ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಾಡೂರು : ಸರಕಾರಿ ಬಾವಿ ಕುಸಿತಗೊಂಡಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಕೊರಗಜ್ಜ ಕಟ್ಟೆ ಸಮೀಪ ಗುರುವಾರ ಸಂಭವಿಸಿದೆ.
ಹಲವು ಮನೆಗಳಿಗೆ ನೀರು ಪೂರೈಸುತ್ತಿದ್ದ ಸುಮಾರು 10 ವರ್ಷಗಳ ಹಿಂದಿನ ಬಾವಿಯಲ್ಲಿ ಕುಸಿತ ಉಂಟಾಗಿದೆ. ಬಾವಿಯೊಳಗಡೆ ರಿಂಗ್‍ನ ಮೇಲೆ ಹಾಕಲಾಗಿದ್ದ ಕೆಂಪು ಕಲ್ಲು ಬಿರುಕುಬಿಟ್ಟಿದ್ದು, ಮಳೆಗೆ ಅದು ಇನ್ನಷ್ಟು ಬಿರುಕು ಬಿಟ್ಟಿ ಇಡೀ ಬಾವಿಯ ದಂಡೆಯೇ ಕುಸಿದಿದೆ. ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗಿದ್ದ ಬಾವಿ, ಇದಾಗಿದ್ದು ಶಿಥಿಲಾವಸ್ಥೆಯಲ್ಲಿ ಇರುವ ಕುರಿತು ಸ್ಥಳೀಯ ಸದಸ್ಯರಿಗೆ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದ್ದರು.
ಬಾವಿ ಕುಸಿತದಿಂದ ಸುಮಾರು 2 ಲಕ್ಷದ ವರೆಗೆ ನಷ್ಟ ಉಂಟಾಗಿದೆ. ಹಿಂದೆ ಸ್ಥಳೀಯರು ನೀಡಿದ ದೂರಿನಂತೆ ಬೇಸಿಗೆ ಕಾಲದಲ್ಲಿ ಬಾವಿ ದಂಡೆಯನ್ನು ದುರಸ್ತಿಗೊಳಿಸಲಾಗಿತ್ತು. ಕುಡಿಯುವ ನೀರಿಗಾಗಿ ಬರುವ ಅನುದಾನದ ಮೂಲಕ ಅದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ಸದ್ಯ ಬಾವಿಯೊಳಕ್ಕೆ ನೀರು ನುಗ್ಗದಂತೆ, ಹಾಗೂ ಮುಂಜಾಗ್ರತಾ ಕ್ರಮವಾಗಿ ತಡೆ ಬೇಲಿ ನಿರ್ಮಿಸಲಾಗುವುದು.
ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು
ಅಧ್ಯಕ್ಷರು
ಕೋಟೆಕಾರು ಪಟ್ಟಣ ಪಂಚಾಯಿತಿ


