ ಸಾಲಿನ ಆಯ್ಯವ್ಯಯ ಮಂಡನೆ

March 10, 2026

ಬ್ರಹ್ಮಶ್ರೀ ಬಿಲ್ಲವ ವೇದಿಕೆ ತೊಕ್ಕೊಟ್ಟು ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

March 10, 2026

ಮಾ.12 ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಧ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್

March 9, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕೋಟೆಕಾರು ಪಟ್ಟಣ ಪಂಚಾಯತ್ ನ 2026-27 ನೇ ಸಾಲಿನ ಆಯ್ಯವ್ಯಯ ಮಂಡನೆ

By UllalaVaniMarch 10, 20260

ಕೋಟೆಕಾರು ಪಟ್ಟಣ ಪಂಚಾಯತ್ 2026-27 ನೇ ಸಾಲಿನ ಆಯ್ಯವ್ಯಯ ಪ.ಪಂ ಅಧ್ಯಕ್ಷರಾದ ದಿವ್ಯ ಸತೀಶ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಂಡನೆ ಮಾಡಲಾಯಿತು.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಬ್ರಹ್ಮಶ್ರೀ ಬಿಲ್ಲವ ವೇದಿಕೆ ತೊಕ್ಕೊಟ್ಟು ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

March 10, 2026

ಮಾ.12 ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಧ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್

March 9, 2026

ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

March 9, 2026
1 2 3 … 1,827 Next
Automatic YouTube Gallery

ದೇರಳಕಟ್ಟೆ; "ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3" ಉದ್ಘಾಟನೆ

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವತಿಯಿಂದ;"ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3" ಉದ್ಘಾಟನೆ

ದೇರಳಕಟ್ಟೆಯ ನಿಟ್ಟೆ ಮೈದಾನದಲ್ಲಿ ಆಯೋಜನೆ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Nitte #premiereLeague #cricket #Sports #Intercollege
Show More
ದೇರಳಕಟ್ಟೆ; "ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3" ಉದ್ಘಾಟನೆ
Now Playing
ದೇರಳಕಟ್ಟೆ; "ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3" ಉದ್ಘಾಟನೆ
ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವತಿಯಿಂದ;"ನಿಟ್ಟೆ ಫಿಸಿಯೋ ಪ್ರೀಮಿಯರ್ ...
ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವತಿಯಿಂದ;"ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3" ಉದ್ಘಾಟನೆ

ದೇರಳಕಟ್ಟೆಯ ನಿಟ್ಟೆ ಮೈದಾನದಲ್ಲಿ ಆಯೋಜನೆ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Nitte #premiereLeague #cricket #Sports #Intercollege
Show More
ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317-ಡಿ ವತಿಯಿಂದ `ಮಹಿಳಾ ದಿನಾಚರಣೆ'
Now Playing
ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317-ಡಿ ವತಿಯಿಂದ `ಮಹಿಳಾ ದಿನಾಚರಣೆ'
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆ ;ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ ...
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆ ;ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317-ಡಿ ವತಿಯಿಂದ
ವಾರ ಪೂರ್ತಿ ಕಾರ್ಯಕ್ರಮದ ಭಾಗವಾಗಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ `ಸಭಾ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Mangalore #lionsinternational #womensDay
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d