UN NETWORKS ಕೊಣಾಜೆ: ಕೊಣಾಜೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಕಾರಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
Author: UllalaVani
UN NETWORKS ಉಳ್ಳಾಲ: ಮಂಗಳೂರಿನ ಶಾರದಾ ವಿದ್ಯಾಲಯದಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಪಂದ್ಯಾಟದಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಒಟ್ಟು 7 ಚಿನ್ನ, 6 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕ ಪಡೆದಿರುತ್ತಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡ 11ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 10ನೇ ತರಗತಿಯ ರೋಹಿತ್ ಪಾಲ್ ಹಾಗೂ 8ನೇ ತರಗತಿಯ ಸನ್ನಿಧಿ ವೈಯಕ್ತಿಕ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
UN NETWORKS ಕಣಚೂರು: ದೇರಳಕಟ್ಟೆಯ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಕಾಲೇಜಿನ ಆಶ್ರಯದಲ್ಲಿ `ಕಿಮ್ಸ್ ಕಲ್‍ರವ್’- 2017 ಅಂತರ್ ಕಾಲೇಜ್ ಸ್ಪರ್ಧೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಪ್ರೋ ರವಿಶಂಕರ್ ಮಾತನಾಡಿ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವುದರ ಮುಖ್ಯ ಉದ್ದೇಶವನ್ನು ವಿದ್ಯಾರ್ಥಿಗಳು ಮೊದಲು ತಿಳಿದು ಕೊಳ್ಳಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವು ಎಂಬುದು ಸಾಮಾನ್ಯ. ಆದರೆ ನಮ್ಮ ಪ್ರಯತ್ನವನ್ನು ಮುಂದುವರಿಸುತ್ತಲೇ ಇರಬೇಕು. ಆಗ ಭವಿಷ್ಯದಲ್ಲಿ ಗೆಲುವು ನಿಶ್ಚಿತ. ಅದೇ ಜೀವನದ ಸಿದ್ಧಾಂತ ಎಂದು ನುಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ವಿನೀತಾ ಮಥಾಯಸ್, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಆನಂದಿ ಹಾಗೂ ಪ್ರಿಸ್ಕೂಲ್‍ನ ಮುಖ್ಯ ಶಿಕ್ಷಕಿ ಲಿನೇಟ್ ಡಿಸೋಜ ಉಪಸ್ಥಿತರಿದ್ದರು. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೋ ಇಕ್ಬಾಲ್ ಅಹಮದ್ ಯು.ಟಿ. ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಮುಬೀನ್ ತಾಜ್ ಕಾರ್ಯಕ್ರಮ ನಿರೂಪಿಸಿದರು. ಬಿ.ಸಿ.ಎ. ವಿಭಾಗದ…
UN NETWORKS ಉಳ್ಳಾಲ: ಕುಂಪಲ ಸರ್ಕಾರಿ ಪ್ರೌಢಶಾಲೆ (ಆರ್‍ಎಂಎಸ್‍ಎ) ವಿಜ್ಞಾನ ಸಂಘದ ವತಿಯಿಂದ 50 ವಿದ್ಯಾರ್ಥಿಗಳು ಕುಲಶೇಖರದಲ್ಲಿ ಕೆ.ಎಂ.ಎಫ್‍ಗೆ ಭಾನುವಾರ ಭೇಟಿ ನೀಡಿದರು. ಹಾಲಿನ ಪ್ಯಾಕಿಂಗ್, ಉತ್ಪನ್ನಗಳ ತಯಾರಿಕೆ ಸಹಿತ ಸಮಗ್ರ ಮಾಹಿತಿಯನ್ನು ತರಬೇತುದಾರ ಹುಸೈನ್ ಅವರ ಮುಖಾಂತರ ಕಲೆ ಹಾಕಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ರಾಧಿಕಾ ಎಸ್.ರಾವ್, ಸಹಶಿಕ್ಷಕಿಯರಾದ ಸುಮಾನ ಕುಂದರ್, ತೆರೆಜಾ ಲೀನಾ, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ವಿನೋದ್ ಕುಂಪಲ ಸಹಕರಿಸಿದರು.
UN NETWORKS ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶನಿವಾರ ಜರಗಿದ 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ವೇಳೆ ಕಂಡು ಬಂದ ಆಕರ್ಷಕ ಸ್ತಬ್ಧಚಿತ್ರಗಳು.
UN NETWORKS ತಲಪಾಡಿ: ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ 3.25 ಎಕರೆ ಜಮೀನು ಮೀಸಲಿಡಲಾಗಿತ್ತು. ಆದರೆ ಖಾಸಗಿಯವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂದು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಹೇಳಿದ್ದಾರೆ. ಸ್ವಚ್ಛ ಭಾರತ್ ಮಿಷನ್‍ನಡಿ ತಲಪಾಡಿ ಗ್ರಾಮ ಪಂಚಾಯಿತಿಯಿಂದ ಶನಿವಾರ ಕೆ.ಸಿ.ನಗರ ಫಲಾಹ್ ಶಾಲೆಯಲ್ಲಿ ಶನಿವಾರ ನಡೆದ ಸ್ವಚ್ಛತಾ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಜಮೀನು ಮೀಸಲಿಟ್ಟರೂ ತಡೆಯಾಜ್ಞೆಯಿಂದಾಗಿ ಅದು ಸಾಧ್ಯವಾಗಿಲ್ಲ. ಫಲಾಹ್ ಶಾಲೆ ಬಳಿ ಜನವಸತಿ ಇಲ್ಲದ ಕಾರಣ ರಸ್ತೆಬದಿ ಕಸ ಬೀಳುತ್ತಿದ್ದು, ತಿಂಗಳಿಗೆರೆಡು ಬಾರಿ ತೆಗೆಯಲಾಗುತ್ತಿದೆ. ಆದರೆ ಮನಪಾದಿಂದ ಸ್ವೀಕರಿಸದ ಕಾರಣ ಸಮಸ್ಯೆ ಬಂದಿದೆ. ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಅಂಗಡಿ, ಫ್ಲ್ಯಾಟುಗಳಿಗೆ ಮಾಹಿತಿ ನೀಡಿ ಸಂಬಂಧಪಟ್ಟವರು ಮನಸ್ಸು ಗೆಲ್ಲುತ್ತೇವೆ. ನಂತರವೂ ಬಗ್ಗದಿದ್ದರೆ ಕಾನೂನು ಕ್ರಮದ ಮುಖಾಂತರ ಬಗ್ಗಿಸುವ ಪ್ರಯತ್ನ ಮಾಡುತ್ತೇವೆ ಎಂದುತ್ತರಿಸಿದರು. ಪ್ಲಾಸ್ಟಿಕ್ ಎನ್ನುವುದು ಕೊಡುಗೆಯೂ ಹೌದು, ಕುರ್ಚಿ, ಬಕೆಟ್ ಹೀಗೆ ವಿವಿಧ ರೀತಿಯಲ್ಲಿ ಪ್ಲಾಸ್ಟಿಕ್ ಮರುಬಳಕೆ ಮಾಡಲಾಗುತ್ತಿದೆ. ತೆಳುವಾದ…
UN NETWORKS ಉಳ್ಳಾಲ: ಆಯಾಯ ಮಸೀದಿ ಮದರಸಗಳಲ್ಲಿ ಕಾರ್ಯ ನಿರ್ವಹಿಸುವ ಉಸ್ತಾದರಿಗೆ ಮತ್ತು ಖತೀಬರಿಗೆ ಅವರ ವಾಸ್ತವ್ಯ ಪ್ರದೇಶದಲ್ಲಿ ವ್ಯಾಪಾರ ವ್ಯವಹಾರ ನಡೆಸಲು ಪೂರಕವಾಗುವಂತೆ ಶ್ರಮಶಕ್ತಿ ಯೋಜನೆಯಡಿ ದೊಡ್ಡ ಮಟ್ಟದ ಹಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸರಕಾರಕ್ಕೆ ನೀಡಿದ್ದು ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು. ಅವರು ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕ ದ.ಕ ಜಿಲ್ಲಾ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಎನ್.ಎಸ್ ಕರೀಂರವರಿಗೆ ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೇಕ್ಸ್‍ನಲ್ಲಿ ಅಯೋಜಿಸಿದ ಅಭಿನಂದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಖತೀಬರು ಮತ್ತು ಉಸ್ತಾದರಿಗೆ ಹೊರಗಿನ ಪ್ರದೇಶದಲ್ಲಿ ಹೋಗಿ ಕೆಲಸ ಅಥವಾ ವ್ಯಾಪಾರ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದ್ದು, ಫಲಾನುಭವಿಗಳನ್ನು ಗುರುತಿಸುವ ಕಾರ್ಯ ವಕ್ಪ್ ಮಂಡಳಿಗಳು ಮಾಡಬೇಕು ಎಂದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅಲ್ಪ ಸಂಖ್ಯಾತ…
UN NETWORKS ಮುಡಿಪು: ಒಂದೆಡೆ ಭಜನೆಯ ವಾತಾವರಣ, ಇನ್ನೊಂದೆಡೆ ಸ್ತಬ್ಧಚಿತ್ರಗಳ ಪ್ರದರ್ಶನ, ಹೀಗೆ 100ಕ್ಕೂ ಅಧಿಕ ಹಿಂದೂ ಭಕ್ತರು ಭಾಗವಹಿಸಿದ್ದ ಶೋಭಾಯಾತ್ರೆಯಲ್ಲಿ ಮುಸ್ಲಿಂ ಯುವಕರ ಸಂಘದ ವತಿಯಿಂದ ಮುಸ್ಲಿಂ ಯುವಕರು ಸಿಹಿತಿಂಡಿ ಮತ್ತು ತಂಪುಪಾನೀಯಗಳನ್ನು ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ಮುಡಿಪು ಕಾಲೇಜಿನಲ್ಲಿ ನಡೆಯುವ 40 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ನಿಮಿತ್ತ ಕೆಲ ಕಿ.ಮೀ ಉದ್ದಕ್ಕೂ ಕ್ರಮಿಸಿ ದನಿವಾದ ಹಿಂದೂ ಬಾಂಧವರಿಗೆ ಮಳೆಯನ್ನು ಲೆಕ್ಕಿಸದೆ ಹಲವು ಮುಸ್ಲಿಂ ಯುವಕರು ಸಿಹಿತಿಂಡಿ, ಪಾನೀಯ ನೀಡುವಲ್ಲಿ ಸಹಕರಿಸಿದ್ದಾರೆ. ಮುಡಿಪು ಸರಕಾರಿ ಕಾಲೇಜಿನಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 40 ನೇ ವರ್ಷದ ಆಚರಣೆಯಲ್ಲಿ ಮುಸ್ಲಿಂ ಯುವಕರು ಜತೆಗೂಡಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರಿಗೆ ಹಾಗೂ ಸಮಿತಿ ಸದಸ್ಯರಿಗೆ ತಂಪು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಲಾಗಿದೆ. ಪ್ರಥಮವಾಗಿ ನಡೆಸಿರುವ ಕಾರ್ಯಕ್ರಮ ಎಲ್ಲರಿಗೂ ಸಂತಸ ತಂದಿದೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಹಲವು ಮುಸ್ಲಿಂ ಯುವಕರು ಸಿಹಿತಿಂಡಿ, ಪಾನೀಯ ನೀಡುವಲ್ಲಿ…
ಗಲ್ಲಿಯಿಂದ ಹಿಡಿದು ದಿಲ್ಲಿಯ ವರೆಗೆ ಪ್ರತಿಯೊಂದು ಹಿಂದೂಗಳು ಆಚರಿಸುವ ಸಂಭ್ರಮದ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮೊದಲ ಪೂಜೆಯನ್ನು ಪಡೆಯುವ ವಿಘ್ನೇಶ್ವರನ್ನು ಈ ದಿನದಂದು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ. ವರ್ಷಂಪ್ರತಿಯಂತೆ ಈ ಭಾರಿಯು ಕೂಡ ಸಂಭ್ರಮದ ಗೌರಿ ಗಣೇಶ ಹಬ್ಬ ಮತ್ತೆ ಬಂದಿದೆ. ಸಂಬಂಧಗಳ ನಂಟನ್ನು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವುದೆಂದರೆ ಹಿಂದೂಗಳಿಗೆ ಅದು ಎಲ್ಲಿಲ್ಲದ ಖುಷಿ. ಅದರಲ್ಲೂ ಕೂಡ ಹಬ್ಬಗಳು ಬಂತೆಂದರೆ ಸಾಕು ಸಂಭ್ರಮ ಸಡಗರ ಮನೆಯಲ್ಲಿಯೂ ಮನದಲ್ಲಿಯೂ ಮೂಡಿರುತ್ತದೆ. ಮೊನ್ನೆ ಮೊನ್ನೆಯಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡ ನಮಗೆ ಅದರ ಬೆನ್ನ ಹಿಂದೆಯೇ ಗೌರಿ-ಗಣೇಶ ಹಬ್ಬ ಬಂದಿರುವುದು ಇನ್ನೊಂದು ಸಡಗರವೇ ಸರಿ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ. ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ…
UN NETWORKS ಕೋಟೆಕಾರು: ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಂ ಇದರ ಕೋಟೆಕಾರು ಶಾಖೆಯ ವತಿಯಿಂದ ಆ.24 ಮತ್ತು ಆ.25ರವೆರೆಗೆ ಗೌರಿ ಹಬ್ಬ ಮತ್ತು ಶ್ರೀ ಗಣೇಶ ಹಬ್ಬ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ಕೋಟೆಕಾರಿನಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.24ರ ಪೂರ್ವಾಹ್ನ 8.30ಕ್ಕೆ ಶ್ರೀ ಗೌರಿ ವಿಗ್ರಹದ ಪ್ರತಿಷ್ಠೆ, ಲಲಿತಾ ಹೋಮದ ಆರಂಭ, ಬೊಳ್ಳಾವ ವಿದ್ಯಾಶಂಕರವರಿಂದ ಕರ್ನಾಟಕ ಸಂಗೀತ ಕಚೇರಿ, ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಹರ್ಷ ಕುಮಾರ್ ಕೇದಗೆ ಮತ್ತು ಕನಕವಲ್ಲಿ ಹೆಚ್. ಕೇದಗೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆನೆಗುಂದಿ ಮಹಾಸಂಸ್ಥಾನಂ, ಸರಸ್ವತಿ ಪೀಠ ಕಟಪಾಡಿಯ ಗೌರವಾರ್ಧಯಕ್ಷ ಕೆ.ಕೇಶವ ಆಚಾರ್ಯ, ನ್ಯಾಯವಾದಿ ಅನಿಲ್ ಬೇಕಲ್, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪಾರ್ ಪತ್ತಿಗೆದಾರರಾದ ಪಿ. ಲಕ್ಷ್ಮೀನಾರಾಯಣ ರಾವ್, ಆರ್ಯ ಮರಾಠ ಸಮಾಜ ಸಂಘ…

