UN NETWORKS ಕುತ್ತಾರು: ಚಲಿಸುತ್ತಿದ್ದ ಬಸ್ಸಿನಡಿಗೆ ಬಿದ್ದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುತ್ತಾರು ದೇವಸ್ಥಾನದ ಬಳಿ ಇದೀಗ ಸಂಭವಿಸಿದೆ. ಕೇರಳದ ಪಯ್ಯನ್ನೂರು ಮೂಲದ ವೈಸರಾಜ್ (೪೨) ಮೃತರು. ಬಗಂಬಿಲದ ಸಂಬಂಧಿಕರ ಮನೆಗೆ ಬಂದು ವಾಪಸ್ ಆಗುವ ಸಂದರ್ಭ ಘಟನೆ ನಡೆದಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Author: UllalaVani
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‍ನ ಪುರುಷರ ವಸತಿ ನಿಲಯದಲ್ಲಿ ಪೂಜಿಸಲ್ಪಟ್ಟ ಗಣೇಶನ ವಿಸರ್ಜಣಾ ಮೆರವಣಿಗೆಯು ಮಂಗಳವಾರ ಸಂಜೆ ಸಂಜೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳಗಂಗೋತ್ರಿ ಆವರಣದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
UN NETWORKS ಬಬ್ಬುಕಟ್ಟೆ: ವಿದ್ಯಾರ್ಥಿಗಳು ಮೊಬೈಲ್‍ಗಳಂಥಹ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳದೆ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು, ಉತ್ತಮ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪೆÇ್ರ| ಎ.ಎಮ್.ಖಾನ್ ಅಭಿಪ್ರಾಯಪಟ್ಟರು. ಅವರು ಬಬ್ಬುಕಟ್ಟೆಯ ಹಿರಾ ಶಿಕ್ಷಣ ಸಂಸ್ಥೆಯಲ್ಲಿ ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ವತಿಯಿಂದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನೂರ್-ಎ-ಹಿರಾ 2017 ಅಂತರ್ ಕಾಲೇಜು ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸ್ಥೆಯ ಸಂಚಾಲಕರಾದ ರಹಮ್ಮತುಲ್ಲಾಹ್ ಇವರು ವಿದ್ಯಾರ್ಥಿಗಳ ಪ್ರತಿಭೆ ಸಮಾಜದಲ್ಲಿ ಶಾಂತಿ ಕಾಪಾಡಲು, ಪರಸ್ಪರ ಬಾಂಧವ್ಯ ಬೆಸೆಯಲು ಸಹಕಾರಿಯಾಗಲಿ ಎಂದು ಹಾರೈಸಿದರು. ವಿದ್ಯಾರ್ಥಿನಿಯರಿಗಾಗಿ ಕಿರಾತ್, ಹಮ್ದ್, ಟರ್ನ್ ದಿ ಕೋಟ್, ಮೆಹಂದಿ, ಕೊಲಾಜ್, ಕವನ , ಕ್ವಿಜ್ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು. ಶಾಂತಿ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಅಬ್ದುರ್ರಹಮಾನ್‍ನ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಉತ್ತಮ ಪ್ರಯತ್ನವನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಲೈಬ್ರೆರಿ ಆಂಡ್ ಇನ್ ಫಾರ್ಮೇಶನ್…
UN NETWORKS ಉಳ್ಳಾಲ: ದುಷ್ಕರ್ಮಿಗಳಿಂದ ಹತ್ಯೆ ಯತ್ನಕ್ಕೊಳಗಾದ ಚಿರಂಜೀವಿ ಎಂಬ ಯುವಕನ ಚಿಕಿತ್ಸಾ ವೆಚ್ಛ ಮತ್ತು ವೈಯಕ್ತಿಕ ಪರಿಹಾರ ಒದಗಿಸುವಂತೆ ಮತ್ತು ನಿರಂತರ ಚೂರಿ ಇರಿತ ಕೃತ್ಯ ನಡೆಸುವವರನ್ನು ಬಂಧಿಸುವಂತೆ ಆಗ್ರಹಿಸಿ ಡಿ ವೈ ಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಕೊಣಾಜೆ ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕ್ಷೇತ್ರದ ಸೌಹಾರ್ದತೆಯನ್ನು, ಶಾಂತಿಯನ್ನು ಕೆದಡುವಂತ ಕೃತ್ಯಗಳು ನಡೆಯುತ್ತಿದೆ. ಈಗಾಗಲೇ, ಹಲವು ಕಡೆಗಳಲ್ಲಿ ಮುಗ್ಧ ಯುವಕರ ಮೇಲೆ ದಾಳಿಗಳು ನಡೆದಿದೆ. ಜುಲೈ 8 ರಂದು ರಾತ್ರಿ ಮುನ್ನೂರು ಗ್ರಾಮದ ಕುತ್ತಾರಿನಲ್ಲಿ ಚಿರಂಜೀವಿ ಎಂಬ ಯುವಕನಿಗೆ ಬೈಕಿನಿಂದ ಬಂದ ದುಷ್ಕರ್ಮಿಗಳು ತಲೆಗೆ ಬಲವಾಗಿ ತಲವಾರಿನಿಂದ ಹೊಡೆದು ಪರಾರಿಯಾಗಿದ್ದಾರೆ. ಚಿರಂಜೀವಿಯನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಲೆಗೆ 18 ಹೊಲಿಗೆ ಹಾಕಿದ್ದು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ರೂ.21,000 ಚಿಕಿತ್ಸಾ ವೆಚ್ಚವಾಗಿದ್ದು, ಎರಡು ತಿಂಗಳು ವಿಶ್ರಾಂತಿ ಬೇಕು ಎಂದು ವೈದ್ಯರು…
UN NETWORKS ಮಂಗಳೂರು: ಆಗಸ್ಟ್ 29- ಸಮೀಕ್ಷೆಯೊಂದರ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಹೃದ್ರೋಗಿಗಳು ಭಾರತದಲ್ಲಿ ಕಂಡುಬರಲಿದ್ದಾರೆ. ಪ್ರತಿಐದು ಸಾವಿನಲ್ಲಿ ಒಬ್ಬರು ಹೃದ್ರೋಗದಿಂದಲೇ ಸಾಯುತ್ತಿದ್ದಾರೆ. 2020ರ ವೇಳೆಗೆ ಇವರ ಸಂಖ್ಯೆ ಮೂರಕ್ಕೆ ಏರಲಿದೆ. ಭಾರತದಲ್ಲಿ ಅಂದಾಜು 4.5 ಕೋಟಿ ಕೊರೊನರಿಆರ್ಟರಿ ರೋಗಿಗಳಿದ್ದಾರೆ. ಹೆಚ್ಚು ಹೆಚ್ಚು ಯುವಜನಾಂಗವೇಇದಕ್ಕೆ ಬಲಿಯಾಗುತ್ತಿದ್ದಾರೆ. ಜೀವನಶೈಲಿಯೇ ಇದಕ್ಕೆ ಮುಖ್ಯಕಾರಣ. ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿರುವ ಡಿಎನ್‍ಎ ಆ ವ್ಯಕ್ತಿಯ ವೈಶಿಷ್ಟ್ಯತೆ ಮತ್ತು ಆರೋಗ್ಯವನ್ನುನಿರ್ಧರಿಸುತ್ತದೆ. ದೇಹದಲ್ಲಿರುವ ಪ್ರತಿಯೊಂದು ಪ್ರೋಟೀನ್ ಕಣವನ್ನುತೀರ್ಮಾನಿಸುವ ಜೈವಿಕ ಸಂಕೇತ ಇದು. ದೇಹ ಇಂಥದ್ದೊಂದು ಪ್ರೋಟೀನ್ ತಯಾರಿಸಬೇಕು ಎಂಬ ಸಂದೇಶವನ್ನು ನೀಡುವ ಪ್ರಕ್ರಿಯೆಗೆ ವೈದ್ಯಕೀಯ ಭಾಷೆಯಲ್ಲಿ ‘ಜೀನ್‍ಎಕ್ಸ್‍ಪ್ರೆಷನ್’ ಅಥವಾ ‘ಟ್ರಾನ್‍ಸ್ಕ್ರಿಪ್ಷನ್’ ಎನ್ನುತ್ತಾರೆ. ದೇಹದಲ್ಲಿರುವ, ತಯಾರಾಗುವ ಪ್ರತಿಯೊಂದು ಪ್ರೋಟೀನ್‍ಕಣವೂ ನಮ್ಮಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ವಯಸ್ಸಾಗುತ್ತಿದ್ದಂತೆ ಡಿಎನ್‍ಎ ‘ಟ್ರಾನ್‍ಸ್ಕ್ರಿಪ್ಷನ್’ ನಿಧಾನವಾಗಿ ಸತ್ವ ಕಳೆದುಕೊಂಡು ಪ್ರೋಟೀನ್‍ಗಳು ಸರಿಯಾಗಿ ಉತ್ಪಾದನೆಯಾಗುವುದಿಲ್ಲ. ಈ ಕುರಿತು ವಿಸ್ಕೄ್ತ ಸಂಶೋಧನೆ ನಡೆಸಿದ ಯೂನಿಸಿಟಿ ಜಿನೊಮಿಸ್ಯುಟಿಕಲ್‍ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರಡಿ ಸಿದ್ಧಪಡಿಸಲಾದ ಉತ್ಪನ್ನಗಳು ಜೀನ್‍ಎಕ್ಸ್‍ಪ್ರೆಷನ್ ಸಮರ್ಪಕವಾಗುವಂತೆ ಮಾಡಿಆರೋಗ್ಯಕರ ಶರೀರವನ್ನುಕಾಪಾಡಲು ಸಹಕಾರಿಯಾಗುತ್ತದೆ. ಜಿನೊಮಿಸ್ಯುಟಿಕಲ್ ತಂತ್ರಜ್ಞಾನವನ್ನು…
UN NETWORKS ಮಂಗಳೂರು: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಉಳ್ಳಾಲ ಘಟಕದ ವತಿಯಿಂದ 9 ರಿಂದ 14 ವರ್ಷದ ಮಕ್ಕಳಿಗಾಗಿ ಮರ್ ಹೂಂ ಇಸ್ಮಾಯೀಲ್ ಔಸಾಫ್ ರವರ ಸ್ಮರಣಾರ್ಥ 7 ಜನರ ಸೌಹಾರ್ದ ಫುಟ್ಬಾಲ್ ಟೂರ್ನಮೆಂಟ್ ಅನ್ನು ಆಯೋಜಿಸಲಾಯಿತು. ಪಂದ್ಯಾಟವನ್ನು ಮರ್ ಹೂಂ ಇಸ್ಮಾಯೀಲ್ ರವರ ತಂದೆ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅಬ್ದುಲ್ ರಹಿಮಾನ್ ಕೋಟೆಕಾರ್ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಮಕ್ಕಳು ತಮ್ಮ ಪ್ರತಿಭೆಯನ್ನು ಗುರುತಿಸಬೇಕು ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಒಳ್ಳೆಯ ಹೆಸರು ತರುವವರಾಗಬೇಕು” ಎಂದರು. ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಇರ್ಫಾನ್ ಕುದ್ರೋಳಿ ರವರು ಚೆಂಡು ಹೊಡೆಯುವ ಮೂಲಕ ಆಟಕ್ಕೆ ಚಾಲನೆ ನೀಡಿದರು. ಪಂದ್ಯಾಟದಲ್ಲಿ ಬ್ರದರ್ಸ್ ಉಚ್ಚಿಲ ತಂಡವು ವಿಜಯಶಾಲಿಯಾಯಿತು ಸ್ಮಾರ್ಟ್ ಸಿಟಿ ತಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿತು. ಉತ್ತಮ ಆಟಗಾರನಾಗಿ ಬ್ರದರ್ಸ್ ಉಚ್ಚಿಲ ತಂಡದ ಸಿನಾನ್ ಆಯ್ಕಾದರು. ಎಸ್.ಐ.ಓ ಜಿಲ್ಲಾ ಅಧ್ಯಕ್ಷರಾದ…
UN NETWORKS ಕಿನ್ಯಾ : ಆನ್‌ಲೈನ್ ಮೂಲಕ ಇರುವ ಸರಕಾರದ ಸವಲತ್ತುಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರಿಗೆ ಕಷ್ಟ ಆಗುವುದನ್ನು ಮನಗಂಡು ಸಚಿವ ಖಾದರ್ ಅವರು ಆದೇಶದ ಹಿನ್ನೆಲೆಯಲ್ಲಿ ಕಿನ್ಯಾ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದ ಏಕದಿನದ ಆಧಾರ್, ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮತ್ತು ಹೆಸರು ಬದಲಾವಣೆ ಅಭಿಯಾನಕ್ಕೆ ಕಿನ್ಯಾ ಬೆಳರಿಂಗೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಎನ್.ಎಸ್ ಕರೀಂ ಚಾಲನೆ ನೀಡಿದರು. ಈ ಸಂದರ್ಭ ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಫಾರೂಕ್ ಕಿನ್ಯ, ಮೋಹಮ್ಮದ್, ಕೆ.ಬಿ ಅಬುಸಾಲಿ, ಕಾಂಗ್ರೆಸ್ ಕಿನ್ಯ ಬ್ಲಾ ಕ್ ಅಧ್ಯಕ್ಷ. ಮೊದ್ದೀನ್ ಕುಂಞ ಮತ್ತಿತರರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಹಿಂದು ಯುವಕರಿಬ್ಬರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಐವರನ್ನು ಎಸಿಪಿ ನೇತೃತ್ವದ ವಿಶೇಷ ಪೊಲೀಸ್ ತಂಡ, ಉಳ್ಳಾಲ ಪೊಲೀಸರ ದಸಹಕಾರದೊಂ ದಿಗೆ ಬಂಧಿಸಿದೆ. ಮದನಿನಗರ ನಿವಾಸಿಗಳಾದ ತಸ್ಲೀಂ(24), ಅಂಬ್ಲಮೊಗರು ನೌಷಾದ್ (32), ರಮೀಜ್ (20), ಖುರ್ಷಿದ್ (20), ನವಾಝ್ (24) ಬಂಧಿತರು. ಜೂ.18, 2017 ರಂದು ಆರೋಪಿಗಳು ಕುತ್ತಾರು ಸಮೀಪ ಗಂಗಾಧರ್ ಎಂಬವರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದರು. ಆದರೆ ಆರೋಪಿಗಳಿಂದ ತಪ್ಪಿಸಿದ್ದ ಗಂಗಾಧರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆರೋಪಿಗಳು ಎ.26, ,2016 ರಂದು ಉಳ್ಳಾಲದ ತಂಡ ದಿಂದ ಹತ್ಯೆಗೀಡಾದ ಪಿಲಾರು ನಿವಾಸಿ ಸಫ್ವಾನ್ (22) ಕೊಲೆಗೆ ಪ್ರತೀಕಾರವಾಗಿ , ಇಬ್ಬರು ಹಿಂದು ಯುವಕರ ಹತ್ಯೆಗೆ ಸಂಚು ರೂಪಿಸಿದ್ದರು. ಅಂಬ್ಲಮೊಗರು ಮತ್ತು ಕುತ್ತಾರು ಮೂಲದ ಇಬ್ಬರು ಹಿಂದು ಯುವಕರ ಹತ್ಯೆಗೆ ಸಂಚು ರೂಪಿಸಿದ್ದರೂ, ಪೊಲೀಸರ ಪತ್ತೆಯಿಂದ ಅದು ಅಸಾಧ್ಯವಾಗಿದೆ. ರಾಣಿಪುರ ಸಮೀಪ ಆರ್ ಎಸ್ ಎಸ್ ಕಾರ್ಯಕರ್ತ ರಾಮಮೋಹನ್ ಮತ್ತು ಚಿರಂಜೀವಿ ಎಂಬವರನ್ನು ತಲವಾರಿನಿಂದ ಕಡಿದು ಹತ್ಯೆಗೆ…
UN NETWORKS ಉಳ್ಳಾಲ: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ನಾಟೆಕಲ್ ಬಳಿ ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕ ಪರಾರಿಯಾಗಿದ್ದಾನೆ. ಹರೇಕಳ ಕಡೆಯಿಂದ ಮಂಜನಾಡಿ ಮಾರ್ಗವಾಗಿ ಅಕ್ರಮ ಮರಳನ್ನು ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಲಾರಿಯನ್ನು ನಿಲ್ಲಿಸಲೆತ್ನಿಸಿದಾಗ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಪ್ರಭಾರ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಮತ್ತು ಎಸ್‍ಐ ಸುಕುಮಾರ್ ಮತ್ತು ಸಿಬಂದಿಗಳು ಭಾಗವಹಿಸಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಉಳ್ಳಾಲ: ನೇಪಾಲ ಮೂಲದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಚಾರ ನಡೆಸಿದ ಆರೋಪದಲ್ಲಿ ನೇಪಾಲ ಮೂಲದ ಯುವಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು ಬಂಧಿತ ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟಿನಲ್ಲಿ ಫಾಸ್ಟ್ ಫುಡ್ ಮಾಡುತ್ತಿರುವ ದೇರಳಕಟ್ಟೆಯಲ್ಲಿ ವಾಸವಾಗಿರುವ ನೇಪಾಲ ನಿವಾಸಿ ಕುಮ್ಮ ಸಿಂಗ್(22) ಬಂಧಿತ ಆರೋಪಿಯಾಗಿದ್ದು, ಈತ ಕಳೆದ ಆರು ತಿಂಗಳಿನಿಂದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ದೇರಳಕಟ್ಟೆಯ ಬಾಡಿಗೆ ಮನೆಯಲ್ಲಿ ನೇಪಾಲ ಮೂಲದ ಮೂರು ಕುಟುಂಬಗಳು ವಾಸವಾಗಿದ್ದು, ಬಾಲಕಿ ತನ್ನ ತಾಯಿ ತಂದೆಯೊಂದಿಗೆ ವಾಸವಾಗಿದ್ದರೆ, ಆರೋಪಿ ಕುಮ್ಮಸಿಂಗ್ ಮತ್ತು ಆತನ ಸಹೋದರ ಇದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಕುಮ್ಮ ಸಿಂಗ್ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿ ಬಸುರಿಯಾದ ವಿಚಾರ ತಿಳಿದು ತಲೆಮರೆಸಿಕೊಂಡಿದ್ದ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಕೊಣಾಜೆ ಪೊಲೀಸರು ಕೊಣಾಜೆ ಪ್ರಭಾರ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಅವರ ಮಾರ್ಗದರ್ಶನದಲ್ಲಿ…

