UN NETWORKS ಪಾನೀರು : ಶಾಲೆಗಳಲ್ಲಿ ನಾಲ್ಕು ಗೋಡೆಯೊಳಗೆ ಪಾಠ ಮಾಡಲಾಗುತ್ತದೆ, ಆದರೆ ಹೊರಗಡೆಯ ಅಭಿವೃದ್ಧಿಯೂ ಅಗತ್ಯವಿದ್ದು, ಕ್ರೀಡೆಯಲ್ಲಿ ಶಿಕ್ಷಣ, ಮನರಂಜನೆ, ಅಭಿವೃದ್ಧಿ ಎಲ್ಲವೂ ಸಿಗುತ್ತದೆ ಎಂದು ಪಾನೀರ್ ಚರ್ಚ್‍ನ ಧರ್ಮಗುರು ವಂದನೀಯ ಫಾ.ಡೆನ್ನಿಸ್ ಸುವಾರಿಸ್ ಅಭಿಪ್ರಾಯಪಟ್ಟರು. ಪಾನೀರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಪಾನೀರ್ ಚರ್ಚ್ ಮೈದಾನದಲ್ಲಿ ಮಂಗಳವಾರ ನಡೆದ ಉಳ್ಳಾಲ ಬಿ. ಹೋಬಳಿ ಮಟ್ಟದ ಪಾಥಮಿಕ ಶಾಲಾ ಬಾಲಕ-ಬಾಲಕಿಯರ ಖೋ-ಖೋ ಮತ್ತು ವಾಲಿಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ಕ್ರೀಡಾಪಟುಗಳನ್ನು ಸೃಷ್ಟಿಸುವ ಅವಶ್ಯಕತೆ ನಮ್ಮ ದೇಶಕ್ಕಿದೆ, ಆ ನಿಟ್ಟಿನಲ್ಲಿ ಎಳವೆಯಲ್ಲೇ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಿದ್ದು, ಕ್ರೀಡಾಕೂಟಗಳ ಸಹಕಾರಿಯಾಗಿದೆ ಎಂದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಲ್ಯಾನ್ಸಿ ಡಿಸೋಜ, ಶಿಕ್ಷಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ರಾವ್, ನೋಡೆಲ್ ಅಧಿಕಾರಿಗಳಾದ ಪುರುಷೋತ್ತಮ, ಪ್ರಮೋದ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ…
Author: UllalaVani
UN NETWORKS ಉಳ್ಳಾಲ: ಆಧುನಿತೆಗೆ ತಕ್ಕಂತೆ ಬದಲಾವಣೆಗಳೂ ಅಗತ್ಯ, ಶಾಲೆಯಲ್ಲಿ ನೀಡುವ ಶಿಕ್ಷಣದಲ್ಲಿ ಬದಲಾವಣೆ ಕಾಣುತ್ತಿದ್ದು ಅದೇ ಮಾದರಿಯ ಶಿಕ್ಷಣ ಮದರಸಾ ಮಕ್ಕಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಮದರಸಾಗಳಲ್ಲೂ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುತ್ತಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದರು. ಕೇಂದ್ರ ಜುಮಾ ಮಸೀದಿಯ ದ್ಸಿಕ್ರ್ ಸಭಾಂಗಣದಲ್ಲಿ ಮಂಗಳವಾರ ಮದರಸಾಗಳಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಧಾರ್ಮಿಕ ಶಿಕ್ಷಣ ಬಲಗೊಂಡರೆ ಧರ್ಮವೂ ಬಲಗೊಳ್ಳುತ್ತದೆ, ಇಂದು ಕುರ್‍ಆನ್‍ಗಳು ಭಾಷಾಂತರಗೊಂಡ ಕಾರಣ ವಿದೇಶಗಳಲ್ಲಿ ಇಸ್ಲಾಂ ಸ್ವೀಕರಿಸುವವರು ಹೆಚ್ಚಾಗಿದ್ದಾರೆ. ನಮ್ಮಲ್ಲಿನ ವೈಮನಸ್ಸಿನಿಂದಾಗಿ ಇಸ್ಲಾಮಿಕ್ ಕಾನೂನುಗಳು ಕೈತಪ್ಪುತ್ತಿವೆ. ಕ್ಷುಲ್ಲಕ ವಿಚಾರಗಳಲ್ಲಿ ಪರಸ್ಪ ಹೊಡೆದಾಡುವ ಬದಲು ಒಗ್ಗಟ್ಟಿನಿಂದ ಬರುವ ಸಮಸ್ಯೆಗಳನ್ನು ಎದುರಿಸಬೇಕಿದೆ. ಬಡಮಕ್ಕಳಿಗೆ ಮದರಸಾದಲ್ಲಿ ಆಧುನಿಕ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದ್ದು, ಮುಂದೆ ಎಲ್ಲಾ ಮದರಸಾಗಳಿಗೆ ವಿಸ್ತರಿಸಲಾಗುವುದು, ಇದಕ್ಕೆ ಜಮಾಅತಿನ ಸರ್ವರೂ ಒಗ್ಗಟ್ಟಿನಿಂದ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಮದರಸಾಗಳ ಮುಫತ್ತಿಸ್ ಸುಲೈಮಾನ್ ಸಖಾಫಿ ಮಾತನಾಡಿ, 1ರಿಂದ 7ನೇ ತರಗತಿವರೆಗೆ ಮದರಸಾದಲ್ಲಿ…
UN NETWORKS ಕಿನ್ಯಾ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದು ಸಂಪೂರ್ಣ ಕುಸಿದುಬಿದ್ದು, ಮನೆಮಂದಿ ಪವಾಡಸದೃಶವಾಗಿ ಪಾರಾದ ಘಟನೆ ಕಿನ್ಯ ಗ್ರಾಮಪಂಚಾಯಿತಿನ ಮಿನಾದಿ ಎಂಬಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯಶ್ರೀ ದಂಪತಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ದಂಪತಿ ಹಾಗೂ ಮಕ್ಕಳಾದ ಸುಶಾಂತ್, ನಿಶಾಂತ್, ಶುಭಶ್ರೀ ಪವಾಡಸದೃಶವಾಗಿ ಪಾರಾಗಿದ್ದಾರೆ. ಮನೆ ಕುಸಿಯಲು ಆರಂಭವಾಗುತ್ತಿದ್ದಂತೆ ಸದ್ದು ಕೇಳಿ ಎಲ್ಲರೂ ಹೊರಬಂದ ತಕ್ಷಣ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು, ಗೋಡೆಗಳಲ್ಲಿ ಬಿರುಕುಂಟಾಗಿದೆ. ಘಟನೆಯಿಂದ ರೂ.1 ಲಕ್ಷ ನಷ್ಟ ಸಂಭವಿಸಿದೆ. ಅಶಕ್ತ ಕುಟುಂಬ : ಮೂರು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಅವರ ತಾಯಿ ತೀರಿಕೊಂಡಿದ್ದರು. ಅಲ್ಲದೆ ಶ್ರೀನಿವಾಸ್ ಅವರು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಓರ್ವ ಪುತ್ರನೂ ಅಂಗವಿಕಲನಾಗಿದ್ದಾನೆ. ಇಬ್ಬರು ಎಳೆಯ ಹರೆಯದ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ ಶ್ರೀನಿವಾಸ್ ಅವರ ಮೇಲಿದ್ದರೂ, ಅನಾರೋಗ್ಯದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಅಪರೂಪಕ್ಕೊಮ್ಮೆ…
UN NETWORKS ಉಳ್ಳಾಲ: ಆ.22ರ ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ದುಲ್ -ಹಜ್ಜ್ ಒಂದರ ಚಂದ್ರ ದರ್ಶನವಾಗಿರುವುದರಿಂದ ಸೆ.1 ರಂದು ಶುಕ್ರವಾರ ಈದುಲ್-ಅಝ್‍ಹಾ (ಬಕ್ರೀದ್ ಹಬ್ಬ) ಆಗಿರುತ್ತದೆ ಎಂದು ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ತೊಕ್ಕೊಟ್ಟು: ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಾಗವನ್ನು ಮಾರಾಟ ಮಾಡಿ ಖಾಸಗಿಯವರಿಗೆ ನೀಡಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಕುಟುಂಬಕ್ಕೆ ಆಗಿರುವ ವಂಚನೆಗೆ ಕಂದಾಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘದ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಗಾಂಧಿನಗರದಲ್ಲಿ ಮಂಗಳವಾರ ದಲಿತ ಸಂಘಟನೆ ಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ತೊಕ್ಕೊಟ್ಟು ಕಾಪಿಕಾಡು ನಿವಾಸಿ ದಿ. ತೋಮರವರಿಗೆ ಮಂಜೂರಾಗಿರುವ ಸರಕಾರಿ ಜಮೀನಿನ ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿದ ಕಂದಾಯ ಅಧಿಕಾರಿಗಳ ಧೋರಣೆ ಹಾಗೂ ನ್ಯಾಯಾಲಯ ನೀಡಿದ ಆದೇಶವನ್ನು ಜಾರಿ ಮಾಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಜನಸೇವೆಗೆಂದು ಇರುವ ಸರಕಾರಿ ಅಧಿಕಾರಿಗಳು ಜನವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಹಣ ಗಳಿಸುವ ಉದ್ದೇಶದಿಂದಲೇ ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಾಗವನ್ನು ಇಂದು ಕಬಳಿಸಲಾಗಿದೆ. ಬಂಗಲೆ ನಿರ್ಮಾಣದಲ್ಲಿ ನಿರತರಾಗಿರುವ ಅಧಿಕಾರಿಗಳ ವಿರುದ್ಧ ಜನರ ಪರ ದನಿ ಎತ್ತುತ್ತಿಲ್ಲ. ಜಿಲ್ಲೆಯಾದ್ಯಂತ ಎಕರೆಗಟ್ಟಲೆ ಸರಕಾರಿ ಭೂಮಿಯಿದ್ದರೂ ದಲಿತರಿಗೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.…
UN NETWORKS ಕೊಲ್ಯ: ಸೇವಾ ಭಾರತಿ ಉಳ್ಳಾಲ ಇದರ ವತಿಯಿಂದ ಉಳ್ಳಾಲ ಹೋಬಳಿ ವಲಯದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯು ಕೊಲ್ಯ ಶ್ರೀ ರಮಾನಂದಾಶ್ರಮದಲ್ಲಿ ಭಾನುವಾರ ನಡೆಯಿತು. ಕೊಲ್ಯ ಶ್ರೀ ರಮಾನಂದಾಶ್ರಮದ ಅರ್ಚಕ ಶ್ಯಾಂಪ್ರಕಾಶ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಧ್ಯಕ್ಷತೆಯನ್ನು ನಾರಾಯಣ ಕುಂಪಲ ವಹಿಸಿದ್ದರು. ಪಾವೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಪ್ರಶಾಂತ್, ತೊಕ್ಕೊಟ್ಟು ಸೆಬೆಸ್ಟಿಯನ್ ಕಾಲೇಜಿನ ಕನ್ನಡ ಉಪನ್ಯಾಸಕ ಅರುಣ್, ಬೊಳ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಹರಿಪ್ರಸಾದ್ ತೀರ್ಪುಗಾರರಾಗಿದ್ದರು. ರವಿಚಂದ್ರನ್, ರೋಹಿತ್, ಮಹೇಶ್ ಬಹುಮಾನ ವಿತರಿಸಿದರು. ಕುಂಪಲ ಶಾಲೆಯ ಮುಖ್ಯೋಪಾಧ್ಯಯರಾದ ವಿಶ್ವನಾಥ್ ಎಂ.ಕೆ ಪ್ರಸ್ತಾವನೆಗೈದರು, ಸುರೇಶ್ ಸ್ವಾಗತಿಸಿದರು.
UN NEWTWORKS ನವದೆಹಲಿ: ದೇಶದ್ಯಾಂತ ತೀವ್ರ ಕುತೂಹಲ ಕೆರಳಿಸಿದ್ದ ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಬಹುಮತದ ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸು ಮಹತ್ವದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದೆ. ಸಿಜೆಐ ನೇತೃತ್ವದ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳ ಪೀಠದಲ್ಲಿ ಇಬ್ಬರು ಸದಸ್ಯರು ತ್ರಿವಳಿ ತಲಾಖ್ ಗೆ ಅನುಮೋದನೆ ನೀಡಿದ್ದು, ಉಳಿದ ಮೂವರು ನ್ಯಾಯಾಧೀಶರು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಯ್ ಲಲಿತ್, ಕುರಿಯನ್ ಜೋಸೆಫ್ ಹಾಗೂ ರೋಹಿಂಗ್ಟನ್ ಅವರು ಎಂದು ಹೇಳಿ ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿ ಬಹುಮತದ ತೀರ್ಪು ನೀಡಿದ್ದಾರೆ. ಅದರಂತೆ ಬಹುಮತದ ಆಧಾರದ ಮೇಲೆ ತ್ರಿವಳಿ ತಲ್ಲಾಖ್ ಅನ್ನು ಮುಂದಿನ 6 ತಿಂಗಳ ಕಾಲ ರದ್ದು ಮಾಡಲಾಗಿದ್ದು, 6 ತಿಂಗಳೊಳಗೆ ಈ ಬಗ್ಗೆ ಸೂಕ್ತ ಕಾನಾನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಐವರು…
UN NETWORKS ಸೋಮೇಶ್ವರ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮವಾಸ್ಯೆ ಪ್ರಯುಕ್ತ ಸಾವಿರದಷ್ಟು ಮಂದಿ ಸಮುದ್ರದಲ್ಲಿ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ರೋಗ ಬಾಧೆಗಳ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸಿಕೊಂಡರು. ಖಗ್ರಾಸ ಸೂರ್ಯ ಗ್ರಹಣವಿದ್ದರೂ, ಭಾರತಕ್ಕೆ ವಿಶೇಷ ಫಲವಿಲ್ಲವೆಂದು ಜ್ಯೋತಿಷಿಗಳ ಅಭಿಪ್ರಾಯಗಳಾಗಿದ್ದರಿಂದಾಗಿ ಶ್ರಾವಣ ಅಮಾವಸ್ಯೆಗೆ ತೀರ್ಥ ಸ್ನಾನ ಮಾಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿರಲಿಲ್ಲ. ಜಿಲ್ಲೆ ಮತ್ತು ಹೊರಜಿಲ್ಲೆಗಳಿಂದ ಆಗಮಿಸಿದ ಭಕ್ತಾಧಿಗಳು ದೇವಸ್ಥಾನದ ಉತ್ತರದಲ್ಲಿರುವ ಗದಾತೀರ್ಥ ಕೆರೆಯಲ್ಲಿ ಮಿಂದು, ಬಳಿಕ ಸಂಪ್ರದಾಯದಂತೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಸಮುದ್ರಕ್ಕೆ ಸಲ್ಲಿಸಿದ ನಂತರ ಸಮುದ್ರದ ನೀರಿನಲ್ಲಿ ತೀರ್ಥಸ್ನಾನಗೈದರು.. ಬೆಳಿಗ್ಗೆ 4 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಜಿಲ್ಲೆ ಮತ್ತು ಹೊರಜಿಲ್ಲೆಯ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದರು. ಕಡಲತಡಿಗೆ ತೆರಳಿ ಸಮುದ್ರ ಗಂಗಾ ಮಾತೆಗೆ ನಮಸ್ಕರಿಸಿ ವರ್ಷದ ಪಾಪ ವಿಮೋಚನೆಗೆ ಪ್ರಾರ್ಥಿಸುವುದು ಮತ್ತು ಚರ್ಮ ರೋಗಗಳ ನಿವಾರಣೆಯ ಸಲುವಾಗಿ ಉಪ್ಪು ನೀರಿನಲ್ಲಿ ತೀರ್ಥಸ್ನಾನಗೈಯ್ಯುತ್ತಾರೆ ಅನ್ನುವುದು ಹಿರಿಯರ ಅಭಿಪ್ರಾಯ. ಸಮುದ್ರದ ನೀರಿನಲ್ಲಿ 5 ಮತ್ತು 7 ಬಾರಿ ಮುಳುಗುತ್ತಾರೆ. ಬಳಿಕ…
UN NETWORKS ಉಳ್ಳಾಲ : ಭಾರತ ಬಹು ಸಂಸ್ಕೃತಿಯನ್ನು ಹೊಂದಿರುವ ಕೃಷಿ ಪರಂಪರೆ ಇಂತಹ ದೇಶವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಭೂಮಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಮಾರುವ ಮೂಲಕ ದೇಶದಲ್ಲಿ ರುಷಿ ಪರಂಪರೆಯನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಜನಪರ ಚಿಂತಕಿ ಹಾಗೂ ಬರಹಗಾರ್ತಿ ಕೆ. ನೀಲಾ ಅಭಿಪ್ರಾಯಪಟ್ಟರು. `ಅಬ್ಬಕ್ಕನ ಮಡಿಲು ಸೌಹಾರ್ದತೆಯ ಕಡಲು’ ಅರಿವು, ಸೌಹಾರ್ದತೆ, ಮುನ್ನಡೆಗಾಗಿ ಘೋಷ ವಾಕ್ಯದೊಂದಿಗೆ ಕುತ್ತಾರಿನ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ಭಾನುವಾರ ನಡೆದ 13 ನೇ ಉಳ್ಳಾಲ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಭಾರತದ ಆನಾದಿ ಕಾಲದಿಂದಲೂ ಕೃಷಿ ಆಧಾರಿತ ದೇಶವಾಗಿದೆ. ಜಗದ ಜೀವರಾಶಿಗೆ ಅನ್ನ ನೀಡುವ ಕೃಷಿ ಸಂಸ್ಕೃತಿಯನ್ನು ಮೋದಿ ನೇತೃತ್ವದಲ್ಲಿ ಅದಾನಿ ಅಂಬಾನಿಗಳು ಕೂತು ತಿನ್ನುವ ರುಷಿ ಪರಂಪರೆಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ದೇಶದ ಕೃಷಿ ಭೂಮಿಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಪರಭಾರೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಯುವಜನತೆ ಹಣಕ್ಕಾಗಿ ತಪ್ಪು ದಾರಿಗಳನ್ನು ಹುಡುಕುತ್ತಿದ್ದಾರೆ. ಕೇಂದ್ರ ಸರಕಾರದ ಸರ್ವೇಯಂತೆ ದೇಶದಲ್ಲಿ ಶೇ. 71ರಷ್ಟು…
UN NETWORKS ಅಸೈಗೋಳಿ: ಅಸೈಗೋಳಿ ಕೇಂದ್ರ ಮೈದಾನದಲ್ಲಿ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಕಬ್ಬಿಣದ ತಗಡು ಶೀಟಿನ ಚಪ್ಪರವೊಂದು ಏಕಾಏಕಿ ಕುಸಿದು ಬಿದ್ದ ಘಟನೆ ಶನಿವಾರ ಸಂಜೆ ಸಂಭವಿಸಿದ್ದು, ಘಟನೆ ವೇಳೆ ಚಪ್ಪರದ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಅಸೈಗೋಳಿಯ ಮೈದಾನದಲ್ಲಿ ಇತ್ತೀಚೆಗೆ ಮೊಸರು ಕುಡಿಕೆ ಉತ್ಸವ ನಡೆದಿದ್ದು ಇದಕ್ಕಾಗಿ ಶೀಟಿನ ಚಪ್ಪರವನ್ನು ಹಾಕಲಾಗಿತ್ತು. ಅಲ್ಲದೆ ಮುಂದಿನ ವಾರ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೂ ಇದೇ ಚಪ್ಪರವನ್ನು ಇಡಲು ನಿರ್ಧರಿಸಲಾಗಿತ್ತು. ಇದೇ ವೇಳೆ ಚಪ್ಪರವನ್ನು ಇನ್ನಷ್ಟು ವಿಸ್ತರಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ಸಹಿತ ಚಪ್ಪರವು ಹಠಾತ್ತನೆ ಕುಸಿದು ಬಿದ್ದಿದೆ. ಕೂಡಲೇ ಚಪ್ಪರದಡಿಯಲ್ಲಿದ್ದ ಕಾರ್ಮಿಕರು ಓಡಿ ಜೀವವನ್ನು ರಕ್ಷಿಸಿಕೊಂಡಿದ್ದಾರೆ. ಒಂದು ವೇಳೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಚಪ್ಪರ ಕುಸಿದು ಬೀಳುತ್ತಿದ್ದ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು.

